320px|thumbnail|ಮೋಕ್ಷ್ಹ ಮುತ್ತಪ್ಪ

ನನ್ನ ಹೆಸರು ಮೋಕ್ಷ ಮುತ್ತಪ್ಪ.ನನ್ನ ಹುಟ್ಟೂರು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬೆಕ್ಕೆಸುಡ್ಲೂರು.ನಾನು ಜನಿಸಿದ್ದು ೧೯೯೭ ಜನವರಿ ತಿಂಗಳ ಇಪ್ಪತ್ತಾರನೇ ತಾರೀಕಿನಂದು.ಸ್ಥಳ-ಗೋಣಿಕೊಪ್ಪಲು.ಕೊಡಗಿನ ರಾಜಧಾನಿ ಮಡಿಕೇರಿ.ಮಡಿಕೇರಿಯನ್ನು ದಕ್ಷಿಣದ ಕಾಶ್ಮೀರವೆಂದು ಕರೆಯುತ್ತರೆ.ಜನಸಾಮಾನ್ಯರ ಬಾಯಿಯಲ್ಲಿ ಮಂಜಿನ ನಗರಿಯೆಂದೇ ಪ್ರಸಿದ್ಧ.

ಕುಟುಂಬ

ಬದಲಾಯಿಸಿ

ನನ್ನ ತಂದೆಯ ಹೆಸರು ದೇವಯ್ಯ ,ತಾಯಿಯ ಹೆಸರು ಕವಿತ.ವೃತ್ತಿಯಲ್ಲಿ ಕೃಷಿ.ನನ್ನ ತಂದೆ ತಾಯಿಗೆ ನಾನು ಒಬ್ಬನೇ ಮಗ.ಬಾಲ್ಯದಿಂದಲೇ ಶಾಂತವಾಗಿರುವುದು,ಸೀಮಿತ ಸ್ನೇಹಿತರೊಡನೆ ಸೇರುವುದು ನನ್ನ ಗುಣ.ತೋಟಗಾರಿಕೆಯಲ್ಲಿ ,ಚಿತ್ರಕಲೆಯಲ್ಲಿ,ಆಸಕ್ತಿ ತೋರುತ್ತಿದ್ದೆ.ನನಗೆ ದೇವರ ಮೇಲೆ ಅಪಾರ ನಂಬಿಕೆ ಇದೆ.ನನಗೆ ಮೊಸರನ್ನ ಹಾಗು ಉಪ್ಪಿನಕಾಯಿ ತುಂಬಾ ಇಷ್ಟ.ನನ್ನ ಮನೆಯು ಒಂದು ಗ್ರಾಮವಾಗಿದ್ದರಿಂದ ಒಳ್ಳೆಯ ಶಾಲೆಗಳು ಇರಲ್ಲಿಲ್ಲ.ಆದ್ಧರಿಂದ ನಾನು ಗೋಣಿಕೊಪ್ಪಲುವಿನಲ್ಲಿ ಇದ್ದ ನನ್ನ ಅತ್ತಿಗೆಯ ಮನೆಯಿಂದ ಶಾಲೆಗೆ ಹೋಗುತ್ತಿದ್ದೆನು.ನನ್ನ ಮನೆಯಲ್ಲಿ ಎರಡು ಶ್ವಾನಗಳಿವೆ.ಅದರ ಹೆಸರು ರಾಂಬೊ ಹಾಗು ರೋಬೊ.ಅವು ಲ್ಯಾಬ್ರಡರ್ ಜಾತಿಗೆ ಸೇರಿದವರು.ನಾನು ಹತ್ತನೇಯ ತರಗತಿವರೆಗೆ 'ಸಂತ ಥಾಮಸ್'ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದೆ.ನಾನು ಎಲ್ಲಾ ವಿಷಯಗಳಲ್ಲಿ ಚುರುಕ್ಕಾಗಿದ್ದರಿಂದ ಏಳನೇಯ ತರಗತಿವರೆಗೆ ಮೊದಲನೇಯ ಸ್ಥಾನದಲ್ಲಿದ್ದೆ.ಆದರೆ ಎಂಟನೇಯ ತರಗತಿಯಲ್ಲಿ ತಲೆನೋವಿನ ಸಮಸ್ಯೆಯಿಂದ ಬಳಲುತ್ತಿದ್ದರಿಂದ ವಿದ್ಯಾಭ್ಯಾಸದಿಂದ ತಲೆನೋವಿನ ಕಡೆಗೆ ಗಮನಕೊಟ್ಟೆ.ಈ ಕಾರಣದಿಂದ ಪರೀಕ್ಷೆಯಲ್ಲಿ ನನಗೆ ಕಡಿಮೆ ಅಂಕಗಳು ದೊರಕಿದವು.ನಂತರ ನಾನು ಒಂಬತ್ತನೇಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಗಣಿತ ಶಿಕ್ಷಕರಾಗಿ ಗಣಪತಿ ಸರ್ ಬಂದರು.ಉತ್ತಮ ಶಿಕ್ಷಣ ನೀಡುವುದರ ಮೂಲಕ ಗಣಿತದಲ್ಲಿ ಎಲ್ಲರೂ ಉತ್ತಮ ಅಂಕಗಳಲ್ಲಿ ತೇರ್ಗಡೆಯಾದರು.ಎಲ್ಲಾ ವಿಧ್ಯಾರ್ಥಿಗಳ ಜೊತೆ ಪ್ರೀತಿಯಿಂದ ವರ್ತಿಸುತ್ತಿದ್ದರು.ಅವರ ಒಳ್ಳೆಯ ನಡತೆಯನ್ನು ನೋಡಿ ಪ್ರಾಂಶುಪಾಲರು ಶಾಲಾ ವಾರ್ಷಿಕೋತ್ಸವದಲ್ಲಿ 'ಉತ್ತಮ ಶಿಕ್ಷಕ'ರೆಂದು ಗೌರವಿಸಿದ್ದರು.

