ಇವಾನ್ ಪಾವ್ಲೋವ್

ಇವಾನ್ ಪೆಟ್ರೊವಿಚ್ ಪಾವ್ಲೋವ್

ಬದಲಾಯಿಸಿ

ಇವಾನ್ ಪೆಟ್ರೊವಿಚ್ ಪಾವ್ಲೋವ್ರವರು ಒಬ್ಬ ರಷ್ಯನ್ ಶರೀರಶಾಸ್ತ್ರಜ್ಞ. ಇವರು ೨೬ ಸೆಂಪ್ಟೆಂಬರ್ ೧೮೪೯ರಲ್ಲಿ ರಷ್ಯ ರಾಜ್ಯದ ರ್‍ಯಜ಼ಾನ್ ಎಂಬಲ್ಲಿ ಜನಿಸಿದರು. ತಮ್ಮ ಬಾಲ್ಯದ ದಿನಗಳಿಂದ ಪಾವ್ಲೋವ್ ಬೌದ್ಧಿಕ ಕುತೂಹಲವನ್ನು ಅಸಾಮಾನ್ಯ ಶಕ್ತಿಯೊಂದಿಗೆ ಪ್ರದರ್ಶಿಸಿದರು ಮತ್ತು ಅದನ್ನು ಅವರು "ಸಂಶೋಧನೆಗೆ ಪ್ರವೃತ್ತಿ" ಎಂದು ಉಲ್ಲೇಖಿಸಿದ್ದಾರೆ. ೧೮೬೦ರ ದಶಕದ ರಷ್ಯಾದ ಸಾಹಿತ್ಯಿಕ ವಿಮರ್ಶಕರಾದ ಡಿ.ಐ.ಪಿಶರೆವ್ ಮತ್ತು ರಷ್ಯಾದ 'ಶರೀರವಿಜ್ಞಾನದ ತಂದೆ' ಎಂದೇ ಪ್ರಸಿದ್ಧವಾದ ಐ.ಎಂ. ಸೆಕೆನೋವ್ ಅವರು ಹರಡುತ್ತಿದ್ದ ಪ್ರಗತಿಶೀಲ ವಿಚಾರಗಳಿಂದ ಪ್ರೇರಿತರಾಗಿದ್ದಾರೆ. ಪಾವ್ಲೋವ್ ತನ್ನ ಧಾರ್ಮಿಕ ವೃತ್ತಿಜೀವನವನ್ನು ಕೈಬಿಟ್ಟು ವಿಜ್ಞಾನಕ್ಕೆ ತನ್ನ ಜೀವನವನ್ನು ಮೀಸಲಿಟ್ಟರು. ೧೮೭೦ರಲ್ಲಿ ಅವರು ನೈಸರ್ಗಿಕ ವಿಜ್ಞಾನವನ್ನು ಅಧ್ಯಯನ ಮಾಡಲು ಸೈಂಟ್ ಪೀಟರ್‍ಸ್‌ಬರ್ಗ್ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರ ಮತ್ತು ಗಣಿತ ವಿಭಾಗದಲ್ಲಿ ಸೇರಿಕೊಂಡರು.

