ಸದಸ್ಯ:Manasa Dindgur/ನನ್ನ ಪ್ರಯೋಗಪುಟ
ಮಾನಸ. ಆರ್ | |
---|---|
Born | ಬೆಂಗಳೂರು | ೨೯ ಅಕ್ಟೋಬರ್ ೨೦೦೦
Nationality | ಭಾರತೀಯ |
ಪರಿಚಯ
ಬದಲಾಯಿಸಿನನ್ನ ಹೆಸರು ಮಾನಸ. ಅಕ್ಟೋಬರ್ ೨೯ ೨೦೦೦ರಲ್ಲಿ, ಕರ್ನಾಟಕ ನಾಡಿನ ಬೆಂಗಳೂರು
ನಗರದಲ್ಲಿ ನನ್ನ ಜನನವಾಯಿತು. ಹುಟ್ಟಿದಂದಿನಿಂದಲೂ ಇಲ್ಲಿಯೇ ವಾಸವಾಗಿರುವ ನಾನು, ನನ್ನ ಜೀವನದ ೧೮ ವರ್ಷಗಳನ್ನು ಇಲ್ಲಿ ಕಳೆದ್ದಿದ್ದೆನೆ. ಈ ನಗರದ ಭಾಷೆ (ಕನ್ನಡ),ಕಲೆ, ಸಂಸ್ಕೃತಿ, ರೀತಿ ನೀತಿಗಳು ಹಾಗು ಜೀವನ ಶೈಲಿಯನ್ನು ನನ್ನ ಬದುಕಿಗೆ ಅಳವಡಿಸಿಕೊಂಡು ಅದರಂತೆ ಜೀವನ ನಡೆಸಿಕೊಂಡು ಬಂದ್ದಿದ್ದೇನೆ. ೨೧ನೇ ಶತಮಾನದಲ್ಲಿ, ಈ ನಗರದಲ್ಲಿ ೧೮ ವರ್ಶಗಳ ಜೀವನವನ್ನು ಕಂಡು ಹಾಗು ಅನುಭವಿಸಿದ ನಂತರ, ನನಗೆ, ನನ್ನ ಮೇಲೆ ಹಾಗು ನನ್ನ ಜೀವನದ ಮೇಲೆ ಮೂಡಿರುವ ಆಲೋಚನೆ ಹಾಗು ಭಾವನೆಗಳನ್ನು ಈ ಬರಹದ ಮೂಲಕ ಹಂಚಿಕೊಳ್ಳುತ್ತಿದ್ದೇನೆ.
ಕುಟುಂಬ
ಬದಲಾಯಿಸಿನಾನು ನನ್ನ ತಂದೆ-ತಾಯಂದಿರಿಗೆ ಮೊದಲನೆಯ ಮಗಳು. ನನ್ನ ಅಜ್ಜಿ-ತಾತಂದಿರಿಗೆ ಮೊದಲನೆಯ ಮೊಮ್ಮಗಳು. ನಮ್ಮ ಪರಿವಾರದ ಈ ಪೀಳಿಗೆಯಲ್ಲಿ ನಾನೇ ಮೊದಲನೆಯವಳು. ನಾನು ಜನಿಸಿದ ೬ ವರ್ಶಗಳ ನಂತರ, ನನ್ನ ತಮ್ಮ ತುಶಾರನ ಜನನವಾಯಿತು. ಮೊದಲನೆಯ ೬ ವರ್ಶಗಳು ಮನೆಯಲ್ಲಿ ನಾನೊಬ್ಬಳ್ಳೇ ಮಗುವಾಗಿದ್ದ ಕಾರಣ, ನನ್ನನ್ನು ಬಹಳ ಪ್ರೀತಿ, ವತ್ಸಲ್ಯದಿಂದ ಬೆಳೆಸಿ ಆರೈಕೆ ಮಾಡಲಾಗಿತ್ತು. ನನ್ನದು ಅವಿಭಕ್ತ ಕುಟುಂಬವಲ್ಲ. ಆದರೂ ನನ್ನ ಪರಿವಾರವೆಂದರೆ ನನ್ನ ಅಜ್ಜಿ-ತಾತ, ಚಿಕ್ಕಮ್ಮ, ತಂದೆ-ತಾಯಿ ಹಾಗು ತಮ್ಮ ಎಲ್ಲರೂ ಇರುತ್ತಾರೆ. ಎಲ್ಲರಿಗೂ ನಾನು ಅಚ್ಚು-ಮೆಚ್ಚು; ನಾನೆಂದರೆ ವಿಶೇಷವಾದ ಪ್ರೀತಿ. ಅದರಲ್ಲಿಯೂ, ನನ್ನ ಅಜ್ಜಿಗೆ ನನ್ನ ಬಗ್ಗೆ ಬಹಳ ಮುಚ್ಚಟೆ. ಜನನದಿಂದಲೂ ನನ್ನನ್ನು ಪೊಶಿಸಿ ಆರೈಕೆ ಮಾಡಿ ಅಂಗೈಯಲ್ಲಿ ಇಟ್ಟು, ಮುಂಗೈಯಲ್ಲಿ ಮುಚ್ಚಿ ಕಾಪಾಡಿಕೊಂಡು ಬಂದ ಇವರಿಗೆ, ನಾನೆಂದರೆ ವಿಷೇಶ ಕಾಳಜಿ. ನನ್ನ ಊಟ, ತಿಂಡಿ, ನಿದ್ದೆ ಇವುಗಳೇ ಅವರಿಗೆ ಮಹತ್ತರವಾದ ವಿಷಯಗಳು. ಚಿಕ್ಕಮ್ಮನ ವಿಷಯಕ್ಕೆ ಬಂದಾಗ, ವಿದ್ಯಾಭ್ಯಾಸ, ಶಿಸ್ತು, ಇನ್ನಿತರ ಚಟುವಟಿಕೆಗಳು ಇವರಿಗೆ ಮುಖ್ಯವಾದ ವಿಷಯಗಳು. ಓದಿನಲ್ಲಿ ಯಾವುದೇ ಸಹಾಯ ಬೇಕಾದಾಗ, ಕಾಲೇಜಿನಲ್ಲಿ ಯವುದೇ ರೀತಿಯ ತೊಂದರೆಗಳು ಎದುರಾದಾಗ, ನನ್ನ ಬೆನ್ನೆಲುಬಾಗಿ ನಿಂತು ನನ್ನನ್ನು ಬೆಂಬಲಿಸಲು ಇವರಿಗೆ ಆಸಕ್ತಿ. ಓಟ್ಟಿನಲ್ಲಿ ಇವರಿಬ್ಬರೂ ನನ್ನ ಜೀವನ ಸುಗಮವಾಗಿ ಸಾಗುವುದು ಹಾಗೂ ನನ್ನ ಸಂತೋಷವನ್ನು ತಮ್ಮ ಜೀವನದ ಅಂಗವಾಗಿ ಮಾಡಿಕೊಂಡಿದ್ದಾರೆ. ನನ್ನ ತಂದೆ-ತಾಯಿಯರದು ಬಹಳ ಗಡಿ-ಬಿಡಿಯ ಜೀವನ. ತಂದೆ ಡಾ. ಡಿ. ಕೆ. ರಮೇಶ್, ವೈದ್ಯರು[೧]. ತಾಯಿ ಆನುಪಮ, ಸಾಫ಼್ತ್ಟ್ವೇರ್[೨] ಉದ್ಯೋಗಿ. ಇವರಿಬ್ಬರ ದಿನಚರಿಯೂ ಬೆಳಗ್ಗೆ ೭ ಘಂಟೆಗೆ ನಮ್ಮ ತಿಂಡಿ ಡಬ್ಬಿಯನ್ನು ತಯಾರಿಸುವುದರಿಂದ ಶುರುವಾಗಿ, ರಾತ್ರಿ ೯ ಘಂಟೆಗೆ ಕೆಲಸ ಮುಗಿಸಿ ಮನೆಗೆ ಹಿಂದಿರುಗುವುದರಿಂದ ಮುಕ್ತಾಯಗೊಳ್ಳುತ್ತದೆ. ಇವರ ನಿರತ ಜೀವನದ ಉದ್ದೇಶ ತಮ್ಮ ಮಕ್ಕಳ ಉಜ್ವಲ ಭವಿಶ್ಯವನ್ನು ರೂಪಿಸುವುದು. ನಮ್ಮ ವಿದ್ಯಾಭ್ಯಾಸ ಹಾಗು ಬೆಳವಣಿಗೆ ಇವರಿಗೆ ಮುಖ್ಯವಾಗಿರುವ ಕಾರಣ, ನಮ್ಮಿಬ್ಬರನ್ನು ಓದಿಸಿ ಶಾಲಾ-ಕಾಲೇಜುಗಳಿಗೆ ಸೇರಿಸಲು ಸೆಣೆಸುತ್ತಾರೆ.
