==ರಂಗಭೂಮಿ==
                                        ==ವತ೯ಮಾನದ ತಲ್ಲಣಗಳು==    
                 
     ಇಂದು ವ್ಯಕ್ತಿ ಮತ್ತು ಸಮಾಜ ಪರಸ್ಪರ ದೂರವಾಗಿದ್ದಾನೆ. ಒಂದೇ ಸೂರಿನಡಿ ಬಾಳುವ ಕುಟುಂಬವನ್ನು ಬಹುಮಾಧ್ಯಗಳು ದೂರ ತಳ್ಳಿವೆ. ಸಂವೇದನಾರಹಿತವಾಗಿಸುತ್ತಿವೆ. ಜಗತ್ತು ಹತ್ತಿರ ಬಂದಿದೆ. ಮನುಷ್ಯರು ದೂರವಾಗಿದ್ದಾರೆ.ಫೇಸ್ಬುಕ್,ಟ್ವಿಟರ್,ಬ್ಲಾಗ್,ವಾಟ್ಸಾಪ್, ಸ್ಕೈಪ್ಗಳ ಮಧ್ಯೆ ಹುದುಗಿ ಹೋದ ಮನಸ್ಸುಗಳನ್ನು ಮನುಷ್ಯರ ನಡುವೆ ತಂದು ನಿಲ್ಲಿಸುವ ಶಕ್ತಿ ರಂಗಭೂಮಿಗಿದೆ.

ಮರಾಟಿಯ ನಾಟಕಕಾರರೊಬ್ಬರು ಹಿಂದಿಯಲ್ಲೂ ನಾಟಕದ ಅಲೆಯಿಲ್ಲ ಎಂದೂ ಅನುವಾದ, ರೂಪಾಂತರಗಳೇ ಬರುತ್ತಿವೆ ಎನ್ನುತ್ತಿದ್ದರು. ಆದರೆ ಅಲ್ಲೊಂದು ಇಲ್ಲೊಂದು ಅಪವಾದಗಳು ಇರಲೂಬಹುದು. ಮುಖ್ಯವಾಗಿ ರಂಗ ಚಟುವಟಿಕೆ ಕ್ರಿಯಾಶೀಲವಾಗಿರುವುದು ಮರಾಠಿಯಲ್ಲಿ ಅಧಿಕ.ಕನ್ನಡ, ಬಂಗಾಳಿ, ಗುಜರಾತಿ ಮತ್ತು ಹಿಂದಿಗಳ ರಂಗಭೂಮಿ ಸಿರಿವಂತ, ಗಮನಾಹ೯ವಾದುದು. ಗುಜರಾತಿ ವ್ಯಾವಸಾಯಿಕ ( commercial Theatre)ಕ್ಕೆ ಆದ್ಯತೆಯಿದೆ. ಅದರಲ್ಲಿ ರಂಜನೆ ಪ್ರಾಧಾನ್ಯ. ಆದರೆ ಯಾವತ್ತೂ ಆಯಾ ಕಾಲದಲ್ಲಿ ಮರಾಠಿ ನಾಟಕ ಮತ್ತು ರಂಗಭೂಮಿ ಪ್ರತಿಕ್ರಿಯಾತ್ಮವಾಗಿಯೇ ಇರುವುದು ಮಹತ್ವದ್ದು. ಅದು ವತ೯ಮಾನದ ತವಕ, ತಲ್ಲಣಗಳಿಗೆ 'ಪ್ರೊಆಕ್ಟ್' ಆಗಿ ನಿಲ್ಲುತ್ತದೆ. ಹೊಸ ಹೊಸ ಪ್ರಯೋಗಗಳು ನಡೆಯುತ್ತಿರುತ್ತವೆ. ಕನ್ನಡ ಹಿಂದಿನ ವೈಭವದಿಂದ ಆಚೆ ಬಂದು ಸಮಕಾಲೀನಕ್ಕೆ ಮುಖಾಮುಖಿಯಾಗಬೇಕಿದೆ. ನಮ್ಮ ಹೊಸ ಮತ್ತು ಮಧ್ಯದ ಪೀಳಿಗೆ ರಂಗ ಚಟುವಟಿಕೆಗಳನ್ನು ಬಿರುಸಾಗಿ ನಿವ೯ಹಿಸುತ್ತಿರಬಹುದು. ಆದರೆ ಅದು ಪ್ರಸ್ತುತ ಸಮಾಜ ಎದುರಿಸುತ್ತಿರುವ ಸಾಮಾಜಿಕ, ಧಾಮಿ೯ಕ, ಆಥಿ೯ಕ ಹಾಗೂ ರಾಜಕೀಯ ಪ್ರಶ್ನೆಗಳನ್ನು ಎತ್ತುತ್ತಿದೆಯೇ? ಯೋಚಿಸಬೇಕಾಗಿದೆ. ಇವತ್ತು ರಂಗಭಾಷೆ ಮತ್ತು ಅಭಿವ್ಯಕ್ತಿಯ ಆಯಾಮಗಳು ಬಹುರೂಪಿಯಾಗಿವೆ. ಇಂದಿನ ಭಾಷೆಯಲ್ಲೇ ದೈನಂದಿನ ಹಳವಂಡಗಳೊಗೆ ಅದು ಪ್ರತಿಕ್ರಿಯಿಸುತ್ತಿದೆ. ಕೋಮುವಾದ, ಬಹುತ್ವ, ರೈತರ ಸಮಸ್ಯೆ, ಆತ್ಮಹತ್ಯೆಗಳು, ನಾಟಕಕಾರ, ಕಲಾವಿದನ್ನು ಅಸ್ವಸ್ಥಗೊಳಿಸಿವೆ. ಅದು ರಂಗಕಲೆಯ ಅಭಿವ್ಯಕ್ತಿಯಾಗಿ ಸಮಾಜವನ್ನು ಎಚ್ಚರಿಸುವ ಕಾಯ೯ ಮಾಡುತ್ತಿದೆ.

