ಸದಸ್ಯ:Megha manju/ನನ್ನ ಪ್ರಯೋಗಪುಟ
ಸಂಸ್ಥಾಪಕ(ರು) | ವಿಜಯ್ ಶೇಖರ್ ಶರ್ಮಾ |
---|---|
ಮುಖ್ಯ ಕಾರ್ಯಾಲಯ | ನೋಯ್ಡಾ , ಉತ್ತರ ಪ್ರದೇಶದ,ಭಾರತ |
ಪ್ರಮುಖ ವ್ಯಕ್ತಿ(ಗಳು) | ವಿಜಯ್ ಶೇಖರ್ ಶರ್ಮಾ (ಸಿ.ಇ.ಒ) |
ಸೇವೆಗಳು | ಆನ್ಲೈನ್ ಶಾಪಿಂಗ್ ಡಿಜಿಟಲ್ ಪಾವತಿ ವ್ಯವಸ್ಥೆ |
ಹಿನ್ನೆಲೆ
ಬದಲಾಯಿಸಿಪೇಟಿಯಮ್ ಇದು ಭಾರತೀಯ ಇ-ಕಾಮರ್ಸ್ ತಾಣ. ಇದನ್ನು ೨೦೧೦ರಲ್ಲಿ ಪ್ರಾರಂಭಿಸಲಾಯಿತು, ಇದರ ಪ್ರಧಾನ ಕಛೇರಿ ಭಾರತದ ನೋಯ್ಡಾದಲ್ಲಿದೆ. ಇದನ್ನು ಭಾರತದ ಫಿನ್-ಟೆಕ್ ಉದ್ಯಮಕ್ಕೆ ಸೇರಿಸಲಾಗಿದೆ. ಇದು ವನ್-೯೭ ಕಮ್ಯುನಿಕೇಷನ್ಸ್ ಒಡೆತನದಲ್ಲಿದೆ. ಪೇಟಿಯಮ್ ಸಂಸ್ಥೆಯು ಫ್ಲಿಪ್ಕಾರ್ಟ್, ಅಮೆಜಾನ್ ಡಾಟ್ ಕಾಮ್, ಸ್ನ್ಯಾಪ್ಡೀಲ್ ಗಳಂತೆ ವ್ಯವಹಾರಗಳನ್ನು ನಡೆಸುತ್ತದೆ, ಅಂದರೆ ಉತ್ಪನ್ನಗಳ ಮಾರಾಟ, ಮೊಬೈಲ್ ರೀಚಾರ್ಜ್, ಬಿಲ್ ಪಾವತಿ ಮಾಡುವ ಮೂಲಕ ಈ ಸಂಸ್ಥೆ ಪ್ರಾರಂಭವಾಯಿತು. ೨೦೧೫ರಲ್ಲಿ ಬಸ್ ಪ್ರಯಾಣಕ್ಕೆ ಟಿಕೆಟ್ ಬುಕಿಂಗ್ ಮಾಡಲು ಪ್ರಾರಂಭಿಸಿತು. ೨೦೧೬ರಲ್ಲಿ ಸಿನಿಪಾಲಿಸ್ ಅವರ ಜೊತೆ ಸೇರಿ ಸಿನಿಮಾಗೆ ಟಿಕೆಟ್ ಬುಕ್ ಮಾಡುವ ಸೇವೆ ಒದಗಿಸಿತು. ಪೇಟಿಯಮ್ ಎಂದರೆ ಮೊಬೈಲ್ ಮೂಲಕ ಪಾವತಿಸುವುದು( ಪೇ ಥ್ರೂ ಮೊಬೈಲ್). ಇದಕ್ಕೆ ಆಂಡ್ರಾಯ್ಡ್, ವಿಂಡೋಸ್ ಮತ್ತು ಐಒಯಸ್ ಅಪ್ಲಿಕೇಶನ್ಗಳ ಸಹಾಯಬೇಕಾಗುತ್ತದೆ. ೨೦೧೪ರಲ್ಲಿ ಈ ಸಂಸ್ಥೆಯು ಪೇಟಿಯಮ್ ವಾಲೆಟ್ ಅನ್ನು ಪ್ರಾರಂಭಿಸಿತು. ಈಗ ಇದು ಭಾರತದಲ್ಲೆ ಅತಿ ದೊಡ್ಡಮಟ್ಟದಲ್ಲಿ ಮೊಬೈಲ್ ಮೂಲಕ ಪಾವತಿಸುವ ಸೌಲಭ್ಯ ನೀಡಿರುವ ವೇದಿಕೆಯಾಗಿದೆ ಹಾಗೂ ಇದು ೧೦ಮಿಲಿಯನ್ ಅಪ್ಲಿಕೇಶನ್ ಡೌನ್ಲೋಡ್ ಗಳು ಹಾಗೂ ೧೦೦ ಮಿಲಿಯನ್ ವಾಲೆಟ್ ಗಳನ್ನು