ಸದಸ್ಯ:NEOL D'SOUZA/ನನ್ನ ಪ್ರಯೋಗಪುಟ/ducati
- ಮಾದರಿ : ಖಾಸಗಿ ಸಂಸ್ಥೆ
- ಉದ್ಯಮ : ಮೋಟಾರ್ಸೈಕಲ್ ತಯಾರಕರು
- ಸ್ಥಾಪನೆ : ೧೯೨೬
- ಪ್ರಧಾನ ಕಚೇರಿ : ಬೊಲೊಗ್ನಾ,ಇಟಲಿ
'ಡುಕಾಟಿ ಮೋಟಾರ್ ಹೋಲ್ಡಿಂಂಗ್ ಎಸ್.ಪಿ.ಡಿ' ಇದು ಒಂದು ಇಟಾಲಿಯನ್ ಕಂಪನಿಯಾಗಿದೆ,ಈ ಕಂಪನಿ ಮೋಟಾರ್ಸೈಕಲ್ಗಳನ್ನು ವಿನ್ಯಾಸಗೊಳಿಸುತ್ತದೆ ಮತ್ತು ತಯಾರಿಸುತ್ತದೆ.ಡುಕಾಟಿಯ ಮಾಲಿಕತ್ವವನ್ನು ಜರ್ಮನ್ ಆಟೋಮೋಟಿವ್ ತಯಾರಕರಾದ ಆಡಿ ಕಂಪನಿ ಹೊಂದಿದೆ ಮತ್ತು ಸಹ ಮಾಲಿಕತ್ವವನ್ನು ಲ್ಯಾಂಬೋಗಿನಿ ಸಂಸ್ಥೆ ಹೊಂದಿದೆ. ೧೯೨೬ರಲ್ಲಿ ಆಂಟೋನಿಯೋ ಕವಾಲಿಯೇರಿ ಡುಕಾಟಿ ಹಾಗು ಅವರ ಮೂರು ಮಕ್ಕಳಾದ ಆಡ್ರಿಯಾನ,ಮಾರ್ಸೆಲ್ಲೊ,ಬ್ರೂನೊ ಈ ಸಂಸ್ಥೆಯನ್ನು ಸ್ಥಾಪಿಸಿದರು.೧೯೩೫ರಲ್ಲಿ ಬೊರ್ಗೊ ಪ್ಯಾನಿಗೇಲ್ ಎಂಬ ನಗರದಲ್ಲಿ ತಮ್ಮ ಕಾರ್ಖಾನೆಯನ್ನು ಯಶಸ್ವಿಯಾಗಿ ನಿರ್ಮಾಣ ಮಾಡಿದರು.ಇವರ ಮೊದಲು ತಯಾರಿಸಿದ ಯಾಂತ್ರಿಕ ಬೈಸಿಕಲ್ 'ಕುಕ್ಸಿಯೋಲೊ'.ಡುಕಾಟಿ ಅವರ ಮೊದಲ ಬೈಸಿಕಲ್ ೪೮ ಸಿಸಿಯದಾಗಿತ್ತು ಮತ್ತು ಅದರ ತೂಕ ೪೪ ಕೆಜಿ ಯಾಗಿತ್ತು ಮತ್ತಿ ಅದರ ವೇಗ ಸರಿಸುಮಾರು ೬೪ ಕೆಮ್/ಹ್. ೧೯೬೦ರಲ್ಲಿ ಡುಕಾಟಿಯು ೨೫೦ ಸಿಸಿಯ ವೇಗವಾದ ಬೈಕುಗಳನ್ನು ತಯಾರಿಸಿ ರಸ್ತೆಗಿಳಿಸುವುದರ ಮೂಲಕ ಮೋಟಾರ್ಸೈಕಲ್ ಕ್ಷೇತ್ರದಲ್ಲಿ ಹಾಗು ಇತಿಹಾಸದಲ್ಲಿ ತನ್ನ ಹೆಸರನ್ನು ಗುರುತಿಸಿಕೊಂಡಿತು.ಈ ವೇಗವಾದ ಬೈಕಿನ ಹೆಸರು 'ಮ್ಯಾಕ್ ೧'.ಡುಕಾಟಿಯು ಉನ್ನತ ಸಾಮರ್ಥ್ಯದ ನಾಲ್ಕು-ಸ್ಟ್ರೋಕ್ಗಳುಳ್ಳ ಗುಣಲಕ್ಷಣಗಳನ್ನು ಹೊಂದಿರುವ ಉನ್ನತ-ಕಾರ್ಯಕ್ಷಮತೆಯ ಮೋಟರ್ಸೈಕಲ್ಗಳಿಗೆ ಹೆಸರುವಾಸಿಯಾಗಿದೆ ಉದಾ: '೯೦ ° ವಿ-ಅವಳಿ ಎಂಜಿನ್ಗಳು'.
