ಸದಸ್ಯ:Marzook aloy/sandbox
ನನ್ನ ಈ ಅಂಕಣವನ್ನು ಓದುತ್ತಿರುವ ನಿಮಗೆ ಮೊದಲನೆಯದಾಗಿ ನನ್ನ ಹೆಸರನ್ನು ತಿಳಿಸಲು ಇಚ್ಛಿಸುತ್ತೇನೆ. ನನ್ನ ಹೆಸರು ಮರ್ಝೂಕ್. ಅಡ್ಡೂರು ನನ್ನ ಹುಟ್ಟೂರು. ಮನೆಯಲ್ಲಿ ತಾಯಿಯೊಂದಿಗೆ ವಾಸವಾಗಿದ್ದೇನೆ. ನಾನು ನನ್ನ ಪ್ರಾಥಮಿಕ ಶಿಕ್ಶಣವನ್ನು ಸಹರಾ ಆಂಗ್ಲಮಾದ್ಯಮ ಶಾಲೆಯಲ್ಲಿ ಮಾಡಿದ್ದು, ನಂತರ ಪ್ರೌಢಶಾಲಾ ಶಿಕ್ಷಣವನ್ನು ಬಿ.ಎಂ.ಪ್ರೌಢಶಾಲೆ ಉಳ್ಳಾಲದಲ್ಲಿ ಮುಗಿಸಿದೆ. ಕ್ರೀಡಾಕ್ಷೇತದಲ್ಲಿ ಅತ್ಯಂತ ಆಸಕ್ತಿ ಹೊಂದಿರುವ ನಾನು ಅನೇಕ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದೇನೆ. ಪಿಯುಸಿ ಶಿಕ್ಷಣ ಪಡೆದ ಸಂತ ಜೋಸೆಫ್ ಕಾಲೇಜಿನ ತಂಡದ ಕಬಡ್ಡಿ ಆಟಗಾರನಾಗಿದ್ದ ನಾನು ಹೋಬಳಿ ಹಾಗೂ ತಾಲೂಕು ಮಟ್ಟದ ಅನೇಕ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದೇನೆ. ಅಲ್ಲದೆ, ನಮ್ಮೂರಿನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವರ್ಷಂಪ್ರತಿ ನಡೆಯುವ ಕಬಡ್ಡಿ ಪಂದ್ಯಾಟದಲ್ಲೂ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಗಳಿಸಿದ್ದೇನೆ. ಸದ್ಯ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ಬಿಎ ಶಿಕ್ಷಣ ಪಡೆಯುತ್ತಿದ್ದು, ಭವಿಷ್ಯದಲ್ಲಿ ಐಎಎಸ್ ಆಫಿಸರ್ ಆಗುವ ಕನಸು ಕಂಡಿದ್ದೇನೆ. ಈ ಬಗೆಯ ಸಿದ್ಧತೆಗಳಲ್ಲಿ ಅದಾಗಲೇ ತೊಡಗಿದ್ದೇನೆ.