ಅಲಾಸ್ಕಾ

ಬದಲಾಯಿಸಿ

ಅಮೇರಿಕ ಸಂಯುಕ್ತ ಸಂಸ್ಥಾನದ ಅತಿ ದೊಡ್ಡ ರಾಜ್ಯ. ಇದರ ಪೂರ್ವಕ್ಕೆ ಕೆನಡ, ಉತ್ತರಕ್ಕೆ ಆರ್ಕ್ಟಿಕ್ ಮಹಾಸಾಗರ, ಮತ್ತು ದಕ್ಷಿಣ ಹಾಗು ಪಶ್ಚಿಮಗಳಿಗೆ ಪೆಸಿಫಿಕ್ ಮಹಾಸಾಗರಗಳು ಇವೆ. ಸಂಯುಕ್ತ ಸಂಸ್ಥಾನದ ಹೊರಗೆ ಪ್ರತ್ಯೇಕವಾಗಿ ಉತ್ತರ ಅಮೆರಿಕದ ವಾಯವ್ಯದಲ್ಲಿರುವ ಈ ರಾಜ್ಯದ ವಿಸ್ತೀರ್ಣ 1522596 ಚ.ಕಿಮೀ. ಜನಸಂಖ್ಯೆ 6,26,932 (2000).ಇದರ ರಾಜಧಾನಿ ಜೂನ್ಯು.

ಇತಿಹಾಸ

ಬದಲಾಯಿಸಿ

ಅಮೆರಿಕ ಸಂಯುಕ್ತ ಸಂಸ್ಥಾನ, 1867ರಲ್ಲಿ ರಷ್ಯದಿಂದ ಈ ಭಾಗವನ್ನು ಕೊಂಡು 1884ರಲ್ಲಿ ಆರೆಗಾನ್ ಸಂಸ್ಥಾನದ ಒಂದು ಜಿಲ್ಲೆಯಾಗಿ ಪರಿಗಣಿಸಿತು. 1912ರಲ್ಲಿ ಒಂದು ಸೀಮೆಯಾಗಿ ರೂಪಗೊಂಡು 1959ರಲ್ಲಿ 49ನೆಯ ಪ್ರಾಂತ್ಯವಾಗಿ ಸಂಯುಕ್ತಸಂಸ್ಥಾನ ದಲ್ಲಿ ವಿಲೀನ ಹೊಂದಿತು. 1912ರಿಂದ ಈಚೆಗೆ ಸಂಯುಕ್ತ ಸಂಸ್ಥಾನಕ್ಕೆ ಸೇರಿದ ರಾಜ್ಯಗಳಲ್ಲಿ ಇದು ಮೊದಲನೆಯದು.

ಭೌಗೋಳಿಕತೆ

ಬದಲಾಯಿಸಿ

ಇದು ಒಂದು ಬಹು ದೊಡ್ಡ ರಾಜ್ಯವಾಗಿದ್ದು,ಖಂಡದ ಇತರ ರಾಜ್ಯಗಳಿಗಿಂತ ಪ್ರತ್ಯೇಕವಾಗಿ ವಾಯವ್ಯದ ಅಂಚಿನಲ್ಲಿದ್ದು ಪರ್ವತಮಯವಾಗಿದೆ.ಅಲಾಸ್ಕಾ ಉತ್ತರ ಅಕ್ಷಾಂಶ 650 ಮತ್ತು ಪಶ್ಚಿಮ ರೇಖಾಂಶ 1500 ಯಲ್ಲಿದೆ. ಆಗ್ನೇಯ ಮತ್ತು ಪುರ್ವಕ್ಕೆ ಕೆನಡ ದೇಶ, ಪಶ್ಚಿಮಕ್ಕೆ ಬೆರಿಂಗ್ ಜಲಸಂಧಿ ಮತ್ತು ಬೇರಿಂಗ್ ಸಮುದ್ರ, ಉತ್ತರಕ್ಕೆ ಮೆಕಿಂಜಿ ಕೊಲ್ಲಿ ಹಾಗೂ ದಕ್ಷಿಣಕ್ಕೆ ಅಲಾಸ್ಕ ಖಾರಿಗಳಿಂದ ಸುತ್ತುವರಿದಿವೆ.ಅಮೆರಿಕೆಯ ಬಹು ದೊಡ್ಡ ಪರ್ವತಶ್ರೇಣಿಯ ವಾಯವ್ಯದ ಬಾಗಿದ ವಿಸ್ತೃತಭಾಗ ಇರುವುದು ಇಲ್ಲಿಯೇ. ದಕ್ಷಿಣದ ಸಾಧಾರಣ ಎತ್ತರದ ತೀರಪ್ರದೇಶದ ಶ್ರೇಣಿಯ ಜೊತೆಗೆ ಒಳಭಾಗದಲ್ಲಿ ಸ್ವಲ್ಪ ಎತ್ತರವಾದ ಸಮಾನಾಂತರ ಶ್ರೇಣಿ ಇದೆ. ಉತ್ತರ ಅಮೆರಿಕದ ಅತ್ಯಂತ ಎತ್ತರದ ಮೆಕಿನ್ಲೆ ಶಿಖರ (6193.5 ಮೀ) ಈ ಒಳಭಾಗದ ಶ್ರೇಣಿಯಲ್ಲಿದೆ. ತಗ್ಗಾದ ಉತ್ತರದ ಶ್ರೇಣಿ ಕಮಾನಿನಂತೆ ಬಾಗಿದೆ ಅಲಾಸ್ಕದ ಎತ್ತರಭಾಗ ಉತ್ತರಧ್ರುವದ ಆಚೆಗೆ ವ್ಯಾಪಿಸಿ ವಿಲಕ್ಷಣವಾಗಿ ಖಂಡಾಂತರ ವಾಯುಗುಣವನ್ನು ಹೊಂದಿದೆ. ದಕ್ಷಿಣತೀರ ಜಪಾನ್ ಪ್ರವಾಹದ ಮಾರುತಗಳಿಂದ ಉಷ್ಣತೆಯನ್ನು ಪಡೆದು ಆಹ್ಲಾದಕರ ವಾಯುಗುಣವನ್ನು ಪಡೆದಿದೆ.

