ಸದಸ್ಯ:Nanditha rajesh
ಪರಿಚಯ
ಬದಲಾಯಿಸಿ"ಮಾತ್ರು ದೇವೋ ಭವ: ಪಿತ್ರು ದೇವೋ ಭವ: ಅತಿಥಿ ದೇವೋ ಭವ: ಆಚಾರ್ಯ ದೇವೋ ಭವ:""ತಾಯಿಯೇ" ಮೊದಲ ಗುರು ಎಂಬ ವಾಕ್ಯ ನಮ್ಮೆಲ್ಲರಿಗು ಅನ್ವಯಿಸುತ್ತದೆ, ಆದರೆ ನನ್ನ ಜೀವನದಲ್ಲಿ ನನ್ನ "ತಾಯಿ" ಎನ್ನುವುದಕ್ಕಿಂತ ನನ್ನ "ಅಜ್ಜಿಯೇ" ಮೊದಲ ಗುರುವಾಗಿದ್ದಳು. ಹುಟ್ಟಿದ ಕ್ಷಣ ಮಾತ್ರದಿಂದ, ಹದಿನೆಂಟು ವರುಷ ತುಂಬುವವರಿಗೂ ಅಜ್ಜಿ ತಾತರ ಸಂಪೂರ್ಣ ಆಶ್ರಯದಲ್ಲಿಯೇ ಬೆಳೆದೆ. ಇದಕ್ಕೆ ಕಾರಣವೆಂದರೆ ನನ್ನ ತಂದೆ ತಾಯಿ ಇಬ್ಬರೂ ಕೆಲಸದಲ್ಲಿ ತೊಡಗಿಸಿಕೊಂಡಿದ್ದರಿಂದ ನಾನು ನನ್ನ ಅಜ್ಜಿ ತಾತರ ಪ್ರೀತಿಯ ಅರಮನೆಯಲ್ಲಿಯೇ ಬೆಳೆದೆ.ನನ್ನ ಹೆಸರು ನಂದಿತ ಆರ್. ನನ್ನ ಬಾಲ್ಯವನ್ನು ಅಂದರೆ ಹತ್ತನೇ ತರಗತಿಯವರೆಗು ಜೈನ್ ವಿಶ್ವವಿದ್ಯಾಲಯದಲ್ಲಿ ಮುಗಿಸಿಕೊಂಡೆ. ಆ ದಿನಗಳು ಮಾತ್ರ ಮರೆಯಲಾಗದಂತದ್ದು. ಏಕೆಂದರೆ ಬಾಲ್ಯ ಎಂಬುದು ಎಲ್ಲರಿಗೂ ಸಿಹಿ ನೆನಪಾಗಿ ಉಳಿಯುತ್ತದೆ. ಇನ್ನು ನನ್ನ ಮುದ್ದಿನ ಅಜ್ಜಿ ತಾತರ ವಿಷಯಕ್ಕೆ ಬಂದರೆ ಅವರ ಒಂದು ಪ್ರೀತಿ ಅಪಾರವಾದದ್ದು. ಅವರ ಕಾಳಜಿ, ಮುದ್ದು ಯಾವುದಕ್ಕೂ ಸರಿಸಾಟಿ ಇಲ್ಲ. ಕಣ್ಣಿಗೆ ಕಾಣಿಸುತ್ತಿದ್ದ ಬಣ್ಣ ಬಣ್ಣ ವಸ್ತುಗಳೆಲ್ಲವು ಬೇಕು ಎಂದಿದಾಕ್ಷಣ ತಂದು ಕೊಡುತ್ತಿದ್ದ ತಾತ, ಬಿಸಿ ಬಿಸಿಯಾಗಿ ಮೊಮ್ಮಗಳಿಗಾಗಿಯೇ ಪ್ರೀತಿ ಬೆರಸಿ ತಿಂಡಿ ತಿನಿಸುಗಳನ್ನು ಮಾಡಿಕೊಡುತ್ತಿದ್ದ ಅಜ್ಜಿ, ಅಷ್ಟೇ ಅಲ್ಲದೇ ನನ್ನ ಎಲ್ಲಾ ಸೋಲು, ಗೆಲವು, ನೋವು, ನಲಿವುಗಳಲ್ಲಿ ನನ್ನೊಡನೆ ನಿಂತು ಸಾತು ಕೊಟ್ಟು ಬೆನ್ನೆಲುಬಾಗಿ ನಿಂತವರು ನನ್ನ ಹೆಮ್ಮೆಯ ಅಜ್ಜಿ ತಾತ.ಅಜ್ಜಿ ಕಸ್ತೂರಿ ಬಾಯಿ, ತಾತ ಯಶ್ವಂತ್ ರಾವ್.
