ಸದಸ್ಯ:Maithri Bhat/ನನ್ನ ಪ್ರಯೋಗಪುಟ 7

ಭೋಜರಾಜ ಹೆಗ್ಡೆ

ಬದಲಾಯಿಸಿ

ಬೆಳ್ತಂಗಡಿ[] ತಾಲೂಕಿನ ಏಕೈಕ ಸ್ವಾತಂತ್ರ್ಯ ಹೋರಾಟಗಾರರಾದ ಭೋಜರಾಜ ಹೆಗ್ಡೆಯವರು 1913 ಫೆಬ್ರವರಿ 13ರಂದು ಶಾಂತಿರಾಜ ಶೆಟ್ಟಿ ಮತ್ತು ಲಕ್ಷ್ಮೀಮತಿ ಅವರ ಮಗನಾಗಿ ಪಡಂಗಡಿಯಲ್ಲಿ ಜನಿಸಿದರು. ಬಾಲ್ಯದಿಂದಲೇ ದೇಶಾಭಿಮಾನವನ್ನು ಹೊಂದಿದ ಇವರು ಅಪ್ಪಟ ಗಾಂಧಿವಾದಿ. ಇವರು ಸದಾ ಖಾದಿ ವಸ್ತ್ರಧಾರಿಯಾಗಿ, ಸರಳ ಜೀವನವನ್ನು ನಡೆಸಿದರು. ನೇರ ನಡೆ-ನುಡಿ, ಉನ್ನತ ಚಿಂತನೆ, ನಿತ್ಯ ಜೀವನದಲ್ಲಿ ಧರ್ಮದ ಅನುಷ್ಠಾನ, ಪರಹಿತ ಚಿಂತನೆ ಇವರ ಧ್ಯೇಯವಾಗಿತ್ತು.

1937ರಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಆರಂಭಿಸಿದ ಇವರು, 1942ರಲ್ಲಿ ಕ್ವಿಟ್ ಇಂಡಿಯಾ/ಭಾರತ ಬಿಟ್ಟು ತೊಲಗಿ ಚಳುವಳಿ[]ಯಲ್ಲಿ ಭಾಗವಹಿಸಲು ತನ್ನ ಹಳ್ಳಿಯ ಶಾಲಾ ಮೇಷ್ಟ್ರು ಕುಂಞ್ಞಣ್ಣ ರೈ ಜೊತೆಗೆ ಮಂಗಳೂರಿ[]ಗೆ ಸೈಕಲ್ ನಲ್ಲಿ ತೆರಳಿ ಕ್ಯಾಲಿಕೋ ಮಿಲ್ ತಯಾರಿಸಿದ ಬಟ್ಟೆಗಳನ್ನು ಹರಿದು ಬ್ರಿಟೀಷ್ ಆಡಳಿತದ ವಿರುದ್ಧ ಪ್ರತಿಭಟಿಸಿದರು.

ಮೊರಾರ್ಜಿ ದೇಸಾಯಿ, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾಗಾಂಧಿ ಮತ್ತು ಎಸ್.ನಿಜಲಿಂಗಪ್ಪ ಅವರ ಭದ್ರತಾ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿದ ಇವರು, ಕಾಂಗ್ರೆಸ್ ಸಿಂಡಿಕೇಟ್ ಸದಸ್ಯರಾಗಿ, ಉಜಿರೆ ರಬ್ಬರ್ ಸೊಸೈಟಿ ಮುಂಡಾಜೆಯ ಶತಾಬ್ದಿ ವಿದ್ಯಾಲಯ ಸಮಿತಿಯ ಉಪಾಧ್ಯಕ್ಷರಾಗಿ, ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆಯಲ್ಲಿ ಸಹಕಾರಿ ಸಂಘದ ನೌಕರನಾಗಿ ಹಾಗೂ ಭಾರತದ ರಾಷ್ಟ್ರೀಯ ಸೇವಾದಳದಲ್ಲಿ ಸಕ್ರೀಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಬಿ. ಡಿ. ಜತ್ತಿ, ಎಸ್. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ರಾಮಕೃಷ್ಣ ಹೆಗ್ಗಡೆ ಸೇರಿದಂತೆ ಅನೇಕ ರಾಜಕೀಯ ನಾಯಕರ ನಿಕಟ ಸಂಪರ್ಕವನ್ನು ಹೊಂದಿದ್ದ ಇವರು ತುರ್ತು ಪರಿಸ್ಥಿತಿ[] ಸಂದರ್ಭ ಜೈಲುವಾಸವನ್ನು ಅನುಭವಿಸಿದ್ದರು.

ಇವರು ಅಹಮದಾಬಾದ್[] ನಲ್ಲಿ ಮೊರಾರ್ಜಿ ದೇಸಾಯಿ[]ಯವರಿಂದ ಗ್ರಾಮೋದ್ಧಾರಕ ಪ್ರಶಸ್ತಿ ಹಾಗೂ ಮೂಡಬಿದಿರೆ[] ಜೈನ ಮಠದ ವತಿಯಿಂದ ತ್ಯಾಗಿ ಸೇವಾರತ್ನ ಬಿರುದನ್ನು ಪಡೆದಿದ್ದಾರೆ.

ಉಲ್ಲೇಖಗಳು

ಬದಲಾಯಿಸಿ
  1. https://kn.wikipedia.org/s/88e
  2. https://kn.wikipedia.org/s/6ax
  3. https://kn.wikipedia.org/s/15q
  4. https://kn.wikipedia.org/s/2c9m
  5. https://kn.wikipedia.org/s/263
  6. https://kn.wikipedia.org/s/oi
  7. https://kn.wikipedia.org/s/ayj