ಅಂಕಲಗಿ
ಬದಲಾಯಿಸಿ
     ದಕ್ಷಿಣ ಭಾರತದ ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ದೇಸಾಯಿ, ದೇಶಪಾಂಡೆ ಮನೆತನದವರು  ಆಳಿದ ಊರು ಅಂಕಲಗಿ.ಇದು ೬೪ ಚಿಕ್ಕ-ಪುಟ್ಟ ಹಳ್ಳಿಗಳಿಂದ ಕೂಡಿದ ಒಂದು ಬೃಹತ್ ಗ್ರಾಮ ಎಂದರೆ ತಪ್ಪಾಗಲಾರದು. ಈ ಎಲ್ಲ ಹಳ್ಳಿಗಳ ಬೇಡಿಕೆಗಳನ್ನು  ಈ ಗ್ರಾಮ ಪೂರೈಸುತ್ತ ಬಂದಿದೆ. ಇದರ ಸುತ್ತಮುತ್ತಲಿನ ಪ್ರದೇಶವು " ಕುಂದರನಾಡು" ಎಂದು ಪ್ರಸಿದ್ಧಿ ಪಡೆದಿದೆ. ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರನ್ನು ಪಡೆದ ಹೆಮ್ಮೆಯ ನಾಡು. ಶ್ರೀ ಅಡವಿ ಸಿದ್ಧೇಶ್ವರ ಮಠ ಇಡೀ ಬೆಳಗಾವಿ ಜಿಲ್ಲೆಯಲ್ಲಿಯೇ ಸುಪ್ರಸಿದ್ಧ ಹಾಗೂ ಪವಿತ್ರ ಸ್ಥಳವನ್ನು ಹೊಂದಿದೆ.  ವಿವಿಧ ಜಾತಿ, ಮತ , ಧರ್ಮದ ಜನರಿಂದ ಕೂಡಿದ ಈ ಊರು ಶಾಂತಿ ಮತ್ತು ಸ್ಘಹಾರ್ಧತೆಗೆ ಮಾದರಿ ತಾಣವಾಗಿದೆ. ಈ ರೀತಿಯ ಇತಿಹಾಸವುಳ್ಳ ಗ್ರಾಮದ ಬಗ್ಗೆ ವಿವರ್ ನೀಡಲು ಪ್ರಯತ್ನಿಸುತ್ತಿದ್ದೇವೆ.