ಸದಸ್ಯ:Manjunathadyavamma/ನನ್ನ ಪ್ರಯೋಗಪುಟ

ಬಸವರಾಜ ಕಲ್ಗುಡಿ ಬದಲಾಯಿಸಿ

ಬಸವರಾಜ ಕಲ್ಗುಡಿಯವರು ಕನ್ನಡದ ಅಪರೂಪ ಸಾಂಸ್ಕೃತಿಕ ವಿಮರ್ಶಕರಲ್ಲಿ ಒಬ್ಬರು. ಕನ್ನಡ ಸಾಹಿತ್ಯ, ಸಂಸ್ಕೃತಿಯ ಪ್ರಾಚೀನತೆ ಮತ್ತು ಆಧುನಿಕತೆಯನ್ನು ಏಕತ್ರ ಮೇಳವಿಸಿ ನೋಡುವ ಇವರ ಚಿಂತನೆಯ ದೃಷ್ಟಿಕೋನ ವಿಶಿಷ್ಟವಾದದ್ದು ಮತ್ತು ಅಪರೂಪವಾದದ್ದು. ಅಂತರಾಳದಲ್ಲಿ ಅಡಗಿ ಕುಳಿತ ಶಬ್ದ ಬೀಜಾಣು ಜಾಲದ ಸೂಕ್ಷ್ಮಗಳನ್ನು ಕಲ್ಗುಡಿಯವರಂತೆ ಶೋಧಿಸಿ, ಹೊರತೆಗೆದವರು ಬಹಳ ಅಪರೂಪ. ಸಂಸ್ಕೃತಿಯನ್ನು ಕುರಿತಂತೆ ವ್ಯಾಖ್ಯಾನಿಸುವ ಹಾಗೂ ಅದರಲ್ಲಿನ ಚಲನೆಯ ಪಲ್ಲಟವನ್ನು ಸಮಗ್ರವಾಗಿ ವಿವಿಧ ನೆಲೆಗಳಿಂದ ಶೋಧಿಸುವ ಕ್ರಮ ಇವರದು. ಕನ್ನಡದ ಮಧ್ಯಕಾಲೀನ ಸಾಹಿತ್ಯವನ್ನು ಕುರಿತ ʼಅನುಭಾವ : ಸಾಂಸ್ಕೃತಿಕ ಸಮಸ್ಯೆ ಮತ್ತು ಹುಡುಕಾಟʼ ಕನ್ನಡದಲ್ಲಿ ಅಪರೂಪವಾದ ವಿಶ್ಲೇಷಣೆಯ ದಾರಿಯನ್ನು ಹಾಕಿಕೊಟ್ಟಿದೆ. ವಚನ ಸಾಹಿತ್ಯವನ್ನು ಕುರಿತಾದ ಸಂಶೋಧನೆಯ ಈ ಅಧ್ಯಯನವು ವಿವಿಧ ಜ್ಞಾನಶಿಸ್ತುಗಳನ್ನು ಒಳಗೊಂಡು, ವರ್ತಮಾನದ ಹಿನ್ನೆಲೆಯಿಂದ ವಚನ ಸಂಸ್ಕೃತಿಯನ್ನು ವ್ಯಾಖ್ಯಾನಿಸಿದ್ದು ಕನ್ನಡ ವಿಮರ್ಶೆಯ ಲೋಕದಲ್ಲಿಯೇ ವಿಶಿಷ್ಟವಾದುದು.

ಆಧುನಿಕ ಸಾಹಿತ್ಯ ವಿಶ್ಲೇಷಣೆಯಲ್ಲಿಯೂ ಬಸವರಾಜ ಕಲ್ಗುಡಿಯವರ ಹಾಗೆ ಭಾಷೆಯ ಸೂಕ್ಷ್ಮವನ್ನು ಹಿಡಿದು ಚಿಂತನೆ ನಡೆಸಿದವರು ಕಡಿಮೆ. ನಿಷ್ಠುರವಾದ ಚಿಂತನೆಗೆ ಹೆಸರಾದ ಕಲ್ಗುಡಿಯವರು ಸಾಂಪ್ರದಾಯಕವಾದ ಅನೇಕ ವ್ಯಾಖ್ಯಾನಗಳನ್ನು ಪಲ್ಲಟಗೊಳಿಸಿದ್ದಾರೆ. ಆಧುನಿಕ ಸಾಹಿತ್ಯದ ಬಗೆಗಿನ ಇವರ ಬರವಣಿಗೆಯಲ್ಲಿ ಕನ್ನಡದ ಪ್ರಮುಖ ಪ್ರತಿಭೆಯ ವೈವಿಧ್ಯತೆಯ ಸೂಕ್ಷ್ಮಗಳನ್ನು ಇವರು ನೋಡಿದ ರೀತಿಯು, ಕನ್ನಡ ಕಾವ್ಯ ಪರಂಪರೆಯನ್ನೇ ಹೊಸದಾಗಿ ನೋಡುವಂತೆ ಮಾಡಿವೆ.

