ಸದಸ್ಯ:Mamatha Mohan/ನನ್ನ ಪ್ರಯೋಗಪುಟ

ಜಾನೆಟ್ ಯೆಲ್ಲೆನ್
Born
ಜಾನೆಟ್ ಲೂಯಿಸ್ ಯೆಲ್ಲೆನ್

ಆಗಸ್ಟ್ ೧೩, ೧೯೪೬
ಬ್ರೂಕ್ಲಿನ್, ನ್ಯೂ ಯಾರ್ಕ್
Nationalityಅಮೇರಿಕನ್
Educationಬ್ರೌನ್ ವಿಶ್ವವಿದ್ಯಾಲಯ (ಬಿ.ಎ) ಯೇಲ್ಸ್ ಯೂನಿವರ್ಸಿಟಿ (ಎಂ.ಎ, ಪಿಎಚ್ ಡಿ)
Occupationಫೆಡರಲ್ ರಿಸರ್ವ್ ಅಧ್ಯಕ್ಷೆ
Spouseಜಾರ್ಜ್ ಅಕರ್ಲೋಫ್

ಜಾನೆಟ್ ಯೆಲ್ಲೆನ್

ಜಾನೆಟ್ ಲೂಯಿಸ್ ಯೆಲ್ಲೆನ್ ಅಮೇರಿಕಾದ ಅರ್ಥಶಾಸ್ತ್ರಜ್ಞೆ. ಇವರು ೨೦೧೦ರಿಂದ ೨೦೧೪ರವರಗೆ ಫೆಡರಲ್ ರಿಸರ್ವ್ ಸಿಸ್ಟಮಿನ ಗವರ್ನರ್ಗಳ ಬೋರ್ಡಿನ ಉಪ ಅಧ್ಯಕ್ಷೆಯಾಗಿ ಸೇವೆಸಲ್ಲಿಸಿ ಈಗ ಅಧ್ಯಕ್ಷೆಯಾಗಿದ್ದಾರೆ, ಇದಕ್ಕೆಲಾ ಮುಂಚೆ ಯೆಲ್ಲೆನ್ ಸ್ಯಾನ್ ಫ್ರಾನ್ಸಿಸ್ಕೊಫೆಡರಲ್ ರಿಸರ್ವ್ ಬ್ಯಾಂಕಿನ ಅಧ್ಯಕ್ಷೆ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು; ಅಮೇರಿಕಾದ ಅಧ್ಯಕ್ಷ ಬಿಲ್ ಕ್ಲಿಂಟನ್ನಿನ ಅವದಿಯಲ್ಲಿ ವೈಟ್ ಹೌಸಿನ ಆರ್ಥಿಕ ಸಲಹೆಗಾರರ ಕೌನ್ಸಿಲಿನ ಅಧ್ಯಕ್ಷೆಯಾಗಿದ್ದರು; ಮತ್ತು ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ, ಹಾಸ್ ಸ್ಕೂಲ್ ಆಫ್ ಬಿಸ್ನೆಸ್ ಎಂಬಲ್ಲಿ ವ್ಯಾಪಾರ ವಿಷಯದ ಪ್ರಾಧ್ಯಾಪಕರಾಗಿದ್ದರು.

ಬೆನ್ ಬರ್ನಾಂಕೆಯವರ ನಂತರ ಯುನೈಟೆಡ್ ಸ್ಟೇಟ್ಸ್ ಫೆಡರಲ್ ರಿಸರ್ವಿನ ಅಧ್ಯಕ್ಷೆಯಾಗಿ ಯೆಲ್ಲೇನ್ ಅವರನ್ನು ಅಮೇರಿಕಾದ ಅಧ್ಯಕ್ಷ ಒಬಾಮಾ ನಾಮನಿರ್ದೇಶನ ಮಾಡಿದರು. ಜನವರಿ ೬,೨೦೧೪ರಂದು ಅಮೇರಿಕಾದ ಸೆನೆಟ್ ಯೆಲ್ಲೆನ್ ಅವರ ನಾಮನಿರ್ದೇಶನವನ್ನು ದೃಢಪಡಿಸಿದರು. ಫೆಬ್ರವರಿ ೩,೨೦೧೪ರಲ್ಲಿ ಯೆಲ್ಲೆನ್ ಪ್ರಮಾಣವಚನ ಸ್ವೀಕರಿಸಿ ಆ ಸ್ಥಾನವನ್ನು ಅಲಂಕರಿಸಿದ ಮೊದಲ ಮಹಿಳೆಯಾದರು.