ಖನಿಜಗಳು

ಬದಲಾಯಿಸಿ

1898ರ ಸುವರ್ಣ ಶೋಧದ (ಗೋಲ್ಡ್ ರಷ್) ದಿನಗಳಲ್ಲಿ ಅಲಾಸ್ಕದ ಖನಿಜಗಳಲ್ಲಿ ಚಿನ್ನ ಅಗ್ರಸ್ಥಾನ ಪಡೆಯಿತು. ಇಂದು ಕಲ್ಲಿದ್ದಲು ಆ ಸ್ಥಾನಕ್ಕೇರಿದೆ. ಪೆಟ್ರೋಲಿಯಂ, ಸ್ವಾಭಾವಿಕ ಅನಿಲ ತವರ, ಕ್ರೋಮೈಟ್, ಪಾದರಸ, ತಾಮ್ರ, ಆಂಟಿಮನಿ, ಟಂಗ್ಸ್ಟನ್ ಮುಂತಾದ ಖನಿಜಗಳೂ ಅಲ್ಪ ಸ್ವಲ್ಪ ದೊರೆಯುತ್ತವೆ. ಅದಾಗ್ಯೂ 1977 ರಲ್ಲಿ ಟ್ರಾನ್ಸ್-ಅಲಾಸ್ಕ ಕೊಳವೆ ಮಾರ್ಗವನ್ನು ನಿರ್ಮಿಸಿದ ಅನಂತರ ಅಲಾಸ್ಕದ ಆರ್ಥಿಕ ವ್ಯವಸ್ಥೆಯಲ್ಲಿ ಬಹಳಷ್ಟು ಪೆಟ್ರೋಲಿಯಂ ಮತ್ತು ಸ್ವಾಭಾವಿಕ ಅನಿಲಗಳ ಉತ್ಪಾದನೆಯನ್ನಾಧರಿಸಿದೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಕಚ್ಚಾ ತೈಲ ಉತ್ಪಾದಿಸುವ ಪ್ರಾಂತ್ಯಗಳಲ್ಲಿ ಟೆಕ್ಸಾಸ್ ಅನಂತರ ಅಲಾಸ್ಕ ದ್ವಿತೀಯ ಸ್ಥಾನದಲ್ಲಿದೆ.


ಜನರ ಕಸಬು

ಬದಲಾಯಿಸಿ

ಇಲ್ಲಿ ಮಧ್ಯ ಅಕ್ಷಾಂಶ ಪ್ರದೇಶದ ಬೆಳೆಗಳ ಜೊತೆಗೆ ಪಶುಪಾಲನೆಯ ಉತ್ಪನ್ನವೂ ಸೇರುತ್ತದೆ. ಆಂಕೊರೇಜಿನ ಬಳಿಯ ಮಟನುಸ್ಕ ಕಣಿವೆಯ ಬೆಳೆ ರಾಜ್ಯದ ಅರ್ಧ ಉತ್ಪತ್ತಿಯಷ್ಟಾದರೂ ವ್ಯವಸಾಯ ಅಲ್ಲಿ ಅಷ್ಟಾಗಿ ಮುಂದುವರಿದಿಲ್ಲ; ಮೀನುಗಾರಿಕೆ ಮತ್ತು ಅದರ ರಫ್ತು ಅಲಾಸ್ಕದ ಮುಖ್ಯ ಕೈಗಾರಿಕೆ. ಇದರಲ್ಲಿ ಸಾಲ್ಮನ್ ಜಾತಿಯ ಮೀನುಗಳೇ ಹೆಚ್ಚು. ಈ ಕೈಗಾರಿಕೆ ರಾಜ್ಯದ ಬಹುಪಾಲು ಕಾರ್ಮಿಕವರ್ಗಕ್ಕೆ ಉದ್ಯೋಗಾವಕಾಶವನ್ನು ಕಲ್ಪಿಸಿದೆ.

