ಸದಸ್ಯ:Maadhavapriyaa/ ಅಡಚಣೆ ಮಾಡಬೇಡಿ ನೋಂದಾವಣೆ (Do Not Disturb Registry)
ರಾಷ್ಟ್ರೀಯ ಗ್ರಾಹಕರ ಆದ್ಯತೆ ನೋಂದಣಿ ಅಂದರೆ (National Customer Preference Register) (NCPR) ನ ಹಿಂದಿನ ಹೆಸರು ರಾಷ್ಟ್ರೀಯ ಅಡಚಣೆ ಮಾಡಬೇಡಿ ನೋಂದಾವಣೆ ಅಂದರೆ National Do Not Call Registry (NDNC) ಎಂಬುದಾಗಿತ್ತು. ಇದು ಭಾರತೀಯ ಗ್ರಾಹಕರಿಗೆ ತಾವು ಸ್ವೀಕರಿಸುವ ಟೆಲಿ ಮಾರ್ಕೆಟಿಂಗ್ ಕರೆಗಳನ್ನು ಮಿತಿಗೊಳಿಸುವ ಅವಕಾಶವನ್ನು ಕಲ್ಪಿಸುವ ಉದ್ದೇಶ ಹೊಂದಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (TRAI) ಭಾರತದಲ್ಲಿ ತಂತಿರಹಿತ ಸಂವಹನ ಸೇವಾ ಪೂರೈಕೆದಾರರಿಗಾಗಿ ವಿವಿಧ ನೀತಿಗಳು ಮತ್ತು ನಿಯಮಾವಳಿಗಳನ್ನು ವ್ಯಾಖ್ಯಾನಿಸುವ ಭಾರತೀಯ ಸರ್ಕಾರಿ ಸಂಸ್ಥೆಯಾಗಿದೆ. TRAI ನಿಯಮಾವಳಿಯ ಪ್ರಕಾರ, ಭಾರತದಲ್ಲಿನ ಪ್ರತಿಯೊಬ್ಬ ಮೊಬೈಲ್ ಸೇವಾ ಪೂರೈಕೆದಾರರು ರಾಷ್ಟ್ರೀಯ ಗ್ರಾಹಕರ ಆದ್ಯತೆ ನೋಂದಣಿ (NCPR) ಯ ವ್ಯವಸ್ಥೆ ಮಾಡಬೇಕಾಗುತ್ತದೆ. ದಿನನಿತ್ಯದ ಬಳಕೆಯಲ್ಲಿ, ವಿವಿಧ ಸೇವಾ ಪೂರೈಕೆದಾರರು ಇದನ್ನು ಅಡಚಣೆ ಮಾಡಬೇಡಿ (DND) ನೋಂದಾವಣೆ ಎಂದೂ ಉಲ್ಲೇಖಿಸುತ್ತಾರೆ . ಟೆಲಿಮಾರ್ಕೆಟರ್ಗಳಿಗೆ TRAIನಲ್ಲಿ ನೋಂದಾಯಿಸಿಕೊಂಡ ನಂತರ, NCPR ಅನ್ನು ಪ್ರವೇಶಿಸಲು ಅನುಮತಿ ದೊರೆಯುತ್ತದೆ.
ನೋಂದಾವಣಿ ವ್ಯವಸ್ಥೆಗೆ ಸಂಬಂಧಿಸಿದ ಅಧಿಕೃತ ನಿಯಮಗಳು ಮತ್ತು 'ಅಡಚಣೆ ಮಾಡಬೇಡಿ' ನೋಂದಣಿಯಲ್ಲಿ ದಾಖಲಿಸುವ ವಿಧಾನದ ಬಗ್ಗೆ ವಿವರವನ್ನು TRAI ವೆಬ್‌ಸೈಟ್‌ನಲ್ಲಿನ ಗ್ರಾಹಕರ ಆದ್ಯತೆಯ ಪೋರ್ಟಲ್ [೧] ನಲ್ಲಿ ಪಡೆಯಬಹುದು. ಈ ಪೋರ್ಟಲ್ ಅಥವಾ ಇತರೆ ಯಾವುದರ ಮೂಲಕ ನೋಂದಣಿಯ ವಾಸ್ತವಿಕ ಆಡಳಿತವನ್ನು TRAI ನಿರ್ವಹಿಸುವುದಿಲ್ಲ. ಆಡಳಿತವನ್ನು ಪ್ರತ್ಯೇಕ ಸೇವಾ ಪೂರೈಕೆದಾರರಿಗೆ ವಹಿಸಲಾಗಿದೆ.