ಪ್ರಸ್ತುತ ಇಂಜಿನ್ಗಳು:
- ಡೆಸ್ಮೋಡೂ
- ಟೆಸ್ಟ್ಸ್ಟ್ರೆಟ್ಟಾ ೧೧ °
- ಟೆಸ್ಟ್ಸ್ಟ್ರೆಟ್ಟಾ ೧೧ ° ಡಿಎಸ್ಟೆ
- ಸ್ಟ್ಸ್ಟ್ರೆಟ್ಟಾ ೧೧ ° ಡಿವಿಟಿ
- ಸೂಪರ್ಕ್ವಾಡ್ರೊ.
ಹಿಂದಿನ ಇಂಜಿನ್ಗಳು:
- ಡೆಸ್ಮೋಡೆವ್ ಇವೊಲುಜಿಯೋಯಿನ್ಡೆ
- ಸ್ಮೋಡೆವ್ ಇವೊಲುಜಿಯೋಯಿನ್
- ಡೆಸ್ಮೋಡೆ ಎಲ್ಸಿ
- ಡೆಸ್ಮೊಟ್ರೆ ಡಿಎಸ್
- ಡೆಸ್ಮೊಕ್ಯಾಟ್ರೋ
- ಟೆಸ್ಟ್ಸ್ಟ್ರೆಟ್ಟಾ
- ಟೆಸ್ಟಾಸ್ಟ್ರೆಟ್ಟಾ ಇವೊಲುಜಿಯೋಯಿನ್.
ಡುಕಾಟಿ ಅನೇಕ ರೀತಿಯ ಮೋಟಾರು ಸೈಕಲ್ ಎಂಜಿನ್ಗಳನ್ನು ತಯಾರಿಸುತ್ತಿದೆ, ಇದರಜೊತೆ ವಿವಿದರೀತಿಯ ಸಿಲಿಂಡರ್ಗಳನ್ನು ಹಾಗು ಕವಾಟ ಪ್ರಚೋದನೆ ಮತ್ತು ಇಂಧನ ವಿತರಣೆ ಮಾದರಿಗಳನ್ನು ಕೂಡ ತಯಾರಿಸುತ್ತದೆ.
ಡುಕಾಟಿ ಇತರೆ ವಿಭಾಗಗಳು.
- ಡುಕಾಟಿ ಮೋಟಾರ್
- ಡುಕಾಟಿ ಕೋರ್ಸ್ (ಇದು ಡುಕಾಟಿ ರೇಸಿಂಗ್ ಕಾರ್ಯಕ್ರಮವನ್ನು ನಡೆಸುತ್ತದೆ)
- ಡುಕಾಟಿ ಎನರ್ಜಿಯ(ವಿದ್ಯುತ್ ಹಾಗು ಎಲೆಕ್ಟ್ರಾನಿಕ್ ಘಟಕಗಳು, ಮತ್ತು ವ್ಯವಸ್ಥೆಗಳ ವಿನ್ಯಾಸಕ ಮತ್ತು ತಯಾರಕ)
- ಡುಕಾಟಿ ಸಿಸ್ಟೆಮಿ(ಡುಕಾಟಿ ಎನರ್ಜಿಯದ ಉಪಸಂಸ್ಥೆ)
ಮರ್ಚಂಡೈಸಿಂಗ್: ಡುಕಾಟಿಯು ವಿಶಾಲವಾದ ಪರಿಕರಗಳನ್ನು,ಜೀವನಶೈಲಿ ಉತ್ಪನ್ನಗಳು,ತಮ್ಮ ಲೋಗೋಗಳನ್ನು ಹೊಂದಿರುವ ಸಹ-ಬ್ರಾಂಡ್ ಉತ್ಪನ್ನಗಳನ್ನು ಹಾಗು ವಿನ್ಯಾಸಗಳು ಹೊಂದಿದೆ. <ref>https://www.ducati.com/in/en/home<ref> <ref>http://www.india.ducati.com/history/editorials/history_of_the_ducati_factory/index.do<ref>