ವಿದ್ಯಾಭ್ಯಾಸ
ಬದಲಾಯಿಸಿ೨೦೦೬ರಲ್ಲಿ ನನ್ನ ತಂದೆ-ತಾಯಿಯರು ನನ್ನನ್ನು ಮನೆಯ ಬಳಿ ಇರುವ ಡೆಕ್ಕನ್ ಅಂತರ್ರಾಷ್ಟ್ರೀಯ ಶಾಲೆಗೆ[೩] ದಾಖಲು ಮಾಡಿದರು. ಅಲ್ಲಿಂದ ನನ್ನ ಶೈಕ್ಷಣಿಕ ಜೀವನ ಪ್ರಾರಂಭವಾಯಿತು. ೧೦ ವರ್ಷಗಳ ಕಾಲ ಆ ಸಂಸ್ಥೆಯಲ್ಲಿ ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣವನ್ನು ಪಡೆದ ನಾನು, ನನ್ನ ಜೀವನದ ಎಷ್ಟೋ ಮೌಲ್ಯಗಳನ್ನು ಆ ಶಾಲೆಯಿಂದ ಪಡೆದೆನು. ಜೀವೆನದಲ್ಲಿ ನನಗೆ ಅತಿ ಹತ್ತಿರವಾದ ಗೆಳೆಯರನ್ನು ಇಲ್ಲಿ ಪಡೆದೆನು. ಮೊದಲನೆಯ ತರಗತಿಯನ್ನು ಬಿಕ್ಕಿ ಬಿಕ್ಕಿ ಅಳುವುದರಿಂದ ಪ್ರಾರಂಭ ಮಾಡಿದ ನಾನು, ಹತ್ತನೆಯ ತರಗತಿಯ ಹೊತ್ತಿಗೆ, ಆ ಸಂಸ್ಥೆಯ ಒಳ್ಳೆಯ ನೆನಪುಗಳನ್ನು ಮನಸಿನಲ್ಲಿ ಕೂಡಿಟ್ಟುಕೊಳ್ಳುವುದರ ಮೂಲಕ ಮುಗಿಸಿದೆನು. ನಂತರ, ೨೦೧೬ರಲ್ಲಿ, ಬೆಂಗಳೂರಿನ ಆರ್. ವಿ. ಪಿ. ಯು. ಕಾಲೆಜಿನಲ್ಲಿ[೪]ನನ್ನ ಪದವೀ ಪೂರ್ವ ಶಿಕ್ಷಣ ಶುರುವಾಯಿತು. ಅಲ್ಲಿಯ ೨ ವರ್ಷಗಳ ಕಟ್ಟುನಿಟ್ಟಿನ ವಾತಾವರ್ಣ ಶಿಸ್ತಿನಿಂದ ಕೂಡಿದ್ದು, ಕಠಿಣವಾಗಿತ್ತು. ಆದರೆ, ಈ ಸಂಸ್ಥೆಯು ನನ್ಗೆ ಜೀವನದ ಎಷ್ತೋ ಪಾಠಗಳನ್ನು ಹೇಳಿಕೊಡುವುದರಲ್ಲಿ ಸಹಾಯವಾಗಿದೆ.