ಸಣ್ಣ ಕಣಿವೆಗಳಲ್ಲಿ ದಕ್ಷಿಣದ ತೀರಪ್ರದೇಶಗಳಲ್ಲಿ ಬಹುಪಾಲು ಪ್ರಜೆಗಳು ವಾಸಿಸಿದರೆ, 15,800ರಷ್ಟು ಅಲ್ಪ ಸಂಖ್ಯೆಯ ಎಸ್ಕಿಮೋಜನರು ರಾಜ್ಯದ ಉತ್ತರ ಹಾಗೂ ಪಶ್ಚಿಮ, ಭಾಗದಲ್ಲಿ ವಾಸಿಸುವರು. ಆಂಕೊರೇಜ್, ಫೇರ್‌ಬ್ಯಾಂಕ್, ಜೂನೆ ಮತ್ತು ಕೆಚಿಕನ್-ಇವು ಮುಖ್ಯ ನಗರಗಳು.


ರಾಜಧಾನಿ ಜೂನ್ಯು

ಬದಲಾಯಿಸಿ

ಜೂನ್ಯು ಅಲಾಸ್ಕದ ರಾಜಧಾನಿ.೪೬ ಗಂಟೆಗಳ ಸುದೀರ್ಘ ಸಾಗರ ಯಾನದ ಬಳಿಕ ಹಡಗು ಅಲಾಸ್ಕಾದ ೩ನೇ ಅತಿ ದೊಡ್ಡ ನಗರ ಜೂನ್ಯೂವನ್ನು ತಲುಪಬಹುದು.ಅಮೇರಿಕಾದಲ್ಲೇ ಅತ್ಯಂತ ಕಡಿಮೆ ಜನಸಾಂದ್ರತೆ ಇರುವ ಅತಿದೊಡ್ದ ರಾಜ್ಯ ಜೂನ್ಯೂ .ಉತ್ತರ ಅಮೇರಿಕಾದಲ್ಲೇ ಅತೀ ದೀರ್ಘ ಹಾಗು ಅತೀ ಸಣ್ಣ ಹಗಲು ಮತ್ತು ನಾರ್ದರ್ನ್ ಬೆಳಕು ಕಾಣಸಿಗುವ ಖ್ಯಾತಿ ಈ ಪ್ರದೇಶಕ್ಕಿದೆ.ನೈಸರ್ಗಿಕ ಸೌಂದರ್ಯವನ್ನು ಅರಸಿಕೊಂಡು ಹೋಗುವ ಸಾಹಸಿಗರಿಗೆ ಪ್ರಕೃತಿಮಾತೆ ಇಲ್ಲಿ ತನ್ನೆಲ್ಲ ಸಂಪತ್ತನ್ನು ಪ್ರದರ್ಶನಕ್ಕೆ ಇರಿಸಿದ್ದಾಳೆ.ಅಲಾಸ್ಕಾದ ಬಹುತೇಕ ಆಕರ್ಷಣೆಯ ಪ್ರದೇಶಗಳಲ್ಲಿ ಪ್ರವಾಸೋದ್ಯಮವೇ ಮುಖ್ಯ ಆದಯಮೂಲ .ಹಾಗಾಗಿ ಇಲ್ಲಿನ ಶುಲ್ಕ ಸ್ವಲ್ಪ ದುಬಾರಿಯೇ .ಅಲಾಸ್ಕದಿಂದ ಹಡಗಿನಲ್ಲಿ ೧೦ ಗಂಟೆಗಳ ಪ್ರಯಾಣದ ಬಳಿಕ ಸ್ಕಾಗ್ ವೇ ತಲುಪಬಹುದು .ಇದು ಅಲಾಸ್ಕ ರಾಜ್ಯದ ಅತ್ಯ್ಂತ ಸುಂದರ ನಗರ.ಈ ನಗರದ ಜನಸಂಖ್ಯೆ ಕೇವಲ ೧೦೦೦ ಅಷ್ಟೆ ೧೨೦೦ ಚದರ ಕಿ.ಮೀ ವಿಸ್ತೀರ್ಣದ ಈ ಸುಂದರ ನಗರ ನೈಸರ್ಗಿಕ ಬಂದರೂ ಹೌದು.೩-೪ ಪ್ರಯಾಣಿಕ ಹಡಗುಗಳು ಏಕ ಕಾಲದಲ್ಲಿ ಲಂಗರು ಹಾಕಬಹುದು,ಹಿಮಪರ್ವತಗಳಿಂದ ಸುತ್ತುವರಿದಿರುವ ನೈಸರ್ಗಿಕ ಬಂದರು.ಅಲಾಸ್ಕದ ಹೆಚ್ಚಿನ ಭಾಗಗಳು ಕೆನೆಡಾದ ಗಡಿಗೆ ಅತೀ ಸಮೀಪ ಇರುವುದರಿಂದ ,ಈ ಹಡಗಲ್ಲಿ ಪ್ರಯಾಣಿಸುವವರು ಕೆನೆಡಾದ ಗಡಿಗೆ ಅತೀ ಸಮೀಪ ಇರುವುರಿದರಿಂದ ,ಈ ಹಡಗಲ್ಲಿ ಪ್ರಯಾಣಿಸುವವರು ಕೆನೆಡಾ ದೇಶದ ವೀಸಾ ಹೊಂದಿರುವುದು ಕಡ್ದಾಯ.

