ಕೆ. ಬಿ. ಹೈಮವತಮ್ಮ ಬದಲಾಯಿಸಿ

ಕೆ. ಬಿ. ಹೈಮವತಮ್ಮ ಇವರು ೧೭ ಮೇ ೧೯೩೭ ರಂದು ಜನಿಸಿದರು.

ಇವರ ತಂದೆ- ಪಿಟೀಲು ಭಾಸ್ಕರಾಚಾರ್ಯ, ತಾಯಿ- ಗೌರಮ್ಮ.

ರಚನೆಗಳು: ಬದಲಾಯಿಸಿ

ಗಮಕ ರೂಪಕಗಳು ಬದಲಾಯಿಸಿ

  • ಶ್ರೀನಿವಾಸ ಕಲ್ಯಾಣ
  • ಸೀತಾ ಕಲ್ಯಾಣ
  • ಶಂಕರವಿಜಯ
  • ಸರಸವಿಲಾಸ
  • ವಾಸವಾಂಬಾ ವೈಭವ
  • ಪಂಚ ಕನ್ಯೆಯರು
  • ರುಕ್ಮಿಣಿ ಸ್ವಯಂವರ
  • ರೇವತಿ ಪರಿಣಯ
  • ದಮಯಂತಿ ಸ್ವಯಂವರ(ಬಿ. ಎಸ್. ತಲವಾಡಿಯವರ ಶುಭೋದಯ ಕಾವ್ಯದಿಂದ)
  • ಮೇರಿ ಕಲ್ಯಾಣ
  • ರಾಮಧಾನ್ಯ ಚರಿತ್ರೆ
  • ಗಜಗೌರೀ ವ್ರತ
  • ಉತ್ತರನ ಪೌರುಷ
  • ಕರ್ಣ ‍ಚಿತ್ರಣ
  • ಸೌಂದರ್ಯ ಲಹರಿ
  • ದೇವಿ ಮಹಾತ್ಮೆ
  • ನಳ ಚರಿತ್ರೆ

ಸಂಗೀತ ರೂಪಕಗಳು ಬದಲಾಯಿಸಿ

  • ಪುರಂದರ ಕೃಷ್ಣ
  • ಹರಿದಾಸ ಪರಂಪರೆ
  • ಗಣೇಶ ವಂದನ
  • ಸಂಗೀತದ ಬೆಳವಣಿಗೆ ನಾದಯೋಗ
  • ರಾಗಾರ್ಥ ರಂಜಿನಿ
  • ಶ್ರೀ ತ್ಯಾಗರಾಜರ ಕೃತಿಗಳ ರಚನಾ ಸಂದರ್ಭ
  • ರಾಮ ಗುಣ ಸೀಮಾ

ನೃತ್ಯ ರೂಪಕಗಳು ಬದಲಾಯಿಸಿ

(ಸ್ವಂತ ರಚನೆಗಳು) ಬದಲಾಯಿಸಿ
  • ಕನ್ನಡ ಚೌಪದಿಗಳುಳ್ಳ ಕೇನೋಪನಿಷತ್
  • ಕನ್ನಡ ಚೌಪದಿಗಳುಳ್ಳ ತೈತ್ತೀರೀಯೋಪನಿಷತ್
  • ಕುಮಾರವ್ಯಾಸನಲ್ಲಿ ನವರಸಗಳು ಗಮಕ ನೃತ್ಯರೂಪಕಗಳು ಮತ್ತು ಲೇಖನ
  • ಶ್ರೀರಾಮ ಪಟ್ಟಾಭಿಷೇಕ
  • ಭಾಮಿನಿ ಷಟ್ಪದಿ- ಪುರಂದರದಾಸರು- ಜೀವನ ಚರಿತ್ರೆಯ ಕಿರುಕಾವ್ಯ
  • ಭಾಮಿನಿ ಷಟ್ಪದಿ- ಶಬರಿ ಕಿರುಕಾವ್ಯ
  • ಭಾಮಿನಿ ಷಟ್ಪದಿ- ವೇದವ್ಯಾಸರು ಕಿರುಕಾವ್ಯ

ಮುದ್ರಣ ಸಂಕಲನ ಗ್ರಂಥಗಳು ಬದಲಾಯಿಸಿ

  • ಬನ್ನಿ ಕೂಡಿ ಹಾಡೋಣ (ಭಾರತದ ೧೪ ಭಾಷೆಗಳ ಸಮುದಾಯ ಗೀತೆಗಳ ಕನ್ನಡ ಅವತರಣಿಕೆ)
  • ಜಯ ಮಂಗಳ (ಭಾಗ- ೧) (ಕುಮಾರವ್ಯಾಸನ ಮಹಾಭಾರತದ ಸಮಗ್ರ ವಾಚನ-ವ್ಯಾಖ್ಯಾನದ ನಂತರ ಶ್ರೀ ಸದನದ ಸದಸ್ಯೆಯರಿಂದ ಬರೆಸಿದ ಲೇಖನಗಳು)
  • ಜಯ ಮಂಗಳ (ಭಾಗ- ೧) (ಜೈಮಿನಿ ಭಾರತದ ಮಹಾಮಂಗಳ ಸಂದರ್ಭದಲ್ಲಿ ಹಿರಿಯ ವಿದ್ವಾಂಸರಿಂದ ಬರೆಸಿದ ಲೇಖನಗಳ ಸಂಗ್ರಹ)

