Padavu Kakkebettu  ಪದವು ಗುರಿಕಾರ ಮನೆ

ಮಂಗಳೂರು ತಾಲೂಕಿನ ಕುಲಶೇಖರ ಕಕ್ಕೆಬೆಟ್ಟು ವಿನಲ್ಲಿ ಇರುವ ಗುರಿಕಾರ ಮನೆಯು ಸುಮಾರು 400 ವರ್ಷಗಳ ಹಿಂದೆ ಬಹಳ ಪ್ರಸಿದ್ಧವಾದ ಬಿಲ್ಲವರ ಕುಟುಂಬವಾಗಿದೆ. ಹಿಂದೆ ಇದ್ದ ಮನೆಯ ಮೂಲ ಮನೆಯ ಸ್ವರೂಪ ವನ್ನು 50 ವರ್ಷಗಳ ಹಿಂದೆ ಅದೇ ಕುಟುಂಬದ ರಾಮಚಂದ್ರ ಕಕ್ಕೆಬೆಟ್ಟು ರವರು ನವಿಕರಿಸಿ ಮನೆಗೆ ಹೆಂಚನ್ನು ಹಾಕಿಸಿರುತ್ತಾರೆ ದೊಡ್ಡದಾದ ಹಿರಿಯ ಮನೆಯ ಶೈಲಿಯಂತೆ ಹೊಸ ಮನೆಯನ್ನು ನಿರ್ಮಿಸಿದ್ದಾರೆ. ಮನೆಯ ಪ್ರವೇಶ ಒಳಗೆ ಸಾಧಾರಣ ಗಾತ್ರದ ಎರಡು ಕಂಬಗಳಿದ್ದು. ಮನೆ ಯ ಒಳ ಚಾವಡಿಯಲ್ಲಿ ಮನೆ ಬಾಗಿಲು ಹಾಗೂ ದಾರಂದಗಳು ಸುಂದರ ಕೆತ್ತನೆಗಳಿದ್ದು ಇದು ಚಾವಡಿಗೆ ರಾಜ ಗಾಂಭೀರ್ಯವನ್ನು ತಂದು ಕೊಟ್ಟಿದೆ.ಕೋಟ್ಯಾನ್ ಬಳಿಯವರ ಮೂಲಸ್ಥಾನವಾಗಿದ್ದು ಈ ಮನೆತನದವರು ಬಹಳ ವರ್ಷಗಳ ಹಿಂದೆಯೇ ವರ್ಗ ಜಮೀನ್ದಾರರಾಗಿದ್ದರು. ಇವರು ಕೃಷಿಕರು, ದೈವ ಭಕ್ತರೂ ಆಗಿದ್ದರು. ಹಿಂದೆ ಈ ಕುಟುಂಬದ ಮುಂಡ ಮತ್ತು ಮಡಿವಾಳ ಕುಟುಂಬದ ಐತು ಎಂಬವರುಗಳು ಕದ್ರಿ ಪರಿಸರದಲ್ಲಿ ಜುಮಾದಿ ಬಂಟ ನೇಮ ನೋಡಿ ಗಂಧ ಪ್ರಸಾಧವನ್ನು ಹಿಡಿದುಕೊಂಡು ಮನೆಗೆ ಹಿಂದುರುಗಿದಾಗ ಜುಮಾದಿ ಬಂಟದೈವಗಳು ಇವರ ಹಿಂದೆ ಬಂದರೆಂದು ಹೆಳಾಲಾಗಿದ್ದು. ಕಾಲಾಂತರದಲ್ಲಿ ಊರಿನಲ್ಲಿ ಹಲವು ವಿಪ್ಲವಗಳು ತೋರಿ ಬಂದಾಗ ಪುರೋಹಿತದಲ್ಲಿ ಕೇಳಾಲಾಗಿ ಜುಮಾದಿ ಬಂಟದೈವಗಳು ಗಂಧ ಪ್ರಸಾದ ರೂಪದಲ್ಲಿ ಗ್ರಾಮ ಪ್ರವೇಸಿದ್ದು. ಕಾಗೆಯ ರೂಪದಲ್ಲಿ ಕರೆಯುತ್ತಿದ್ದು. ಅಲ್ಲಿ ದೈವಗಳನ್ನು ಪ್ರತಿಷ್ಟಪಿಸಿ ಅರಾಧಿಸಿಕೊಂಡು ಬರಬೇಕೆಂದು ದೈವದ ಅಪ್ಪಣೆಯಾಯಿತ್ತು. ಆ ಕಾರಣದಿಂದ ಈ ಪರಿಸರಕ್ಕೆ ಕಕ್ಕೆಬೆಟ್ಟು ಎಂದು ಕರೆಯಲ್ಪಟ್ಟಿತ್ತು , ತದಃ ನಂತರದಲ್ಲಿ ಗುರಿಕಾರ ಮನೆ ಹಿರಿಯರು ಹಾಗೂ ಮಡಿವಾಳ ಮನೆ ಹಿರಿಯರು ಹಾಗೂ ಭಟ್ರ ಮನೆ ಹಿರಿಯರು ಮೇಗಿನ ಮನೆ ಹಿರಿಯರು