ಶಾಲೆಯ ದಿನಗಳು

ಬದಲಾಯಿಸಿ

ನನಗೆ ಓದುವುದರ ಜೊತೆಗೆ ನೃತ್ಯದಲ್ಲಿಯೂ ಆಸಕ್ತಿಯಿತ್ತು.ನಾನು ನೃತ್ಯ ತರಗತಿಗೆ ಹೋಗುವುದು,ಅದರಲ್ಲಿ 'ಭರತನಾಟ್ಯ'ಶೀಲಿಯನ್ನು ಕಲಿಯುತ್ತಿದ್ದೆ.ಪ್ರತಿ ವರ್ಷ ನಡೆಯುತ್ತಿದ್ದ ಶಾಲಾವಾರ್ಷಿಕೋತ್ಸವದಲ್ಲಿ ನಾನು ನೃತ್ಯವನ್ನು ಪ್ರದರ್ಷಿಸುತ್ತಿದ್ದೆನು.ನನಗೆ 'ಕತಕ್ಕಳಿ'ಯಲ್ಲಿ ಆಸಕ್ತಿಯಿದ್ದರಿಂದ ಕೆಲವು ಶಿಕ್ಷಕರಿಂದ ಕಲಿತು ೨೦೧೨ರಲ್ಲಿ ನಡೆದ ಶಾಲಾವಾರ್ಷಿಕೋತ್ಸವದಲ್ಲಿ ನೃತ್ಯ ಪ್ರದರ್ಷಿಸಿ ಎಲ್ಲರ ಮೆಚ್ಚುಗೆಗೆ ಪಾತ್ರನಾದೆನು.ನಂತರ ಹತ್ತನೇಯ ತರಗತಿಗೆ ಬಂದಾಗ ಓದುವುದರ ಕಡೆಗೆ ಹೆಚ್ಚಿನ ಗಮನ ನೀಡಿದೆ.ನನ್ನ ಪೋಷಕರ,ಗೆಳೆಯರ ಪ್ರೋತ್ಸಾಹದಿಂದ ನಾನು ಶೇಖಡ ೮೯.೯೨% ಅಂಕಗಳನ್ನು ಪಡೆದು ಶಾಲೆಗೆ ಒಳ್ಳೆಯ ಹೆಸರನ್ನು ತಂದುಕೊಟ್ಟೆನು. ಮೊದಲಿನಿಂದಲೇ ವಿಜ್ಞಾನದಲ್ಲಿ ಆಸಕ್ತಿಯಿದ್ದರಿಂದ ನಾನು ವಿದ್ಯಾನಿಕೇತನ ವಿಜ್ಞಾನ ಪದವಿ ಪೂರ್ವ ಕಾಲೇಜಿಗೆ ಸೇರಿದೆನು.ನನಗೆ ಗಣಿತ ಹಾಗು ಕಂಪ್ಯೂಟರ್ ನಲ್ಲಿ ಆಸಕ್ತಿ ಇದ್ದ ಕಾರಣ ಪಿ.ಸಿ.ಎಮ್.ಸಿ (ಭೌತಶಾಸ್ತ್ರ.ರಸಾಯಶಾಸ್ತ್ರ,ಗಣಿತ,ಗಣಕಯಂತ್ರವಿಜ್ಞಾನ)ಸೇರಿದೆನು.ನಿರಂತರ ಪರಿಶ್ರಮದಿಂದ ದ್ವಿತೀಯ ಪಿ.ಯು ನಲ್ಲಿ ಶೇಖಡ ೮೬.೧೬% ತೆಗೆದಿದ್ದೇನೆ.ನಂತರ ನಾನು ಪದವಿಪೂರ್ವ ಶಿಕ್ಷಣಕ್ಕಾಗಿ ಕ್ರೈಸ್ಟ್ ವಿಶ್ವವಿದ್ಯಾಲಯಲ್ಲಿ ಬಿ.ಎಸ್ಸಿ ಸೇರಿದ್ದೇನೆ.ಬಿ.