ಸದಸ್ಯ:Mardanbi/ನನ್ನ ಪ್ರಯೋಗಪುಟ

ಮರ್ದಾನ

ಮಕ್ಕಳ ಸಮಯ ವ್ಯರ್ಥವಾಗುವುದು

ಬದಲಾಯಿಸಿ

ಗೆಳೆಯರೆ, ಇತ್ತೀಚೆಗೆ ದೂರದರ್ಶನ, ಎಂದರೆ ‘ಟಿ.ವಿ.’ ಎಂಬುದು ಎಲ್ಲರಿಗೂ ಜೀವಕ್ಕಿಂತ ಮಿಗಿಲಾಗಿ ಪರಿಣಮಿಸಿದೆ. ಈ ಶಬ್ಧವು ಎಲ್ಲರನ್ನೂ ಮೋಡಿ ಮಾಡಿದೆ, ನಮ್ಮಂತಹ ಮಕ್ಕಳು ಬಾಯಾರಿಕೆ, ಹಸಿವು, ನಿದ್ರೆ, ಅಭ್ಯಾಸ, ಆಟ ಹಾಗೂ ಇನ್ನಿತರ ಕೆಲಸ ಬದಿಗಿಟ್ಟು ದೂರದರ್ಶನ ಕಾರ್ಯಕ್ರಮ ನೋಡುವುದರಲ್ಲಿ ಮಗ್ನರಾಗಿರುವುದು ಕಾಣಿಸುತ್ತಿದೆ. ಆ ಮಕ್ಕಳು ಜೀವನದಲ್ಲಿನ ಅಮೂಲ್ಯ ಹಾಗೂ ಪುನಃ ಎಂದೂ ಬಾರದ ಸಮಯವನ್ನು ವ್ಯರ್ಥಗೊಳಿಸುತ್ತಿದ್ದಾರೆ.

ದೂರದರ್ಶನ ನಿರಂತರವಾಗಿ ನೋಡುವುದರಿಂದ ತಲೆ ಮತ್ತು ಕಣ್ಣು ನೋಯಲಾರಂಭಿಸುವುದು

ಬದಲಾಯಿಸಿ

ಈಗ ನನ್ನ ಗೆಳತಿಯ ಉದಾಹರಣೆಯನ್ನೇ ನೋಡಿ! ರವಿವಾರ ನಾನು ಅವಳನ್ನು ಸಂಸ್ಕಾರವರ್ಗಕ್ಕೆ ಕರೆಯಲು ಹೋಗುತ್ತೇನೆ. ಆಗ ಅವಳು ದೂರದರ್ಶನದ ಮುಂದೆ ಏಕಾಗ್ರತೆಯಿಂದ ಕುಳಿತಿರುತ್ತಾಳೆ. ಅವಳಿಗೆ ಯಾವುದೇ ವಿಷಯದ ಅರಿವಿರುವುದಿಲ್ಲ. ಅವಳು ‘ಸಂಸ್ಕಾರವರ್ಗಕ್ಕೆ ಬರುವುದಿಲ್ಲ’, ಎಂದು ಸರಳವಾಗಿ ಹೇಳುತ್ತಾಳೆ. ದೂರದರ್ಶನ ನೋಡುದರಲ್ಲಿಯೇ ಮಜಾ ಇದೆ, ಎಂದು ಅವಳು ಹೇಳುವಾಗ ಅವಳ ತಂದೆ-ತಾಯಿ ಅವಳಿಗೆ ‘ದೂರದರ್ಶನ ನೋಡುತ್ತಾ ಸಮಯ ವ್ಯರ್ಥ ಮಾಡುವುದರ ಬದಲು ಸಂಸ್ಕಾರವರ್ಗಕ್ಕೆ ಹೋಗಿ ಏನಾದರೂ ಒಳ್ಳೇ ವಿಷಯ ಕಲಿತುಕೊ’, ಎಂದು ಹೇಳುವುದಿಲ್ಲ. ಸಾಯಂಕಾಲ ಆಟವಾಡಲು ಕರೆದಾಗ ಸಹ ಅವಳು ಹೀಗೆಯೇ ಮಾಡುತ್ತಾಳೆ, ಅಷ್ಟೇ ಅಲ್ಲ ಮಿತ್ರರೇ, ನನ್ನ ಈ ಗೆಳತಿಗೆ ದಪ್ಪ (ಹೆಚ್ಚು ನಂಬರಿನ) ಕನ್ನಡಕ ಸಹ ಇದೆ. ಅವಳು ಕಣ್ಣು ನೋಯುತ್ತದೆಯೆಂದು ಯಾವಾಗಲೂ ಅಳುತ್ತಿರುತ್ತಾಳೆ ಹಾಗೂ ಶಾಲೆಯಲ್ಲಿ ಸಹ ಶಿಕ್ಷಕಿಯಿಂದ ಬೈಸಿಕೊಳ್ಳುತ್ತಾಳೆ.