ಈಗಿನ ಜೀವನ
ಬದಲಾಯಿಸಿಒಟ್ಟಾರೆ, ನನ್ನ ಈ ೧೮ ವರ್ಷಗಳ ಜೀವೆನದಲ್ಲಿ ನಾನು ನನ್ನ ಪಾಲಿನ ಸಂತೋಷದ ಕ್ಷಣಗಳು, ದುಃಖದ ಕ್ಷಣಗಳು, ಸಿಹಿ ಘ್ಹಟನೆಗಳು, ಕಹಿ ಅನುಭವಗಳು, ಸೌಹಾರ್ದ ಸಂಬಂಧಗಳು, ಮುನಿದ ಜಗಳಗಳು, ಯಶಸ್ಸಿನ ಕೀರ್ತಿ ಹಾಗು ಅವಮಾನಗಳನ್ನು ಅನುಭವಿಸಿದ್ದೇನೆ. ವಿವಿಧ ಭಾವನುಭಾವಗಳ ಸಂಮಿಶ್ರವಾದ ನನ್ನ ಜೀವನ ಒಂದು ಸುಂದರ ಪಯಣವೆಂದು ಭಾವಿಸಿದ್ದೇನೆ. ನನ್ನ ಸುಖ-ದುಃಖಗಳಲ್ಲಿ ಭಾಗಿಯಾಗಿ ನನ್ನ ಜೊತೆಗೆ ನಿಂತು ಬೆಂಬಲಿಸಿದ ಗೆಳೆಯರು, ಯಾವುದೇ ಕ್ಷಣದಲ್ಲೂ ಕೈಬಿಡದೆ ಪ್ರೀತಿ ತೊರಿಸಿದ ಮನೆಯವರು, ಕಠಿಣ ಸಂದರ್ಭದಲ್ಲಿ ಮಾರ್ಗದರ್ಶನ ನೀಡಿದ ಶಿಕ್ಷಕರು, ಎಲ್ಲರೂ ಆತ್ಮ-ಸ್ಥೈರ್ಯವನ್ನು ತುಂಬಿ, ನನ್ನ ಜೀವನದ ಅತಿ ಮುಖ್ಯ ಭಾಗಗಳಾಗಿದ್ದರೆ. ಇವರಿಗೆ ನಾನು ಎಂದಿಗೂ ಚಿರರುಣಿಯಾಗಿರುತ್ತೇನೆ. ಈಗ ನಾನು ಕ್ರೈಸ್ಟ್ ವಿಷ್ವವಿದ್ಯಾನಿಲಯದಲ್ಲಿ[೫]
ಬಿ. ಎಸ್. ಸಿ ಪದವಿಯನ್ನು ಪಡೆಯುತ್ತಿದ್ದೇನೆ. ಇದು ನನ್ನ ಬಾಳಿನ ಒಂದು ಹೊಸ ಅಧ್ಯಯನದ ಹಾಗೆ. ಹೊಸ ಓದು, ಹೊಸ ವಾತಾವರ್ಣ ಹೊಸ ಜನ, ಹೊಸ ನಿರೀಕ್ಷೆಗಳನ್ನು ಹೊತ್ತುಕೊಂಡಿರುವ ನಾನು ಈ ಓದನ್ನು ಹುರುಪಿನಿಂದ ಸುಗಮವಾಗಿ ಮುಗಿಸಲು ಇಚ್ಛಿಸುತ್ತೇನೆ. ಒಂದು ಉಜ್ವಲ ಭವಿಶ್ಯದ ಆಕಾಂಕ್ಷೆಯನ್ನಿಟ್ಟುಕೊಂಡು ಇಂದಿನ ಜೀವನವನ್ನು ಸಾಗಿಸುತ್ತಿರುವ ನಾನು, ನನ್ನ ಈ ಜೀವನವು ಒಂದು ಒಳ್ಳೆಯ ಆನುಭವವಾಗಿರಬೇಕೆಂದು ಬಯಸುತ್ತೇನೆ.