ಎಸ್ಸಿಯಲ್ಲಿ ಭೌತಶಾಸ್ತ್ರ,ರಸಾಯನಶಾಸ್ತ್ರ,ಗಣಿತ ತೆಗೆದುಕೊಂಡಿದ್ದೇನೆ.ನಾನು ಪ್ರಸ್ತುತ ಸಿ.ಎಸ್.ಟಿ ವಿದ್ಯಾಭವನ್ ಎಂಬ ಹುಡುಗರ ವಿದ್ಯಾರ್ಥಿನಿಲಯದಲ್ಲಿ ವಾಸಿಸುತ್ತಿದ್ದೇನೆ.ರಾಕೇಶ್,ಗುರು,ಶ್ರೀಕಾಂತ್ ನನ್ನ ಉತ್ತಮ ಸ್ನೇಹಿತರು.ಅದರಲ್ಲೂ ಶ್ರೀಕಾಂತ್ ನನ್ನ ಉತ್ತಮ ಗೆಳೆಯ.ನಾನು ಎಲ್ಲಾ ವರ್ಷ ಶಾಲಾ ಪ್ರವಾಸಕ್ಕೆ ಹೋಗುತ್ತಿದ್ದರಿಂದ ಚಾಮುಂಡಿ ಬೆಟ್ಟ,ರಂಗನತಿಟ್ಟು,ಬೇಲೂರು,ಹಳೇಬೀಡು,ಶೀರಂಗಪಟ್ಟಣ,ಶಿವನ ಸಮುದ್ರ ಮುಂತಾದ ಐತಿಹಾಸಿಕ ಸ್ಥಳಗಳನ್ನು ನೋಡಿದ್ದೇನೆ.ಪದವಿ ಪೂರ್ವ ಶಿಕ್ಷಣದ ನಂತರ ಸ್ನಾತಕೋತ್ತರ ಪದವಿಗಾಗಿ ರಸಾಯನಶಾಸ್ತ್ರವನ್ನು ತೆಗೆದುಕೊಳ್ಳಲು ಇಚ್ಚಿಸುತ್ತೇನೆ.ಶಿಕ್ಷಣದ ನಂತರ ನನ್ನ ಊರಲ್ಲೇ ಶಿಕ್ಷಕನಾಗಿ ಅಲ್ಲಿನ ಮಕ್ಕಳಿಗೆ ಶಿಕ್ಷಣ ನೀಡುವುದು ನನ್ನ ಮಹತ್ವಾಕಾಂಕ್ಷೆ.ನನಗೆ ನೃತ್ಯದಲ್ಲಿ ಆಸಕ್ತಿ ಇರುವುದರಿಂದ ನೃತ್ಯ ಶಾಲೆಯನ್ನು ತೆರೆಯಲು ಇಚ್ಚಿಸುತ್ತೇನೆ.

 This user is a member of WikiProject Education in India
 This user is a member of WikiProject Education in India



ಉಪಪುಟಗಳು

ಬದಲಾಯಿಸಿ

In this ಸದಸ್ಯspace:

ಸದಸ್ಯರ ಚರ್ಚೆಪುಟ:
Moksha.muthappa



ಉಪಪುಟಗಳು

ಬದಲಾಯಿಸಿ

In this ಸದಸ್ಯspace:

ಸದಸ್ಯರ ಚರ್ಚೆಪುಟ:
Moksha.muthappa