ಸದಸ್ಯ:Nataraj.Leela/sandbox
ಕೊರಲ್-ಕರಡಿಗೆ – குரல்-சிமிழ் The Voice-Box
ಕುರಲ್ குரல், > ಕೊರಲ್ ಇವೆರಡೂ ಬೇಱೆಬೇಱೆ ಮಾತು(ಭಾಷೆ)ಗಳ ಸೊಲ್ಲು (ಶಬ್ದ- a declinable word)ಗಳೆಂದು ತೋಱುವುದು ಅವವುಗಳ ಲಿಪಿಯಿಂ(ಬರಹದಿಂ)ದಲ್ಲದೆ ಉಲಿ > ஒலி ಒಲಿ(sound)ಯಿಂದ ಅಲ್ಲ. ಆದರೆ ಈ ಎರಡೂ ಸೊಲ್ಲುಗಳು ನುಡಿವ ಉಲಿಯನ್ನು ಕುಱಿತವು. ‘ಸಿವಪೂಸೈಯಿಲೇ ಕರಣ್ಡಗಮ್ ವಿಟ್ಟದು ಪೋಲசிவபூசையிலே கரண்டகம் விட்டது போல’ “ಶಿವಪೂಜೆಯಲ್ಲಿ ಕರಡಿಗೆ ಬಿಟ್ಟಂತೆ” —ಎಂದು ಕರಡಿಗೆಗೆ ಹೊಂದಿದ ಗಾದೆಯೇ ಎರಡೂ ಭಾಷೆಗಳಲ್ಲಿ ಉಂಟು. ಇಲ್ಲಿ ಶಿವ ಎಂದರೆ ಹುಟ್ಟಿನಿಂದ ಸಾವಿನ ವರೆಗಲ್ಲದೆ ಸತ್ತಮೇಲೂ ತನ್ನೊಳಗೆ ಹುದುಗಿಸಿಗೊಂಡು ಹೋಗುವ ಬಯಕೆಯ ಕರಡಿಗೆಯ ಒಳಗಣ ಇಷ್ಟ>ಇಟ್ಟಲಿಂಗ+ಅಮ್ இட்டலிங்கம். ಕರಡಿಗೆ ಬಿಟ್ಟಮೇಲೆ ಲಿಂಗಕ್ಕೆ ಪೂ+ಚೆ(>ಜೆ)ಯ್) (ಹೂಗೆಯ್(ಮಾಡು)ವದು) ಎಲ್ಲಿ? ಅದಕ್ಕಾಗಿ ಕರಡಿಗೆ ಬಿಟ್ಟು ಲಿಂಗವನ್ನು பாಪಾ+ஆடைಆಡೈ = பாಪಾ (வ்ವ್) ஆடைಆಡೈ = பாவாடை ಪಾವಾಡೈ > ಪಾ-ನೆಯ್ಗೆಯ ಆಡೈ>ಆಡೆ ಗೀಱೆೞೆಬಟ್ಟೆಯ(ವಸ್ತ್ರದ)ಲ್ಲಿ ಹುದುಗಿಸಿ ಕೊರಳಿನ ಲಿಂಗ(ವ<ಪ)ತ್ತಿಗೆ(=ಕೊರಲಕರಡಿಗೆ)ಗೆ ಕಟ್ಟ ತೊಡಗಿದರು. ಅದಿರಲಿ, ಮೇಲೆ ಕೊರಲ್ ಎಂದದು ಉಲಿ (ದನಿ, Voice ) ; ಆದರೆ ಇಲ್ಲಿ ಕೊರಳ್ ಎಂದದು ಕನ್ನಡ ಕತ್ತು < ಕೞ್ತು < ಕೞುತ್ತುகழுத்து (= Neck) ; ಅದೇ ಕತ್ತುகத்து ಆದರೆ ಉಲಿಗೆಯ್, ಕೂಗು, ಅಱಚು, ಅಬ್ಬರಿಸು ಎನ್ನುವ ಗೋಣ್ ಮೊೞಗಿನ ಹುರುಳನ್ನು ಪಡೆಯತ್ತದೆ. ಅಂದರೆ ಉಲಿ ಹೇೞದ ಹುರುಳನ್ನು ಲಿಪಿ ಹೇೞುತ್ತದೆ. ಈ ಮೊದಲು ಲಿಂಗವ(ಪ)ತ್ತಿಗೆ ಎಂದದು ಮಾತಾಳಿಯ ತಲೆಯನ್ನು ಹೊಱುವ ಕೊರಳಿನ ಮುನ್ನೆಡೆಯಲ್ಲಿ ಉಬ್ಬಿ ಕಾಣಿಸುವದೇ:கோழ்மாழை ಗೋೞ್ ಮಾೞೈ> ಗೋಣ್‿ಮಾೞೆ > ಗೋಮಾಳೆ.