ಬಾಲ್ಯ
ಬದಲಾಯಿಸಿಬಾಲ್ಯದ ಒಂದು ಮರೆಯಲಾಗದ ಸಂಗತಿ ಎಂದರೆ...ನಾನು ನನ್ನ ಎಂಟನೇ ತರಗತಿಯಲ್ಲಿದ್ದಾಗ ನನಗೆ ಬೆಸ್ಟ್ ಸ್ಟೂಡೆಂಟ್ ಅವಾರ್ಡ್ ದೊರಕಿದ್ದು. ಹೀಗೆ ಹಲವಾರು ಸಂಗತಿಗಳು ನೆನಪಿಗೆ ಬರುತ್ತದೆ. ಮುಖ್ಯವಾಗಿ ನನ್ನ ಅಜ್ಜಿ ತಾತ ನನ್ಗೆ ಜೀವನದ ಅನೇಕ ಪಾಠಗಳನ್ನು ಕೂಡ ಹೇಳಿಕೊಟ್ಟಿರುತ್ತಾರೆ. ನನ್ನ ಪಿ.ಯು ಓದನ್ನು ನನ್ನ ಊರಲ್ಲೆ ಮುಗಿಸಿಕೊಂಡೆನು. ಅದರಲ್ಲಿ ಡಿಸ್ಟಿಂಕ್ಶನ್ ಪದವಿಯಲ್ಲಿ ಮುಂದು ಬಂದೆನು.ಇವತ್ತು ನಾನು ಏನಾಗಿ ನಿಂತಿದ್ದಿನೋ, ಆದಕ್ಕೆ ಕಾರಣವೇ ನನ್ನ ಅಜ್ಜಿ ತಾತ. ಇದಕ್ಕೆ ನಾನು ಯಾವಾಗಲು ಚಿರ ಋಣಿ. ಇನ್ನು ನಾನು ನನ್ನ ತಂದೆ ತಾಯಿಯರ ಜೊತೆ ಬೆರೆಯಿತ್ತಿದ್ದುದು ರಜ ದಿನಗಳಲ್ಲಿ ಮಾತ್ರ. ವರುಷಕ್ಕೆ ಸುಮಾರು ಮೂರು ಬಾರಿ, ಅಂದರೆ ದಸರಾ, ಕ್ರಿಸ್ಮ್ ಸ್ ಹಾಗು ಬೇಸಿಗೆ ದಿನಗಳ ರಜೆಗಳಲ್ಲಿ ಮಾತ್ರ ಅವರ ಜೊತೆ ವಾಸಿಸುತ್ತಿದ್ದೆ. ಅಲ್ಲಿಂದ ನನ್ನ ಪಯಣ...ಕ್ರ್ಯೈಸ್ಟ್ ಯುನಿವೆರ್ಸಿಟಿ...ಯ ಕಡೆಗೆ, ಕಾರಣ ನನ್ನ ಮುಂದಿನ ಓದಿಗೆ. ಈ ಕ್ಷಣದಲ್ಲಿ ನನಗೆ ಆಗಿದ್ದ ನೋವು..ತುಂಬಾ ಅಪಾರವಾದದ್ದು. ಅವರನ್ನು ಬಿಟ್ಟು ಬರುವುದೆಂದರೆ ಕರುಳು ಕಿತ್ತುಬರುವುದಂತ್ತಿತ್ತು. ಈಗ ಮತ್ತು ಇನ್ನು ಮುಂದೆ ನಾನು,ನನ್ನ ತಂದೆ ತಾಯಿಯ ಜೊತೆ ಜೀವನವನ್ನು ನಡೆಸುತ್ತಿದ್ದೇನೆ.
ಗುರಿ
ಬದಲಾಯಿಸಿನನ್ನ ಮುಂದಿನ ಗುರಿ....ಬಂದು ಒಳ್ಳೆಯ ಅಧ್ಯಾಪಕಿಯಾಗಬೇಕೆಂದು ಬಯಸುತ್ತೇನೆ.ಅಷ್ಟೇ ಅಲ್ಲದೆ ನನಗೆ ಒಳ್ಳೆಯ ಕಂಠವಿರುವುದರಿಂದ ನನ್ನ ಸಂಗೀತ ಅಭ್ಯಾಸವನ್ನು ಮಾಡಬೇಕೆಂದು ಅಂದುಕೊಂಡಿದ್ದೇನೆ. ನನ್ನ ಜೀವನದಲ್ಲಿ ಆದರ್ಶ ವ್ಯಕ್ತಿಯಾಗಿ ನಿಂತವರು ಸ್ವಾಮಿ ವಿವೇಕಾನಂದರವರು ಮತ್ತು ಕಲಾಮ್ ರವರು. ಇವರಿಬ್ಬರು ನನ್ನ ಜೀವನದ ಗುರಿಯ ಮೇಲೆ ಅಪಾರವಾದ ಪರಿಣಾಮವನ್ನು ಬೀರಿದ್ದಾರೆ. ಅವರ ಒಂದು ಗೆಲುವಿನ ದಾರಿಯನ್ನು ನಾನು ಕೂಡ ಪಾಲನೆ ಮಾಡಲು ಯತ್ನಿಸುತ್ತಿದ್ದೇನೆ.... ನಾನು ನಂಬಿರುವ ಪ್ರಕಾರ ಸತತವಾದ ಪ್ರಯತ್ನ, ನಮ್ಮ ಮೇಲೆ ನಂಬಿಕೆ, ಹಾಗು ಧೈರ್ಯದಿಂದ ಮುನ್ನುಗ್ಗುವ ಛಲ ಈ ಮೂರು ನಮ್ಮನ್ನು ಎತ್ತರಕ್ಕೆ ಕರೆದೊಯ್ಯುತ್ತದೆ. ಇದೇ ಜೀವನದ ಗುರಿ......
This user is a member of WikiProject Education in India |
ಉಪಪುಟಗಳು
ಬದಲಾಯಿಸಿIn this ಸದಸ್ಯspace:
Nanditha rajesh |