'ಮಲ್ಲಕಂಬವನ್ನು ಸಾಂಸ್ಕೃತಿಕ ಕಲೆಯನ್ನಾಗಿ ಬದಲಿಸಿದ ಆಳ್ವಾಸ್'
ನುಡಿಸಿರಿಯಲ್ಲಿ ಮಲ್ಲಕಂಬ ಪ್ರದರ್ಶನ
ನುಡಿಸಿರಿಯಲ್ಲಿ ಮಲ್ಲಕಂಬ ಪ್ರದರ್ಶನ
ಆಳ್ವಾಸ್ ವಿದ್ಯಾ ಸಂಸ್ಥೆಯು ಶಿಕ್ಷಣದ ಜೊತೆ-ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಕಲೆಯಲ್ಲಿಯು ಮುಂಚೂಣಿ ಸ್ಥಾನದಲ್ಲಿರುವುದು ಎಲ್ಲಾರಿಗೂ ಗೊತ್ತಿರುವುದೆ. ಆದರೆ ಇದರ ಜೊತೆಗೆ ಬಯಲು ಸೀಮೆಯಲ್ಲಿ ಯಾರೂ ಗುರಿತಿಸದ ದೇಶಿಯ ಕಲೆಯನ್ನು ಬೆಳಕಿಗೆ ತರುವಂತಹ ಪ್ರಯತ್ನ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆಯುತ್ತಿದೆ. ಪ್ರತಿ ವರ್ಷವೂ ಒಂದೊಂದು ಹೊಸ- ಹೊಸ ಕಲೆಯನ್ನು ಬೆಳಕಿಗೆ ತರುತ್ತಿದೆ ಆಳ್ವಾಸ್. ಪ್ರಸಕ್ತ ವರ್ಷ ಮಲ್ಲಕಂಬ ಕಲೆಯು ನುಡಿಸಿರಿಯ ವಿಶೇಷ.  ಮಲ್ಲಕಂಬ ಕಲೆಯು ಮಹಾರಾಷ್ಟ್ರ, ಮಧ್ಯಪ್ರದೇಶ, ಗೋವಾ, ಚೆನೈ, ಸಿಕ್ಕಿಂ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಒಂದು ಕ್ರೀಡೆಯಾಗಿ ಗುರುತಿಸಿಕೊಂಡಿದ್ದು ಕನರ್ಾಟಕ ರಾಜ್ಯದ ಧಾರವಾಡ, ಬೆಳಗಾವಿ, ಗದಗ ಜಿಲ್ಲೆಗಳಲ್ಲಿ ಕಂಡುಬರುತ್ತದೆ.
ಮಲ್ಲಕಂಬ ಕಲೆಯನ್ನು ದಾದಾ ಬಾಯಿ ಬಾಳಂಬಟ್ ದೇವದಾರ್ ಅವರು ಪ್ರಪ್ರಥಮ ಬಾರಿಗೆ ಮಹಾರಾಷ್ಟ್ರ ರಾಜ್ಯದಲ್ಲಿ ಪ್ರಾರಂಭಿಸಿದರು. ಯೋಗ, ಮಲ್ಲಕಂ, ಜಿಮ್ನಸ್ ಈ ಮೂರು ಅಂಶಗಳನ್ನು ಮಲ್ಲಕಂಬ ಕಲೆಯು ಹೊಂದಿರುತ್ತದೆ. ನೆಲದ ಮೇಲೆ ಮಾಡುವ ಆಸನಗಳನ್ನು ಹಗ್ಗದ ಮೇಲೆ, ಕಂಬದ ಮೇಲೆ ಮಾಡುವುದು ಮಲ್ಲಕಂಬದ ವಿಶೇಷತೆ ಆಗಿದೆ.
ಮಲ್ಲಕಂಬದಲ್ಲಿ ಸುಮಾರು 9 ವಿವಿಧ ರೀತಿಯ ಪ್ರಕಾರಗಳಿದ್ದು ಹ್ಯಾಂಗಿಂಗ್ ಮಲ್ಲಕಂಬ, ರೋಪ್ ಮಲ್ಲಕಂಬ, ಪೊಲ್ ಮಲ್ಲಕಂಬ, ಬಾಟಲ್ ಮಲ್ಲಕಂಬ, ನಿರಾದಾರ ಮಲ್ಲಕಂಬ, ಸ್ಟಾರ್ ಮಲ್ಲಕಂಬ, ಈ ರೀತಿಯಲ್ಲಿ ಮಲ್ಲಕಂಬ ಕಲೆ ಅನಾವರಣ ಆಗುತ್ತದೆ. ಆಸನಗಳ ಮೂಲಕ ಈ ಕಲೆ ಪ್ರದರ್ಶನ ವಾಗುತ್ತಿದ್ದು. ಪದ್ಮಾಸನ, ಪರ್ವತಾಸನ, ಚಕ್ರಾಸನ, ನಿದ್ರಾಸನ, ನಟರಾಜಸನ, ಹೀಗೆ 50 ಕ್ಕೂ ಅಧಿಕ ಆಸನಗಳನ್ನು ಮಾಡುವುದರ ಮುಖಾಂತರ ಮಲ್ಲಕಂಬ ಕಲೆ ರೂಪುಗೊಂಡಿದೆ.
ಇಂತಹ ಅದೆಷ್ಟೊ ವೈಶಿಷ್ಟತೆ ಹೊಂದಿರುವ ಕಲೆಯನ್ನು ಯಾರೊಬ್ಬರು ಗುರುತಿಸದೆ, ವೇದಿಕೆ ನೀಡದೆ ಮಲ್ಲಕಂಬ ಕಲೆಯು ಕನರ್ಾಟಕದಲ್ಲಿ ನಶಿಸುವ ಹಂತಕ್ಕೆ ಬಂದಿದೆ. ಇಂತಹ ದೇಶಿಯ ಕಲೆ ಅಳಿವಿನ ಹಂತಕ್ಕೆ ಹೋಗಬಾರದು ಈ ಕಲೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಸ್ಥಾನ ಗುರುತಿಸಬೇಕೆಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವರ ಆಶಯ ಆಗಿದೆ.
 ನುಡಿಸಿರಿ ಈ ಬಾರಿ ಸಾಂಸ್ಕೃತಿಕ ಕಲಾತಂಡಗಳ ಜೊತೆಗೆ ಮಲ್ಲಕಂಬ ಕಲೆಗೆ ವೇದಿಕೆಯನ್ನು ಹಂಚಿಕೊಳ್ಳಲಿದೆ. ಕ್ರೀಡೆಯಾಗಿ ಬಂದಿರುವ ಮಲ್ಲಕಂಬವನ್ನು ಸಾಂಸ್ಕೃತಿಕ ಕಲೆಯನ್ನಾಗಿ ಮಾಪರ್ಾಡು ಮಾಡುವಲ್ಲಿ ಡಾ. ಎಂ. ಮೋಹನ ಆಳ್ವರು ಯಶಸ್ವಿಯಾಗಿದ್ದಾರೆ.
ಮಲ್ಲಕಂಬ ಕಲೆಯ ಬೆಳವಣಿಗೆಗಾಗಿ ಆಳ್ವಾಸ್ ಶಿಕ್ಷಣ ಸಂಸ್ಥೆ ಸುಮಾರು 30 ಕ್ಕೂ ಅಧಿಕ ವಿದ್ಯಾಥರ್ಿಗಳನ್ನು ದತ್ತು ಪಡೆದುಕೊಂಡು ಅವರಿಗೆ ವಿಶೇಷ ತರಬೇತಿಗಾರರಿಂದ ತರಬೇತಿ ನೀಡಲಾಗುತ್ತಿದೆ. ಇಂತಹ ಮಹತ್ವದ ದೇಶಿಯ ಕಲೆಯನ್ನು ಬೆಳಸುವ ಕಾರ್ಯ ಆಳ್ವಾಸ್ನಿಂದ ಆಗುತ್ತಿದೆ.
            ಬೈಟ್