       ಕನ್ನಡ ಜಾನಪದ ಮತ್ತು ವೃತ್ತಿನಾಟಕ ಪ್ರಯೋಗಗಳಲ್ಲಿ ಸಮಕಾಲೀನತೆಯ ವಿಚಾರಗಳು ಇರುತ್ತಿದ್ದವು. ಕೃಷ್ಣ ಪಾರಿಜಾತ, ಸಂಗ್ಯಾ ಬಾಳ್ಯಾ, ಹರದೇಶಿ-ನಾಗೇಶಿ ಮುಂತಾದ ಜಾನಪದ ನಾಟಕಗಳು ಮನುಷ್ಯನ ಪ್ರವೃತ್ತಿಗಳಿಗೆ ಉತ್ತರ ಮಾಡಿದವು. ಸಂಗ್ಯಾಬಾಳ್ಯದ ಹಾದರ,ಪ್ರೀತಿ, ಗೆಳೆತನ, ವ್ಯಾಪಾರ, ಕೊಲೆ, ವಿಶ್ವಾಸಾಘಾತಗಳು:ಪಾರಿಜಾತದ ಸವತಿಯ ಮತ್ಸರ-ಹೂವಿಗಾಗಿ ಸ್ಪಧೆ೯ಗಿಳಿವ ಲೌಕಿಕತೆಯ ಬಿಂಬವಾಗಿರುವ ಆಶಯ ಎಲ್ಲ ಕಾಲವನ್ನೂ ಪ್ರತಿನಿಧಿಸುತ್ತದೆ. ಧಮ೯, ಮಹಾಕಾವ್ಯ, ವಚನಸಾಹಿತ್ಯದ ಸಂವೇದನೆ ಎತ್ತಿಕೊಂಡು ಕನ್ನಡದಲ್ಲಿ ಬರೆವ, ಪ್ರಯೋಗಿಸುವ ಪರಂಪರೆಯೇ ಇದೆ. ಅದರಲ್ಲಿ ಜಾನಪದವೂ ಒಂದು. ಆದರೆ ಈ ಮಾದರಿಯ ಆಚೆ ನೈಜ ವಾಸ್ತವ, ವಾಸ್ತವ ನಾಟಕಗಳು ಕಡಿಮೆಯೆ. ಕೈಲಾಸಂ,ಶ್ರೀರಂಗ, ಜೆ.ಬಿ.ಜೋಶಿ, ಕುಸನೂರ, ಲಂಕೇಶ ಮುಂತಾದವರು, ಕಂಬಾರ ಜಾನಪದ ಮತ್ತು ಪ್ರಹಸನ, ವಾಸ್ತವ ನೆಲೆಯ ಸರ್ರಿಯಲಿಸ್ಟಿಕ್ ರಚನೆಗಳು ಅವರ ಕಾಲವನ್ನೇ ಪ್ರತಿನಿಧಿಸಿದ್ದವು. ಕಾನಾ೯ಡರ ಅಂಜು ಮಲ್ಲಿಗೆ ಅಂದು ಚಚೆ೯ಯಾದುದು ಅದರ ವಸ್ತುವಿನಿಂದ. ಆದರೆ ಭಾರತೀಯ ರಮಗಭೂಮಿಯಲ್ಲಿ ಸದ್ಯ ನಡೆಯುತ್ತಿರುವ ವಿದ್ಯಮಾನಗಳನ್ನು ಎತ್ತಿಕೊಂಡು ಬರೆದ ಹೊಸ ನಾಟಕಗಳು ಬಂದವು. ಬಪ್ಪಿ ಬೋಸ್ ನಿದೇ೯ಶನದ 'ಜುಲೈ ಸೆವೆಂಟೀನ್ತ್,' ಜಯಂತ ಪವಾರ ಅವರ 'ಲಯ್ ಡೇಂಜರ್ ವಾರಾ ಸುಟಲಾಯ'.