ಹೊಂದಿದೆ. ಆಪ್ ಅನಿ ಒಂದು ಮೊಬೈಲ್ ಟ್ರಾಕಿಂಗ್ ವೆಬ್ಸೈಟ್, ಈ ವೆಬ್ಸೈಟ್ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಮೊಬೈಲ್ ಡೌನ್ಲೋಡ್ಸ್ ವಿಷಯದಲ್ಲಿ ಅಮೆಜಾನ್ ಸಂಸ್ಥೆಯು ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.. [೧]
ಫಂಡಿಂಗ್
ಬದಲಾಯಿಸಿಮಾರ್ಚ್ ೨೦೧೫ರಲ್ಲಿ ಭಾರತೀಯ ಉದ್ಯಮಿ ರತನ್ ಟಾಟಾರವರು ಪೇಟಿಯಮ್ ಸಂಸ್ಥೆಯಲ್ಲಿ ವೈಯಕ್ತಿಕ ಹೂಡಿಕೆ ಮಾಡಿದರು, ಅದೇ ತಿಂಗಳಂದು ಈ ಸಂಸ್ಥೆಯು ಅಲಿಬಾಬಾ ಗ್ರೂಪ್ ಎಂಬ ಚೀನೀ ಇ-ಕಾಮರ್ಸ್ ಕಂಪನಿಯಿಂದ ೫೭೫ ಮಿಲಿಯನ್ ಡಾಲರ್ ನಷ್ಟು ಬಂಡವಾಳವನ್ನು ಪಡೆಯಿತು, ನಂತರ ಅಲಿಬಾಬಾ ಗ್ರೂಪ್ ಅಂಗವಾದ, ಆಂಟ್ ಫೈನಾನ್ಷಿಯಲ್ ಸರ್ವೀಸಸ್ ಗ್ರೂಪ್ ರವರು ವನ್-೯೭ ರವರಿಂದ ಆಯಕಟ್ಟಿನ ಒಪ್ಪಂದದ ಭಾಗವಾಗಿ, ಶೇ.೨೫ರಷ್ಟು ಪಾಲನ್ನು ತೆಗೆದುಕೊಂಡಿತು. ಮಾರ್ಚ್ ೨೦೧೬ರಂದು ಪೇಟಿಯಮ್ ಕಂಪನಿಯು ಐಸಿಐಸಿಐ ಬ್ಯಾಂಕಿನಿಂದ ೩೦೦ಕೋಟಿಯನ್ನು ಎರವಲು ಪಡೆಯಿತು
ಸೇವೆಗಳು
ಬದಲಾಯಿಸಿಈ ಅಪ್ಲಿಕೇಶನ್ ತನ್ನ ಬಳಕೆದಾರರಿಗೆ ಏರ್ ಟಿಕೆಟ್ ಬುಕಿಂಗ್, ಟ್ಯಾಕ್ಸಿ ಬುಕಿಂಗ್, ಮೊಬೈಲ್ ರೀಚಾರ್ಜ್, ಡಿಟಿಎಚ್ ಬಿಲ್ ಪಾವತಿ ಮತ್ತು ವಿದ್ಯುತ್ ಬಿಲ್ ಪಾವತಿಸುವ ಸೌಲಬ್ಯವನ್ನು ನೀಡುತ್ತದೆ. ಇದಲ್ಲದೆ ಪೇಟಿಯಮ್ ಬಳಕೆದಾರರು ಪೇಟಿಯಮ್ ವಾಲೆಟ್ ನ ಮೂಲಕ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ನಲ್ಲಿ, ಇಂಧನಕ್ಕೆ ಬಿಲ್ ಪಾವತಿ ಮಾಡಬಹುದು ಹಾಗೂ ಈ ಸಂಸ್ಥೆಯು ಪಿ.ವಿ.ಆರ್ ಸಿನಿಮಾರವರೊಂದಿಗೆ ಸಹಭಾಗಿಯಾಗಿರುವುದರಿಂದ ಇದು ತನ್ನ ಬಳಕೆದಾರರಿಗೆ ಸಿನಿಮಾ ಟಿಕೆಟ್ ಬುಕಿಂಗ್ ಸೌಲಬ್ಯವನ್ನು ಒದಗಿಸುತ್ತದೆ.
ಪಾವತಿ ಬ್ಯಾಂಕ್
ಬದಲಾಯಿಸಿ೨೦೧೫ರಲ್ಲಿ ಪೇಟಿಯಮ್, ಪಾವತಿ ಬ್ಯಾಂಕ್ ಆರಂಭಿಸಲು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಯಿಂದ ಪರವಾನಗಿ ಪಡೆಯಿತು. ಬ್ಯಾಂಕು ಹಣವಿಲ್ಲದ ಆರ್ಥಿಕತೆಯನ್ನು ಸಕ್ರಿಯಗೊಳಿಸಲು ಪೇಟಿಯಮ್ ಬಳಸಿತು. ಪ್ರಸ್ತುತ ಬಳಕೆದಾರರ ನೆಲೆಯನ್ನು ಬಳಸಿ ಡೆಬಿಟ್ ಕಾರ್ಡ್, ಉಳೆತಾಯ ಖಾತೆಗಳು, ಆನ್-ಲೈನ್ ಬ್ಯಾಂಕಿಂಗ್ ಮತ್ತು ವರ್ಗಾವಣೆ ಸೇರಿದಂತೆ ಹಲವಾರು ಹೊಸ ಸೇವೆಗಳನ್ನು ನೀಡುತ್ತದೆ. ಪಾವತಿ ಬ್ಯಾಂಕ್ ಒಂದು ಪ್ರತ್ಯೇಕ ಘಟಕವಾಗಿದ್ದು ಇದರಲ್ಲಿ ಪೇಟಿಯಮ್ ನ ಸಂಸ್ಥಾಪಕರಾದ ವಿಜಯ್ ಶೇಖರ್ ಶರ್ಮಾರವರು ಶೇ.೫೧ರಷ್ಟುನ್ನು ಹಾಗು ವನ್-೯೭ ಸಂಸ್ಥೆಯವರು ಶೇ.೩೯ರಷ್ಟನ್ನು ಹೊಂದಿರುತ್ತಾರೆ, ಇನ್ನು ಉಳಿದ ಶೇ.೧೦ರಷ್ಟನ್ನು ವನ್೯೭ ಹಾಗೂ ಶರ್ಮಾ ಅಂಗಸಂಸ್ಥೆಯವರು ಹೊಂದಿರುತ್ತಾರೆ. ಪೇಟಿಯಮ್ ಭಾರತ್ ಬಿಲ್ ಪಾವತಿ ವ್ಯವಸ್ಥೆಯ ಒಂದು ಘಟಕವೆಂದು ಅನುವೋದನೆ ಪಡೆದಿದೆ. ಇದರ ಪರಿಣಾಮವಾಗಿ ಇದರ ಬಳಕೆದಾರರು ಯಾವುದೇ ವೇಳೆ ಮತ್ತು ಎಲ್ಲಿಯಾದರೂ ತಮ್ಮ ಬಿಲ್ಲುಗಳನ್ನು ಪಾವತಿ ಮಾಡಬಹುದು. ಅತಿ ಕಡಿಮೆ ಅವಧಿಯಲ್ಲಿಯೇ, ಪ್ರತಿ ತಿಂಗಳಿಗು ಮಿಲಿಯನ್ ಆದೇಶಗಳನ್ನು ತಲುಪಿತು.