ಮುಂಗ(< ಕ)ತ್ತಿನ ಮಾೞೆ< ಮಾೞೈ *1மாழை youth, beauty ; lump ಎಳಮೆ, ಸೊಬಗು, ಗಟ್ಟಿ ಎನ್ನುವ ಹುರುಳಿನದು ಹೌದು. ಈ ಲಿಂಗಪತ್ತಿಗೆ ಯಾ (or – अथवा ಅಥವಾ, ಅಥ-ಹಾಗೆ ವಾ- ಅಲ್ಲದಿದ್ದರೆ) Adam’s Apple=ಕುರಲ್ ಮಣಿ குரல் மணி, ಗಂಡು, ಹೆಣ್ಣುಗಳ ಎಳಮೆ ಸೊಬಗು ಗಳನ್ನು ಬೆಳಗುವದಾಗಿದೆ. ಆಗತಾನೇ ಹುಟ್ಟಿದ ಮಕ್ಕಳಲ್ಲಿ ಈ ಕೊರಲ ಕರಡಿಗೆ ಬಲು ಚಿಕ್ಕದಾಗಿದ್ದು ಪಿಳ್ಳಂಗೋವಿ ಉಲಿತನ್ಮೆಯ ಎಳೆತನದದಾಗಿ ಸುಮಾರು ಐದು ಸಾಲು(ವರುಷ)ಗಳ ವರೆಗೆ ಮುಂದುವರಿಯುತ್ತದೆ. ಮಗುವಿನ ಕೊರಲ ಕರಡಿಗೆಯ ಬೆಳವಣಿಗೆ ಮೂಱುಸಾಲುಗಳ ವರೆಗೆ ಸಾಗಿ ಮುಂದೆ ಹೆಣ್ಣು ನೆರೆಯುವ, ಗಂಡು ಹರೆಯುವ ತನಕ ಬೆಳವಣಿಗೆ ಇರದು. ಐದು ಸಾಲಿಗೆ ತಲಪುತ್ತಿದ್ದಂತೆ ಮಗುವಿನ ನುಡಿವ ಕೊರಲು ಸುತ್ತಮುತ್ತಿನ ನೆಲಮೆಗೆ ನಿಲುಕುತ್ತದೆ. ಹರೆಯದಲ್ಲಿ, ಒಡಲು ಬ(>ಬೆ)ಳೆದಂತೆ ಕೊರಲೂ (ಉಲಿಯೂ) ಬೆಳೆಯುತ್ತದೆ. ಈ ಏೞು ಯಾ ಎಂಟು ವರುಷಗಳ ನಡುವೆ ಕೆಲವೊಂದು ಉಲಿಯ ಮಟ್ಟು ಮೆಟ್ಟುಗಳ ಮಾಱುಪಾಟು ಉಂಟಾಗುವದನ್ನು ಗಮನಿಸಬಹುದು. ಹುಡುಗಿಯರಲ್ಲಿ ಹನ್ನೆರಡಱಿಂದ ಹದಿನೈದು ವರುಷಗಳ ನಡುವೆ ಮೊಲೆ ಮುಡಿ ಮೊಳೆತು ಕೊರಲೂ ಬಲಿಯುತ್ತದೆ. ಹುಡುಗಿಯರಿಗಿಂತ ಹುಡುಗರಲ್ಲಿ ಹದಿಮೂಱಱಿಂದ ಹದಿನಾಱಱ ವರೆಗೆ ಗಡ್ಡ ಮೀಸೆ ಮೂಡಿ ಬಿರುಸಿನ ಉಸಿರಾಟದ ಕೊರಲೂ— ದಿಢೀರನೆ ಮಿಂಚಿನಂತೆ ತೋಱಿ ಅಡಗುವ ಮಕ್ಕಳ ಎತ್ತರಿಸಿದ ಕೊರಲು ಇಲ್ಲವೆ ದೊಡ್ಡ ಗಂಡಸರ ಕೊರಲು ಹುಡುಗರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದು ಹುದುವಾದ ಗುಱುತೇನೂ ಅಲ್ಲ. ಒಡಕಲ ಕೊರಲು ಹೆಣ್ಣುಗಂಡುತನಗಳಿಗೆ ತಳುಕುಹಾಕಿದವು ಅಲ್ಲವಾದರೂ ಉಲಿಯ ಏಱುಪೇರಿನ ಬದಲಾವಣೆ ಹೆಣ್ಣುಗಂಡುಗಳ ನೆರೆಹರೆಗಳಿಗೆ ನಿಗದಿತವಾದುದಾಗಿದೆ. ಇದೊಂದು ತರುಣತನದ, ತನಗೆ ತಾನೇ ಹೆಣ್ಣುಗಂಡುಗಳಿಬ್ಬರಲ್ಲೂ ಕಣ್ಣಿಗೆ ಕಾಣಿಸಿಕೊಳ್ಳುವಂತಹ ಕೆಲವು ತಿಂಗಳುಗಳ ವರೆಗಿನ ಕೊರಲ ಬೆಳವಣಿಗೆ ; ಆದರೂ ಹುಡುಗರಲ್ಲಿ ಹೆಚ್ಚಿನ ಮಟ್ಟಿಗೆ ಗುಱುತಿಸತಕ್ಕದಾಗಿದೆ. ಕೊರಲಿನ ಮಟ್ಟುಮೆಟ್ಟುಗಳ ಏಱುಪೇರು ಹೆಚ್ಚಿನಿಂದ ಕಡಮೆಯದಾಗಿರುತ್ತದೆ. ಅಂತಲ್ಲಿ ಕೆಲವು ಹುಡುಗರು ಗಂಡಸುತನದ ಬಲಿತ ಕೊರಲುಲಿಯ ಬಗೆಗೆ ಹೆಮ್ಮೆಪಟ್ಟುಕೊಳ್ಳುವರಾದರೆ ಮತ್ತೆ ಕೆಲವರು ಬಲು ಎಚ್ಚರದ ನಾಚಿಕೆಪಡುವ ಹುಡುಗರು ಎಳೆತನದ ಸಟೆಉಲಿಯನ್ನೆ ಬೆಳಸಿಕೊಳ್ಳಲು ಬಯಸುವ ಆ ಬಯಕೆಯನ್ನು ಕೆಲವು ದಿವಸಗಳಲ್ಲಿ ಹೋಗಲಾಡಿಸಬಹುದು. ಎಳೆತನದ ಸಟೆಉಲಿಗೆ ಆ ಓರಗೆಯ ಕೆಲವರಲ್ಲಿ ಕೊರಲ ಕರಡಿಗೆ ಸರಿಯಾಗಿ ಬ(ಬೆ)ಳೆಯದಿರುವುದೂ ಕಾರಣವಾಗಬಹುದು. ಈ ಕೊರಲ ನೆಲೆಯನ್ನು ಹೆಣ್ಣೂ ಅಲ್ಲದ ಗಂಡೂ ಅಲ್ಲದ ಹೇಡಿ < ಪೇಡಿபேடி–ಗಳು ಹೆಣ್ಣುಕೋಲ(ವೇಷ)ವನ್ನು ಹಾಕಿ ನಾಟಕರಂಗಗಳಲ್ಲಿ ಹಾಡಿಕುಣಿವ ಗಂಡುಡಿಗಿಗಳ ಕೊರಲ ಸೊಬಗನ್ನು 17-18ನೆಯ ನೂಱಱ ಯೂರೋಪಿನ ಜನ ಬಹುವಾಗಿ ಮೆಚ್ಚಿಕೊಳ್ಳುತ್ತಿದ್ದರೆಂದೂ ಆ ಸೊಬಗಿನ ಸಟೆಕೊರಲನ್ನು ಅವರಲ್ಲಿ ಸದಾ ಉಳಿಸಲು ಎಳೆಯರಾಗಿರುವಾಗಲೇ ಅಂತಹ ಹುಡುಗರ ಬೀಜಬಡಿಯುತ್ತಿದ್ದುದಾಗಿ ತಿಳಿದುಬರುತ್ತದೆ. ಕೊರಲ್(ವಾಯ್ಸ್) ಎಂಬುದು ಯಾರೊಬ್ಬರ ಮೋಱೆಯಂತೆ ಗುರುತುಹಚ್ಚ ಬಹುದಾಗಿದೆ. “ ಮಾತಾಡಯ್ಯಾ ನೀನಾರೆಂದು ತಿಳಿಯಬಹುದು” ಎನ್ನುವ ಸೊಕ್ರೆಟೀಸನ ಮಾತೂ ಅದೇ ಆಗಿದೆ. ಈ ಉಲಿಯು ಹದಗೆಟ್ಟು ಮಂದಿಯ ಮಾತುಕತೆಯಲ್ಲಿ ಏಱುಪೇರು ಉಂಟಾಗಿ ತಿಳಿವಳಿಕೆ ತಪ್ಪಿ ಹೊಂದಾಣಿಕೆ ಕೆಡಬಹುದು. ಈಗ ಇದನ್ನು ಇಲ್ಲಿಗೆ ಬಿಟ್ಟು ಆಡುಮಾತುಗಳಿಗೆ ಒದಗಿಸುವ ಹಾಡುಗಾಱಿಕೆಯ ಇಂಪಿನ ಸೊಂಪನು ಹೊಱತರುವಲ್ಲಿ ಕೊರಲಕರಡಿಗೆಗೆ ಒತ್ತಾಸೆಯಾಗಿ ಒದಗುವವುಗಳ ಬಗೆಗೆ ಒಂದಿನಿತು ತಿಳಿಯೋಣ: ಇನಿಗೊ(ಕೊ)ರಲು ಹುಟ್ಟಿ ಪಸರಿಸಲು ಅದಕ್ಕೆ ಒಂದು