ಸದಸ್ಯ:MANUPSHPA/ನನ್ನ ಪ್ರಯೋಗಪುಟ

ದೊಡ್ಡ ಭಾಗನಹಳ್ಳಿ ಗ್ರಾಮ " ಈ ಗ್ರಾಮವು ಹಾಸನ ತಾಲೂಕು ಹಾಸನ ಜಿಲ್ಲೆಯಲ್ಲಿರುವ ಒಂದು ಸಾಮಾನ್ಯ ಗ್ರಾಮವಾಗಿದೆ. ಗ್ರಾಮದ ಹಿನ್ನಲೆ : ಈ ಗ್ರಾಮಕೆ ದೊಡ್ಡಬಾಗ ನಹಳ್ಳಿ ಎಂದು ಹೆಸರು ಬರಲು ಕಾರಣವೆಂದರೆ ಅಕ್ಕ -ಪಕ್ಕ ಎರಡು ಹಳ್ಳಿಗಳಿದ್ದು ಈ ಹಳ್ಳಿಗಳಿಗೆ ಏನೆಂದು ಹೆಸರು ಕೊಡಬೇಕೆಂದು ಗೊಂದಲವು ಪ್ರಾರಂಭವಾಯಿತು. ಈ ಎರಡು ಗ್ರಾಮಗಳಿಂದ ಸ್ವಲ್ಪ ದೂರದಲ್ಲಿ ಒಂದು ದೇವಸ್ಥಾನವಿತ್ತು. ಅ ದೇವಸ್ಥಾನಕೆ ಪೂಜೆ ಮಾಡಿಸಲು ಹೋದಾಗ ತೆಂಗಿನಕಾಯಿ ಹೊಡೆಯಲು ಹೋದಾಗ ಎರಡು ಭಾಗವಾಗಿ ಹೊಡೆದು ಚಿಕ್ಕ ಭಾಗ ಒಂದು ಕಡೆ ಹೋಗಿ ಚಿಕ್ಕಬಾಗನಹಳ್ಳಿ ಎಂದು ಹಾಗು ದೊಡ್ಡ ಭಾಗ ಹೋದ ಕಡೆಗೆ ದೊಡ್ಡ ಬಾಗನಹಳ್ಳಿ ಎಂದು ಈ ಗ್ರಾಮಗಳಿಗೆ ನಾಮಕರಣವಾಯಿತು. ಬೌಗೊಲಿಕ ಲಕ್ಷ್ಮಣ ಈ ಪ್ರದೇಶ ದಕ್ಷಿಣ ಕರ್ನಾಟಕವಾಗಿದ್ದು ಎಲ್ಲಿ ಉತ್ತಮ ರೀತಿಯ ವಾತಾವರಣವನ್ನು ಹೊಂದಿದೆ. ಉತ್ತಮ ಮಳೆಯನು ಪಡೆಯುವುದು. "ಬಡವರ ಊಟಿ "ಎಂದು ಚಿರಪರಿಚಯವಾಗಿದೆ. ಧಾರ್ಮಿಕ ಹಬ್ಬಗಳು ಎಲ್ಲಿನ ಬಂಡಿ ಹಬ್ಬವು ತುಂಬಾ ವಿಶೇಷತೆಯನು ಹೊಂದಿದೆ. 7 ಗ್ರಾಮಗಳು ಸೇರಿ ಆಚರಿಸುವ ಈ ಹಬ್ಬವಾಗಿದೆ. ಆಯುಧ ಪೂಜೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಆರ್ಥಿಕತೆ : ಎಲ್ಲಿ ಬಡ ವರ್ಗ ಹಾಗೂ ಮಾಧ್ಯಮ ವರ್ಗದವರನು ಕಾಣಬಹುದು. ಕೃಷಿಗೂ ಆದ್ಯತೆ ಹಾಗೂ ಕಲ್ಲು ಗಣಿಗಾರೀಕೆಯು ಜನರ ಆರ್ಥಿಕತೆಯನು ಉತ್ತಮಗೊಳಿಸಿದೆ. ಜನಸಂಖ್ಯೆ : ಈ ಊರಿನಲ್ಲಿ 250 ಕೂ ಹೆಚ್ಚು ಮನೆಗಳಿವೆ. 1000 ಜನಸಂಖ್ಯೆಯನು ಕಾಣಬಹುದು. ಧರ್ಮ ಮತ್ತು ಜಾತಿ : ಎಲ್ಲಿ ಹಿಂದೂ ಧರ್ಮದವರು ಮಾತ್ರ ಇದ್ದಾರೆ. ಪ್ರಮುಖವಾಗಿ ಪರಿಶಿಷ್ಟ ಜಾತಿ ಹಾಗೂ ಕುರುಬ ಜನಗಳನು ಕಾಣಬಹುದು. ನೆರೆ ಹೊರೆಯ ಊರುಗಳು : ಚಿಕ್ಕ ಬಾಗನಹಳ್ಳಿ , ಆಗಿಲೆ, ಹ್ಯಾರಾನೆ, ಇಂದ್ರಪುರ. ದೇವಸ್ಥಾನಗಳು : ಈ ಗ್ರಾಮದಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನವಿದ್ದು ಮುಜಾರಾಯಿ ಇಲಾಖೆಗೆ ಸೇರಿದೆ. ಪಕ್ಕದಲ್ಲಿ ಬೆಟ್ಟದ ಮೇಲೆ ಕುಂತಿಅಮ್ಮ, ಭೀಮರಾಯನ ದೇವಸ್ಥಾನವಿದೇ. ಶಿಕ್ಷಣ : ಜನಸಂಖ್ಯೆ ಯಲ್ಲಿ ಹೆಚ್ಚಿನ ಭಾಗದವರು ಪದವಿ ಪೂರ್ವ ಶಿಕ್ಷಣ ಪಡೆದು ಕೊಂಡಿದಾರೆ.ಪದವಿ ಯನು ಪಡೆದುಕೊಂಡಿದ್ದಾರೆ ಸ್ವಲ್ಪ ಪ್ರಮಾಣದಲಿ, ಉನ್ನತ ಶಿಕ್ಷಣವನ್ನು ಸಣ್ಣ ಪ್ರಮಾಣದಲ್ಲಿ ಪಡೆದು ಕೊಂಡಿದ್ದಾರೆ. ಬದಲಾಯಿಸಿ