ಕೆ. ಎಂ ಬೀನಮೋಲ್ ಎಂದೇ ಪ್ರಸಿದ್ಧರಾಗಿರುವ ಕಲಾಯತುಮಕುಜ್ಹಿ ಮತ್ವಿಸ್ ಬೀನಮೋಲ್ ಅವರು ೧೯೭೫, ಆಗಸ್ಟ್ ೧೫ ರಂದು ಜನ್ಮತಾಳಿದರು.ಇವರು ಕೇರಳ ರಾಜ್ಯದ,ಇಡುಕ್ಕಿ ಜಿಲ್ಲೆಯ, ಕೊಂಬಿದಿಂಜಲ್ ನಗರದಲ್ಲಿ ಬೆಳೆದವರು.ಬೆನಮೊಲ್ ತನ್ನ ಸಹೋದರ ಕೆ.ಎಂ.ಬಿನು ಅವರೊಂದಿಗೆ ಇತಿಹಾಸವನ್ನೆ ಸೃಷ್ಟಿಸಿದರು , ಅವರು ಪ್ರಮುಖ ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆದ್ದ ಮೊದಲ ಭಾರತೀಯ ಒಡಹುಟ್ಟಿದವರು. ಪುರುಷರ 800 ಮೀ ಓಟದಲ್ಲಿ ಬಿನು ಬೆಳ್ಳಿ ಪದಕವನ್ನು ಗೆದ್ದರು.ಇದು 2000 ರ ಬೇಸಿಗೆ ಒಲಂಪಿಕ್ಸ್ ಸಮಯದಲ್ಲಿ,ಬೀನಮೋಲ್ ಅವರು ಹೆಚ್ಚು ತಿಳಿದಿಲ್ಲವಾದ್ದರಿಂದ, ಪಿಟಿ ಉಷಾ ಮತ್ತು ಶೈನಿ ವಿಲ್ಸನ್ ರಿಂದ ಒಲಿಂಪಿಕ್ ಸೆಮಿ-ಫೈನಲ್ ತಲುಪಿದ ಮೂರನೇ ಮಹಿಳೆಯಾದ ಅವರು, 1984 ರ ಬೇಸಿಗೆಯ ಒಲಿಂಪಿಕ್ಸ್ನಲ್ಲಿ 400 ಮೀಟರ್ ಹರ್ಡಲ್ಸ್ ನಲ್ಲಿ ಇದೇ ರೀತಿಯ ಸಾಧನೆಗಳನ್ನು ಲಾಸ್ ಏಂಜಲೀಸ್ ನಲ್ಲಿ ಸಾಧಿಸಿದರು. ಬೀನಮೋಲ್ ಅವರು ಮಹಿಳಾ 800 ಮೀ ಮತ್ತು 4 × 400 ಮೀಟರ್ ಮಹಿಳೆಯರ ರಿಲೇಯಲ್ಲಿ ಚಿನ್ನದ ಪದಕ ಗೆದ್ದಳು,ಇದು 2002 ರಲ್ಲಿ ಏಷ್ಯನ್ ಕ್ರೀಡಾಕೂಟದಲ್ಲಿ ಬುಸಾನ್ನಲ್ಲಿ ನಡೆಯಿತು.ತನ್ನ ಅಥ್ಲೆಟಿಕ್ ವೃತ್ತಿಜೀವನದಲ್ಲಿ ಬೀನಮೋಲಿಗೆ ಆದರ್ಶಪ್ರಾಯ ಸಾಧನೆಗಾಗಿ 2000 ರಲ್ಲಿ ಅರ್ಜುನ ಪ್ರಶಸ್ತಿಯನ್ನು ನೀಡಲಾಯಿತು. 2002-2003ರಲ್ಲಿ ಅಂಜಲಿ ವೇದ್ ಪಾಠಕ್ ಭಾಗವತ್ ಜೊತೆಗೆ ಭಾರತದ ಅತ್ಯುನ್ನತ ಕ್ರೀಡಾ ಗೌರವವಾದ, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯ ಜಂಟಿ ವಿಜೇತರಾಗಿದ್ದಾರೆ. 2004 ರಲ್ಲಿ, ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು.ಬೀನಮೋಲ್ ರವರು ಡಾ.ವಿವೇಕ್ ಜಾರ್ಜೆ (ರೋಗಶಾಸ್ತ್ರಜ್ಞ)ರವರನ್ನು ಮದುವೆಯಾದರು ಮತ್ತು ಇಬ್ಬರು ಮಕ್ಕಳಿಗೆ ತಾಯಿಯಾದರು, ಅವರು ಅಶ್ವಿನ್ ಮತ್ತು ಹೆಯಿಲ್.2002 ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತರಾದ ಕೆ.