ಆರಂಭಿಕ ಜೀವನ ಮತ್ತು ಶಿಕ್ಷಣ

ಬದಲಾಯಿಸಿ

ಯೆಲ್ಲೆನ್ ಆಗಸ್ಟ್ ೧೩, ೧೯೪೬ರಂದು ನ್ಯೂಯಾರ್ಕಿನ ಬ್ರೂಕ್ಲಿನ್ ಎಂಬ ಸ್ಥಳದಲ್ಲಿ ಒಂದು ಯೆಹೂದಿ ಕುಟುಂಬದಲ್ಲಿ ಜನಿಸಿದರು.ಇವರ ತಂದೆ ಜೂಲಿಯಸ್ ಯೆಲ್ಲೆನ್ ಮತ್ತು ತಾಯಿ ಅನ್ನಾ. ಇವರ ತಂದೆ ಒಬ್ಬ ವೈದ್ಯರು. ಅವರು ಬ್ರೂಕ್ಲಿನಿನ ಫೋರ್ಟ್ ಹ್ಯಾಮಿಲ್ಟನ್ ಹೈಸ್ಕೂಲ್ನಿಂದ ಪದವೀಧರರಾಗಿದ್ದರು. ಅವರು ೧೯೬೭ರಲ್ಲಿ ಬ್ರೌನ್ ವಿಶ್ವವಿದ್ಯಾಲಯದ ಪೆಂಬ್ರೋಕ್ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. ಅವರು ೧೯೭೧ರಲ್ಲಿ ಯೇಲ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪಿಎಚ್.ಡಿ ಪದವಿ ಪಡೆದರು. ಇವರು ನೋಬೆಲ್ ಪ್ರಶಸ್ತಿ ವಿಜೇತರರಾದ ಜೇಮ್ಸ್ ಟೊಬಿನ್ ಮತ್ತು ಜೋಸೆಫ್ ಸ್ಟಿಗ್ಲಿಟ್ಜ್ ಅವರ ಮೇಲ್ವಿಚಾರಣೆಯಿಂದ "ಎಂಪ್ಲಾಯ್ಮೆಂಟ್ , ಔಟ್ಪುಟ್ ಅಂಡ್ ಕ್ಯಾಪಿಟಲ್ ಅಕ್ಯೂಮ್ಯೂಲೆಶನ್ ಇನ್ ಅನ್ ಓಪನ್ ಎಕಾನಾಮಿ: ಎ ಡಿಸ್ಯಿಕ್ವಿಲಿಬ್ರಿಯಂ ಅಪ್ರೋಚ್ " ಎಂಬ ಪ್ರೌಢಪ್ರಬಂಧದವನ್ನು ರಚಿಸಿದರು. ೧೯೭೧ರಲ್ಲಿ ಯೇಲ್ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದ ಎರಡು ಡಜನ್ ಅರ್ಥಶಾಸ್ತ್ರಜ್ಞರಲ್ಲಿ ಯೆಲ್ಲೆನ್ ಏಕೈಕ ಮಹಿಳೆಯಾಗಿದ್ದರು. ಯೆಲ್ಲೆನ್ ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಅರ್ಥಶಾಸ್ತ್ರಜ್ಞ, ಜಾರ್ಜ್ ಅಕರ್ಲೋಫ್ ಅವರನ್ನು ಮದುವೆಯಾದರು. ಅವರ ಮಗ, ರಾಬರ್ಟ್ ಅಕರ್ಲೋಫ್, ವಾರ್ವಿಕ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರವನ್ನು ಕಲಿಸುತ್ತಿದ್ದಾರೆ.

