ಅಧಿವಾಹಕಗಳು ಬದಲಾಯಿಸಿ

ವಸ್ತುಗಳು ಶೂನ್ಯ ಪ್ರತಿರೋಧತೆಯೊಂದಿಗೆ (zero resistance )ವಾಹಕತೆಯನ್ನು ಪ್ರದರ್ಶಿಸಿದಾಗ ಅದನ್ನು ಅಧಿವಾಹಕಗಳು (superconductors)ಎಂದು ಕರೆಯುತ್ತಾರೆ . ಈ ಪ್ರಕ್ರಿಯೆಗೆ ಅಧಿವಾಹಕತೆ(superconductivity) ಎಂದು ಕರೆಯುತ್ತಾರೆ. ವಸ್ತುಗಳ ತಾಪವನ್ನು ನಿರ್ಣಾಯಕ ತಾಪಕ್ಕಿಂತ (critical temperature)ಕಡಿಮೆಗೊಳಿಸಿದಾಗ ಶೂನ್ಯ ಪ್ರತಿರೋಧತೆಯೊಂದಿಗೆ (zero resistance ) ವಾಹಕಗಳಲ್ಲಿನ ಕಾಂತೀಯ ಕ್ಷೇತ್ರಗಳ ಉಪಸ್ಥಿತಿಯು ಕಾಣೆಯಾಗಿ ಅತ್ಯುನ್ನತ ಮಟ್ಟದ ವಾಹಕತ್ವವನ್ನು ಪ್ರದರ್ಶಿಸುವುದೇ ಅಧಿವಾಹಕತೆ.ಅಧಿವಾಹಕಗಳು ಕಡಿಮೆ ಪ್ರಮಾಣದ ಶಕ್ತಿಯ ಅಪವ್ಯಯವನ್ನು ಹೊಂದಿರುತ್ತವೆ. ಈ ಪ್ರಕ್ರಿಯೆಯನ್ನು ಹಾಲೆಂಡಿನ (ಈಗಿನ ನೆದರ್ಲ್ಯಾಂಡ್) ನ ಪ್ರಸಿದ್ಧ ವಿಜ್ಞಾನಿ ಹೆಚ್ ಕೆಮರ್ಲಿಂಗ್ ಓನ್ಸ ಎಂಬುವವನು ಲೀಡೆನ್ ಎಂಬಲ್ಲಿ 1911ಏಪ್ರಿಲ್ 8ರಂದು ಕಂಡುಹಿಡಿದನು . ಲೋಹೀಯ ವಾಹಕಗಳ ತಾಪ ಕಡಿಮೆಯಾದಂತೆ ಅವುಗಳ ರೋಧತೆಯ ಪ್ರಮಾಣ ಕೂಡ ಕಡಿಮೆಯಾಗುತ್ತದೆ. ಇದರಿಂದ ಅವುಗಳು ಹೆಚ್ಚು ವಿದ್ಯುತ್ ನ್ನು ತಮ್ಮ ಮೂಲಕ ಹರಿಯಲು ಬಿಡುತ್ತವೆ . ಆದರೂ ತಾಮ್ರ ಮತ್ತು ಬೆಳ್ಳಿಯಂತಹ ವಾಹಕಗಳಲ್ಲಿ ಇಂಪ್ಯೂರಿಟಿ ಗಳ ಉಪಸ್ಥಿತಿಯಿಂದಾಗಿ ಅವು ಶೂನ್ಯ ರೋಧತೆಯನ್ನು ಹೊಂದಲು ಸಾಧ್ಯವಾಗುವುದಿಲ್ಲ. ಆದರೆ ಅಧಿವಾಹಕಗಳು (superconductors)ಈ ಮಿತಿಯನ್ನು ಹೊಂದಿರುವುದಿಲ್ಲ. ಏಕೆಂದರೆ ನಿರ್ಣಾಯಕ ತಾಪಮಾನಕ್ಕಿಂತ(critical temperature) ಅವುಗಳ ತಾಪ ಕಡಿಮೆಯಾದಂತೆ ವಾಹಕಗಳು ಅಧಿವಾಹಕಗಳಂತೆ(superconductors) ವರ್ತಿಸಲು ಪ್ರಾರಂಭಿಸುತ್ತವೆ .