ಸದಸ್ಯ:Manavi gowda/sandbox
ನನ್ನ ಹೆಸರು ಮನವಿ ಎಂ.ಎಸ್ ಗೌಡ, ನನ್ನ ತಂದೆಯ ಹೆಸರು ಸುರೇಶ್ ಗೌಡ, ತಾಯಿ ಸುಜಿನಿ. ನನ್ನ ಜನ್ಮ ದಿನಾಂಕ ೦೯.೧೦.೧೯೯೬. ನನ್ನ ರಾಶಿ ಸಿಂಹ ಹಾಗೂ ನಕ್ಷತ್ರ ಮಗ. ನನ್ನ ಹುಟ್ಟೂರು ಮಲೆನಾಡು ಎಂದೇ ಪ್ರಸಿದ್ಧವಾಗಿರುವ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ, ಬಿಳಿಗಿಳಿ ಗ್ರಾಮ. ನಾವು ಮೂಲತ: ಕೃಷಿ ಕುಟುಂಬದವರಾಗಿದ್ದು ನಾವು ಕಾಫಿ ಮತ್ತು ಕಾಳುಮೆಣಸು ಬೆಳೆಗಳನ್ನು ಬೆಳೆಸುತ್ತೇವೆ. ನಾನು ನನ್ನ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಚಿಕ್ಕಮಗಳೂರಿನಲ್ಲಿಯೇ ಮುಗಿಸಿದ್ದೇನೆ. ನನ್ನ ಪದವಿ ಪೂರ್ವ ಶಿಕ್ಷಣವನ್ನು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮುಗಿಸಿದ್ದೇನೆ. ನಾನು ನನ್ನ ಬಿಎಸ್ಸಿ ಪದವಿಯನ್ನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮಾಡುತ್ತಿದ್ದೇನೆ. ನನಗೆ ಪ್ಯಾಷನ್ ಡಿಸೈನಿಂಗ್ ಎಂದರೆ ತುಂಬಾ ಇಷ್ಟ. ನನ್ನ ಇತರ ಹವ್ಯಾಸಗಳೆಂದರೆ ಪುಸ್ತಕಗಳನ್ನು ಓದುವುದು ಮತ್ತು ಗೆಳೆಯರೊಮ್ದಿಗೆ ಮಸ್ತಿ ಮತ್ತು ಹಾಸ್ಯ ಮಾಡುವುದು.
ನಾನು ಅಚ್ಚ ಕನ್ನಡತಿ ಎಂದು ಹೇಳಿಕೊಳ್ಳಲು ನನಗೆ ಸಂತೋಷವಾಗುತ್ತದೆ. ನಾನು ಮುಂದೆ ಒಂದು ಒಳ್ಳೆಯ ಶಿಕ್ಷಕಿಯಾಗಬೇಕು ಎನ್ನುವ ಆಸೆ ನನಗಿದೆ. ಶಿಕ್ಷಕಿಯಾಗಲು ಬೇಕಾದಷ್ಟು ಸಹನೆ, ಸಂಯಮ ನನ್ನಲ್ಲಿ ಕಡಿಮೆ ಇದೆ ಆದರೂ ಶಿಕ್ಷಕಿಯಾಗಬೇಕೆಂಬ ಹಂಬಲದಿಂದ ಅದನ್ನು ಹೆಚ್ಚಿಸಿಕೊಳ್ಳುವ ಸಾಮರ್ಥ್ಯ ನನ್ನಲಿದೆ. ನಾನು ಯಾವುದೇ ಸಮಯಕ್ಕೆ ಯಾವ ಸಂದರ್ಭಕ್ಕೂ ಹೊಂದಿಕೊಳ್ಳುವ ಸ್ವಭಾವದವಳು. ಎಲ್ಲರೊಂದಿಗೂ ಬೆರೆಯಲು ಸದಾ ಬಯಸುತ್ತೇನೆ. ನನ್ನ ಗುರಿಯನ್ನು ಮುಟ್ಟಬಲ್ಲೆ ಎಂಬ ಆತ್ಮವಿಶ್ವಾಸ ನನ್ನನ್ನು ಸದಾ ಎಚ್ಚರಿಸುತ್ತದೆ.