ಸದಸ್ಯ:Moiddeen ashfhad/sandbox
ನೀಲ್ಸ್ ಹೆನ್ರಿಕ್ ಡೇವಿಡ್ ಬೋರ್:
ಪ್ರಖ್ಯಾತ ಭೌತವಿಜ್ಞಾನಿ ನೀಲ್ಸ್ ಬೋರ್ ಅವರ ಪೂರ್ಣ ಹೆಸರು ನೀಲ್ಸ್ ಹೆನ್ರಿಕ್ ಡೇವಿಡ್ ಬೋರ್. ಇವರು ಕ್ರಿ.ಶ ೧೮೮೫ ರ ಅಕ್ಟೋಬರ್ ೭ ರಂದು ಡೆನ್ಮಾರ್ಕ್ ನ ಕೋಪನ್ಹೇಗನ್ ನಲ್ಲಿ ಜನಿಸಿದರು. ಇವರ ತಂದೆ ಕೋಪನ್ಹೇಗನ್ ವಿಶ್ವವಿದ್ಯಾಲಯದಲ್ಲಿ ಶರೀರ ವಿಜ್ಞಾನದ ಪ್ರಾಧ್ಯಾಪಕರಾಗಿದ್ದರು. ನೀಲ್ಸ್ ತಮ್ಮ ಶಿಕ್ಷಣವನ್ನು ತಮ್ಮ ಹುಟ್ಟೂರಿನಲ್ಲೇ ಮುಗಿಸಿದರು. ಇವರು ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಅಧ್ಯಯನ ಮಾಡುತ್ತಿದ್ದ ಸಮಯದಲ್ಲಿ ಪ್ರಯೋಗಗಳಿಗೆ ಅಗತ್ಯವಿದ್ದಷ್ಟು ಸೌಲಭ್ಯಗಳಿರಲಿಲ್ಲ . ಹೀಗಾಗಿ ತಂದೆಯ ಪ್ರಯೋಗಾಲಯದಲ್ಲೇ ತಮ್ಮ ಹೆಚ್ಚು ಸಮಯವನ್ನು ಕಳೆಯುತ್ತಿದ್ದರು.