ಹುರಿದುಂ(ತುಂ)ಬಿಸುವ ಮತ್ತೊಂದು ಇದಿರುಲಿವದಱ ನೆರವು ಬೇಕೇಬೇಕಾದವು. ಮಾತಾಳಿಯ ಪುಪ್ಪಸ (ಉಸಿರಚೀಲ - ಶ್ವಾಸಕೋಶ)ಗಳು ಎಬ್ಬಿಸುವ ಉಸಿರಿನ ಒತ್ತಡವೇ ಹುರುಪು. ಕೊರಲ ಕರಡಿಗೆಯ ಒಳಗಣ ಉಲಿಮಿಣಿಮಡಿಕೆಗಳ ಅದರುವಿಕೆಯೇ ನನ್ನಿಯ ಉಲಿಕಾಱ. ಅಂತಹ ಉಲಿಗೆ ಗುಱುತುಹಚ್ಚುವಂತಹ ಮಟ್ಟು ಮೆಟ್ಟುಗಳ ಏಱು ಇೞಿತಗಳ ತನ್ಮೆಗಳನ್ನು ತರತಕ್ಕವು ಕೊರಲಕರಡಿಗೆಯ ಕೆಳಗಣ ಎದೆಗೂಡು ಹಾಗೂ ಮೇಲಣ ಮೂ(ಗಿನ)ಗೂಡು
ಎಲ್ಲ ಐ(ಯ್) ಅಱಿವು (±ವು+ಉ)ಳ್ಳ ಜೀವಿಗಳಲ್ಲೂ ಇರುವಂತೆ ಬಾಯ್ಬಿಲವೂ ಮೂಗ್ಬಿಲವೂ ಇರುವುದು ಉಣ್ಣಲು ಹಾಗೂ ಉಸಿರಾಡಲು; ಆದರೆ ಅಱಿವುಳ್ಳ ಮಾನವನು (Nova the (great) animal) ತನ್ನೊಳಗ(ನೆನಹ)ನ್ನು ಬಿಚ್ಚಿ ತೋಱಲು ತನ್ನ ಎಲ್ಲ ಎಸಕಗಳ ಹೊಂದಾಣಿಕೆಯ ಅತಿದೊಡ್ಡ ಮುಟ್ಟು (ಸಲಕರಣೆ) ಕೊರಲು ಹಾಗೂ ಅದಱ ಬೆಳವಣಿಗೆಯ ಮಾತು. ಅವನ ಈ ಮಾತು ಆ ಕೊರಲ ಮಹಿಮೆ ಎಂತಹದೆಂದು ನೋಡೋಣ.
ಕೊರಲೆತ್ತಿ ಕೊರಲಸಿರಿಯನ್ನು ಗೞಿಸಿಕೊಳ್ಳಬಹುದು ; ಕೊರಲೆತ್ತಿ ಹಾಡಿ ಮುಗಿಲೆತ್ತರದಲ್ಲಿ ಹಾಱಾಡಬಹುದು ;
ಕೊರಲೆತ್ತಿ ಸಾರಿ ಸರಕನ್ನು ಮಾಱಬಹುದು ; ಕೊರಲೆತ್ತಿ ಕೂಗಿ ಕರೆನೀಡಬಹುದು ; ಕೊರಲೆತ್ತಿ ಒಳಗಿನ ಅಲೆಎಬ್ಬಿಸಿ ಕೇಳುಗರನ್ನು ಆಳಬಹುದು ; ಕೊರಲೆತ್ತಿ ಪಡೆಗಳನ್ನು ಮುನ್ನಡೆಸಬಹುದು ; ಕೊರಲೆತ್ತಿ ಕೂಟದ ಜನರನ್ನೂ ಮಾತಿನ ಮೋಡಿಯಲ್ಲಿ ಬೀೞಿಬಹುದು ; ಕೊರಲೆತ್ತಿ ಜನರ ಒಳಗನ್ನು ಎಚ್ಚರಿಸಬಹುದು ; ಕೊರಲೆತ್ತಿ ನಯದಿಂದ ಮತ್ತೊಬ್ಬರ ಮನವೊಗಬಹುದು ; ಕೊರಲೆತ್ತಿ ಜನರನ್ನು ನಗೆಗ(ಕ)ಡಲಲ್ಲಿ ತೇಲಿಸಬಹುದು ; ಕೊರಲೆತ್ತಿ ಮಣಮಣ ಮಂತಿರಿಸಬಹುದು ; ಕೊರಲೆತ್ತಿ ಪಿಟಿಪಿಟಿ ಜಪಿಸಬಹುದು ; ಕೊರಲೆತ್ತಿ ಗುಟ್ಟನ್ನು ಪಿಸುಗುಟ್ಟಬಹುದು ; ಕೊರಲೆತ್ತಿ ಹಿಡಿಶಾಪ ಇಡಬಹುದು ; ಕೊರಲೆತ್ತಲಾಗದೆ ಕೊನೆಗೆ ಕೊರಲನ್ನು ಕಳೆದುಕೊಳ್ಳಲೂ ಬಹುದು.
