ಸದಸ್ಯ:Narasimharaju/ನಿನಗೊಂದು ಪತ್ರ

ಪ್ರೀತಿಯ ಮಳೆ ಮುಗಿಲೇ,

ಎಷ್ಟೋ ದಿನದಿಂದ ನಿನಗೊಂದು ಪತ್ರ ಬರೆಯ ಬೇಕೆಂದು ಕೊಳ್ಳುತ್ತಲೇ ಇದ್ದೆ. ಆದರೆ ಬರೆಯಲಾಗಿರಲಿಲ್ಲ. ನನ್ನ ಸೋಮಾರಿತನವೋ ಬರೆಯಲಾರದಕ್ಕೋ ಸುಮ್ಮನಿದ್ದೆ.

ಆದರೆ ಇಂದು ನಿದ್ದೆಯಿಂದೆದ್ದೋಡನೆಯೇ ನಿನಗೆ ಬರೆಯುವುದೆಂದು ಕುಳಿತಿದ್ದೇನೆ. ಇಂತಹದ್ದನ್ನೇ ಬರೆಯ ಬೇಕೆಂದೇನೂ ಅಂದು ಕೊಂಡಿಲ್ಲ. ಅನಿಸಿದ್ದನ್ನೆಲ್ಲಾ ಬರೆಯುಇತ್ತಾ

(ಕೊರೆಯುತ್ತಾ) ಹೋಗುತ್ತೇನೆ. ನಾನಿಂದು ಎದ್ದು ಅಕಳಿಸುತ್ತಿದ್ದಾಗ ಪ್ರಕೃತಿ ಆಗಲೇ ಎದ್ದು ಸೋಮಾರಿಯಾದ ನೀನು ಮೈ ಮುರಿಯುವಂತೆಯೇ ಮೈ ಮುರಿಯುತ್ತಿತ್ತು. ನಿನಗೆ

ಗೊತ್ತಾ ಪ್ರಕೃತಿಯ ಒಂದೊಂದು ಮಗ್ಗುಲೂ ನಿನ್ನನ್ನು ನೆನಪಿಸುತ್ತದೆ.

ಎದ್ದವನೇ 'ಕಾಫಿ ಕುಡಿಯೋ' ಎಂಬ ಅಮ್ಮನ ಮಾತನ್ನು ಕೇಳಿಸಿ ಕೊಂಢರೂ ಸುಮ್ಮನೇ ಹೊರಡುತ್ತೇನೆ, ಬೆಳಗಿನ ಚಳಿಯನ್ನು ಅನುಭವಿಸಲು.

ಮೈ ಮೇಲೆ ಒಂದು ಅಂಗಿ ಮತ್ತು ಚೆಡ್ಡಿ ಮಾತ್ರ. ಬರಿಗಾಲಲ್ಲಿ ನಡೆಯುತ್ತೇನೆ, ಯಾಕೆ ಗೊತ್ತಾ? ಹುಲ್ಲಿನ ಮೇಲಿರುವ ಿಬ್ಬನಿಯ ಮಣಿಗಳ ಕಚಗುಳಿ ಅನುಭವಿಸಲು.

ಹಾಗೆಯೇ ಮೆಲ್ಲನೇ ನಮ್ಮ ಮನೆಯಿಂದ ಸ್ವಲ್ಪವೇ ದೂರವಿರುವ ಹಳ್ಳದೆಡೆಗೆ ಹೋಗುತ್ತೇನೆ. ಅದಲ್ಲಿ ಹರಿಯುವ ನೀರನ್ನು ಸುಮ್ಮನೇ ನೋಡುತ್ತಾ ನಿಲ್ಲುತ್ತೇನೆ.

ಯಾಕೆಂದರೆ ಗೆಳತಿ ನನ್ನ ಮನದಲ್ಲೂ ಅದೇ ರೀತಿ ಏನೋ ಒಂದು ಹರಿಯುತ್ತಿದೆ ಅದೇನೆಂದು ತಿಳಿಯದಾಗುತ್ತೇನೆ. ಹಾಗೆಯೇ ಮೆಲ್ಲಗೆ ಹಳ್ಳದ ದಡದಲ್ಲಿರುವ ಗಿಡದ ಕೆಳಗೆ

