ಸದಸ್ಯ:Manjudaskodasoge/ನನ್ನ ಪ್ರಯೋಗಪುಟ1

ಬಜೆ(ವಜಾ)

ಬದಲಾಯಿಸಿ

ಸಂ:ವಚ

ಹಿಂ: ಬಚ್

ಮ: ವೆಖಾಂಡ

ಗು: ಗೊಡ್‍ವಚ್

ತೆ: ವಡಜ

ತ: ವಾಸುಬು

ವರ್ಣನೆ

ಬದಲಾಯಿಸಿ

ಇದು ನೀರಿನಾಸರೆ ಇರುವ ಕಡೆ ಬೆಳೆಯುವ ಸಸಿ. ನಮ್ಮ ಜಿಲ್ಲೆಯ ತುಮಕೂರು, ಕೊರಟಗೆರೆ, ಮಧುಗಿರಿ ತಾಲ್ಲೂಕುಗಳಲ್ಲಿ ಗದ್ದೆಗಳಲ್ಲಿ ಬೆಳೆಸುತ್ತಾರೆ. ಎಲೆಗಳು ಹಸಿರು ಮತ್ತು ಉದ್ದವಾಗಿದ್ದು ಚಿಕ್ಕ ಕಬ್ಬಿಣ ಪತ್ರಗಳನ್ನು ಹೋಲುತ್ತವೆ, ಬಢರುಗಳು ಗಂಟು ಗಂಟಾಗಿ ಉದ್ದವಾಗಿರುವುವು. ಬೇರುಗಳ ಮೇಲೆ ಮಾಸಲು ಬಣ್ಣದ ರೋಮಗಳಿರುವುವು, ಬೇರುಗಳಿಗೆ ಸುವಾಸನೆಯಿರುವುದು. ರುಚಿ ಖಾರವಾಗಿರುವಿದು. ಹೊಗಳು ಸಣ್ಣ ಸಣ್ಣದಾಗಿದ್ದು ತಿಳಿ ಹಸಿರಾಗಿರುವುವು. ಗ್ರಾಮವಾಸಿಗಳಿಗೆ, ಅಜ್ಜಿಯಂದಿಯರಿಗೆ ಚಿರಪರಿಚಿತ ಮೂಲಿಕೆ, ಸಣ್ಣ ಮಕ್ಕಳಿರುವ ಪ್ರತಿ ಮನೆಯಲ್ಲೂ ಬಜೆ ಇದ್ದೇ ಇರುತ್ತದೆ. ಇದರಲ್ಲಿ ‘ಅಕೊರಿನ್’ ತೈಲ ಇರುತ್ತದೆ.

ಸರಳ ಚಿಕಿತ್ಸೆಗಳು

ಬದಲಾಯಿಸಿ

ಬಿಳಿ ಚಿಬ್ಬು

ಬದಲಾಯಿಸಿ

ಬಜೆ ಮತ್ತು ಶ್ರೀಗಂಧದ ಕೊರಡನ್ನು ಮಜ್ಜಿಗೆಯಲ್ಲಿ ತೇದು ಚೆಬ್ಬಿರುವ ಜಾಗದಲ್ಲಿ ಲೇಪಿಸುವುದು. ಮುಖ ತೊಳೆಯುಲು ಶೀಗೆಕಾಯಿಪುಡಿ ಉಪಯಫಗಿಸಿವುದು.

ಸನ್ನಿಯಲ್ಲಿ

ಬದಲಾಯಿಸಿ

ನೆಲಬೇವು, ಲವಂಗ, ಬಜೆ, ಕಹಿಪಡವಲ, ಹಿಪಲ ಇವುಗಳನ್ನು ಸಮತೂಕದಲ್ಲಿ ತೆಗೆದುಕೊಂಡು, ಕುಟ್ಟಿ ಪುಡಿ ಮಾಡಿಟ್ಟುಕೊಳ್ಳವುದು. 10-15 ಗ್ರಾಂ ಚೂರ್ಣದ ಕಷಾಯ ಮಾಡಿ ಬೆಳ್ಳಿಗೆ ಸಾಯಂಕಾಲ ಸ್ವಲ್ಪ ಸ್ವಲ್ಪ ಕುಡಿಸುವುದು. ರೋಗಿಯನ್ನು ಬೆಚ್ಚಿಗಿಡುವುದು ಮತ್ತು ಕುಡಿಯಲು ಕಾದಾರಿಸಿದ ನೀರು ಕೊಡುZವುದು.

