ಸದಸ್ಯ:Natesh hb/sandbox
ಓಝೋನ್ ಪದರ
ಬದಲಾಯಿಸಿಶಿರೋಲೇಖ
ಬದಲಾಯಿಸಿಈ ಲೇಖನ ಅಥವಾ ವಿಭಾಗ ವಿಸ್ತರಣೆಯ ಅಥವಾ ಮಹತ್ವದ ಬದಲಾವಣೆಗಳ ಮಧ್ಯಂತರದಲ್ಲಿದೆ. ನೀವೂ ಲೇಖನದ ಅಭಿವೃದ್ಧಿಯಲ್ಲಿ ಸಂಪಾದನೆಗೆ ತೊಡಗಲು ಇಚ್ಛಿಸಿದಲ್ಲಿ, ಸ್ವಾಗತ. ಈ ಲೇಖನ ಅಥವಾ ವಿಭಾಗವನ್ನು ಬಹಳ ದಿನಗಳವರೆಗೆ ಸಂಪಾದಿಸದಿದ್ದಲ್ಲಿ, ದಯವಿಟ್ಟು ಈ ಟೆಂಪ್ಲೇಟನ್ನು ಅಳಿಸಿಹಾಕಿ. ಈ page ಕಡೆಯ ಬಾರಿ ಸಂಪಾದಿಸಿದ್ದು ಇವರು Natesh hb (ಚರ್ಚೆ | ಕೊಡುಗೆಗಳು) 309181298 ಸೆಕೆಂಡು ಗಳ ಹಿಂದೆ. (ಅಪ್ಡೇಟ್) |
ಭೂಮಿಗೆ ಸೂರ್ಯನಿಂದ ಹೊರಹೊಮ್ಮುವ ಅತಿನೇರಳೆ ಕಿರಣಗಳಿಂದ ರಕ್ಷಣೆ ನೀಡುವ ವಾಯುಮಂಡಲದ ಒಂದು ಪದರವೆ ಈ ಓಝೋನ್ ಪದರ. ಇದು ಸ್ತರಗೋಳದಲ್ಲಿ ಕಂಡುಬರುತ್ತದೆ. ಇಲ್ಲಿ ಹೆಚ್ಚಿನ ಸಾಂದ್ರತೆಯುಳ್ಳ ಆಮ್ಲಜನಕದ ಪರಮಾಣುfಳು ಕಂಡುಬರುತ್ತದೆ. ಭೂಮಿಯ ವಾತಾವರಣದದಲ್ಲಿ ಓಝೋನ್ ನ ಸಾಂದ್ರತೆ ಅತ್ಯಂತ ವಿರಳವಾಗಿದೆ. ಬಹಳಷ್ಟು ಓಝೋನ್ ಪದರದ ಪ್ರಮಾಣ ಸ್ತರಗೋಳದhttps://en.wikipedia.org/wiki/Stratosphere ಕೆಳಭಾಗದಲ್ಲಿ ಕಂಡುಬರುತ್ತದೆ. ಅಂದರೆ ಸಸುಮಾರು ಭೂಮಿಯಿಂದ ೨೦ ರಿಂದ ೩೦ ಕಿ.ಮೀ ಎತ್ತರದಲ್ಲಿ ಕಂಡುಬರುತ್ತದೆ. ಆದರೆ ಋತುಮಾನ ಹಾಗೂ ಭೌಗೋಳಿಕ ಬದಲಾವಣೆಗಳಿಗನುಸಾರವಾಗಿ ಈ ಮಟ್ಟದಲ್ಲಿನ ಬದಲಾವಣೆಯನ್ನು ಕಾಣಬಹುದು. ಓಝೋನ್ ಪದರವನ್ನು ೧೯೧೩ ರಲ್ಲಿ ಫ್ರೆಂಚ್ ಭೌತಶಾಸ್ತ್ರಜ್ಞ ಚಾರ್ಲ್ಸ್ ಫ್ಯಾಬ್ರಿhttps://fr.wikipedia.org/wiki/Charles_Fabri ಮತ್ತು ಹೆನ್ರಿ ಬುಸಾಅನ್ ಕಂಡುಹಿಡಿದರು. ಇದರ ಹೆಚ್ಚಿನ ಗುಣಧರ್ಮವನ್ನು ಸವಿಸ್ತಾರವಾಗಿ ಬ್ರಿಟೀಷ್ ಹವಾಮಾನ ತಜ್ಞ ಡಾಬ್ಸನ್ ಕಂಡುಹಿಡಿದರು. ಡಾಬ್ಸನ್ ಮೀಟರ್ ಎಂಬ ಉಪಕರಣ ಮತ್ತು ವಿಧಾನದಿಂದ ಸ್ತರಗೋಳದಲ್ಲಿನ ಓಝೋನ್ ಭೂಮಿಯಿಂದ ಎಷ್ಟು ಎತ್ತರದಲ್ಲಿದೆ ಎಂಬುದನ್ನು ಕಂಡುಹಿಡಿಯಬಹುದು. ೧೯೨೮ ಮತ್ತು ೧೯೫೮ ರ ನಡುವೆ ಡಾಬ್ಸನ್ ಜಗತ್ತಿನಾದ್ಯಂತ ಓಝೋನ್ ಪದರ ಪತ್ತೆಮಾಡಬಲ್ಲ ಹಾಗೂ ನಿಗಾ ವಹಿಸಬಲ್ಲ ಕೇಂದ್ರಗಳನ್ನು ಆರಂಬಿಸಿದ. ಇಂದಿಗೂ ಅವು ನಿರ್ವಹಿಸುತ್ತಿವೆ.೧೮೬೫ ರಲ್ಲಿಯೇ ಓಝೋನೋಮೀಟರ್ ಅಸ್ತಿತ್ವದಲ್ಲಿತ್ತು. ಓಝೋನ್ ಪದರವು ಸೂರ್ಯನಿಂದ ಹೊರಹೊಮ್ಮುವ ಅತಿನೇರಳೆ ಕಿರಣಗಳನ್ನು ಶೇ ೯೭ ರಿಂದ ೯೯ ರಷ್ಟು ಪ್ರಮಾಣವನ್ನು ಹೀರಿಕೊಳ್ಳುತ್ತದೆ. ಇಲ್ಲವಾದಲ್ಲಿ ಭೂಮಿಯಲ್ಲಿನ ಎಲ್ಲಾ ಜೀವಿಗಳಿಗೂ ಈ ಅತಿ ನೇರಳೆ ಕಿರಣಗಳು ಕಂಟಕಪ್ರಾಯವಾಗುತ್ತಿದ್ದವು.ಇತ್ತೀಚೆಗೆ ಪರಿಸರದಲ್ಲಾಗುತ್ತಿರುವ ವಾಯುಮಾಲಿನ್ಯದಿಂದಾಗಿ ಓಝೋನ್ ಪದರದಲ್ಲಿ ರಂದ್ರಗಳಗುತ್ತಿದ್ದು ಈ ರಂದ್ರಗಳ ಮೂಲಕ ಸೂರ್ಯನ ನೇರಳಾತೀತ ಕಿರಣಗಳು ನೇರವಾಗಿ ಭೂಮಿಯನ್ನು ತಲುಪಿ ಜೀವಚರಗಳ ಮೇಲೆ ಪ್ರತಿಕೂಲ ಪರಿಣಾಮಗಳಾಗುತ್ತಿವೆ.