ಪರಿಚಯ
ಬದಲಾಯಿಸಿಭಾರತೀಯ ದೂರಸಂಪರ್ಕ ಉದ್ಯಮವು ಸರಿಸುಮಾರು ೯೦೦ ಮಿಲಿಯನ್ (೯೦ ಕೋಟಿ) ಚಂದಾದಾರರನ್ನು ಹೊಂದಿದ್ದು, ವಿಶ್ವದ ಎರಡನೇ ಅತಿದೊಡ್ಡ ತಂತಿರಹಿತ (ವೈರ್‌ಲೆಸ್) ಮಾರುಕಟ್ಟೆಯಾಗಿದೆ. ಕಡಿಮೆ ದರಗಳು ಹಾಗೂ ಗ್ರಾಹಕರಿಗೆ ನೇರವಾಗಿ ತಲುಪಬಹುದಾದ ಕಾರಣದಿಂದಾಗಿ, ಸಂದೇಶ ಕಳುಹಿಸುವಿಕೆ ಮತ್ತು ಕರೆ ಮಾಡುವಿಕೆ - ಇವುಗಳು ಸೇವೆಗಳನ್ನು ಹಾಗೂ ಉತ್ಪನ್ನಗಳನ್ನು ಮಾರಾಟ ಮಾಡುವ ಅತ್ಯಂತ ಕಡಿಮೆ ವೆಚ್ಚದ ವಿಧಾನಗಳಲ್ಲಿ ಸೇರಿವೆ. ಗೌಪ್ಯತೆಯ ವಿಚಾರದಲ್ಲಿ ಗಂಭೀರ ಸಮಸ್ಯೆಗಳನ್ನು ಹುಟ್ಟು ಹಾಕುವುದರೊಂದಿಗೆ, ಟೆಲಿಮಾರ್ಕೆಟಿಂಗ್ ಗ್ರಾಹಕರಿಗೆ ಅಧಿಕ ತೊಂದರೆ ಉಂಟು ಮಾಡಿದೆ.
ಹೆಚ್ಚಾಗುತ್ತಿರುವ ಸಮಸ್ಯೆಗಳನ್ನು ಸಮಗ್ರವಾಗಿ ತಡೆಗಟ್ಟವುದರೊಂದಿಗೆ ಅಪೇಕ್ಷಿಸದ ವಾಣಿಜ್ಯ ಕರೆಗಳು ಮತ್ತು ಸಂದೇಶಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಸಲುವಾಗಿ, TRAI ದೂರಸಂಪರ್ಕ ವಾಣಿಜ್ಯ ಸಂವಹನ ಗ್ರಾಹಕರ ಆದ್ಯತೆ ನಿಯಮಗಳು, ೨೦೧೦ ರ ನಿಯಮಾವಳಿಗಳನ್ನು ಸೂಚಿಸಿದೆ. ಈ ನಿಯಮಾವಳಿಗಳ ಎಲ್ಲ ನಿಬಂಧನೆಗಳು ೨೭ನೇ ಸೆಪ್ಟೆಂಬರ್ ೨೦೧೧ ರಿಂದ ಜಾರಿಗೆ ಬಂದಿವೆ.
ದೂರಸಂಪರ್ಕ ವಾಣಿಜ್ಯ ಸಂವಹನ ಗ್ರಾಹಕರ ಆದ್ಯತೆ ಪೋರ್ಟಲ್ ಇದು "ದೂರಸಂಪರ್ಕ ವಾಣಿಜ್ಯ ಸಂವಹನ ಗ್ರಾಹಕರ ಆದ್ಯತೆ ನಿಯಮಗಳು, ೨೦೧೦" ನಲ್ಲಿ ಸೂಚಿಸಲಾಗಿರುವ ವಿವಿಧ ಮಾಹಿತಿಯನ್ನು ಒಳಗೊಂಡಿರುವ ದತ್ತಾಂಶ ಸಂಗ್ರಹವಾಗಿದೆ.
NCPR ನೋಂದಣಿಗಾಗಿ ಎಲ್ಲ ಮೊಬೈಲ್ ನಿರ್ವಾಹಕರುಗಳಿಂದ ಬರುವ ಪ್ರತಿಯೊಂದೂ ವಿನಂತಿಗಳ ದಾಖಲೆಗಳನ್ನು TRAI ನಿರ್ವಹಿಸುವುದರಿಂದ, ಯಾವುದೇ ಮೊಬೈಲ್ ಚಂದಾದಾರರ NCPR ಸ್ಥಿತಿಗತಿಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು.[೨] [೩][೪]
ಉಲ್ಲೇಖಗಳು
ಬದಲಾಯಿಸಿ
- ↑ Telecom Commercial Communications Customer Preference Portal, on TRAI website.
- ↑ "DND/NDNC Status". Mobile Number Tracker.
- ↑ "Do Not Disturb". Mobile Number Tracker India.
- ↑ "DND Status". TRAI.