ದೂರದರ್ಶನದಲ್ಲಿ ಮೂಡಿಬರುವ ಒಳ್ಳೆಯ ಮತ್ತು ಅನುಚಿತ ಕಾರ್ಯಕ್ರಮಗಳ ಅರಿವಿರಲಿಅರಿವಿರಲಿ

ಬದಲಾಯಿಸಿ

ನಮ್ಮಲ್ಲಿ ಸುಸಂಸ್ಕಾರ ನಿರ್ಮಾಣವಾಗುವಂತಹ ಕಾರ್ಯಕ್ರಮ, ಉದಾ. ಸಂತರ, ಕ್ರಾಂತಿಕಾರರ ಮತ್ತು ಸಮಾಜಪ್ರಭೋದನೆ ಮಾಡುವಂತಹ ಚಲನಚಿತ್ರಗಳನ್ನು ದೂರದರ್ಶನದಲ್ಲಿ ಅಗತ್ಯವಾಗಿ ನೋಡಬೇಕು, ಆದರೆ ದುರ್ದೈವದಿಂದ ಇಂತಹ ಕಾರ್ಯಕ್ರಮಗಳನ್ನು ಬಹಳ ಕಡಿಮೆ ಮಕ್ಕಳು ನೋಡುತ್ತಾರೆ. ಮಕ್ಕಳು ಅತ್ತೆ-ಸೊಸೆಯ ಕಲಹದ 'ಕೌಟುಂಬಿಕ' ಮಾಲಿಕೆಯನ್ನು ನೋಡುತ್ತಾರೆ, ಅದರಲ್ಲಿನ ಪಾತ್ರದಾರಿಗಳು ದ್ವೇಷದಿಂದ ಜಗಳ ಮಾಡುತ್ತಾರೆ. ಈ ಮಾಲಿಕೆಯಲ್ಲಿ ಅಳುವಂತಹ ದೃಶ್ಯಗಳಿಗ್ಕೆ ಪರ್ಯಾಯವಿರುವುದಿಲ್ಲ. ಮಕ್ಕಳು ಯಾವಾಗಲೂ ಚಲನಚಿತ್ರಗಳ ಸಂಗೀತವನ್ನು ಗೊಣಗುತ್ತಿರುತ್ತಾರೆ. ಇತ್ತೀಚೆಗೆ ಎಲ್ಲರೂ ಹೊಸ ಚಲನಚಿತ್ರಗಳ ವಿಜ್ಞಾಪನೆ, ಕಲಾಕಾರರ ಭೇಟಿ (ಸಂಪರ್ಕ) ಚಲಚನಚಿತ್ರ, ಹಾಡು ಹಾಗೂ ಹಾವಭಾವ ಮಾಡುವಂತಹ ನೃತ್ಯಗಳನ್ನು ನೋಡುತ್ತಾರೆ. ಆದುದರಿಂದ ನಾವು ಸಹ ಹಾಗೆ ಮಾಡಬೇಕೆಂಬ ಭಾವನೆ ಮಕ್ಕಳಲ್ಲಿ ನಿರ್ಮಾಣವಾಗುವುದು.

ಇತ್ತೀಚೆಗೆ ದೂರಚಿತ್ರವಾಣಿಯಲ್ಲಿ ೩ರಿಂದ ೧೫ ವರ್ಷಗಳ ಅಂತರದಲ್ಲಿ ಚಿಕ್ಕ ಮಕ್ಕಳನ್ನು ಸಹ ನೃತ್ಯ, ಹಾಡು, ಅಭಿನಯ, ವಿನೋದ ಇತ್ಯಾದಿ ಮನೋರಂಜನೆಯ ಕಾರ್ಯಕ್ರಮಗಳಲ್ಲಿ ಸಮಾವೇಶ ಮಾಡಿಕೊಳ್ಳಲಾಗುತ್ತದೆ. ಅವರ ಮುಂದೆ ನೈತಿಕತೆಯಿಲ್ಲದ ಚಲನಚಿತ್ರ ನಟ-ನಟಿಯರ ಆದರ್ಶವನ್ನಿಡಲಾಗುತ್ತದೆ. ಈ ಕಾರ್ಯಕ್ರಮಗಳಿಂದ ಮಕ್ಕಳ ಹಾಗೂ ಅವರ ಪಾಲಕರ ಭಾವನೆಗಳೊಂದಿಗೆ ಆಟವಾಡಲಾಗುತ್ತದೆ. ಇದರಿಂದ ಅವರಲ್ಲಿ ಸ್ಪರ್ಧಾತ್ಮಕ ವಿಚಾರಗಳ ವೃದ್ಧಿಯಾಗತ್ತದೆ. ಇಂತಹ ಎಲ್ಲ 'ಮನೋರಂಜನೆಯಲ್ಲಿ' ಮಕ್ಕಳೊಂದಿಗೆ ದೊಡ್ಡವರು ಸಹ ತಮ್ಮನ್ನು ಎಷ್ಟು ಹೊಂದಿಸಿಕೊಳ್ಳುತ್ತಾರೆಂದರೆ, ‘ರಾಷ್ಟ್ರ ಹಾಗೂ ಧರ್ಮದ ವಿಷಯದಲ್ಲಿ ನಮ್ಮದೇನಾದರೂ ಕರ್ತವ್ಯವಿದೆ', ಎಂಬುದನ್ನು ಮರೆತು ಬಿಡುತ್ತಾರೆ.