ಎಂ.ಬೀನಮೊಲ್ ಅವರು 2000 ದಲ್ಲಿ ಒಲಂಪಿಕ್ ಸೆಮಿ-ಫೈನಲ್ ತಲುಪುವ ಸಾಧನೆಯನ್ನು ಸಾಧಿಸಿದರು. ಪಿ.ಟಿ. ಉಷಾ ಮತ್ತು ಶೈನಿ ವಿಲ್ಸನ್ ಅವರು ಸೆಮಿ-ಫೈನಲ್ಸ್ ನಲ್ಲಿ ತಮ್ಮ ನೆಚ್ಚಿನ ಸ್ಪರ್ಧೆಯಲ್ಲಿ 800 ಮೀಟರ್ಗಳ ಅರ್ಹತೆ ಪಡೆದಿರುವ ಮೂರನೇ ಭಾರತೀಯ ಮಹಿಳೆಯಾಗಿದ್ದಾರೆ.ಬುಸಾನ್ ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳಾ 800 ಮೀಟರ್ ನಲ್ಲಿ ಕಲೈಥುಮುಕುಜಿ ಮ್ಯಾಥ್ಯೂಸ್ ಬೀನಮೋಲ್ ಚಿನ್ನದ ಪದಕ ಪಡೆದಿದ್ದಾರೆ. ಬೆನಮೊಲ್ ತನ್ನ ಸಹೋದರ ಕೆ.ಎಂ.ಬಿನು ಅವರೊಂದಿಗೆ ತುಂಬ ಪ್ರೀತಿಯಿಂದ ಇದ್ದರು, ಅವರು ಪ್ರಮುಖ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಪದಕಗಳನ್ನು ಗೆದ್ದ ಮೊದಲ ಭಾರತೀಯ ಒಡಹುಟ್ಟಿದವರು.ಕೇರಳ ರಾಜ್ಯದಿಂದ ಬಂದ ಬೀನಮೋಲ್ ಅವರು ಅಂತರರಾಷ್ಟ್ರೀಯ ಯಶಸ್ಸಿನ ಹೊರತಾಗಿ, ಅವರು ಯಾವಾಗಲೂ ರಾಷ್ಟ್ರೀಯ ಸರ್ಕ್ಯೂಟ್ನಲ್ಲಿ ನಿರಂತರ ಪ್ರದರ್ಶನ ನೀಡಿದ್ದಾರೆ.ಬೀನಮೋಲ್ ಅವರು ಆಸ್ಟ್ರೇಲಿಯದ ಸಿಡ್ನಿನಲ್ಲಿ ನಡೆದ 2000 ರ ಒಲಿಂಪಿಕ್ಸ್ನಲ್ಲಿ ಭಾರತೀಯ ಅಥ್ಲೆಟಿಕ್ಸ್ ತಂಡದ ಆಶ್ಚರ್ಯಕರ ಪ್ಯಾಕೇಜ್ ಎಂದು ಸಾಬೀತಾಯಿತು. ಅವರು 800 ಮೀಟರ್ ನ್ನು ಓಟವನ್ನು ಗೆದ್ದರು ಮತ್ತು ಸೆಮಿಫೈನಲ್ಸ್ ಗೆ ಅರ್ಹತೆ ಪಡೆದರು.ಏಸ್ ಶೂಟರ್ ಜೊತೆಯಲ್ಲಿ - ಅಂಜಲಿ ಭಾಗವತ್, ಕೆ.ಎಂ. ಬೀನಮೋಲ್ ಅನ್ನು 2002-03ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ನೀಡಲಾಯಿತು. ನಂತರದ ವರ್ಷದಲ್ಲಿ ಪದ್ಮಶ್ರೀ ಅವರನ್ನು ಮತ್ತಷ್ಟು ಗೌರವಿಸಲಾಯಿತು. ಅವರು ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ರೈಲ್ವೇಯನ್ನು ಪ್ರತಿನಿಧಿಸುತ್ತಾರೆ. ಬೀನಮೋಲ್ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.ದಿ ಹಿಂದೂ ಎಂಬ ದಿನ ಪತ್ರಿಕೆಯಲ್ಲಿ ಕೆ.ಮ್ ಬೀನಮೋಲ್ ರವರ ಸಾಧನೆಯ ಬಗ್ಗೆ ಒಂದು ಲೇಖನವನ್ನು ಪ್ರಕಟಿಸಲಾಗಿತ್ತು.