ಕೊರಲ್-ಕರಡಿಗೆ- குரல்-சிமிழ்- The Voice-Box ಕೊರಲ ಕರಡಿಗೆಯ ಒಡಲ ಬಿಡಿ ಎಡೆಗಳು : 1. ಕೀೞ್ಒದಡು(ಕೆೞತುಟಿ), 1*. ಮೇಲ್ಒದಡು(ಮೇಲ್ತುಟಿ), 2. ಕೀೞ್ (ಪ>)ಹಲ್(ಕೆೞಹಲ್ಲು) 2*. ಮೇಲ್ (ಪ>)ಹಲ್(ಮೇಲ್ಹಲ್ಲು),
3. ಕೀೞ್ (ಪ>)ಹಲ್ ಇಗಱು,
4. ಗಟ್ಟಿ ಅಟ್ಟಣ(ಅಂಗಳ್), 5. ನಟ್ಟಟ್ಟಣ (ನಡು-(ಅಟ್ಟಣ, ಅಂಗಳ್), 5*. ಮೆಲ್ಮೆ ಅಟ್ಟಣ (ಅಂಗಳ್), 6. ಕಿಱು ನಾಲಗೆ, 7. ಮೂಗುಬೞಿ, 8. ಗಂಟಲಗುೞಿ-ಬೞಿ, 9. ತುದಿನಾಲಗೆ, 10. ಎಲೆನಾಲಗೆ, 11. ಮುನ್ನಾಲಗೆ, 12. ಹಿನ್ನಾಲಗೆ, 13. ಮುಚ್ಚಿತೆಗೆವ ಱೆಕ್ಕೆಮೇಲ್ಮುಚ್ಚಳ, 14. ಗಂಟಲ ಗುೞಿಬೞಿ, 15. ಕೊರಲಕರಡಿಗೆ, 16. ಉಸಿರಾಟದ ‘ಗಾಳಿತೂತಿನ’ ಮಡಿಕೆ, 17. ಕೊರಲಕರಡಿಗೆ ಮಿಣಿಗಳೊಡನೆ, 18. ಕೊರಲ ಕರಡಿಗೆ, ಲಿಂಗವ(ಪ)ತ್ತಿಗೆ,
ಮೆಟ್ಟಱೆ, ಮೆಟ್ರೆ, ಗೋಣ್,ಮಾೞÉ, ಗೋಮಾಳೆ, ಮೆಡಱು,
19. ಗುರಾಣಿ ಪರಿಜಿನ ಮೆದುಮೂಳೆ, 20. ಮೂ(ಗಿನ)ಗವಿ, 21. ಬಾಯ್ ತೆಱವು. 22. ಉಸಿರ್.ಕೊೞವೆ,
ಕೊರಲ ಕರಡಿಗೆ ಹೇಗೆ ಆಗಿದೆ, ಉಲಿವ ನುಡಿಬಗೆ ಎಂತು, ಎಲ್ಲಿ, ಎನಿತು?
