ಸದಸ್ಯ:Nagarajbaliger/ನನ್ನ ಪ್ರಯೋಗಪುಟ

ಕೌಜಗೇರಿಯ ಚಾರೀತ್ರಿಕ ಪುರಾವೆಗಳು

ಇಂದು ಗದಗ್ ಜಿಲ್ಲೆಯ ರೋಣ ತಾಲೂಕಿನಲ್ಲಿರುವ ಇದೊಂದು ಪುಟ್ಟ ಗ್ರಾಮ. ಸಾಂಸ್ಕೃತಿಕವಾಗಿ ನೂತನಶಿಲಾಯುಗದ ಸಂಸ್ಕೃತಿಯಷ್ಟು ಪ್ರಾಚೀನವಾದ ಸ್ಥಳ. ಆದರೆ  ರಾಷ್ಟ್ರಕೂಟರ ಆಳ್ವಿಕೆಯ ಉತ್ತರಾರ್ಧ ಭಾಗಕ್ಕಾಗಲೇ, ಇದು ಮಹತ್ವ ಪಡೆದಿದ್ದ  ಅಂಶ  ಅಲ್ಲಿರುವ ಸುಮಾರು ಕ್ರಿ.ಶ. 934 ರ ಶಿಲಾಶಾಸನದಿಂದ  ವೇದ್ಯವಾಗುತ್ತದೆ.ಈ ಶಾಸನದಲ್ಲಿ ಊರಿನ ಹೆಸರು ಕೊವುಜಗೆರೆ ಎಂದು ದಾಖಲಾಗಿದ್ದು, ಇದೇ ಮುಂದೆ ‘ಕೌಜಗೇರಿ’ ಎಂದಾಗಿದೆ. ಇಲ್ಲಿಯ ಇನ್ನೊಂದು ಶಾಸನ ಬೇಳವಣಿಕೆ-12 ಎಂಬ ಆಡಳಿತ ಘಟಕದ ಬಗ್ಗೆ ಉಲ್ಲೇಖಿಸುತ್ತದೆ. ಇದರಿಂದ ನೆರೆಯ ಬೆಳವಣಿಕೆ ಗ್ರಾಮವು ಹಿಂದೆ 12 ಹಳ್ಳಿಗಳ ಆಡಳಿತ ಕೇಂದ್ರವಾಗಿದ್ದ ಅಂಶ ಸ್ಪಷ್ಟವಾಗುತ್ತದೆ.

ಕೌಜಗೇರಿಯ ಬಳ್ಳಜ್ಜಗೌಡನು ತನ್ನ ಊರಲ್ಲಿ ಕೇಶವ-ಆದಿತ್ಯ-ವಿನಕ-ಬಟರಿ ಹಾಗೂ ಮಟವಮ್ಮ ಗುಡಿಗಳನ್ನು ಮಾಡಿಸಿ ತನ್ನ ಇಬ್ಬರು ಮಕ್ಕಳು ಹಾಗೂ ದಂಡನಾಯಕನಿಗಾಗಿ ವೀರಗಲ್ಲನ್ನೂ ನಿಲ್ಲಿಸಿದ್ದು, ಅವುಗಳಲ್ಲಿ ಎರಡು ಎಡಗೈ ಯೋಧರದಾಗಿರುವುದು ಗಮನಾರ್ಹ. ಮಿಗಿಲಾಗಿ ತನಗಾಗಿ ಗವಿಕಲ್ಲನ್ನು ಮಾಡಿಸುವುದರ ಜೊತೆಗೆ ನೆರೆಯ ಬೆಳವಣಿಕೆ, ಕರಮಡಿ, ಯಾವಗಲ್, ಹಡಗಲಿ, ಅಸೂಟಿ, ಗ್ರಾಮಗಳಲ್ಲೂ ಧರ್ಮಕಾರ್ಯ ಕೈಗೊಂಡ ಅಂಶವನ್ನು ಊರ ಕೆರೆಯ ದಂಡೆಯ ಬಳಿ ಇರುವ ಸದರಿ ಶಾಸನ ದಾಖಲಿಸಿದೆ. ಈ ಶಾಸನದ ಶಿರೋಪಟ್ಟಿಕೆಯಲ್ಲಿ ಶಾಸನೋಕ್ತ ದೇವತೆಗಳ ಕಿರು ಕೆತ್ತನೆ ಇರುವುದು ಉಲ್ಲೇಖಾರ್ಹ. ಆದರಿಂದು, ಈ ಊರಲ್ಲಿ ಪ್ರಾಚೀನ ದೇವಾಲಯಗಳಾವುದೂ ಉಳಿದು ಬಂದಿರದೇ, ಆ ಕಾಲದ ಕೇಶವ, ಆದಿತ್ಯ, ಬಟರಿ, ವಿನಕ , ಶಿವಲಿಂಗ-ನಂದಿ, ಹಾಗೂ ವೀರಗಲ್ಲುಗಳಷ್ಟೇ ಕಾಣಸಿಗುತ್ತವೆ. ಅಲ್ಲದೇ ಉಡಚಾದೇವಿಯ ಶಿಲ್ಪವೂ ಇದೆ. ಮಿಗಿಲಾಗಿ ಸುಮಾರು 12ನೆಯ ಶತಮಾನಕ್ಕೆ ಸೇರಿದ, ಸೂರ್ಯಗ್ರಹಣದಂದು ಉರಿ-ಉಯ್ಯಾಲೆಯ ಮೂಲಕ ಆತ್ಮಾಹುತಿ ಮಾಡಿಕೊಂಡ ವ್ಯಕ್ತಿಯ ಸ್ಮಾರಕ ಶಿಲ್ಪ ಕೂಡ ಇದೆ. ಅದರಲ್ಲೂ, ಇಲ್ಲಿಯ ಭಟರಿ, ಉಡಚವ್ವ ಹಾಗೂ ಆತ್ಮಾಹುತಿ ಶಿಲ್ಪಗಳೂ ಅಪೂರ್ವ ನಿದರ್ಶನಗಳಾಗಿವೆ.ಮಾಹಿತಿ ನೆಚ್ಚಿನ ಗುರುಗಳಾದ ಮೈಸೂರ ಸರ್....https://kn.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:WhatsApp_Image_2021-05-22_at_7.48.10_PM.jpeg#/media/ಚಿತ್ರ:WhatsApp_Image_2021-05-22_at_7.48.10_PM.jpeg