ಸದಸ್ಯ:MOHAN K B 12/sandbox
ಮೊಬೈಲ್ ಫೋನ್ (ಚರ ದೂರವಾಣಿ
ಇದನ್ನು ಸೆಲ್‌ಫೋನ್ ಅಥವಾ ಹ್ಯಾಂಡ್‌ಫೋನ್ ಎಂತಲೂ ಕರೆಯಲಾಗಿದೆ)ಎಂಬುದು ಸಂವಹನಕ್ಕೆ ಬಳಸಲಾಗುವ ಒಂದು ವಿದ್ಯುನ್ಮಾನ ಉಪಕರಣ ಸಾಧನ. ಸೆಲ್ ಸೈಟ್ಸ್ ಎನ್ನಲಾದ 'ವಿಶಿಷ್ಟ ಬೇಸ್ ಸ್ಟೇಷನ್'ಗಳ 'ಸೆಲ್ಯುಲರ್ ಜಾಲ'ದ ಮೂಲಕ ಮೊಬೈಲ್ ದೂರಸಂವಹನ(ಸೆಲ್ ಸೈಟ್ಸ ಎಂದೂ ಕರೆಯಲಾಗುತ್ತದೆ) ( ಮೊಬೈಲ್ ಫೋನ್ ವ್ಯವಸ್ಥೆ, ಪಠ್ಯ ಸಂದೇಶ,ಮಾಹಿತಿ ಅಥವಾ ದತ್ತಾಂಶ ರವಾನೆ) ಮಾಡಲು ಈ ದೂರವಾಣಿಯನ್ನು ಬಳಸಲಾಗುತ್ತದೆ. ಮೊಬೈಲ್‌ಗಳು ನಿಸ್ತಂತು (ಕಾರ್ಡ್‌ಲೆಸ್) ದೂರವಾಣಿಗಳಿಗಿಂತ ಭಿನ್ನವಾಗಿವೆ. ನಿಸ್ತಂತು ದೂರವಾಣಿಗಳು ಸೀಮಿತ ವ್ಯಾಪ್ತಿಯಲ್ಲಿ (ಉದಾಹರಣೆಗೆ, ಮನೆ ಅಥವಾ ಕಚೇರಿ ವ್ಯಾಪ್ತಿಯೊಳಗೆ)ಸ್ಥಿರ ದೂರವಾಣಿ ಸಂಪರ್ಕದ ಮೂಲಕ ಗ್ರಾಹಕರಿಗೆ ಸೇವೆಯನ್ನೊದಗಿಸುತ್ತವೆ. ಸ್ಥಿರ ದೂರವಾಣಿ ಸಂಪರ್ಕದ ಚಂದಾದಾರರಿಗೆ ಈ ಸೇವೆ ಲಭ್ಯವಿದೆ.ಜೊತೆಗೆ ಸೆಟಲೈಟ್ ಫೋನ್ಸ್ ಮತ್ತು ರೇಡಿಯೋ ಫೋನ್ಸ್ ಮೂಲಕವೂ ಕಾರ್ಯನಿರ್ವಹಿಸುವ ಇದಕ್ಕಾಗಿ ಒಂದು'ಬೇಸ್ ಸ್ಟೇಷನ್' ಸಹ ಉಂಟು ಮತ್ತು ರೇಡಿಯೋ ದೂರವಾಣಿಗಳಿಗಿಂತಲೂ ಇವು ವಿಭಿನ್ನ. ರೇಡಿಯೊ ದೂರವಾಣಿಗಿಂತ ಭಿನ್ನವಾಗಿರುವ ಸೆಲ್‌ಫೋನ್ ಸಂಪೂರ್ಣ ಫುಲ್ ಡ್ಯುಪ್ಲೆಕ್ಸ್)ಸಂವಹನ ವ್ಯವಸ್ಥೆಯನ್ನು ಒದಗಿಸುತ್ತದೆ. ಜೊತೆಗೆ, ಸಾರ್ವಜನಿಕ ಸ್ಥಿರ ಮೊಬೈಲ್ ಜಾಲವೊಂದಕ್ಕೆ ಸ್ವಯಂಚಾಲಿತ ಕರೆ ಮಾಡುವ, ಅಥವಾ ಅದರಿಂದ ಪೇಜಿಂಗ್ ಸೇವೆಯನ್ನು ಕಲ್ಪಿಸುತ್ತದೆ. ಇದಲ್ಲದೆ, ದೂರವಾಣಿ ಕರೆ ಸಮಯದಲ್ಲಿ ಬಳಕೆದಾರ ಒಂದು 'ಸೆಲ್ ಬೇಸ್ ಸ್ಟೇಷನ್' ವ್ಯಾಪ್ತಿಯಿಂದ ಇನ್ನೊಂದಕ್ಕೆ ಹೋದಾಗ ಹ್ಯಾಂಡಾಫ್ (ಹ್ಯಾಂಡೋವರ್)(ಒಬ್ಬರಿಂದ ಮತ್ತೊಬ್ಬರಿಗೆ ಬದಲಾಯಿಸುವ) ವ್ಯವಸ್ಥೆಯನ್ನೂ ಕಲ್ಪಿಸುತ್ತದೆ. ಮೊಬೈಲ್ ಜಾಲ ನಿರ್ವಾಹಕರ ನಿಯಂತ್ರಣದಲ್ಲಿರುವ ಸ್ವಿಚಿಂಗ್ ಪಾಯಿಂಟ್‌ಗಳುಳ್ಳ ಸೆಲ್ಯುಲರ್ ಜಾಲ ಮತ್ತು ಬೇಸ್ ಸ್ಟೇಷನ್‌ಗಳಿಗೆ ಪ್ರಸ್ತುತ ಸೆಲ್ ಫೋನ್‌ಗಳಲ್ಲಿ ಬಹಳಷ್ಟು ದೂರವಾಣಿಗಳು ಸಂಪರ್ಕ ಪಡೆಯುತ್ತವೆ.