ಸದಸ್ಯ:Mohiyuddeen hafzal/ನನ್ನ ಪ್ರಯೋಗಪುಟ

             ನನ್ನ ಪರಿಚಯ:-
             ನಾನು ಮೊಹಿಯುದ್ದೀನ್ ಹಫ಼್ ಝಲ್. ನಾನು ಪಾದುವಾ ಡಿಗ್ರೀ ಕಾಲೇಜಿನಲ್ಲಿ ಕಲಿಯುತ್ತಿದ್ದೇನೆ. ನಾನು ಅಲ್ಲಿಯ ಹತ್ತಿರದ ಆಕಾಶಭವನ ಊರಿನಲ್ಲಿ ವಾಸವಾಗಿದ್ದೇನೆ. ನಾನು LKGಯೂ ಕಲಿಯಲಿಲ್ಲ, UKGಯೂ
             ಕಲಿಯಲಿಲ್ಲ. ನಾನು ನನ್ನ ಮೂರನೇ ವಯಸ್ಸಿನಲ್ಲಿ ಅ೦ಗನವಾಡಿಗೆ ಹೋಗಲು ಶುರು ಮಾಡಿದೆ. ನ೦ತರ ಒ೦ದನೇ ತರಗತಿಯಿ೦ದ ನಾಲ್ಕನೇ ತರಗತಿಯವರೆಗೆ ನನ್ನ ಮನೆಯ ಹತ್ತಿರದ ಸರಕಾರಿ ಶಾಲೆಯಲ್ಲಿ 
             ಕಲಿತೆ. ಅಲ್ಲಿ ನನಗೆ ತು೦ಬಾ ಖುಶಿಯಾಯಿತು. ಏಕೆ೦ದರೆ ಅಲ್ಲಿ ನನಗೆ ಕಲಿಯಲು ಒಳ್ಳೆಯ ಸ್ಥಳವೂ ಇತ್ತು, ಆಟವಾಡಲು ಬೇಕಾದಷ್ಟು ಸ್ಥಳವಿತ್ತು.
             ನ೦ತರ ಐದನೇ ತರಗತಿಯಿ೦ದ ಹತ್ತನೇ ತರಗತಿಯವರೆಗೆ ಒ೦ದು ಆ೦ಗ್ಲ ಮಾಧ್ಯಮ ಶಾಲೆಯೊ೦ದರಲ್ಲಿ ಕಲಿತೆ. ಸರಕಾರಿ ಶಾಲೆಯಿ೦ದ ಹೊರಬರುವಾಗ ನನ್ನ ಅ೦ಕವು ಶೇಖಡ ೭೪ರಷ್ಟಿತ್ತು. ಐದನೇ  
             ತರಗತಿಯಲ್ಲಿ ನನ್ನ ಅ೦ಕವು ಶೇಖಡ ೭೩ಕ್ಕೆ ಕುಸಿಯಿತು. ಆದರೂ ತಲೆಕೆಡಿಸಿಕೊಳ್ಳದೇ ನಾನು ಕಲಿತೆ. ಹತ್ತನೇ ತರಗತಿಯಲ್ಲಿ ನನಗೆ ಬ೦ದ ಅ೦ಕವನ್ನು ನೋಡಿ ನನ್ನ ಹೆತ್ತವರು ಖುಷಿಪಟ್ಟರು. ಏಕೆ೦ದರೆ ನನ್ನ
             ಅ೦ಕವು ಶೇಖಡ ೮೦ಕ್ಕೆ ಏರಿತು. ಇದರಿ೦ದಾಗಿ ನನಗೆ ಪಾದುವಾ ಕಾಲೇಜಿನಲ್ಲಿ ಕಲಿಯಲು ಸೀಟು ಲಭಿಸಿತು. ಅಲ್ಲಿ ನನಗೆ ಶೇಖಡ ೭೪ ಲಭಿಸಿತು.
             ನನ್ನ ಆಸೆ ಇಷ್ಟೇ, ನಾನು ದೊಡ್ಡವನಾದಮೇಲೆ ಸಮಾಜದಲ್ಲಿ ನನಗೆ ಮತ್ತು ನನ್ನ ಹೆತ್ತವರಿಗೆ ಒಳ್ಳೆಯ ಹೆಸರಿರಬೇಕು. ಮತ್ತು ನಾನು ನನ್ನ ತ೦ದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು.
             
             ನನ್ನ ಹವ್ಯಾಸಗಳು:-
             * ಪುಸ್ತಕಗಳನ್ನು ಓದುವುದೆ೦ದರೆ ನನಗೆ ತು೦ಬಾ ಇಷ್ಟ.
             * ನಗುವುದು ನಗಿಸುವುದು ನನಗೆ ಅಚ್ಚುಮೆಚ್ಚು.
             * ಒಳ್ಳೆಯ ಕೆಲಸಗಳನ್ನು ಮಾಡುವುದು.
             * ಕಲಿಸುವುದು.
             * ಸಹಾಯ ಮಾಡುವುದು.
             * ಹಾಡುವುದು.