ಧಾರಾವಾಹಿಗಳಲ್ಲಿ ಹಾಗೂ ಚಲನಚಿತ್ರಗಳಲ್ಲಿ 'ಎದುರುತ್ತರ ಕೊಡುವುದು, ಕದಿಯುವುದು, ಹೊಡೆದಾಟ, ಬಲತ್ಕಾರ, ಕೊಲೆ' ಮುಂತಾದ ಅನೇಕ ಅನೈತಿಕತೆಯ ವಿಷಯಗಳಿರುತ್ತವೆ. ಆದುದರಿಂದ ಮಕ್ಕಳಿಗೆ ಅದೇ ಅಭ್ಯಾಸವಾಗುತ್ತದೆ. ಇನ್ನು ಭೂತಗಳ (ಮಾಲಿಕೆ) ಧಾರಾವಾಹಿಗಳನ್ನು ನೋಡಿ ಮಕ್ಕಳು ಹೆದರುತ್ತಾರೆ ಹಾಗೂ ರಾತ್ರಿ ಕೆಟ್ಟ ಕನಸು ಬೀಳುವುದರಿಂದ ಬೆದರಿಕೊಂಡು, ಕಿರುಚುತ್ತಾ ಅಥವಾ ಅಳುತ್ತಾ ನಿದ್ರೆಯಿಂದ ಎಚ್ಚರಗೊಳ್ಳುತ್ತಾರೆ..

ಪರೀಕ್ಷೆ ಹತ್ತಿರ ಬಂದರು ಸಹ ಮಕ್ಕಳಿಗೆ ದೂರದರ್ಶನದಲ್ಲಿನ ಕಾರ್ಯಕ್ರಮವನ್ನು ನೋಡುವ ಮೋಹವು ನಿಲ್ಲಿಸಲು ಸಾಧ್ಯವಾಗುವುದಿಲ್ಲ. ಇಂತಹ ಮಕ್ಕಳ ಅಪೇಕ್ಷೆಯಂತೆ ಅಧ್ಯಯನವಾಗದಿರುವುದರಿಂದ ಅವರ ಮುಂದಿನ ಜೀವನದ ಮೇಲೆ ವಿಪರೀತ ಪರಿಣಾಮವಾಗುವುದು.

ದೂರದರ್ಶನ : ಎಚ್ಚರಿಕೆಯ ಅವಶ್ಯಕತೆ! ಈಗ ನೀವೇ ಹೇಳಿ, ಈ ದೂರದರ್ಶನ, ಅಂದರೆ ‘ಟಿ.ವಿ.’ ನಮ್ಮ ಮನೆಯಲ್ಲಿ ನೆಲೆಸಿರುವ ರಾಕ್ಷಸ ಹೌದೋ ಅಲ್ಲವೋ? ಈಗ ಆ ಕಾರ್ಯಕ್ರಮ ನೋಡುವುದರಿಂದಾಗುವ ಹಾನಿಯೇನೆಂಬುದು ನಿಮ್ಮ ಗಮನಕ್ಕೆ ಬಂದಿರಬಹುದು. ಹಾಗಾದರೆ ಯಾವುದನ್ನು ದೂರವಿಡಬೇಕೋ, ಅದು ‘ದೂರ…ದರ್ಶನ’, ಎಂಬ ಸಮೀಕರಣವನ್ನೇ ಮಾಡಬೇಕಾಗುತ್ತದೆ. ಆದುದರಿಂದ ಎಲ್ಲ ಮಿತ್ರರಿಗೆ ನಮ್ಮ ವಿನಂತಿಯೇನೆಂದರೆ, ದೂರದರ್ಶನವನ್ನು ದೂರವೇ ಇಡಿ. ಪರೀಕ್ಷೆಯ ಸಂದರ್ಭದಲ್ಲಿಯಾದರೂ ದೂರದರ್ಶನವನ್ನು ಬದಿಗಿಟ್ಟು, ತಮ್ಮ ಅಮೂಲ್ಯವಾದ ಸಮಯವನ್ನು ಸತ್ಕಾರ್ಯಕ್ಕೆ ಉಪಯೋಗಿಸಿ.