ಹೋಗಿ ಅದರ ಕೊಂಬೆಯನ್ನು ಹಿಡಿದು ಜೋರಾಗಿ ಅಲುಗಾಡಿಸುತ್ತೇನೆ, ರಾತ್ರಿ ಬಿದ್ದ ಮಳೆಯಿಂದಾಗಿ ಅದರಲ್ಲಿ ಅಂಟಿದ ಹನಿಗಳು ಮೈಮೇಲೆ ಸುರಿಯುತ್ತವೆ, ಜೊತೆಗೆ

ನೀನಿದ್ದೀಯೇನೋ ಎಂಬಂತೆ ಜೋರಾಗಿ ನಗುತ್ತೇನೆ.I feel your presence. ಚಳಿಯಲ್ಲಿ ನಡುಗುತ್ತಾ ಈಚೆಗೆ ಬಂದರೆ ರಾತ್ರಿಯೆಲ್ಲಾ ಮಳೆಯಲ್ಲಿ ಮಿಂದ ರವಿ

ಬೆಂಕಿ ಕಾಯಿಸಿಕೊಳ್ಳುವುದನ್ನು ನಿಲ್ಲಿಸಿ ಮೆಲ್ಲಗೆ ಮೇಲೆ ಬರುವುದನ್ನು ಕಾಣುತ್ತೇನೆ. ಅವನನ್ನು ಎದುರಿಗೆ ನಿಲ್ಲಿಸಿ ಕೊಂಡು ಕೇಳುತ್ತೇನೆ 'ನನ್ನ ಹುಡುಗಿ ಎದ್ದಿದ್ದಾಳೇನೋ'ಅಂತ.

ಹಾಗೆಯೇ ಹೇಳುತ್ತೇನೆ 'ಅವಳನ್ನು ಈಗಲೇ ಏಳಿಸ ಬೇಡ ಮಾರಾಯ, ಅವಳ ಸವಿ ನಿದ್ದೆ ಹಾಳು ಮಾಡಬೇಡ. ಅವಳೆದ್ದ ಮೇಲೆ ನನ್ನ ಕಚಗುಳಿಯನ್ನು ಅವಳಿಗೆ ಮುಟ್ಟಿಸು'.

ಸುಳಿಯುವ ಗಾಳಿಯನ್ನು ಗದರುತ್ತೇನೆ 'ಅವಳ ರೂಮಿನೊಳಕ್ಕೆ ನುಗ್ಗ ಬೇಡ' ಎಂದು. ಹೇಳು ಹುಡುಗಿ ಯಾವಾಗ ಬರುತ್ತೀ ನನ್ನ ಮುಂಜಾವಿಗೆ, ಯಾವಾಗ ಕಾಲಿಡುತ್ತೀ

ನನ್ನ ಮನೆಯಂಗಳಕ್ಕೆ . ಕಾಯುತ್ತಿದ್ದೇನೆ, ನೀನು ಬರಲೇ ಬೇಕು ಏಕೆಂದರೆ ನೀನಾಗಲೇ ಬಂದಾಗಿದೆ ನನ್ನ ಮನದಂಗಳಕ್ಕೆ. ನನ್ನ ಮನದ ಪ್ರೀತಿ ಯ ಇಬ್ಬನಿಯಲ್ಲಿ

ತೋಯ್ದ,ಹಾಗೆಯೇ ಪ್ರೇಮದ ಬೆಚ್ಚಗಿನ ಮುಂಜಾವಿನ ಕಾವನ್ನು ಹೊಂದಿದ ಪತ್ರವಿದು, ಇದಕ್ಕೆ ನಿನ್ನ ಉತ್ತರವನ್ನು ನನ್ನ ಮನೆಯಂಗಳದಲ್ಲಿ ಮೂಡುವ ನಿನ್ನ ಹೆಜ್ಜೆಯ

ಗುರುತುಗಳಲ್ಲಿ ಹುಡುಕುತ್ತೇನೆ.ಬಾ ಗೆಳತಿ ಜೊತೆಯಾಗಿ ಈ ಪ್ರಕೃತಿಯೂ ಹೊಟ್ಟೆ ಕಿಚ್ಚು ಪಡುವಂತೆ ಬಾಳೋಣ. ನಿನ್ನ ನಿರೀಕ್ಷೆಯಲ್ಲಿ ನಾಳೆ ಮುಂಜಾವಿನವರೆಗೆ--

Narasimharaju ೦೬:೧೬, ೨೪ February ೨೦೦೭ (UTC)