ಕೊರಲ ಕರಡಿಗೆ, कण्ठध्वनिसंपुट ಕಣ್ಠಧ್ವನಿಸಂಪುಟ. ಸಂಪುಟ-(ಮುಚ್ಚಳ ಇರುವ ಕರಡಿಗೆ) ; ಇಲ್ಲಿ ಮುಚ್ಚಳ ಇರುವ ಕೊರಳ ಕೊರಲಕರಡಿಗೆ — Voice-Box –Larynx – குரல் சிமிழ் (செப்பு) –Adam’s Apple. ಇದು ಒಡಲ ಉಸಿರಾಟದ ನಡೆವಳಿಕೆಗೆ ಹೊಂದಿದ ಒಂದು ಒಡಲ ಪಂಗು. ಕೊರಲ ಮಿಣಿ ಮೆಡಱು (ಹೆಣಿಗೆ)ಗಳ ನಡುವೆ ಕೊರಲ ಉಸಿರನ್ನು ಬಿಡುವುದು ಬಿಡದೆ ಇರುವುದು ಇದಱ ಕೆಲಸ. ಉಣವನ್ನು ನುಂಗು ವಲ್ಲಿ ಉಸಿರ ಕೊೞವೆಗೆ ನೊೞೆ ಯದಂತೆ ನೋಡಿಕೊಳ್ಳುವುದು ಇದಱ ಮೇಲ್ಮುಚ್ಚಳ. ಈ ಮೊದಲು ಕೊರಲ್ ಎತ್ತಿ ಕೊರಲ ಸಿರಿಯನ್ನು ಗೞಿಸಿಕೊಳ್ಳಬಹುದು ಎನ್ನುವದಱಿಂದ ಕರಡುಪ್ರತಿ Draft
ಮುಂದುವರೆಯುವುದು.(wil be continued) Article by C. Nataraj wikipedia A\c Nataraj.Leela e-mail natarajchannabasavappa356@gmail.com
ವಿಕಿಪಿಡಿಯ ನೋಟಕರು ಓದಿ ತಿಳಿಯಲು ಅನಿತೇ.
ಇದೇ ಬರಹಗಾರರಿಂದ ಈ ಮೊದಲು ಕಣಜ ತಲೆಬರಹದಲ್ಲಿ ತುಂಬಿರುವ ಮತ್ತೊಂದು ಬರವಣಿಗೆ.
‘ಕಣಜ’ - ಒಂದು ನುಡಿ ನಡೆಯ ನೋಟ
ಬಿದಿರು ಸೀಳುಗಳಿಂದ ಆಳೆತ್ತರಕ್ಕೆ ಕೊೞವೆ ಪರಿಜಿಗೆ ಎಣೆದು ಸಗಣಿ ಅಲ್ಲದಿದ್ದರೆ ಕೆಮ್ಮಣ್ಣಿಂದ ಸಾರಿಸಿ ಧವಸಗಳನ್ನು ಕೂಡಿಡಲು ಮಾಡಿದ கூடை ಕೂಡೈ(ತ) > ಗೂಡೆ ‘ಕಣಜ’ ಎನಿಸುತ್ತದೆ. ಇದನ್ನು ಮನೆಯ ಒಳಗಾಗಲೀ ಹೊಱಗೆ ಜಗಲಿಯಲ್ಲಾಗಲೀ ಇಡುವುದು ವಾಡಿಕೆ. ಈ ಕಣಜ ತಮಿೞಿನಲ್ಲಿ களஞ்சியம் ಕಳಞ್ಜಿಯಮ್, தொம்பை ತೊಮ್ಬೈ ಎಂದು ಕರೆಸಿಕೊಳ್ಳುತ್ತದೆ. ತೊಮ್ಬೈ ಕನ್ನಡಕ್ಕೆ ಬರುವಾಗ ತೊಂಬೆ ಆಗುತ್ತದೆ.
ಇನ್ನೂ ಹೆಚ್ಚು ಧವಸ ಉಳ್ಳವರು ಆಱೆಂಟು ಅಡಿಗಳ ಹಲಗೆಗಳನ್ನು ಪೆಟ್ಟಿಗೆಯ ಪರಿಜಿಗೆ ಹೊಂದಿಸಿ ದವಸಗಳನ್ನು ಕೂಡಿಡಲು ಅಲ್ಲದೆ ಬೞಸಲು ಬೇಕಾದಾಗ ತಳಮಟ್ಟದಲ್ಲಿ ಹೊಂದಿಸಿರುವ ಎರಡು ಹಿಡಿಗಳಲ್ಲಿ ಮೇಲಿನದನ್ನು ಎೞೆದು ಮತ್ತೆ ಅದನ್ನು ಒಳತಳ್ಳಿದಾಗ ಅದಱ ಕೆಳಕ್ಕೆ ತಳವಿರುವ ಒಂದು ಅಡಿ ಚಚ್ಚೌಕದ ಚೌಕಟ್ಟಿಗೆ ಧವಸ ತುಂಬಿಕೊಳ್ಳುತ್ತದೆ. ಇದನ್ನು ಹೊಱ ಎೞೆದು ದವಸವನ್ನು ಹೊಱ ಹಾಕಿ ತಳಚೌಕಟ್ಟನ್ನ ಒಳತಳ್ಳಿ ಬಿಡಬಹುದು, ಇಲ್ಲವೆ ಮುಂದುರಿಸಬಹುದು. ಹೀಗೆ ಕಣಜದ ಬೞಕೆಯಾಗುತ್ತದೆ.