ಇದು ಭಾರತದ ಪ್ರಮುಖ ಮೊಬೈಲ್ ಇಂಟರ್ನೆಟ್ ಕಂಪನಿಯಾದ ವನ್-೯೭ ಕಮ್ಯುನಿಕೇಷನ್ಸ್ ನ ಗ್ರಾಹಕ ಬ್ರ್ಯಾಂಡ್ ಆಗಿದೆ. ಆಂಟ್ ಫೈನಾನ್ಷಿಯಲ್ (ಅಲಿಪೇ), ಎಸ್ಎಐಎಫ್ ಪಾರ್ಟ್ನರ್ಸ್, ಸಫೈರ್ ವೆಂಚರ್ ಮತ್ತು ಸಿಲಿಕಾನ್ ವ್ಯಾಲಿ ಬ್ಯಾಂಕ್ ಇವೆಲ್ಲವು ವನ್-೯೭ನ ಹೂಡಿಕೆದಾರರು. ಪೇಟಿಯಮ್ ನ ತಂಡ ಹೊಸ ವೈಶಿಷ್ಟ್ಯವನ್ನು ವಿನ್ಯಾಸಗಿಳಿಸುವುದರಲ್ಲಿ ಹೆಚ್ಚು ಸಮಯವನ್ನು ಕೊಡುತ್ತದೆ. ಇವರ ಗುರಿ ಕೇವಲ ವಿಷಯವನ್ನು ಸುಲಭ ಮತ್ತು ಅರ್ಥಗರ್ಭಿತ ಮಾಡುವುದು ಮಾತ್ರವಲ್ಲ, ಉಪಯುಕ್ತತೆ ಜೊತೆಗೆ ಲಭ್ಯತೆ, ಅನುಕೂಲತೆ ಮತ್ತು ವಿಶ್ವಾಸಾರ್ಹತೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತದೆ.ಇದರಲ್ಲಿ ನಮಗೆ ಅಗತ್ಯ ಬಂದಾಗಲೆಲ್ಲಾ, ಎಲ್ಲಿಂದಾದರು, ಯಾವಾಗಬೇಕಾದರು ಸುರಕ್ಷಿತವಾದ ಆನ್ಲೈನ್ ವಾಲೆಟ್ ಅಂದರೆ ಪೇಟಿಯಮ್ ನಗದುವಿನಿಂದ ರಿಚಾರ್ಜಿಂಗ್ ಹಾಗೂ ಶಾಪಿಂಗ್ ಮಾಡುವ ಸೌಲಭ್ಯತೆಯನ್ನು ಒದಗಿಸುತ್ತದೆ.[೨]
ಪೇಟಿಯಮ್ ಸಾದನೆಗಳು ಮತ್ತು ಪ್ರಶಸ್ತಿಗಳು
ಬದಲಾಯಿಸಿಪೇಟಿಯಮ್ ೨೦೧೨ರಲ್ಲಿ ಫ್ರಾಂಚೈಸ್ ಇಂಡಿಯರವರ, ಎಂಟರ್ ಪ್ರಿನರ್ ಸಮಾರಂಭದಲ್ಲಿ ವರ್ಷದ ಅತ್ಯಂತ ನವೀನ ಆರಂಭಿಕ ಎಂದು ಬಿರುದು ಪಡೆಯಿತು, ಇದು ನಾಲೆಡ್ಜ್ ಫೇಬರ್ ಅತ್ಯುತ್ತಮ ಮೊಬೈಲ್ ವಾಲೆಟ್ ಕಾರ್ಯಕ್ರಮ ಪ್ರಶಸ್ತಿ ಪಡೆಯಿತು, ಎಮ್-ಕಾಮರ್ಸ್ನ/ ಎಮ್-ಬಿಜನಸ್ ವಿಭಾಗದ ಎಮ್ ಬಿಲಿಯನ್ ಪ್ರಶಸ್ತಿಗಳಲ್ಲಿ ಇದರ ವಿಶೇಷ ಉಲ್ಲೇಖವಿದೆ ಮತ್ತು ಎಂಎಂಎ ಸ್ಮಾರ್ಟೀಸ್ ಫಾರ್ ಎಮ್-ಕಾಮರ್ಸ್ ನಲ್ಲಿ ಬಂಗಾರ ವಿಜೇತವಾಯಿತು. ೨೦೧೪ರಲ್ಲಿ ಮೊಬಿಲಿಟಿ ಸೊಲ್ಯುಶನ್ಸ್ ನಲ್ಲಿ ಇಂಡಿಯನ್ ಎಕ್ಸ್ ಪ್ರಸ್ ಐಟಿ ಪ್ರಶಸ್ತಿ ಪಡೆಯಿತು, ಈ ಅಪ್ಲಿಕೇಶನ್ ಗ್ರಾಹಕ ಟ್ರಸ್ಟ್ ವಿಭಾಗದಲ್ಲಿ ಅಂತರಾಷ್ಟೀಯ ಮೆಪ್ಫಿಸ್ ನ ಫೈನಲಿಸ್ಟ್ ಆಗಿದೆ. ಪೇಟಿಯಮ್ ಸಂಸ್ಥೆಯು ಎಮ್.ಎಮ್.ಎ ಸ್ಮಾರ್ಟೀಸ್ನ ಮೊಬೈಲ್ ಆಪ್ ವಿಭಾಗದಲ್ಲಿ ಚಿನ್ನದ ವಿಜೇತವಾಯಿತು ಹಾಗೂ ಎಮ್.ಎಮ್.ಎಮ ಸ್ಮಾರ್ಟೀಸ್ನ ಎಮ್-ಕಾಮರ್ಸ್ ವಿಭಾಗದಲ್ಲಿ ಬೆಳ್ಳಿ ವಿಜೇತವಾಯಿತು. ೨೦೧೫ರಲ್ಲಿ ಎನ್ಡಿಟಿವಿ ಸಿಸ್ಕೋ ಡಿಜಿಟೈಜಿಂಗ್ ಇಂಡಿಯ ಪ್ರಶಸ್ತಿ ಪಡೆಯಿತು. ವಿಜಯ್ ಶೇಖರ್ ಶರ್ಮಾರವರಿಗೆ "ಇಂಡಿಯಾಸ್ ಹಾಟೆಸ್ಟ್ ಬಿಜಿನೆಸ್ ಲೀಡರ್ ಅನ್ಡರ್ ಫಾರ್ಟಿ" ಪ್ರಶಸ್ತಿ ಲಭಿಸಿತು, ಇದನ್ನು ಎಕನಾಮಿಕ್ ಟೈಮ್ಸ್ ನಲ್ಲಿ ಪ್ರಕತಿಸಲಾಯಿತು. ಬಿಟುಸಿ ವಿಭಾಗದಲ್ಲಿ ವರ್ಷದ ಮೊಬೈಲ್ ಕಾಮರ್ಸ್ ಕಂಪನಿಯಾಗಿ ಫ್ರಾಸ್ಟ್ ಆಂಡ್ ಸುಲೀವಾನ್ ಇಂಡಿಯ ಐಸಿಟಿ ಪ್ರಶಸ್ತಿ ಪಡೆಯಿತು,ಈ ಸಂಸ್ಥೆಯನ್ನು ಇಂಕ್ ಇಂಡಿಯಾ ಅವಾರ್ಡ್ಸ್ ನಲ್ಲಿ ೨೦೧೪ರ ಸಾಲಿನ ಸ್ಮಾರ್ಟ್ ಇನೋವೆಟರ್ಸ್ ಎಂದು ಗುರುತಿಸಲಾಯಿತು, ವಿಜಯ್ ಶೇಖರ್ ಶರ್ಮಾರವರನ್ನು ೨೦೧೪ರ ಸಾಲಿನ ಅತ್ಯುತ್ತಮ ಅನ್ವೇಷಿಕ ಸಿ.ಇ.