ಮಕ್ಕಳ ದೊಡ್ಡ ಕೆಮ್ಮಿಗೆ

ಬದಲಾಯಿಸಿ

ಬಜೆ, ಅಳಲೆಕಾಯಿ, ತಾರೇಕಾಯಿ, ಹಿಪಲಿ ಸಮತೂಕ ನುಣ್ಣಗೆ ಚೂರ್ಣಿಸಿ ಹೊತ್ತಿಗೆ ಸುಮಾರು 1/2 ಗ್ರಾಂ ಪುಡಿಯ ಕಷಾಯ ಮಾಡಿ, ಕಲ್ಲಿ ಸಕ್ಕರೆ ಪುಡಿ ಸೇರಿಸಿ ದಿವಸಕ್ಕೆ 3-4 ಬಾರಿ ಸ್ವಲ್ಪ ಸ್ವಲ್ಪ ಕುಡಿಸುವುದು.

ಮಕ್ಕಳ ಜ್ವರ, ಕೆಮ್ಮು,ವಾಂತಿಗೆ

ಬದಲಾಯಿಸಿ

ಬಜೆಯನ್ನು ನಯವಾಗಿ ತೇದು ಜೇನು ಸೇರಿಸಿ ಸ್ವಲ್ಪ ಸ್ವಲ್ಪ ನೆಕ್ಕಿಸುವುದು, ಕಡಿಮೆ ಪ್ರಮಾಣ ಬಳಸಬೇಕು.

ಜ್ವರ ಅತಿಸಾರದಲ್ಲಿ

ಬದಲಾಯಿಸಿ

ಬಜೆ ಅಮೃತಬಳ್ಳಿ, ಕೊನ್ನಾರಿಗಡ್ಡೆ, ನೆ¯ಬೇವು, ಶುಂಠಿ ಕೊಡಸಿಗೆ ಇವುಗಳನ್ನು 5-5 ಗ್ರಾಂ ತೆಗೆದುಕೊಂಡು ಜಜ್ಜಿ ಅಷ್ಟಾಂಶ ಕಷಾಯ ಮಾಡಿ ಒಂದು ಟೀ ಚಮಚ ಕಷಾಯವನ್ನು ಬೆಳ್ಳಿಗೆ ಒಂದು ವೇಳೆ ಕುಡಿಸುವುದು. ಅಥವಾ ಬಜೆ ಮತ್ತು ಕಟುಕ ರೋಹಿಣಿ ಸಮಭಾಗ (5 ಗ್ರಾಂ) ತೆಗೆದುಕೊಂಡು ನಯವಾಗಿ ಚೂರ್ಣಿಸಿ ಶೋಧಿಸಿ ಬ್ರಾಹ್ಮಿ ಎಲೆ ರಸದಲ್ಲಿ (1/2 ಟೀ ಚಮಚ) ಬೆರೆಸಿ ಕುಡಿಸುವುದು.

ಅಪಸ್ಮಾರದಲ್ಲಿ

ಬದಲಾಯಿಸಿ

ಬಜೆಯ ನುಣ್ಣಗಿನ ಚೂರ್ಣವನ್ನು ಬೆಳಗಿನ ವೇಳೆ 32 ಗ್ರಾಂ ತೂಕದಷ್ಟು ಜೇನಿನಲ್ಲಿ ಸೇರಿಸಿ ಸೇವಿಸುವುದು.

ಉನ್ಮಾದದಲ್ಲಿ

ಬದಲಾಯಿಸಿ

ಬಜೆಯು ಉತ್ತಮ ಚೇತನಕಾರಿ ಸನ್ಮೋಹಕಾರಿ ಮತ್ತು ಹುಚ್ಚು ಉನ್ಮಾದದಲ್ಲಿ ಫಲಕಾರಿ. ಹಸೀ ಬ್ರಾಹ್ಮಿಎಲೆ ಬೂದುಗುಂಬಳಕಾಯಿ, ಈಶ್ವರಿಬೇರು, ಬಜೆ ಇವುಗಳನ್ನು ಚೆನ್ನಾಗಿ ಕುಟ್ಟಿ ರಸ ತೆಗೆದು ಚಂಗಲ ಕೋಷ್ಟದ ನಯವಾದ ಪುಡಿ ಮತ್ತು ಜೇನು ಸೇರಿಸಿ 2 ಗ್ರಾಂನಷ್ಟು ಬೆಳ್ಳಿಗೆ ಒಂದೇ ಸಾರಿ ಕುಡಿಸುವುದು.