ಇನ್ನೂ ಹೆಚ್ಚಿನ ಧವಸ ಇದ್ದಲ್ಲಿ ಮನೆಯ ಹೊಱಗೆ, ಕಲ್ಲುನೆಲದಲ್ಲಿ, ಬಾಯಿ ಕಿಱಿದಾಗಿ ಒಳಗೆ ಅಗಲವಾಗಿ ಗುಡಾಣದ ಪಾಂಗಿನಲ್ಲಿ/ರೀತಿಯಲ್ಲಿ, ಗುಂಡಿ ಅಗೆದು, ಅವುಗಳಲ್ಲಿ ರಾಗಿ ಜೋೞ ಮುಂತಾದವುಗಳನ್ನು ಕೂಡಿಟ್ಟು, ಮೇಲೆ ಕಲ್ಲ ಮುಚ್ಚಳ ಮುಚ್ಚಿ ಅದಱ ಮೇಲೆ ಮೞೆಯ ನೀರು ಇೞಿಯದಂತೆ ಜೇಡಿಮಣ್ಣು ಎೞೆದು ಕೂಡಿ ಇಡುವ ಕಣಜ 'ಅಗೇವು' ಎನಿಸುತ್ತದೆ. ಬಱಗಾಲದಲ್ಲಿ ಬಡವರಿಗೆ ಹಂಚಲೂ ಒದಗುತ್ತದೆ.
ಕಡಿಮೆ ಅಳವಿನಲ್ಲಿ ಅಕ್ಕಿ, ಕಾೞುಗಳನ್ನು ಕೂಡಿಡಲು ಬೞಸುವ ಹಿತ್ತಾಳೆ ಮುಂತಾದವುಗಳಿಂದಾದ ಗುಡಾಣವೂ ಒಂದು ಸಣ್ಣ ಕಣಜ; ಇದಕ್ಕೆ ಕನ್ನಡದಲ್ಲಿ ‘ಮಣಿಕ’ ಎಂಬ ಮತ್ತೊಂದು ಹೆಸರೂ ಉಂಟು. ಕಾೞುಗಳ ತೆನೆ (ಕ.ತ.)ಗಳಲ್ಲಿ ‘ கதிர் ಕದಿರ್ ’ ಎನಿಸಿದರೆ ಕಾೞುಗಳನ್ನು ಕೂಡಿಡುವ ಮಣ್ಣಿನ ಗುಡಾಣ ತಮಿೞಿನಲ್ಲಿ ‘ குதிர் ಕುದಿರ್ ’ ಎನಿಸುತ್ತದೆ.
ಕುಟುಕುವ ಕೊಂಡಿ, ಹಾಱುವ ಱೆಕ್ಕೆ ಎರಡೂ ಉಳ್ಳ ( ಕೆಮ್ + ಚಿಗಿ=ಕೆಞ್ಜಿಗಿ )ವ =ಕೆಂಚನೆಯ ಬಣ್ಣದ ಹಾಱುವ ಕೆಂಜಿಗ ಇಱವೆಯೂ ಕಣಜ ಎನಿಸುತ್ತದೆ. ಕಾಡುವ ಈ ಕಣಜವನ್ನು ‘ಕಡಜ’ ಎಂದೂ ಕರೆಯಲಾಗುತ್ತದೆ. ಕಾಟ ಕೊಟ್ಟು ಕಾಡುವ ಮಕ್ಕಳನ್ನು ಕಡಜ ಎಂದು ತಾಯಂದಿರು ಕರೆಯುತ್ತಾರೆ.
ಕನ್ನಡದ ಕೇಶಿರಾಜರು ಸಂಸ್ಕೃತವಿಬುಧರಿಗೆ ಧಾತುಪಾಠವನ್ನು ಹೇೞುವಲ್ಲಿ ‘ಕುಡುಕು’ ಎನ್ನುವುದಕ್ಕೆ ‘ಧಾನ್ಯಾದಿ ದ್ರವ್ಯೇ ಚ ’ ಎಂದಿರುತ್ತಾರೆ ; ಅಂದರೆ ಧನತೀತಿ – ಚರಿಸಿದಪುದೆಂದುಬು - ಧನಃ – ಪಶು ; ಧನಂ – ದ್ರವ್ಯಂ ; ಧಾನ್ಯಂ - ಧವಸ ಮೊದಲಾದ ಬೞಕೆಯವು ಗಳನ್ನು ಒಟ್ಟುಗೂಡಿಸಿ ಇಡುವಲ್ಲಿ ಈ ‘ಕಡುಕು’ ಸೊಲ್ಲಿನ ನಡೆಬೞಕೆ ಎನ್ನುವರು ಹಿರಿಯರು.