೧೯೦೪ರಲ್ಲಿ ನೊಬೆಲ್ ಪ್ರಶಸ್ತಿಯನ್ನು ಶರೀರವಿಜ್ಞಾನ ಅಥವಾ ಮೆಡಿಸಿನ್‌ನಲ್ಲಿ ಪಾವ್ಲೋವ್ ಗೆದ್ದುಕೊಂಡರು, ಇದರ ಮೂಲಕ ರಷ್ಯಾದ ಮೊದಲ ನೊಬೆಲ್ ಪ್ರಶಸ್ತಿ ವಿಜೇತರಾದರು. ೨೦೦೨ರಲ್ಲಿ ಪ್ರಕಟವಾದ "ಜನರಲ್ ಸೈಕಾಲಜಿ ಅವಲೋಕನ"ದ ಸಮೀಕ್ಷೆಯ ಪ್ರಕಾರ, ೨೦ನೇ ಶತಮಾನದ ಅತ್ಯಂತ ಹೆಚ್ಚು ಉಲ್ಲೇಖಿತವಾದ ಮನಶ್ಶಾಸ್ತ್ರಜ್ಞರ ಪಟ್ಟಿಯಲ್ಲಿ ಇವರು ೨೪ನೇ ಸ್ಥಾನವನ್ನು ಪಡೆದಿದ್ದಾರೆ. ಪಾವ್ಲೋವ್‌ರವರ ಶಾಸ್ತ್ರೀಯ ಕಂಡೀಷನಿಂಗ್‌ನ ತತ್ತ್ವಗಳನ್ನು ಭಯಗಳನ್ನು ನಿರ್ಮೂಲಿಸುವುದರಲ್ಲಿ, ವರ್ತನೆಗಳ ಚಿಕಿತ್ಸೆಗಾಗಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಉಪಯೋಗಿಸಲಾಗಿದೆ.

ಆರಂಭಿಕ ಜೀವನ ಮತ್ತು ಶಿಕ್ಷಣ

ಬದಲಾಯಿಸಿ

ಇವಾನ್ ಪೆಟ್ರೊವಿಚ್ ಪಾವ್ಲೋವ್‌ರವರ ತಂದೆಯ ಹೆಸರು ಪೀಟರ್ ಡಿಮಿಟ್ರಿವಿಚ್ ಪಾವ್ಲೋವ್, ರಷ್ಯನ್ ಸಾಂಪ್ರದಾಯಿಕ ಪಾದ್ರಿ. ಇವರ ತಾಯಿಯ ಹೆಸರು ವರ್ವಾರಾ ಇವಾನೊವ್ನಾ ಉಸ್ಪೆಂಕಾಯಾ, ಒಬ್ಬ ಗೃಹಿಣಿ. ಇವರ ತಂದೆ ತಾಯಿಗಿದ್ದ ಹನ್ನೊಂದು ಮಕ್ಕಳಲ್ಲಿ ಇವರೇ ಹಿರಿಯ ಮಗ. ಚಿಕ್ಕ ವಯಸ್ಸಿನಿಂದಲೇ ಇವರು ತಮ್ಮ ತಂದೆ ತಾಯಿಗೆ ಮನೆಯ ಸಣ್ಣ ಪುಟ್ಟ ಕೆಲಸಗಳಲ್ಲಿ ಸಹಾಯ ಮಾಡುತ್ತಿದ್ದರು, ಮನೆಯಲ್ಲಿ ಬಳಸಿದ್ದ ಪಾತ್ರೆಗಳನ್ನು ತೊಳೆಯುತ್ತಿದ್ದರು ಮತ್ತು ತಮ್ಮ ಕಿರಿಯ ಒಡಹುಟ್ಟಿದವರನ್ನು ನೋಡಿಕೊಳ್ಳುತ್ತಿದ್ದರು. ತಮಗೆ ಶಾಲೆಯಲ್ಲಿ ರಜೆ ನೀಡಿದ್ದಾಗ ಇವರು ತಮ್ಮ ರಜೆಗಳನ್ನು ತೋಟಗಾರಿಕೆ ಮಾಡುವ ಮೂಲಕ, ಸೈಕಲ್‌ ಸವಾರಿ ಮಾಡುವ ಮೂಲಕ, ಈಜಾಡುವ ಮೂಲಕ ಕಳೆಯುತ್ತಿದ್ದರು. ಇವರು ೭ ವರ್ಷದ ಹುಡುಗನಾಗಿದ್ದಾಗ ಇವರು ಒಂದು ಗೋಡೆಯಿಂದ ಕೆಳಗೆ ಕಲ್ಲಿನ ಮೇಲೆ ಬಿದ್ದು, ಇವರ ತಲೆಗೆ ಬಲವಾದ ಪೆಟ್ಟಾಯಿತು. ಇದರ ಕಾರಣದಿಂದಾಗಿ ಇವರಿಗೆ ೧೧ ವರ್ಷಗಳು ತುಂಬುವವರೆಗೆ ಓದು ಬರಹ ಮುಂದುವರಿಸಲಾಗಲಿಲ್ಲ.