ವೃತ್ತಿ

ಬದಲಾಯಿಸಿ

ಇವರು ೧೯೭೧ರಿಂದ ೧೯೭೬ರವರಗೆ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದರು ಮತ್ತು ೧೯೭೮ರಿಂದ ೧೯೮೦ರವರಗೆ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಅಂಡ್ ಪೊಲಿಟಿಕಲ್ ಸೈನ್ಸ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿದ್ದರು. ೧೯೭೭-೧೯೭೮ರಲ್ಲಿ ಫೆಡರಲ್ ರಿಸರ್ವ್ ಸಿಸ್ಟಮಿನ ಗವರ್ನರ್ಗಳ ಬೋರ್ಡಿನ ಅರ್ಥಶಾಸ್ತ್ರಜ್ಞೆಯಾಗಿ ಕಾರ್ಯನಿರ್ವಹಿಸಿದರು.ಆರಂಭದಲ್ಲಿ ಯೆಲ್ಲೆನ್ ಹಾಸ್ ಶಾಲೆಯಲ್ಲಿ ಸಂಶೋಧನೆ ನಡೆಸುತ್ತಾ ಪೂರ್ಣ ಸಮಯ ಮತ್ತು ಅರೆಕಾಲಿಕ ಎಂಬಿಎ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ಬೃಹದರ್ಥಶಾಸ್ತ್ರ ಕಲಿಸಿದರು. ಅವರು ಈಗ ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ, ಹಾಸ್ ಸ್ಕೂಲ್ ಆಫ್ ಬಿಸ್ನೆಸ್ ಎಂಬ ಕಾಲೇಜಿನ ಹಿರಿಮೆ ಪ್ರಾಧ್ಯಾಪಕರಾಗಿದ್ದಾರೆ. ಇವರಿಗೆ ಎರಡು ಬಾರಿ ಹಾಸ್ ಸ್ಕೂಲಿನ ಮಹೋನ್ನತ ಬೋಧನೆ ಪ್ರಶಸ್ತಿ ನೀಡಲಾಗಿದೆ.

ಯೆಲ್ಲೆನ್ ಫೆಬ್ರವರಿ ೧೮, ೧೯೯೭ರಿಂದ ಆಗಸ್ಟ್ ೩, ೧೯೯೯ರವರಗೆ ಅಮೇರಿಕಾದ ಅಧ್ಯಕ್ಷ ಬಿಲ್ ಕ್ಲಿಂಟನ್ನಿನ ಅವದಿಯಲ್ಲಿ ಆರ್ಥಿಕ ಸಲಹೆಗಾರರ ಕೌನ್ಸಿಲಿನ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದರು ಮತ್ತು ಆಗಸ್ಟ್ ೧೨, ೧೯೯೪ ರಿಂದ ಫೆಬ್ರವರಿ ೧೭, ೧೯೯೭ರವರಗೆ ಫೆಡರಲ್ ರಿಸರ್ವ್ ಸಿಸ್ಟಮಿನ ಗವರ್ನರ್ಗಳ ಬೋರ್ಡಿನ ಸದಸ್ಯರಾಗಿ ನೇಮಕಗೊಂಡರು.  ವೆಸ್ಟೆರ್ನ್ ಎಕನಾಮಿಕ್ ಅಸೋಸಿಯೇಷನ್ ಇಂಟರ್ನ್ಯಾಷನಲಿನ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದಾರೆ ಮತ್ತು ಅಮೇರಿಕನ್ ಎಕನಾಮಿಕ್ ಅಸೋಸಿಯೇಶನಿನ ಮಾಜಿ ಉಪಾಧ್ಯಕ್ಷೆ ಆಗಿದ್ದಾರೆ. ಅವರು ಯೇಲ್ ಕಾರ್ಪೋರೇಶನಿನ ಒಂದು ಸದಸ್ಯೆಯಾಗಿದ್ದಾರೆ. ಜೂನ್ ೧೪,೨೦೦೪ರಿಂದ ೨೦೧೦ರವರಗೆ ಯೆಲ್ಲೆನ್ ಸ್ಯಾನ್ ಫ್ರಾನ್ಸಿಸ್ಕೊದ ಫೆಡರಲ್ ರಿಸರ್ವ್ ಬ್ಯಾಂಕಿನ ಅಧ್ಯಕ್ಷೆ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು. ಅವರು ೨೦೦೯ರಲ್ಲಿ ಫೆಡರಲ್ ಓಪನ್ ಮಾರ್ಕೆಟ್ ಕಮಿಟಿಯ (FOMC) ಒಬ್ಬ ಮತದಾನ ಸದಸ್ಯರಾಗಿದ್ದರು.