ಈ ಕುಡುಕು ತಮಿೞಾಗುವಾಗ ‘ கொடுக்கு ಕೊಡುಕ್ಕು ’ ಎಂದೂ ಆಮೇಲೆ ಕನ್ನಡದಲ್ಲಿ ‘ಕುಡಿಕೆ’ ಎಂದೂ ಆಗುತ್ತದೆ. ‘ಕೂತು ಉಂಬವನಿಗೆ ಕುಡಿಕೇ ಹಣವೂ ಸಾಲದು.’ ಎನ್ನುವ ಗಾದೆ ಕಣಜ ಎಂಬದು ಹಣ ಕೂಡಿಡುವ ಕುಡಿಕೆಗೂ ಆಗತ್ತದೆ ಎಂಬುದನ್ನು ತಿಳಿಗೊಳಿಸುತ್ತದೆ.
பண்ட ಪಣ್ಡ (ತ) ಎನ್ನುವುದು ಸರಕು. ಒಂದು ಸರಕು ಕೊಟ್ಟು ಮತ್ತೊಂದು ಸರಕು ಕೊಳ್ಳುವ ಮಾಱಾಟ, ಸಾಟಿ > ಚಾಟಿ ಎನಿಸತ್ತದೆ. ಇದಕ್ಕೆ ಬಂಡವಾಳ ಬೇಕಿಲ್ಲ. பண்ட> ಬಂಡ ಎನ್ನುವುದು ರೊಕ್ಕ. ರೊಕ್ಕವನ್ನು ಸೇರಿಸಿ ಇಡುವ ಎಡೆ ‘ಬೊಕ್ಕಸ’ ಎನಿಸುತ್ತದೆ.
'ಖಜಾನೆ'/'ಭಂಡಾರ’ ಎನ್ನುವುದು ರೊಕ್ಕದ ಮನೆ. ಅವನೇ பண்டாரம் ಪಣ್ಡಾರಮ್(ತ). ಆಡಳಿತ ನಡೆಸುವವನು ‘ಭಂಡಾರಿ’ ; ಇಲ್ಲಿ ಭಕ್ತಿಭಂಡಾರಿ ಬಸವೇಶ್ವರರನ್ನು ನೆನಯಬಹುದು. ಬಂಡಾರ > भण्डार ಭಂಡಾರ ಆಗಿ ಸಂಸ್ಕೃತಗೊಂಡು कोश ಕೋಶ ಆಗಿದೆ. ಅಲ್ಲಿಯೂ ಕೋಶಕ್ಕೆ श ಶ ಇರಬೇಕೋ ष ಷ ಇರಬೇಕೋ ಅನ್ನುವ ಗಲಬಿಲಿ/ಗೊಂದಲವೂ ಈಗಲೂ ಉಂಟು.
ಮುಂದೆ ಎಂದಿಗಾದರೂ ಯಾರಿಗಾದರೂ ತಿಳಿಯಬೇಕೆಂದಿರುವದಱ ಬಗೆಗೆ ಹೇೞಿಕೊಡುವ - ಡಿಕ್ಷ್ನರಿ, ಬಱಗಾಲಕ್ಕೆ ಇರಲಿ ಎಂದು *ಕಾೞುಕೂಡಿಡುವ - ಗ್ರಾನರಿ, ಕಡುಬಡತನ ಬಂದಾಗ ಒದಗಲಿ ಎಂದು ಹಣಕಾಸು ಸೇರಿಸಿ ಕೂಡಿಡುವ – ಟ್ರೆಷರಿ ಈ ಮೂಱೂರಿಂದ ಆದುದು ‘ಕಣಜ.’
ಇಲ್ಲಿ *ಕಾೞು ಅಂದದು ಗಟ್ಟಿ ನಾಡುನುಡಿಯ ನಯನಾಣಿಯ(ಣ್ಯ)ಗಳ ಅಱಿವಿನ ತಿಳಿವು ಮೈದೋಱುವ ನಾಣ್ಣುಡಿ ಜಾಣ್ಣುಡಿಗಳ ಬೊಕ್ಕಸವೇ ‘ಕಣಜ.’
ಈ ಲೇಖನ ‘ಕಣಜ ಅಂತರಜಾಲ ತಾಣ’ ಸ್ವೀಕರಿಸಿತಾದರೂ, ಇದರ ಪ್ರಯೋಜನ ಪಡೆಯಲಿಲ್ಲವಾಗಿ ವಿಕಿಪಿಡಿಯ ನೋಟಕರ ಅವಗಾಹನೆಗೆ ಇದನ್ನು ಇಡಲಾಗಿದೆ.
wikipedia A/c.: Nataraj.Leela Date : 10-4-2014 e-mail: natarajchannabasavappa356#gmail.com
- 1ತಿಳಿನೋಟ-1-Here I want insrt an immage. I could not paste it.I want help.