ರವಿಂದ್ರ ಜಡೇಜ (ಕ್ರಿಕೇಟ್ ಆಟಗಾರ)

ರವೀಂದ್ರ ಜಡೇಜ. ಇವರು ೬,ಡಿಸೆಂಬರ್ ೧೯೮೮ ರಂದು 'ನವಗಂಘೇಡ್, ಗುಜ್ರಾತ್ನಲ್ಲಿ ಜನಿಸಿದ್ದರು. ಇವರ ಪೂರ್ಣ ಹೆಸರು ರವೀಂದ್ರಸಿನ್ನ ಅನಿರುದ್ಸಿನ್ನ ಜಡೇಜ. ಇವರ ತಂದೆಯ ಹೆಸರು ಅನಿರುದ್ಧ್ಸಿನ್ನ ಹಾಗೂ ತಾಯಿಯ ಹೆಸರು ಲತ. ಇವರು ಮೂಲತ:ಹ ರಜ್ ಪುಟ್ ಕುಟುಂಬಕ್ಕೆ ಸೇರಿದವರು. ಇವರ ತಂದೆ ಅನಿರುದ್ದ್ ಸಿನ್ನರವರು ಒಂದು ಖಾಸಗಿ ಸೆಕ್ಯೂರಿಟಿ ಅಜೇನ್ಸಿಯಾಗಿ ಕೆಲಸ ಮಾಡುತ್ತಿದ್ದರು. ಇವರ ಸಹೋದರಿಯರ ಹೆಸರು "ನೈನ",ಹಾಗೂ "ಪದ್ಮಿನಿ" ಇವರು ನರ್ಸ್ ಆಗಿ ವ್ಯಾಸಾಂಗ ಮಾಡುತ್ತಿದ್ದರು.

ಜಡೇಜರವರು ಶ್ರೀಮಂತರಾಗಿರದ್ದಿದ್ದ ಕಾರಣ ಇವರ ಕ್ರಿಕೆಟ್ ಕೋಚಿಂಗೆ ಗುರುಗಳಾದ 'ಚೌಹಾನ್','ನೌನಗರ್ ಕ್ರಿಕೆಟ್ ಅಕ್ಯಾಡೆಮಿ' ಅಲ್ಲಿ ಸೇರಿಸಿ ಸಹಾಯ ಮಾಡಿದರು. ಇವರ ತಾಯಿ ೨೦೦೫ರಲ್ಲಿ ಒಂದು ಆಕ್ಸಿಡೆನ್ಟ್ ನಲ್ಲಿ ಸತ್ತುಹೋದರು. ತಾಯಿಯ ಸಾವಿನಿಂದ ನೊಂದ ಇವರು ಕ್ರಿಕೆಟನ್ನು ತ್ಯಜಿಸಲು ಮನಸ್ಸು ಮಾಡಿದರು. ನಂತರ ಗುರುಗಳ ಸಲಹೆಯಿಂದ ಮುಂದುವರಿಸಿದರು.

ಹವ್ಯಾಸ

ಬದಲಾಯಿಸಿ

ರವೀಂದ್ರ ಜಡೇಜರವರಿಗೆ ಕುದುರೆಗಳು ಹಾಗೂ ರೇಸ್ ಕಾರ್ಗಳಲ್ಲಿ ಬಹಳ ಆಸಕ್ತಿ. ಇವರು ನಮ್ಮ ಸಂಪ್ರದಾಯವನ್ನು ಪಾಲಿಸಿ ಹಾಗೂ ಗೌರವಿಸುತ್ತಾರೆ. ಇವರು ಮನೆಯಲ್ಲಿ ತಮ್ಮ ತಂದೆ ತಾಯಿ ತೋರಿಸಿದ ಹುಡುಗಿಯನ್ನೇ ಮದುವೆಯಾಗುತ್ತಾರೆ.

ಜಡೇಜರವರು ಮನೆಯಲ್ಲಿ ತೋರಿಸಿದ ಹುಡುಗಿಯನ್ನು ವಿವಾಹವಾದರು. ಪತ್ನಿ ರವಿಬ ಸೋಲಂಕಿಯವರನ್ನು ೧೭ಎಪ್ರಿಲ್,೨೦೧೬ರಲ್ಲಿ ವಿವಾಹವಾಗಿ ಹೊಸ ಜೀವನ ಪ್ರಾಂಭಿಸಿದರು.