ಹಾಗೂ ನಾಯ್ಗರ ಮನೆತನದವರು ಸೇರಿಕೊಂಡು ಊರ ಗ್ರಾಮಸ್ಥರನ್ನು ಸೇರಿಸಿಕೊಂಡು ನೇಮ ನಿಯಮಾವಳಿಗಳನ್ನು ನಡೆಸಿಕೊಂಡು ಬರುತ್ತಿದ್ದರು. ಈ ಮನೆಯು ಪದವು ಗ್ರಾಮದ ಬಿಲ್ಲವರ ಜಾತಿಯಲ್ಲಿ ಎರಡನೆ ಗುರಿಕಾರ ಮನೆಯಾಗಿದೆ. ಗ್ರಾಮದ ಶುಭ ಕಾರ್ಯಕ್ರಮಗಳಿಗೆ ಇಲ್ಲಿ ವಿಶೇಷ ಹೇಳಿಕೆ ಇದೆ. ಮನೆಯ ಚಾವಡಿಯಲ್ಲಿ ಜುಮಾದಿ ಬಂಟ ದೈವಗಳ ಹಾಗೂ ಅಣ್ಣಪ್ಪ ಪಂಜುರ್ಲಿ ಮೊಗ ಮೂರ್ತಿ ಇದೆ.ಹಾಗೂ ಮನೆ ಹೊರಗೆ ಬಲ ಭಾಗದಲ್ಲಿ ಕಲ್ಲುರ್ಟಿ ಪಂಜುರ್ಲಿ ಹಾಗೂ ಮಂತ್ರ ದೇವತೆ ಗುಡಿಗಳಿದ್ದು ಮನೆ ಎದುರುಭಾಗ ದಲ್ಲಿ ನಾಗ ಬನ ನಾಗ ಸನಿಧ್ಯಾವಿದೆ ಮತ್ತು ಹೊರಗಡೆ ರಾವು- ಗುಳಿಗ, ಜಾಗೆದ ಗುಳಿಗ ಎಂಬ ದೈವಗಳಿವೆ. ಪದವು ಗ್ರಾಮದ ಶಕ್ತಿನಗರ ವೈದ್ಯನಾಥ ದೈವಸ್ಥಾನ ಹಾಗೂ ಕೊಡಂಗೆಮುರ ಜೋಕುಲ್ ಸಾನ ದಲ್ಲಿ ಈ ಮನೆತನಕ್ಕೆ ಗೌರವದ ಕರೆ ಇದ್ದು ದೈವವು ಈ ಮನೆತನದವರನ್ನು ಮುಂಡ ಸಂಸಾರವೆಂದು ಕರೆಯುತ್ತದೆ. ಕಕ್ಕೆಬೆಟ್ಟು ದೈವಸ್ಥಾನದಲ್ಲಿ ಬಂಟ ದೈವಕ್ಕೆ ಪಾತ್ರಿಯಾಗಿ (ಗಡಿ ಪತ್ತಿನಾರ್/ ಗುರಿಕಾರರು) ಇದೆ ಕುಟುಂಬದವರು ನಡೆಸಿಕೊಂಡುಬರುತ್ತಿದ್ದರು , ಈ ಕುಟುಂಬದವರಿಗೆ ಜುಮಾದಿ ಬಂಟ ದೈವಗಳ ನೇಮದಂದು ದೈವದ ಒಲಸರಿಗೆ ದರಿ ಹಾಕುವ ಗೌರವವಿದೆ ಹಾಗು ದೈವದ ಒಂದು ದಿನದ ನೇಮಕ್ಕೆ ಈ ಮನೆತನದಿಂದ ತೆಂಗಿನ ತಿರಿ ಕೊಡುವ ಸಂಪ್ರದಾಯ ಹಿಂದಿನಿಂದಲೂ ಬಂದುದಾಗಿದೆ. ಹಿಂದೆ ಸಾಕಷ್ಟು ವರ್ಗ ಭೂಮಿಯ ಮಾಲಕರಾಗಿದ್ದ ಈ ಕುಟುಂಬದವರು ಕಾಲಂತರದಲ್ಲಿ ಹೆಚ್ಚಿನ ಭೂಮಿಯನ್ನು ನಾನ ಕಾರಣಗಳಿಂದ ಕಳಕೊಂಡರೆಂದು ಹೇಳಲಾಗಿದ್ದು. ಅದರಲ್ಲಿ ಶಕ್ತಿನಗರಕ್ಕೆ ತಾಗಿಕೊಂಡಿರುವ ಬಸವನಗುಡಿ ಎಂಬ 11 ಎಕ್ರೆ ವರ್ಗ ಜಾಗವು ಕುಟುಂಬದ ವಂಶಸ್ಥರಾದ ಕೊತ ಹೆಂಗ್ಸು ಕಾಲದಲ್ಲಿ ದೈವಗಳಿಗೆ ಧರ್ಮನೇಮ ನೀಡಿ ಉಂಟಾದ ಸಾಲವನ್ನು ತಿರಿಸಲಾಗದೆ.ಆ ಜಾಗವನ್ನು ಬಸ್ತಿ ಮನೆತನದವರಿಗೆ ಮಾರಾಟ ಮಾಡಿರುತ್ತಾರೆ.