ಅಶುತೋಷ್ ಪೋತದಾರ ಅವರ 'ಎಫ್ ಒನ್ ಆಬ್ಲಿಗ್ ಒನ್ ಝೀರೋ ಫೈವ್,' ಧಮ೯ಕೀತಿ೯ ಅವರ 'ಪಾಣಿ' ಹಿಂದಿ ಮತ್ತು ಮರಾಠಿಯಲ್ಲಿ ಪ್ರಯೋಗಗೊಂಡ ಸಮಕಾಲೀನ ನಾಟಕಗಳು. ಜುಲೈ ಸೆವೆಟೀನ್ತ್ ಗೋದ್ರಾ ಹಿನ್ನೆಲೆಯ ನೈಜ ವಾಸ್ತವ ನಾಟಕ. ಮುಸ್ಲಿಮ್ ಯುವರೀವ೯ರನ್ನು ಅತ್ಯಾಚಾರ ಆರೋಪದ ಮೇಲೆ ಕೋಟ್೯ ಟ್ರಯಲ್ ನಡೆಸುವ ವಸ್ತು ನೋಡುಗನನ್ನು ಬೆಚ್ಚಿ ಬೀಳಿಸುತ್ತದೆ. ಈ ವಾಸ್ತವವಾದಿ ನಾಟಕದಲ್ಲಿ ಪ್ರೇಕ್ಷಕರ ಮಧ್ಯೆ ಹರಿದಾಡುವ ಅನಾಕೊಂಡ ಗಾತ್ರದ ಸಪ‍೯, ಗೋದ್ರಾ ಘಟನೆಯ ವಿಡೀಯೋ ಚಿತ್ರಗಳು ಪ್ರಯೋಗವನ್ನ ತೀವ್ರತನಕ್ಕೆ ಕೊಂಡೊಯ್ಯುತ್ತವೆ. 'ಎಫ್ ಒನ್' ಮರಾಠಿ ನಾಟಕ ಅಪಾಟ್೯ಮೆಂಟಿನಲ್ಲಿ ಬದುಕುತ್ತಿರುವ ಬಹುಭಾಷಿಕ ಸಂಸ್ಖೃತಿಯಲ್ಲಿ ಬಣ್ಣಗಳು ಕೋಮು ಸಂಕೇತಗಳಾಗುವ ಆಧುನಿಕ ಶೈಲೀಕೃತ ನಾಟಕ.'ಲಯ ಡೇಂಜರ್' ಮರಾಠಿ ನಾಟಕ.  ಮುಂಬೈನ ಚಾಳ(ವರಾಠ) ಅನ್ನು ಕಬಳಿಸುವ ಷಡ್ಯಂತ್ರದ ಭೂಮಾಫಿಯಾ ರಂಗ ಪ್ರಯೋಗ. ಕೆಲವು ಪ್ರಯೋಗಗಳನ್ನು ಉಲ್ಲೇಖಿಸಿರುವೆ. ಪರೇಶ ರಾವಲರ ಮೌಢ್ಯ ವಿರೋಧಿ ನಾಟಕವೊಂದು ಗುಜರಾತಿನಲ್ಲಿ ಬಂತು. ಮುಂದೆ 'ಓ ಮೈ ಗಾಡ್' ಚಿತ್ರವಾಗಿಯೂ ಆಲೋಚಿಸುವಂತೆ ಮಾಡಿತು. 
      ಭುಕಬಳಿಕೆ ಮತ್ತು ರೈತನ ಆತ್ಮಹತ್ಯೆ ನಮ್ಮ ಕಾಡುತ್ತಿರುವ ಸಮಸ್ಯೆಗಳು. ಮುಕ್ತ ಮಾರುಕಟ್ಟೆ ಮೂಲಕ ಹುಟ್ಟಿಕೊಂಡ ಉದ್ಯೋಗದ ಅವಕಅಶದ ವಲಸೆ, ಬಹುಮಾಧ್ಯಮಗಳಲ್ಲಿ ಸಿಲುಕಿದ ಜನಸಾಮಾನ್ಯರ ಕುರಿತು ಮಾತನಾಡುವ, ಅವುಗಳನ್ನು ಮನೋವಿಶ್ಲೇಷಣಾತ್ಮಕವಾಗಿ