ವೃತ್ತಿಜೀವನ

ಬದಲಾಯಿಸಿ

೧೯೦೧ರಲ್ಲಿ ಶರೀರವಿಜ್ಞಾನ ಅಥವಾ ಔಷಧ ಶಾಸ್ತ್ರದ ನೋಬೆಲ್ ಪ್ರಶಸ್ತಿಗೆ ಪಾವ್ಲೋವ್ಗೆ ನಾಮನಿರ್ದೇಶನ ಮಾಡಲಾಯಿತು. ಅವರು ೧೯೦೪ರವರೆಗೆ ಬಹುಮಾನವನ್ನು ಗೆಲ್ಲಲಿಲ್ಲ. ಇನ್ಸ್ಟಿಟ್ಯೂಟ್ ಆಫ್ ಎಕ್ಸ್ಪರಿಮೆಂಟಲ್ ಮೆಡಿಸಿನ್ನಲ್ಲಿ ಪಾವ್ಲೋವ್ ಜೀರ್ಣಕಾರಿ ಗ್ರಂಥಿಗಳ ಮೇಲೆ ತಮ್ಮ ಶಾಸ್ತ್ರೀಯ ಪ್ರಯೋಗಗಳನ್ನು ನಡೆಸಿದ್ದರು. ಆತನು ಮೇಲೆ ತಿಳಿಸಿದ ವಿಷಯಕ್ಕೆ ನೊಬೆಲ್ ಪ್ರಶಸ್ತಿಯನ್ನು ಗೆದ್ದನು. ಪಾವ್ಲೋವ್ ಶರೀರಶಾಸ್ತ್ರ ಮತ್ತು ನರವೈಜ್ಞಾನಿಕ ವಿಜ್ಞಾನದ ಅನೇಕ ಕ್ಷೇತ್ರಗಳಿಗೆ ಕೊಡುಗೆ ನೀಡಿದ್ದಾರೆ. ಅವರು ಮನೋಧರ್ಮ, ಕಂಡೀಷನಿಂಗ್ ಮತ್ತು ಅನೈಚ್ಛಿಕ ಪ್ರತಿಫಲಿತ ಕಾರ್ಯಗಳ ಕುರಿತಾದ ಸಂಶೋಧನೆಯ ಬಗ್ಗೆ ಕೆಲಸ ಮಾಡಿದ್ದಾರೆ. ಪಾವ್ಲೋವ್ ಜೀರ್ಣಕ್ರಿಯೆಯ ಮೇಲೆ ಪ್ರಯೋಗಗಳನ್ನು ಮಾಡಿದರು. ಅವರು ೧೨ ವರ್ಷಗಳ ಸಂಶೋಧನೆಯ ನಂತರ ೧೮೯೭ರಲ್ಲಿ "ದಿ ವರ್ಕ್ ಆಫ್ ದಿ ಡೈಜೆಸ್ಟಿವ್ ಗ್ಲ್ಯಾಂಡ್ಸ್" ಅನ್ನು ಪ್ರಕಟಿಸಿದರು.

