ಹಸಿರು ಬಕ ಹೆಚ್ಚು ಕಮ್ಮಿ ಕೋಳಿ ಗಾತ್ರದ ಈ ಬಕನಿಗೆ ಆಂಗ್ಲ ಭಾಷೆಯಲ್ಲಿ ಲಿಟ್ಲ್ ಗ್ರೀನ್ ಹೆರಾನ್ ಅಥವಾ ಲಿಟ್ಲ್ ಹೆರಾನ್ ಎಂದು ಕರೆಯುತ್ತಾರೆ. ಕನ್ನಡದಲ್ಲಿ ಹಸಿರು ಬಕ, ಜೌಗು ಹಕ್ಕಿ ಎಂಬ ಹೆಸರುಗಳಿವೆ. ಜೌಗು ಪ್ರದೇಶ, ನೀರಿನ ಬಳಿ ಹೆಚ್ಚಾಗಿ ಕಾಣಿಸಿಕೊಳ್ಳುವ ಈ ನೀರ ಹಕ್ಕಿಯ ಬೆನ್ನಿನಲ್ಲಿ ಕಡು ಬೂದು ಬಣ್ಣ ಇದೆ. ಜೊತೆಗೆ ಕಡು ಹಸಿರು ಪುಕ್ಕಗಳಿವೆ. ಎದೆ ಮತ್ತು ಗದ್ದದಲ್ಲಿ ಬಿಳಿಬಣ್ಣ ಇದೆ. ಕೆಳಭಾಗದಲ್ಲಿ ನಸು ಬೂದು ಬಣ್ಣವಿದ್ದು ಸಾಮಾನ್ಯವಾಗಿ ಏಕಾಂಗಿಯಾಗಿರುತ್ತದೆ. ಕೊಕ್ಕು ಚೂಪಾಗಿ ಗಟ್ಟಿಮುಟ್ಟಾಗಿದೆ. ಕಾಲುಗಳಲ್ಲಿ ನಸು ಹಳದಿ ಬಣ್ಣದ ಈ ಹಕ್ಕಿಯಲ್ಲಿ ಗಂಡು ಮತ್ತು ಹೆಣ್ಣುಗಳೆರಡೂ ನೋಡಲು ಥರ ಇವೆ. ಭಾರತದಾದ್ಯಂತ ಕಾಣಲು ಸಿಗುವಅ ಹಸಿರು ಬಕ ಬಾಂಗ್ಲಾದೇಶ, ಪಾಕಿಸ್ತಾನ,