ರೋಗಿಯ ಕೋಣೆಗೆ ಹೊಗೆ ಹಾಕಲು (ಕ್ರಿಮಿನಾಶಕ)

ಬದಲಾಯಿಸಿ

ಬೇವಿನ ಸೊಪ್ಪು, ಬಜೆ, ಹಿಂಗು ಲೋಬಾನ, ಸಾಸಿವೆ ಇವುಗಳ ಸಮತೂಕ ನಯಬಾಗಿ ಚೂರ್ಣಿಸಿ ಖಾಲೆಯಿಂರುವ ರೋಗಿ ಮಲಗುವ ಕೋಣೆಯಲ್ಲಿ ಕೆಂಡದ ಮೇಲೆ ಹಾಕಿ ಹೋಗೆ ಕೊಡುವುದು. ಗಾಳಿಯಲ್ಲಿರುರುವ ಸೋಂಕು ಹುಟ್ಟಿಸುವ ಕ್ರಿಮಿಗಳ ಸಂಹಾರ ಮಾಡುತ್ತದೆ.

ಹಾವಿನ ವಿಷಕ್ಕೆ

ಬದಲಾಯಿಸಿ

ಬಜೆ ಮತ್ತು ಹಿಂಗನ್ನು ನೀರಿನಲ್ಲಿ ತೇದು ಕೈಕಾಲುಗಳಿಗೆ ಚೆನ್ನಾಗಿ ತಿಕ್ಕುವುದು ಉತ್ತಮವಾದ ಇತರ ಔಷಧಿಗಳನ್ನು ಹೊಟ್ಟೆಗೆ ಕೊಡುವುದು. ಮಕ್ಕಳ ಎಳುವಿಗೆ (ಬಾಲಗ್ರಹ) ಬಜೆ ಅರಿಸಿನ, ಸಾಂಬ್ರಾಣಿಯ ಸಮತೂಕ ನುಣ್ಣಗೆ ಅರೆದು ಕಾಯಿಸುವುದು ಹೀಗೆ ಕಾದಾರಿದ ಒಔಷದಿಯನ್ನು ಮಗುವಿನ ನೆತ್ತಿಯ ಮೇಲೆ ಲೇಪಿಸುವುದು. ದಿನಕ್ಕೆ 4-5 ಬಾರಿ

  • ವಿಶೇಷ ಎಚ್ಚರಿಕೆ:

ಹೆಚ್ಚಿನ ಪ್ರರಮಾಣದಲ್ಲಿ ಸೇವಿಸಿದರೆ ತೊಂದರೆ ಆಗುವ ಸಂಭವವಿದೆ ಹೆಚ್ಚಾದರೆ ನಿಂಬೆಹುಳಿ ಸೇವಿಸುವುದು. ಆದಷ್ಡು ಕಡಿಮೆ ಪ್ರಮಾಣದಲ್ಲಿ ತಿಳಿದವರು ಮೇಲ್ವಿಚಾರಣೆಯಲ್ಲಿ ಸೇವಿಸುವುದು. ಪ್ರಮಾಣ ಚೂರ್ಣ 50 ಮಿ.ಗ್ರಾಂ

ಉಲ್ಲೇಖ

ಬದಲಾಯಿಸಿ

ಪುಸ್ತಕದ ಹೆಸರು: ಬಾಬಾ ಬುಡನ್ ಗಿರಿ ಮತ್ತು ಸಿದ್ದರ ಬೆಟ್ಟದ ಅಪೂವ‍ ಗಿಡಮೂಲಿಕೆಗಳು ಹಾಗೂ ಸರಳ ಚಿಕಿತ್ಸೆಗಳು

ಸಂಪಾದಕರು: ವೈದ್ಯ ಎ. ಆರ್. ಎಂ. ಸಾಹೇಬ್

ಪ್ರಕಾಶಕರು: ಮಠಾಧೀಶರು, ಸದ್ಗುರು ದಾದಾ ಹಯಾತ್ ಮೀರ್ ಖಲಂದರ್ ಪೀಠ, ಬಾಬಾಬುಡನ್ ಗಿರಿ, ಚಿಕ್ಕಮಗಳೂರು