ಒ ಎಂದು ಗುರುತಸಲ್ಪಟ್ಟರು ಹಾಗೂ ಜನವರಿ-೧೫-೨೦೧೫ರಂದು ಐಎಎಂಎಐ "ಭಾರತ ಡಿಜಿಟಲ್ ಪ್ರಶಸ್ತಿ"ಗಳಲ್ಲಿ ಪೇಟಿಯಮ್ ವಾಲೆಟ್ ಗೆ ಉತ್ತಮ ಡಿಜಿಟಲ್ ವಾಲೆಟ್ ಪ್ರಶಸ್ತಿಯನ್ನು ನೀಡಲಾಯಿತು. ೨೦೧೬ರಲ್ಲಿ ಎಫ್ಟಿ ಫ್ಯೂಚರ್ ಆಫ್ ಫಿನ್-ಟೆಕ್ ಪ್ರಶಸ್ತಿ, ಫೋರ್ಬ್ಸ್ ಲೀಡರ್ ಶಿಪ್ ಅವಾರ್ಡ್ಸ್ ನಲ್ಲಿ ವರ್ಷದ ಅತ್ಯುತ್ತಮ ಆರಂಭಿಕ ಪ್ರಶಸ್ತಿ ಲಭಿಸಿತು, ವಿಜಯ್ ಶೇಖರ್ ಶರ್ಮಾರವರಿಗೆ ಉತ್ತರ ಪ್ರದೇಶ ಸರ್ಕಾರದ ಉನ್ನತ ಯಶ್ ಭಾರತಿ ಪ್ರಶಸ್ತಿ, ಇಟಿ ಪನಛೆ ಟ್ರೆಂಡ್ ಸೆಟ್ಟಿಂಗ್ ಎನ್ಟ್ರಿಪ್ರಿನ್ಯುರ್ ಪ್ರಶಸ್ತಿ, ಕಾರ್ಪೊರೇಟ್ ಎಕ್ಸೆಲೆನ್ಸ್ ಇಟಿ ಅವಾರ್ಡ್ಸ್ ಹಾಗೂ ವರ್ಷದ ಜಿಕ್ಯು ಮೆನ್ ಅವಾರ್ಡ್ಸ್ ನಲ್ಲಿ ವರ್ಷದ ಉದ್ಯಮಿ ಪ್ರಶಸ್ತಿ ಮತ್ತು ವರ್ಷದ ಭಾರತೀಯ ಎನ್ಡಿಟಿವಿ ಪ್ರಶಸ್ತಿ ಪಡೆದರು,ಪೇಟಿಯಮ್ ಸಂಸ್ಥೆಯು ೨೦೧೫ರ ಸಾಲಿನ ವರ್ಷದ ಇಟಿ ಟೆಲಿಕಾಂ ಗೇಮ್ ಚೇಂಜರ್ ಪ್ರಶಸ್ತಿ ಪಡೆಯಿತು ಒಟ್ಟಾರೆ ಪೇಟಿಯಮ್ ಬಳಕೆದಾರರ ಸಂಖ್ಯೆ ದಿನೇ-ದಿನೇ ಹೆಚ್ಚುತ್ತಿದೆ ಮತ್ತು ಈ ಸಂಸ್ಥೆ ನೀಡುತ್ತಿರುವ ಹೊಸ ಸೌಲಭ್ಯಗಳು ಜನರಿಗೆ ಬಹಳ ಅನುಕೂಲಕರವಾಗಿದೆ.[೩]
ಉಲ್ಲೇಖಗಳು
ಬದಲಾಯಿಸಿhttps://www.savecart.net/store/paytm-coupons/
https://www.apkaabazar.com/store/paytm-coupons/
https://cashkaro.com/stores/paytm
https://www.coupondunia.in/paytm
https://claimaz.com/store/paytmmovies-coupons/