ದಯಾ ಮರಣ

ಬದಲಾಯಿಸಿ
 ಗ್ರೀಕ್ ಭಾಷೆಯಲ್ಲಿ ಇದರರ್ಥ "ಒಳ್ಳೆಯ ಸಾವು": ದಯಾಮರಣವು ಒಬ್ಬ ವ್ಯಕ್ತಿಯನ್ನು  ಉದ್ದೇಶಪೂರ್ವಕವಾಗಿ ನೋವು ಮತ್ತು ವೇದನೆಯಿಂದ  ತಗ್ಗಿಸಲು ಅವನ  ಜೀವನವನ್ನು ಕೊನೆಗೊಳಿಸುವ ಪದ್ಧತಿಯಾಗಿದೆ 

ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ದಯಾಮರಣ ಕಾನೂನುಗಳಿವೆ. ನೆದರ್ಲೆಂಡ್ಸ್ ಮತ್ತು ಫ್ಲಾಂಡರ್ಸ್ನ ರಲ್ಲಿ ದಯಾಮರಣ ಎಂದರೆ ವೈದ್ಯರಿಂದ ರೋಗಿಯ ಕೋರಿಕೆಯ ಮೇರೆಗೆ ನಡೆಸುವ ಜೀವನದ ಮುಕ್ತಾಯ.

ದಯಾಮರಣ ಸ್ವಯಂಪ್ರೇರಿತ,ಅಸ್ವಯಂಪ್ರೇರಿತ, ಅಥವಾ ಅನೈಚ್ಛಿಕ ಎಂಬ ಮೂರು ರೀತಿಯಲ್ಲಿ ವಿಂಗಡಿಸಲಾಗಿದೆ. ಸ್ವಯಂಪ್ರೇರಿತ ದಯಾಮರಣಕ್ಕೆ ಕೆಲವು ದೇಶಗಳಲ್ಲಿ ಕಾನೂನಿನ ಮನ್ನಣೆಯಿದೆ. ಅಸ್ವಯಂಪ್ರೇರಿತ ದಯಾಮರಣ ಎಲ್ಲಾ ದೇಶಗಳಲ್ಲಿ ಕಾನೂನುಬಾಹಿರವಾಗಿದೆ. ಅನೈಚ್ಛಿಕ ದಯಾಮರಣ ಸಾಮಾನ್ಯವಾಗಿ ಕೊಲೆಯೆಂದು ಪರಿಗಣಿಸಲಾಗುತ್ತದೆ. 2006 ರ ಹೊತ್ತಿಗೆ, ದಯಾಮರಣವು ಸಮಕಾಲೀನ ಬಯೋಎಥಿಕ್ಸ್ ಸಂಶೋಧನೆಯಲ್ಲಿ ಅತ್ಯಂತ ಕ್ರಿಯಾಶೀಲ ಕ್ಷೇತ್ರವಾಗಿದೆ.

  ಕೆಲವು ದೇಶಗಳಲ್ಲಿ ದಯಾಮರಣದ  ನೈತಿಕ,  ನೈತಿಕ, ಮತ್ತು ಕಾನೂನುಬದ್ಧ ಸಮಸ್ಯೆಗಳಲ್ಲಿ ಒಂದು ಭೇದದ ಸಾರ್ವಜನಿಕ ವಿವಾದವಿದೆ. ದಯಾಮರಣ ಹಕ್ಕುಗಳ ಪ್ರತಿಪಾದಕರು  ಕಡಿಮೆ ನೋವು,ದೈಹಿಕ  ಸಮಗ್ರತೆ, ಸ್ವಯಮಾಧಿಕಾರ ಮತ್ತು ವೈಯಕ್ತಿಕ ಸ್ವಾಯತ್ತತೆಯನ್ನು ಸಂರಕ್ಷಿಸುವ ಬಗ್ಗೆ ಹಾಗೂ ದಯಾಮರಣ ವಿರುದ್ದವಿರುವರು  ಜೀವನದ ಪಾವಿತ್ರ್ಯತೆ ವಾದಿಸುತ್ತಾರೆ.  ದಯಾಮರಣ ಕಾನೂನು ನೆದರ್ಲ್ಯಾಂಡ್ಸ್, ಕೊಲಂಬಿಯಾ, ಬೆಲ್ಜಿಯಂ  ಮತ್ತು ಲಕ್ಸೆಂಬರ್ಗ್ ಈ ದೇಶಗಳಲ್ಲಿ ಕಾನೂನುಬಾಹಿರ ಅಲ್ಲ.ಭಾರತದಲ್ಲಿ ದಯಾಮರಣ ಕಾನೂನು ಬಾಹಿರವಾಗಿದೆ.