ಕ್ರಿಕೆಟ್ ಜೀವನ

ಬದಲಾಯಿಸಿ
ರವೀಂದ್ರ ಜಡೇಜರವರನ್ನು ತಮ್ಮ ೧೬ರನೇ ವಯಸ್ಸಿನಲ್ಲೇ ಕ್ರಿಕೇಟ್ ಆಡಲು ಆಯ್ಕೆಯಾಗಿದ್ದರು. ಆ ಟೂರ್ನಿಯಲ್ಲಿ ಭಾರತವು ೨ನೇ ಸ್ತಾನ ಪಡೆದಿದ್ದಕ್ಕೆ ರವೀಂದ್ರ ಜಡೇಜರವರು ಆಕರ್ಷಕ ಆಟಗಾರರಾಗಿ ಕಂಡರು. ಜಡೇಜರವರು ಎಡಗೈಯ ಬ್ಯಾಟ್ಸ್ ಮ್ಯಾನ್ ಹಾಗೂ ನಿಧಾನ ವೇಗದ ಎಡಗೈಯ ಬೌಲರ್ ಆಗಿದ್ದು, ಆಲ್ ರೌಂಡರಾಗಿ ಇರುವರು. ಜಡೇಜರವರು ಭಾರತದ ಟೀಮ್ ನಲ್ಲಿ ಸೇರಿದ ನಂತರ ಅವರು ಆಡಿದ ಮೊದಲ ಪಂದ್ಯ 'ದುಲೀಪ್ ಟ್ರೋಫಿhttps://en.wikipedia.org/wiki/Ravindra_Jadejaಯ'ದ್ದಾಗಿತ್ತು. ಕ್ರಿಕೇಟ್ ಇತಿಹಾಸದ ೨೦೧೨ರಲ್ಲಿ, ಮೊದಲ ಮೂರು ೧೦೦ ಭಾರಿಸಿದ  ೮ನೇ ಆಟಗಾರ ಹಾಗೂ ಭಾರತದ ಮೊದಲ ಆಟಗಾರರಾಗಿ ಹೆಮ್ಮೆಯನ್ನು ಮೆರೆದರು. ಜಡೇಜರವರು ತಮ್ಮ ಪ್ರಮುಖ ಆಲ್ರೌಂಡರ್ ವ್ಯಕ್ತಿತ್ವದಿಂದ 'ರಣಜಿ ಟ್ರೋಫಿ'ಯಲ್ಲಿ ೭೩೯ರನ್ ಗಳಿಗೆ ೪೨ ವಿಕೆಟ್ಗಳನ್ನು ಪಡೆದಿದ್ದರು. ಫೆಬ್ರವರಿ ೮,೨೦೦೯ ರಂದು ಭಾರತವು ಅಂತರಾಷ್ತ್ರೀಯ ಪಂದ್ಯವನ್ನು ಸೋತಿದ್ದರೂ ರವೀಂದ್ರ ಜಡೇಜರವರು ೬೦* ರನ್ ಗಳಿಸಿದ್ದರು. ಒಮ್ಮೆ ಭಾರತವು ಇಂಗ್ಲೇಡ್ ವಿರುದ್ದದ ಪಂದ್ಯ ಆಡುವಾಗ ಜಡೇಜರವರು ಪಂದ್ಯವನ್ನು ಗೆಲ್ಲಿಸಲಾಗದೆ ಎಲ್ಲರ ಕೆಂಗಣ್ಣೀಗೆ ಗುರಿಯಾಗಿ  ಟೀಕೆಗೊಳಗಾದರು. ಇದರಿಂದ ಜಡೇಜರವರು ೭ನೇ ಸ್ಥಾನಕ್ಕೆ ಇಳಿದಿದ್ದರು. ನಂತರ ಕಟ್ಟಕ್ ನಲ್ಲಿ ನಡೆದ ಪಂದ್ಯದಲ್ಲಿ ಜಡೇಜರವರು ೪ ವಿಕೆಟ್ಗಳನ್ನು ಪಡೆದು ಪಂದ್ಯ ಪುರುಷ ಪ್ರಶಸ್ಠಿಗೆ ಭಾಜೀನರಾದರು. ಇವರು ರಣಜಿ ಟ್ರೋಫಿಯಲ್ಲಿ ೪ ಪಂದ್ಯಗಳಲ್ಲಿ ಎರಡು ಬಾರಿ ೩೦೦ರಕ್ಕು ಹೆಚ್ಚು ರನ್ಗಳನ್ನು ಗಳಿಸಿದ್ದರಿಂದ ಇವರು ಭರತದ ಮುಖ್ಯ ೧೫ ಆಟರಗಾರರಲ್ಲಿ ಒಬ್ಬರಾದರು. ಇಂಗ್ಲೇಡ್ ವಿರುದ್ದದ ೨ನೇ ಓ.ಡಿ.ಐ. ಪಂದ್ಯದ ವೇಳೆ ೩೭ಬಾಲ್ ಗಳಲ್ಲಿ ೬೧ ರನ್ ಗಳಿಸಿ ೨ ವಿಕೆಟ್ ಪಡೆದು ಪಂದ್ಯ ಪುರುಷ ಪ್ರಶಸ್ಠಿಗೆ ಭಾಜೀನರಾದರು'.ಐ.ಸಿ.ಸಿ. ಚಾಂಪಿಯನ್ಸ್ ಟ್ರೋಫಿ'ಯ ಟೂರ್ನಿಯಲ್ಲಿ ಮೊತ್ತ ೧೨ ವಿಕೆಟ್ಗಳನ್ನು ಪಡೆದು 'ಬಂಗಾರದ ಬಾಲ್' ಪಡೆಯಲು ಭಾಗ್ಯರಾದರು. ನಂತರ ೨೦೧೩ರಲ್ಲಿ ಇವರು ಒ.ಡಿ.