"ಉತ್ತರ ಕನರ್ಾಟಕದಲ್ಲಿ ಮಲ್ಲಕಂಬ ಕಲೆಯನ್ನು ಕಲಿಯುತ್ತಿದ್ದೆವು. ಆಳ್ವಾಸ್ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವರು ಈ ಕಲೆಯನ್ನು ಗುರುತಿಸಿ ನಮಗೊಂದು ವೇದಿಕೆ ನೀಡಿದ್ದಾರೆ. ನಮ್ಮನ್ನು ದತ್ತು ಪಡೆದು ಉಚಿತ ಶಿಕ್ಷಣದೊಂದಿಗೆ ಮಲ್ಲಕಂಬ ಕಲೆಯನ್ನು ಅಭ್ಯಾಸಿಸಲು ಅನುಭವಿ ಕೋಚ್ಗಳನ್ನು ನೇಮಿಸಿರುವುದು ಸಂತೋಷ"

              - ಪೂಜ ,
        ಮಲ್ಲಕಂಬ ತರಬೀತಿ ಪಡೆಯುತ್ತಿರುವ ಆಳ್ವಾಸ್ ಕಾಲೇಜಿನ ವಿದ್ಯಾಥರ್ಿ 

"ಯಾರೂ ಗುರಿತಿಸದ ಮಲ್ಲಕಂಬ ಕಲೆಯನ್ನು ಆಳ್ವಾಸ್ ಸಂಸ್ಥೆ ಗುರುತಿಸಿ ಕ್ರೀಡೆಯಾಗಿದ್ದ ಮಲ್ಲಕಂಬವನ್ನು ಸಾಂಸ್ಕೃತಿಕ ಕಲೆಯನ್ನಾಗಿ ಪರಿವತರ್ಿಸಿ ಈ ಕಲೆಗೆ ವೇದಿಕೆ ನೀಡಿ ಆಳ್ವರ ದೊಡ್ಡ ಗುಣವಾಗಿದೆ".

          - ಬಸವರಾಜ
         ಮಲ್ಲಕಂಬ ಕೋಚ್