ವಾಲ್ ಸ್ಟ್ರೀಟಿನ ಅನೇಕರು ಯೆಲ್ಲೆನ್ ಅವರನ್ನು ಒಂದು "ಪಾರಿವಾಳ" ಎಂದು ಪರಿಗಣಿಸಿದ್ದಾರೆ(ಹಣದುಬ್ಬರಗಿಂತ ನಿರುದ್ಯೋಗದ ಬಗ್ಗೆ ಹೆಚ್ಚು ಕಾಳಜಿ ನೀಡಿದ ಕಾರಣ). ಯೆಲ್ಲೆನ್ ಒಬ್ಬ ಕೇನೀಸಿಯನ್ ಅರ್ಥಶಾಸ್ತ್ರಜ್ಞೆಯಾಗಿದ್ದು, ಆರ್ಥಿಕ ಚಟುವಟಿಕೆಗಳನ್ನು ಸ್ಥಿರಗೊಳಿಸಲು ವ್ಯಾಪಾರ ಚಕ್ರಕ್ಕಿಂತ ವಿತ್ತೀಯ ನೀತಿಯನ್ನು ಬಳಸಬೇಕೆಂದು ಸಮರ್ಥಿಸಿದ್ದಾರೆ. ಮೂಲತಃ ನಿರುದ್ಯೋಗ ಮತ್ತು ಹಣದುಬ್ಬರಿಕೆಯ ನಡುವಿದ್ದ ವಿಲೋಮ ಸಂಬಂಧದ ವೀಕ್ಷಣೆಯ ಆಧಾರದ ಮೇಲೆ ರಚಿಸಿದ ಫಿಲಿಪ್ಸ್ ರೇಖೆಯ ಮೇಲೆ ಯೆಲ್ಲೆನಿಗೆ ನಂಬಿಕೆ ಇದೆ.

