ಸದಸ್ಯ:Meghana11.v/ನನ್ನ ಪ್ರಯೋಗಪುಟ


               ಪ್ರಕಟಣೆ


   ಸಮಸ್ತ ನಾಗರೀಕ ಬಂಧಗಳಿಗೆ ಬೆಂಗಳೂರು ರಾಜಾಜಿನಗರದ ಸ್ಪಂದನ ಫೌಂಡೇಷನ್ ಸಂಸ್ಥೆಯ ಮೂಲ ಸ್ಥಾಪಕಳಾದ ವೀಣಾ. ಕೆ.ಟಿ ಆದ ನಾನು ಸಮಸ್ತರಿಗೂ ತಿಳಿಸುವುದೇನೆಂದರೆ, ಯಾವುದೇ ನಾಗರೀಕ ಸಮಾಜದಲ್ಲಿ ಕಾನೂನು ಶಾಸನಗಳನ್ನು ರಚಿಸುವ ಮೂಲ ಉದ್ದೇಶ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ, ಮತ್ತು ನಾಗರಿಕರ ಸುಲಲಿತ ಜೀವನಕ್ಕೆ ಅನುವು ಮಾಡಿಕೊಡುವ ಉದ್ದೇಶ ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲಿ ಇರುವುದು ಸರಿಯಷ್ಟೆ. 
    ಕಾನೂನು # ಶಾಸನ ಜನರಿಂದ, ಜನರಿಗಾಗಿ, ಜನಗಳಿಗೋಸ್ಕರ ಮಾಡಿರುವುದೇ ವಿನ‍‌‌‌‌‌‍‍‍ಃ ಜನರನ್ನು ಇಕ್ಕಟ್ಟಿಗೆ, ಶೋಷಣೆಗೆ, ದೌರ್ಜನ್ಯಕ್ಕೆ ಒಳಪಡಿಸುವುದಿಲ್ಲ. 

ಇತ್ತೀಚಿನ ದಿನಗಳಲ್ಲಿ ಅನೇಕರು ವ್ಯವಸ್ಥೆಯನ್ನು ಅವ್ಯವಸ್ಥೆ ಗೊಳಿಸಿ, ಅಮಾಯಕರಿಗೆ ಬೇರೆ ಬೇರೆ ಕಾರಣಗಳಿಂದ ತೊಂದರೆ ನೀಡುತ್ತಿರುವುದನ್ನು ನಾವೆಲ್ಲರು, ಪ್ರತಿದಿನ ದಿನಪತ್ರಿಕೆಗಳಲ್ಲಿ, ದೈನಂದಿನ ವಾರ್ತೆಗಳಲ್ಲಿ ಮತ್ತು ನಮ್ಮ ಸುತ್ತ ಮುತ್ತಲೂ ನಾವು ಕಾಣುತ್ತಿರುವ ಸೂರ್ಯ-ಚಂದ್ರರು, ಇರುವಷ್ಟು ಸತ್ಯವಾಗಿರಿತ್ತದೆ. ಕೆಲವು ಪಟ್ಟಬದ್ಧ ಹಿತಾಸಕ್ತಿಗಳ ಸ್ವಾರ್ಥ , ಅಸೂಯೆ, ಮೋಸ, ವಂಚನೆಗಳ ಕಾರಣಗಳಿಂದ ಎಲ್ಲಾ ಕ್ಷೇತ್ರದಲ್ಲಿ ಸುಳ್ಳು ದಾಖಲೆಗಾಳನ್ನು ಸೃಷ್ಟಿ ಮಾಡುವುದು, ತಿದ್ದುವುದು, ಸುಳ್ಳು ಸಾಕ್ಷಿಗಳನ್ನು ತಯಾರು ಮಾಡುವುದು ಅಭ್ಯಾಸವಾಗಿ ಹೋಗಿದೆ.

        ಆದ ಕಾರಣ ಸುಳ್ಳು ಪ್ರತರಣಗಳಲ್ಲಿ ಸಿಲುಕಿ ಕೆಲವು ಸರ್ಕಾರಿ, ಅರೆ ಸರ್ಕಾರಿ, ಪೊಲೀಸ್, ಕೋರ್ಟ್, ಕಚೇರಿಗಳಲ್ಲಿ ಸುಳ್ಳನ್ನು ಸತ್ಯವೆಂಬಂತೆ ತಿರಿಚಿ, ಸತ್ಯ ಎಂಬಂತೆ ಗೋಚರಿಸುವಂತೆ ಅನೇಕರು ಮಾಡುತ್ತಿದಾರೆ.

ಇದರಿಂದ ಅನೇಕ ವ್ಯಕ್ತಿಗಳು, ವ್ಯಾಪಾರಸ್ಥರು, ಅಧಿಕಾರಿಗಳು, ಬಡವರು, ಬಲ್ಲಿದರು, ಮಹಿಳೆಯರು, ದಲಿತರು, ಇನ್ನೂ ಅನೇಕರು ತೀವ್ರವಾದ ಕಷ್ಟ, ನಷ್ಟ ಮತ್ತು ಡ್ಯಾಮೇಜುಗಳಿಗೆ ಒಳಗಾಗಿ ತಮ್ಮ ಉದ್ದಿಮೆಗಳನ್ನು ಮುಚ್ಚಿರುವುದು, ಸಂಸಾರಗಳು ಬೀದಿ ಪಾಲಾಗಿರುವುದು, ಅಕ್ರಮ ಬಂಧನಕ್ಕೆ ಒಳಗಾಗಿರುವುದು, ಆತ್ಮಹತ್ಯೆಗೊಳಗಾಗಿರುವುದು, ಕೆಲವು ನಿರಪರಾಧಿಗಳು ಮತ್ತು ಪ್ರಾಮಾಣಿಕರು ಸಹ ಶಿಕ್ಷೆ ಅನುಭಿವಿಸುವಂತಹ ಅನೇಕ ಘಟಣೆಗಳು ನಮ್ಮ ಕಣ್ಣ ಮುಂದೆ ಇದೆ, .