ಪಾವ್ಲೋವ್ನ ಶಾಸ್ತ್ರೀಯ ಕಂಡೀಷನಿಂಗ್ನ ಮೂಲಭೂತ ಅಂಶಗಳು ಪ್ರಸ್ತುತ ಕಲಿಕೆಯ ಸಿದ್ಧಾಂತಗಳಿಗೆ ಐತಿಹಾಸಿಕ ಹಿನ್ನೆಲೆಯಾಗಿ ಕಾರ್ಯನಿರ್ವಹಿಸುತ್ತವೆ. ಶಾಸ್ತ್ರೀಯ ಕಂಡೀಷನಿಂಗ್ನಲ್ಲಿನ ಅವನ ಆಸಕ್ತಿಯು ನಾಯಿಗಳಲ್ಲಿ ಜೀರ್ಣಕ್ರಿಯೆಯ ಮೇಲಿನ ಪ್ರಯೋಗ ಮಾಡುವಾಗ ಆಕಸ್ಮಿಕವಾಗಿ ಸಂಭವಿಸಿತು. ಪಾವ್ಲೋವ್ ತನ್ನ ಪ್ರಯೋಗಗಳಲ್ಲಿ ಅನೇಕ ಪ್ರಾಣಿಗಳ ಜೊತೆಯಲ್ಲಿ ನಿಕಟವಾಗಿ ಕೆಲಸ ಮಾಡಿದ ಕಾರಣ, ಅವನ ಆರಂಭಿಕ ಕೊಡುಗೆಗಳು ಪ್ರಾಥಮಿಕವಾಗಿ ಪ್ರಾಣಿ ಕಲಿಕೆಯ ಬಗ್ಗೆಯ ಇದ್ದವು. ಆದರೂ ಶಾಸ್ತ್ರೀಯ ಕಂಡೀಷನಿಂಗ್ ಮೂಲಭೂತಗಳು ಮಾನವರನ್ನೂ ಒಳಗೊಂಡಂತೆ ವಿವಿಧ ಜೀವಿಗಳಾದ್ಯಂತ ಪರೀಕ್ಷಿಸಲ್ಪಟ್ಟಿವೆ. ಶಾಸ್ತ್ರೀಯ ಕಂಡೀಷನಿಂಗ್ ಇಂದಿನ ನಡವಳಿಕೆಯ ಮಾರ್ಪಾಡು ಪದ್ಧತಿಗಳಿಗೆ ಆಧಾರವಾಗಿದೆ.

ಪ್ರಶಸ್ತಿಗಳು ಮತ್ತು ಗೌರವಗಳು

ಬದಲಾಯಿಸಿ

ಪಾವ್ಲೊವ್ ೧೯೦೭ರಲ್ಲಿ ರಾಯಲ್ ಸೊಸೈಟಿಯ ವಿದೇಶಿ ಸದಸ್ಯರಾಗಿ ಚುನಾಯಿತರಾದರು ಮತ್ತು ೧೯೧೫ರಲ್ಲಿ ರಾಯಲ್ ಸೊಸೈಟಿಯ ಕೋಪ್ಲಿ ಪದಕವನ್ನು ಪಡೆದರು. ಅವರು ೧೯೦೭ರಲ್ಲಿ ರಾಯಲ್ ನೆದರ್ಲೆಂಡ್ಸ್ ಅಕಾಡೆಮಿ ಆಫ್ ಆರ್ಟ್ಸ್ ಅಂಡ್ ಸೈನ್ಸಸ್ನಲ್ಲಿ ವಿದೇಶಿ ಸದಸ್ಯರಾದರು. ಪಾವ್ಲೋವ್ಸ್ ಡಾಗ್, ಪಾವ್ಲೋವ್ಸ್ ಸೆಶನ್ ಮತ್ತು ಪಾವ್ಲೋವ್ಸ್ ಟೈಪಾಲಜಿಯನ್ನು ಅವರ ಗೌರವಾರ್ಥ ಹೆಸರಿಸಲಾಗಿದೆ. ಕ್ಷುದ್ರಗ್ರಹ ೧೦೦೭ ಪವ್ಲೋವಿಯ ಮತ್ತು ಚಂದ್ರನ ಕುಳಿ ಪಾವ್ಲೋವ್ವೆರೆಗೆ ಸಹ ಅವರ ಹೆಸರನ್ನು ಇಡಲಾಗಿದೆ.

ಉಲ್ಲೇಖಗಳು

ಬದಲಾಯಿಸಿ
  1. https://en.wikipedia.org/wiki/Ivan_Pavlov
  2. https://en.wikipedia.org/wiki/Saint_Petersburg_State_University
  3. https://en.wikipedia.org/wiki/Physiology
  4. https://en.wikipedia.org/wiki/Royal_Netherlands_Academy_of_Arts_and_Sciences
  5. https://www.nobelprize.org/prizes/medicine/1904/pavlov/biographical/