ಗೌರವಗಳು ಮತ್ತು ಪ್ರಶಸ್ತಿಗಳು

ಬದಲಾಯಿಸಿ

ಯೆಲ್ಲೆನ್ ಅವರು ೧೯೯೭ರಲ್ಲಿ ಯೇಲ್ ವಿಶ್ವವಿದ್ಯಾಲಯದಿಂದ ವಿಲ್ಬರ್ ಕ್ರಾಸ್ ಪದಕವನ್ನು, ೧೯೯೮ರಲ್ಲಿ ಕಾನೂನು ವಿಷಯದಲ್ಲಿ ಗೌರವಾರ್ಥ ಡಾಕ್ಟರ್ ಪದವಿ ಮತ್ತು ೨೦೦೦ರಲ್ಲಿ ಬಾರ್ಡ್ ಕಾಲೇಜಿನಿಂದ ಹ್ಯೂಮೆನ್ ಲೆಟರ್ಸ್ ವಿಷಯದಲ್ಲಿ ಗೌರವಾರ್ಥ ಡಾಕ್ಟರ್ ಪದವಿ ಪಡೆದುಕೊಂಡಿದಾರೆ.ಅಕ್ಟೋಬರ್ ೨೦೧೦ರಲ್ಲಿ ಯೆಲ್ಲೆನ್ ನ್ಯಾಷನಲ್ ಅಸೋಸಿಯೇಷನ್ ಫಾರ್ ಬಿಸ್ನೆಸ್ ಎಕನಾಮಿಕ್ಸ್(NABE)ನಿಂದ ಆಡಮ್ ಸ್ಮಿತ್ ಪ್ರಶಸ್ತಿ ಸ್ವೀಕರಿಸಿದರು. ೨೦೧೨ರಲ್ಲಿ ಯೆಲ್ಲೆನ್ ಅವರು ಅಮೇರಿಕನ್ ಎಕನಾಮಿಕ್ ಅಸೋಸಿಯೇಶನ್ನಿನ ಗಣ್ಯ ಫೆಲೋ ಆಗಿ ಆಯ್ಕೆಯಾದರು. ೨೦೧೪ರಲ್ಲಿ ಫೋರ್ಬ್ಸ್ ಪತ್ರಿಕೆ ಯೆಲ್ಲೆನ್ ಅವರನ್ನು ವಿಶ್ವದ ಎರಡನೇ ಅತ್ಯಂತ ಶಕ್ತಿಶಾಲಿ ಮಹಿಳೆ ಎಂದು ಹೆಸರಿಸಿತು. ಅಕ್ಟೋಬರ್ ೨೦೧೫ರಲ್ಲಿ ಬ್ಲೂಮ್ ಬೆರ್ಗ್ ಮಾರ್ಕೆಟಿನ "೫೦ ಪ್ರಭಾವಿತ ಅರ್ಥಶಾಸ್ತ್ರಜ್ಞರು ಮತ್ತು ನೀತಿ ತಯಾರಕರ" ವಾರ್ಷಿಕ ಪಟ್ಟಿಯಲ್ಲಿ ಯೆಲ್ಲೆನ್ ಅವರು ಮೊದಲ ಸ್ಥಾನ ಪಡೆದರು.

ಅಲಂಕರಿಸಿದ ಹುದ್ದೆಗಳು

ಬದಲಾಯಿಸಿ

೨೦೧೪ರಿಂದ ಇದುವರೆಗೂ,ಫೆಡರಲ್ ರಿಸರ್ವ್ ಸಿಸ್ಟಮಿನ ಗವರ್ನರ್ಗಳ ಬೋರ್ಡಿನ ಅಧ್ಯಕ್ಷೆಯಾಗಿದ್ದಾರೆ.

೨೦೧೦-೨೦೧೪ರವರಗೆ ಫೆಡರಲ್ ರಿಸರ್ವ್ ಸಿಸ್ಟಮಿನ ಗವರ್ನರ್ಗಳ ಬೋರ್ಡಿನ ಉಪ ಅಧ್ಯಕ್ಷೆಯಾಗಿದ್ದರು.

೨೦೦೪-೨೦೧೦ರವರಗೆ ಸ್ಯಾನ್ ಫ್ರಾನ್ಸಿಸ್ಕೊದ ಫೆಡರಲ್ ರಿಸರ್ವ್ ಬ್ಯಾಂಕಿನ ಅಧ್ಯಕ್ಷೆ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು.

೧೯೯೭-೧೯೯೯ರವರಗೆ ಅಮೇರಿಕಾದ ಅಧ್ಯಕ್ಷ ಬಿಲ್ ಕ್ಲಿಂಟನ್ನಿನ ಅವದಿಯಲ್ಲಿ ಆರ್ಥಿಕ ಸಲಹೆಗಾರರ ಕೌನ್ಸಿಲಿನ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದರು.

೧೯೮೫-೨೦೦೬ರವರಗೆ ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ, ಹಾಸ್ ಸ್ಕೂಲ್ ಆಫ್ ಬಿಸ್ನೆಸ್ ಎಂಬ ಕಾಲೇಜಿನ ಪ್ರಾಧ್ಯಾಪಕರಾಗಿದ್ದರು.