ಐನ ನಂ.೧ ಆಟಗಾರರಾದರು. ಇದರಿಂದ ಅನಿಲ್ ಕುಂಬ್ಲೆ, ಕಪಿಲ್ ದೇವ್, ಮತ್ತು ಮನಿಂದರ್ ಸಿಂಗ್ ರ ಸ್ಥಾನ ತುಂಬಿಸಿದರು. ೨೦ ಜುಲೈ, ೨೦೧೪ ರಂದು ಇಂಗ್ಲೇಡ್ ಭಾರತಕ್ಕೆ ೩೧೯ ರನ್ಗಳ ಬಾರಿ ಮೊತ್ತದ ಗುರಿಯನ್ನು ಕೊಟ್ಟಾಗ, ಜಡೇಜರವರು ತಮ್ಮ ಟೆಸ್ಟ್ ಕರಿಯರ್ನ ಮೇಡಿನ ೫೦ ಮಾಡಿಕೊಂಡು ಮೊತ್ತ ೬೮ ರನ್ ಗಳಿಸಿ, ಪಂದ್ಯ ವನ್ನು ಗೆಲ್ಲಿಸಿ ಕೊಟ್ಟರು. ಇನ್ನೂ ರವೀಂದ್ರ ಜಡೇಜರವರ ಇಂಡಿಯನ್ ಫ್ರಿಮಿಯರ್ ಲೀಗ್ https://en.wikipedia.org/wiki/Ravindra_Jadejaನ  ಕ್ರಿಕೆಟ್ ಕರಿಯರ್ ಬಗ್ಗೆ ಮಾತನಾಡ ಬೇಕೆಂದರೆ, ರವೀಂದ್ರ ಜಡೇಜರವರು ಮೊದಲಿಗೆ 'ರಾಜಸ್ಥಾನ ರಾಯಲ್ಸ್'  ತಂಡದಲ್ಲಿ ಆಯ್ಕೆಯಾಗಿದ್ದರು. ೨೦೦೮ರಲ್ಲಿ ತಂಡದ ಗೆಲುವಿಗೆ ಮುಖ್ಯ ಪಾತ್ರವಹಿಸಿ, ರಾಜಸ್ಥನವನ್ನು ಪಂಜಾಬ್ ವಿರುದದ್ದ ಪಂದ್ಯದಲ್ಲಿ ತಮ್ಮ ತಂಡವನ್ನು ಗೆಲ್ಲಿಸಿದರು. ೨೦೦೮ರಲ್ಲಿ ಜಡೇಜರವರು ೧೩೫ರನ್ಗಳಾನ್ನು ೧೩೧.೦೬ ಸ್ಟ್ರೈಕ್ ರೇಟ್ಗಳಲ್ಲಿ ಗಳಿಸಿದ್ದರು. ಇವರ ಈ ಸೀಸನ್ನ ಉತ್ತಮ ರನ್ ೩೬* ಪಂಜಾಬ್ ವಿರುದ್ದದ ಪಂದ್ಯದಲ್ಲಾಗಿತ್ತು. ನಂತರ ೨೦೦೯ರ ಸೀಸನ್ನಲ್ಲಿ ೧೧೦.೯೦ ರೇಟ್ನಲ್ಲಿ ೨೯೫ರನ್ಗಲಾನ್ನು ಗಳಿಸಿದ್ದರು. ಇದರಿಂದ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಶೇನ್ ವಾಟ್ಸನ್ ಜಡೇಜರವರನ್ನು 'ಸೂಪರ್ ಸ್ಟಾರ್' ಎಂದು ಹೊಗಳಿದ್ದರು. ನಂತರ ೨೦೧೧ರಲ್ಲಿ  ಕೊಚ್ಚಿ ಟಸ್ಕರ್ಸ್ ಕೇರಳ ತಂಡವು ಜಡೇಜಾರವರನ್ನು ಕರೀದಿ ಮಾಡಿಕೊಂಡರು. ಚೆನೈ ತಂಡವು ಮೊತ್ತ ೯.೮ ಕೋಟಿಗಳಿಗೆ ಜಡೇಜರವರನ್ನು ತಮ್ಮ ತಂಡಕ್ಕೆ ಕರೆ ತಂದರು. ಆ ಸೀಸೆನ್ ನ ಅತಿ ಮೊತ್ತ ದುಬಾರಿ ಆಟಗಾರರಾಗಿ ಜಡೇಜರವರು ಕಾಣಿಸಿಕೊಂಡರು, ಆ ಸೀಸೆನ್ ನ ಎರಡನೇ ಪಂದ್ಯದಲ್ಲೇ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆಲ್ರೌಂಡರ್ ಆಟವಾಡಿ ಪಂದ್ಯ ಪುರುಷ ಪ್ರಶಸ್ತಿಗೆ ಭಾಜೀನವಾದರು. ೨೦೧೫ರ ಸೀಸನ್ನ ಐ.ಪಿ.ಎಲ್. ಪಂದ್ಯದಲ್ಲಿ ತಾಯಂದಿರ ದಿನದಂದು ಜಡೇಜರವರು ರಾಜಸ್ಥಾನ ವಿರುದ್ದದ ಪಂದ್ಯದಲ್ಲಿ ೪ ವಿಕೆಟ್ಗಳನ್ನು ಪಡೆದು ಮೆರೆದರು.