೨೫೦ ವರ್ಷಗಳ ಹಿಂದೆ ಬೇ ಇರಲೇ ಇಲ್ಲ! ಆಗ ೧೦೦ ಕಿ.ಮೀ ಉದ್ದ ಮತ್ತು ಸಾವಿರಾರು ಅಡಿ ಆಳವಾಗಿದ್ದ ಹಿಮ ನದಿಯು ಇಡೀ ಬೇ ಪ್ರದೇಶವನ್ನು ಆವರಿಸಿತ್ತು .ಈಗ ಇಲ್ಲಿ ಹಿಮಶಿಖರಗಳು ಇಲ್ಲ,ಅದರ ಬದಲಾಗಿ ಅಷ್ಟೆ ಉದ್ದದ ಜಲ ಮಾರ್ಗ ನಿರ್ಮಾಣವಾಗಿದೆ .೧೦-೧೨ ಸಣ್ಣ ಪುಟ್ಟ ಗ್ಲೇಸಿಯರ್ಗಳಷ್ಟೆ ಉಳಿದುಕೊಂಡಿವೆ .ಕರಾವಳಿಯು ಎತ್ತರದ ಪರ್ವತಗಳಿಂದ ಸಮುದ್ರಕ್ಕೆ ಹರಿದು ,ನೀರಿನಲ್ಲಿ ತೇಲುವ ಹಿಮರಾಶಿಗಳನ್ನು ಸೃಷ್ಟಿಸಿವೆ.ಈ ಹಿಮ ನದಿಗಳು ಭೌಗೊಳಿಕ ಬದಲಾವಣೆಗೆ ಸಾಕ್ಷಿಯಾಗಿ ನಿಂತಿವೆ .

೩೩ಲಕ್ಷ ಎಕ್ರೆ ವಿಸ್ತೀರ್ಣದ ಗ್ಲೇಸಿಯರ್ ಬೇ ರಾಷ್ಟ್ರೀಯ ಉದ್ಯಾನವನವಾಗಿದ್ದು ಯುನೆಸ್ಕೋದ ಜಾಗತಿಕ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಮುಖ್ಯವಾದದ್ದು .ಅಗಾಧ ನೀಲ ಜಲರಾಶಿ,ಸುತ್ತುವರಿದ ಹಿಮ ಪರ್ವತಗಳು ,ಅಲ್ಲಲ್ಲಿ ಕಾಣುವ ಗ್ಲೇಸಿಯರ್ಗಳು .ಅವುಗಳಿಂದ ನೀರಿಗೆ ಬಿದ್ದು ತೇಲಾಡುವ ಹಿಮದ ತುಣುಕುಗಳು!ಕಲವು ಕೋನಗಳಲ್ಲಿ ನೋಡಿದರೆ ನಮ್ಮ ಹಿಮಾಲಯದ ಮಾನಸ ಸರೋವರವನ್ನು ನೆನೆಪಿಸುವಂತಿತ್ತು.

ಉಲ್ಲೇಖಗಳು

ಬದಲಾಯಿಸಿ

೧.[] ೨.[] ೩.[] ೪.[]

  1. https://www.travelalaska.com
  2. www.history.com/topics/us-states/alaska
  3. sudha magazine ,dated 24th March 2016
  4. www.akhistorycourse.org/