೧೯೮೦-೧೯೮೫ರವರಗೆ ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ, ಹಾಸ್ ಸ್ಕೂಲ್ ಆಫ್ ಬಿಸ್ನೆಸಿನ ಸಹಾಯಕ ಪ್ರಾಧ್ಯಾಪಕರಾಗಿದ್ದರು.

೧೯೭೮-೧೯೮೦ರವರಗೆ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಅಂಡ್ ಪೊಲಿಟಿಕಲ್ ಸೈನ್ಸ್ ಎಂಬಲ್ಲಿ ಉಪನ್ಯಾಸಕರಾಗಿದ್ದರು.

೧೯೭೭-೧೯೭೮ರವರಗೆ ಅಂತರರಾಷ್ಟ್ರೀಯ ಹಣಕಾಸು ವಿಭಾಗ, ವಾಣಿಜ್ಯ ಮತ್ತು ಫೈನಾನ್ಸಿಯಲ್ ಸ್ಟಡೀಸ್ ವಿಭಾಗ, ಫೆಡರಲ್ ರಿಸರ್ವ್ ಸಿಸ್ಟಮಿನ ಗವರ್ನರ್ಗಳ ಬೋರ್ಡಿನ ಅರ್ಥಶಾಸ್ತ್ರಜ್ಞೆಯಾಗಿದ್ದರು.

೧೯೭೧-೧೯೭೬ರವರಗೆ ಹಾರ್ವರ್ಡ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಇಲಾಖೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದರು.

೧೯೭೪ರಲ್ಲಿ ಮ್ಯಾಸಚೂಸೆಟ್ಸ್ ಇನ್ಸ್ಟಿಟೂಟ್ ಆಫ್ ಟೆಕ್ನಾಲಜಿಯಲ್ಲಿ ರಿಸರ್ಚ್ ಫೆಲೋ ಆಗಿದ್ದರು.

ಆಯ್ದ ಕೃತಿಗಳು

ಬದಲಾಯಿಸಿ

ಯೆಲ್ಲೆನ್ ಅವರು ಆಲನ್ ಬ್ಲಿಂಡರ್ ಅವರೊಂದಿಗೆ ಸೇರಿ "ದಿ ಫ್ಯಾಬ್ಯುಲೆಸ್ ದೇಕೇಡ್: ಮ್ಯಾಕ್ರೋಎಕಾನೊಮಿಕ್ ಲೆಸೆನ್ಸ್ ಫ್ರಮ್ ದಿ1990" ಎಂಬ ಪುಸ್ತಕವನ್ನು ಬರೆದಿದ್ದಾರೆ. ಇದಲ್ಲದೆ ಅನೇಕ ಲೇಖನಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳು "ವಿತ್ತೀಯ ನೀತಿ: ಗುರಿಗಳು ಮತ್ತು ಸ್ಟ್ರಾಟಜಿ"(ಬಿಸ್ನೆಸ್ ಎಕನಾಮಿಕ್ಸ್ ಪತ್ರಿಕೆಯಲ್ಲಿ, ಜುಲೈ ೧೯೯೬) ಮತ್ತು "ದಿ ಕಂಟಿನ್ಯೂಯಿಂಗ್ ಇಂಪಾರ್ಟೆನ್ಸ್ ಆಫ್ ಟ್ರೇಡ್ ಲಿಬೆರಳೈಸೇಶಷನ್" (ಬಿಸ್ನೆಸ್ ಎಕನಾಮಿಕ್ಸ್ ಪತ್ರಿಕೆಯಲ್ಲಿ, ೧೯೯೮).

ಉಲ್ಲೇಖಗಳು

ಬದಲಾಯಿಸಿ

[][][][]

  1. https://www.washingtonpost.com/business/economy/new-fed-chief-janet-yellen-has-long-history-of-breaking-barriers/2014/02/02/9e8965ca-876d-11e3-833c-33098f9e5267_story.html
  2. https://www.wsj.com/articles/SB10001424127887324665604579079501712799442
  3. https://www.federalreserve.gov/aboutthefed/bios/board/yellen.htm
  4. http://www.forbes.com/pictures/lmh45lfdj/janet-yellen/