೨೦೧೩ರಲ್ಲಿ ಸುನಿಲ್ ಗವಾಸ್ಕರ್ರವರು ಜಡೇಜರ ಹಾಗೂ ಪುಜಾರರನ್ನು ಸೀರಿಸಿ ಮುಂದಿನ ಯುವ ಪೀಳಿಗೆಯವರಿಗೆ ದಾರಿ ದೀಪವೆಂದು ಹೊಗಳಿದರು. ಆಸ್ತ್ರಾಲೀಯ ವಿರುದ್ದದ ಟೆಸ್ಟ್ ಪಂದ್ಯಗಳಲ್ಲಿ ೪-೦ ಗೆಲುವನ್ನು ತಂದು ಕೊಟ್ಟ ಜಡೇಜರವರು ಪತ್ರಿಕೋದ್ಯಮಿಗಳಿಂದ ಹೊಗಳಿಕೆಗೆ ಪಾತ್ರರಾದರು ಹಾಗೂ ಗವಾಸ್ಕರ್ರವರು ಜಡೇಜರನ್ನು 'ಒನ್ ಅಫ್ ದೀ ಆರ್ಕಿಟ್ಕ್ತ್ಸ್ ಆಫ್ ದ ವಿನ್' ಎಂದು ಹೊಗಳಿದರು. ರವೀಂದ್ರ ಜಡೇಜರವರು ೨೦೧೩ರಲ್ಲಿ ಐ.ಸಿ.ಸಿ ವರ್ಡ್ ಕಫ್ಅವಾರ್ಡ್ ಪಡೆದಿದ್ದಾರೆ. ಹಾಗೂ ಗವಾಸ್ಕರ್ ಟ್ರೋಫಿಯ ಪಂದ್ಯ ಪುರುಷಾ ಪ್ರಶಸ್ತಿಯನ್ನು ಪಡೇದಿದ್ದರೆ.

ಉಲ್ಲೇಖ

ಬದಲಾಯಿಸಿ


https://en.wikipedia.org/wiki/Ravindra_Jadeja https://en.wikipedia.org/wiki/Ravindra_Jadeja