ಪ್ರಕಟಿತ ಕೃತಿಗಳು ಬದಲಾಯಿಸಿ

  • ಮಹಾಸತಿ ಆಚರಣೆ-ಒಂದು ಅಧ್ಯಯನ(ಸಂಶೋಧನೆ)
  • ಅನುಭಾವ : ಸಾಂಸ್ಕೃತಿಕ ಸಮಸ್ಯೆ ಮತ್ತು ಹುಡುಕಾಟ(ಸಂಶೋಧನೆ)
  • ನಕ್ಷೆ-ನಕ್ಷತ್ರ (ವಿಮರ್ಶಾ ಸಂಕಲನ)
  • ಬೇಂದ್ರೆಯವರ ಕಾವ್ಯದಲ್ಲಿ ಪ್ರೇಮದ ಆವಿಷ್ಕಾರ ಸ್ವರೂಪಗಳು(ವಿಮರ್ಶೆ)
  • ಕರ್ನಾಟಕ ಸಂಗಾತಿ (ಸಂಪಾದನೆ)
  • ಬಹುರೂಪಿ(ಸಂಪಾದನೆ)
  • ಆಧುನಿಕ ಕನ್ನಡ ಕಥಾ ಸಾಹಿತ್ಯ(ಸಂಪಾದನೆ)
  • ವಿಚಾರ ಸಾಹಿತ್ಯ(ಸಂಪಾದನೆ)
  • ಕನ್ನಡ ವಾರ್ಷಿಕ (ಸಂಯೋಜನೆ)
  • ಹಾಡು ಹಾವೇ(ಸಂಯೋಜನೆ)
  • ಕಂಬಾರರ ಸಾಹಿತ್ಯದ ನೆಲೆಬೆಲೆ (ಸಂಪಾದನೆ)
  • ಮೈಯೇ ಸೂರು ಮನವೇ ಮಾತು (ಸಂಸ್ಕೃತಿ ಮತ್ತು ಸಂಶೋಧನೆ)

ಪ್ರಶಸ್ತಿಗಳು ಬದಲಾಯಿಸಿ

ಅನೇಕ ಅಂತರರರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಸಾಹಿತ್ಯ ಚಿಂತನೆ, ವಿಚಾರ ಸಂಕಿರಣಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ ಚಿಂತನೆಗಳನ್ನು ತಾತ್ವಿಕವಾಗಿ ಮಂಡಿಸಿ, ತಮ್ಮ ಚಿಂತನೆಗಳು ಶೈಕ್ಷಣಿಕ ವಲಯದಲ್ಲಿ ವಿಸ್ತರಿಸುವಂತೆ ಮಾಡಿದ್ದಾರೆ. ಇವರ ಪ್ರತಿಭೆಗೆ ಸಂದ ಮನ್ನಣೆಗಳು ಹಲವು.

  • ಶಂಬಾ ಅಧ್ಯಯನ ಮಂಡಳಿ ಪ್ರಶಸ್ತಿ
  • ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(ವಿಮರ್ಶೆ-೧೯೯೮, ೨೦೧೩)
  • ಜಿ.ಎಸ್.ಎಸ್‌. ವಿಶ್ವಸ್ಥ ಮಂಡಳಿ ಪ್ರಶಸ್ತಿ(೧೯೯೮)
  • ಜೆ.ಎಸ್‌.ಎಸ್‌ (ಮೈಸೂರು) ಪೀಠ ಪ್ರಶಸ್ತಿ (೧೯೯೮)
  • ಡಾ.ಎಚ್.ಎನ್.‌ ಪ್ರಶಸ್ತಿ (೨೦೧೧)
  • ಬುದ್ಧ ಪೂರ್ಣಿಮ ಗೌತಮ ಪ್ರಶಸ್ತಿ(೨೦೧೧)
  • ವಚನಶ್ರೀ ಪ್ರಶಸ್ತಿ(೨೦೧೧)
  • ಪ್ರೊ.ಸೂ.ವೆಂ. ಆರಗ ಸ್ಮಾರಕ ವಿಮರ್ಶಾ ಪ್ರಶಸ್ತಿ(೨೦೧೩)
  • ವರ್ಧಮಾನ ಪ್ರಶಸ್ತಿ(೨೦೧೯) ಮುಖ್ಯವಾದವು