ಅಂತಹ ಮೂರು ಸುಳ್ಳು ಕೇಸುಗಳ್ಯ್ ವೀಣಾ.ಕೆ.ಟಿ ಆದ ನನ್ನ ಮೇಲೂ ಬಂದು ಎಲ್ಲರೂ ನಂಬುವಂತಹ ರೀತಿಯಲ್ಲಿ ನನ್ನನ್ನು ಹಾಗೂ ನನ್ನ ಜೊತೆಯಿರುವ ಎಂಟು ಜನರ ಮೇಲೆ ಸುಳ್ಳು ಕೇಸು ದಾಖಲಿಸಿ, ನಮ್ಮಮ್ಮು ೪ ಬಾರಿ ಪೊಲೀಸ್ ಕಸ್ಟಡಿಯಲ್ಲಿ ಇಟ್ಟು ನಮ್ಮನ್ನು ಮಾನಸಿಕವಾಗಿ, ಶಾರೀರಿಕವಾಗಿ, ಭಾವನಾತ್ಮಕವಾಗಿ ಹಿಂಸಿಸಿ ನಮ್ಮನ್ನು ನರಕ ಯಾತನೆ ಪಡುವಂತೆ ಸಿ.ಸಿ.ಬಿ ಅದಿಕಾರಿಯೊಬ್ಬರು ಮಾಡಿದ್ದಾರೆ.

ನಾನು ಮತ್ತು ನನ್ನ ಜೊತೆ ಇರುವವರು ಅನುಭವಿಸಿದ ಯಾತನೆ ಮತ್ತು ಸಮಸ್ಯೆ ಬಂದಾಗ ನಮ್ಮ ಜೊತೆ ಬೆಂಬಲಕ್ಕಾಗಲೀ, ಸಹಾಯಕ್ಕಾಗಲೀ ಯಾರೂ ಇರಲಿಲ್ಲ. ಇಂತಹ ಸಮಸ್ಯೆ ಬಂದಾಗ, ಅಂತಹ ಕೇಸುಗಳಲ್ಲಿ ನ್ಯಾಯ ದೊರಿಕಿಸಿಕೊಡುವ ಪಣ ತೊಟ್ಟು, ನಾನು ನನ್ನ ಒಡನಾಡಿಗಳು ಸಾಮಾಜಿಕ ಬದ್ಧತೆ ಹಾಗೂ ಸೇವಾ ಆಕಾಂಕ್ಷಿಗಳಾಗಿ ಸುಳ್ಳು ಕೇಸ್ ಗಳ ವಿರಿದ್ಧ ಹೋರಾಡಿ ಅಮಾಯಕರನ್ನು ರಕ್ಷಿಸಲು " " ಎಂಬ ಸಂಸ್ಥೆಯನ್ನು ಹುಟ್ಟು ಹಾಕಿರುತ್ತೇವೆ.


ಈ ವಿಚಾರಕ್ಕೆ ಸಂಬಂಧಿಸಿದಂತೆ ಸಕಲರೂ ಈ ಕಳಗಿನ ವಿಳಾಸಕ್ಕೆ ಖುದ್ದಾಗಿ ಬಂದು, ಪತ್ರ ಬರೆದು ಅಥವಾ ಕರೆ ಮಾಡಿ, ಈ-ಮೇಲ್ ಮಾಡಿ ತಮ್ಮ ಸೂಕ್ತ ಸಲಹೆ, ತಿಳುವಳಿಕೆ, ಸಹಾಯ ಮತ್ತು ಸಂಘಟಿತ ಬೆಂಬಲವನ್ನು ನೀಡಿ ಸುಳ್ಳು ಕೇಸುಗಳ ವಿರುದ್ಧ ಹೋರಾಡೋಣ, ಎಂದು ತಮ್ಮಲ್ಲಿ ಕಳಕಳಿಯಿಂದ ಕೇಳಿಕೊಳ್ಳುತ್ತಿದ್ದೇನೆ.

ನಮ್ಮ ಸಂಸ್ಥೆಯ ಉದ್ಘಾಟನ ಸಮಾರಂಭ ಸದ್ಯದಲ್ಲಿ ನೆರವೇರಲಿದೆ. ತಾವುಗಳು ಬಂದು ಸಹಕರಿಸಬೇಕೆಂದು ಸವಿನಯ ವಿನಂತಿ.

ವಂದನೆಗಳೊಂದಿಗೆ



  ವೀಣಾ.ಕೆ.ಟಿ ಮತ್ತು ಸಂಗಡಿಗರು                                                                  ತಮ್ಮ ವಿಶ್ವಾಸಿ 
  ಸ್ಪಂದನ ಫೌಂಡೇಷನ್
  #೨, ಮದಲನೆ ಮಹಡಿ, ೪೧ನೇ ಕ್ರಾಸ್ 
  ೪ನೇ ಬ್ಲಾಕ್, ವಿಜಯ ಬ್ಯಾಂಕ್ ಎದುರು                                                              ವೀಣಾ.ಕೆಟಿ
  ರಾಜಾಜಿನಗರ ಬೆಂಗಳೂರು-೧೦