ವಿ.ಸೂ.: ಗಮಕ, ಸಂಗೀತ ರೂಪಕಗಳು, ಗಾಯನ ಸಮಾಜ, ಸಂಗೀತ ಸಭೆಗಳು, ಸಂಘ, ಸಂಸ್ಥೆ, ಸಮ್ಮೇಳನಗಳಲ್ಲಿ ಪ್ರದರ್ಶಿತವಾಗಿವೆ. ರೇಡಿಯೋಗಳಲ್ಲಿ ಆಕಾಶವಾಣಿ ಕೇಂದ್ರಗಳ ಮೂಲಕ ಪ್ರಸಾರವಾಗಿವೆ.

ಸನ್ಮಾನ- ಪ್ರಶಸ್ತಿಗಳು ಬದಲಾಯಿಸಿ

ಸನ್ಮಾನಗಳು ಬದಲಾಯಿಸಿ

  1. ಶಿವಮೊಗ್ಗದ ತಿಲಕನಗರದ ಶ್ರೀ ರಾಮಕೃಷ್ಣ ಪರಮಹಂಸರ ಜಯಂತಿಯ ಸಂದರ್ಭದಲ್ಲಿ ಸನ್ಮಾನ
  2. ತುಮಕೂರು ವಿಶ್ವಕರ್ಮ ಸಮಾಜದಲ್ಲಿ ಸನ್ಮಾನ

ಪ್ರಶಸ್ತಿಗಳು ಬದಲಾಯಿಸಿ

  1. ಕೆಂಗೇರಿ ಉಪನಗರದ ಶ್ರೀ ರಾಜರಾಜೇಶ್ವರಿ ಬಲಮುರಿ ದೇವಸ್ಥಾನದವರು ನೀಡಿದ 'ಕರ್ನಾಟಕ ರತ್ನ' ಬಿರುದು.
  2. ಜಯನಗರ ಬೆಂಗಳೂರುವಿಶ್ವಕರ್ಮ ಸೇವಾ ಸಂಘದ 'ವಿಶ್ವಜ್ಯೋತಿ' ಪ್ರಶಸ್ತಿ.
  3. ಶ್ರೀ ರಾಜರಾಜೇಶ್ವರಿ ದೇವಾಲಯದಿಂದ ಚಂಡಿ ಹೋಮದ ಸಂದರ್ಭದಲ್ಲಿ 'ಶ್ರೀ ರಾಜರಾಜೇಶ್ವರಿ ಅನುಗ್ರಹ' ಪ್ರಶಸ್ತಿ.
  4. ೧೪-೧೨-೨೦೦೧, ಮೈಸೂರಿನ ಶ್ರೀ ವಾಲ್ಮೀಕಿ ಗಮಕ ಪಾಠಶಾಲೆಯವರಿಂದ 'ಸಂಗೀತ- ಗಮಕ ಗಾಯನ ಚತುರೆ' ಪ್ರಶಸ್ತಿ.

ಬಿರುದುಗಳು: ಬದಲಾಯಿಸಿ

  1. ೬-೬-೨೦೦೩, ಬೆಂಗಳೂರು ರಾಜಾಜಿನಗರ ಜ್ಞಾನಜ್ಯೋತಿ ಕಲಾ ಮಂದಿರದವರು, ಮುಳುಬಾಗಿಲಿನಲ್ಲಿ ಶ್ರೀ ಶ್ರೀಪಾದರಾಜ ಮಠದ ಪೀಠಾಧಿಪತಿಗಳಾದ ಶ್ರೀಶ್ರೀ ವಿಜ್ಞಾನನಿಧಿ ತೀರ್ಥರಿಂದ 'ಅಭಿನವ ಸಂಗೀತ ಕಲಾ ಸರಸ್ವತಿ' ಬಿರುದು.
  2. ಕೆಂಗೇರಿ ಉಪನಗರದ ಬ್ರಾಹ್ಮ್ಮಣ ಸಭಾದವರಿಂದ 'ಸಂಗೀತ- ಗಮಕ ವಿಶಾರದೆ' ಬಿರುದು
  3. ಶ್ರೀ ತ್ರಿವೇಣಿ ಕಲಾಸಂಘದಿಂದ 'ಮಹಾ ಕಲಾತಪಸ್ವಿ' ಬಿರುದು.

ಉಲ್ಲೇಖ ಬದಲಾಯಿಸಿ