ಸದಸ್ಯ:MAMATHA.M,1510463,Mamatha Mohan
ಮಮತ.ಎಂ | |
---|---|
ಜನನ | ಮಮತ.ಎಂ ೧೨-೦೧-೧೯೯೭ ಬೆಂಗಳೂರು |
ರಾಷ್ಟ್ರೀಯತೆ | ಭಾರತೀಯ |
ಇತರೆ ಹೆಸರು | ಸಂಗೀತ |
ವಿದ್ಯಾಭ್ಯಾಸ | ವಾಣಿಜ್ಯ ಪದವಿ |
ವೃತ್ತಿ | ವಿದ್ಯಾರ್ಥಿ |
ಗಮನಾರ್ಹ ಕೆಲಸಗಳು | ನೃತ್ಯ |
ಆರಂಭಿಕ ಜೀವನ
ಬದಲಾಯಿಸಿನನ್ನ ಹೆಸರು ಮಮತ.ಎಂ.ನಾನು ಜನವರಿ ೧೨,೧೯೯೭ರಂದು ಬೆಂಗಳೂರಿನಲ್ಲಿ ಜನಿಸಿದೆನು.ನಾನು ಮೋಹನ್ ಮತ್ತು ಕಲ್ಪನ ಎಂಬ ತಂಪತಿಗಳಿಗೆ ಹಿರಿಯ ಮಗಳಾಗಿ ಜನಿಸಿದೆನು.ನನಗೆ ದೀಪಕ್ ಎಂಬ ಒಬ್ಬ ತಮ್ಮನಿದ್ದಾನೆ,ಅವನು ಈಗ ತನ್ನ ಪದವಿಪೂರ್ವ ಶಿಕ್ಷಣವನ್ನು ಮುಂದುವರಿಸುತ್ತಿದ್ದಾನೆ.
ವಿದ್ಯಾಭ್ಯಾಸ
ಬದಲಾಯಿಸಿ೨೦೧೩ರಲ್ಲಿ ನಾನು ಸಂತ.ತೆರೇಸಾ ಬಾಲಕಿಯರ ಪ್ರೌಢಶಾಲೆಯಲ್ಲಿ ನನ್ನ ಶಾಲಾಶಿಕ್ಷಣವನ್ನು ಮುಗಿಸಿದೆನು.ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನಾನು ೯೦.೭೨%ಗಳಿಸಿದೆನು.ನನ್ನ ತಂದೆ-ತಾಯಿಗೆ ಬಹಳ ಸಂತೋಷವಾಯಿತು,ಆದರೆ ನನಗೆ ಈ ಫಲಿತಾಂಶದಿಂದ ಸಂತೋಷವಾಗಲಿಲ್ಲ.ಏಕೆಂದರೆ ನಾನು ೯೫% ಮೇಲೆ ನಿರೀಕ್ಷಿಸಿದೆ,ಆದರೆ ನನ್ನ ಸೋಮಾರಿತನದಿಂದಾಗಿ ಕಡಿಮೆ ಅಂಕ ಪಡೆದೆ.ನನಗೆ ಆಗ ವಿಜ್ಞಾನ ವಿಷಯದಲ್ಲಿ ತುಂಬ ಆಸಕ್ತಿ ಇತ್ತು.ಆದರೆ ನನಗೆ ಗಣಿತದ ವಿಷಯದಲ್ಲಿ ಆಸಕ್ತಿಯಿರಲಿಲ್ಲ.ಈ ಕಾರಣದಿಂದಾಗಿ ನಾನು ನನ್ನ ಪದವಿಪೂರ್ವ ಶಿಕ್ಷಣದಲ್ಲಿ ವಾಣಿಜ್ಯ ವಿಷಯವನ್ನು ಆಯ್ಕೆ ಮಾಡಿದೆ.ನನ್ನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶದಿಂದ ನಿರಾಶೆಯಾದ ನಾನು ಇನ್ನು ಮೇಲೆ ನನ್ನ ಸೋಮಾರಿತನವನ್ನು ಬಿಟ್ಟು ಓದಿನ ಕಡೆಗೆ ಹೆಚ್ಚು ಸಮಯ ಕಳೆಯಲು ನಿರ್ಧರಿಸಿ ಸಂತ.ಜೋಸೆಫ್ ಇಂಡಿಯನ್ ಕಾಂಪೋಸಿಟ್ ಪಿಯು ಕಾಲೇಜಿನಲ್ಲಿ ನನ್ನ ಪಿಯು ಶಿಕ್ಷಣ ಮುಂದುವರಿಸಿದೆನು.ಈ ಕಾಲೇಜಿನ ದಿನಗಳನ್ನು ನಾನು ಎಂದು ಮರೆಯನು.ಈ ದಿನಗಳನ್ನು ನನ್ನ ಜೀವನದ ಸುವರ್ಣ ದಿನಗಳೆಂದು ಕರೆಯಬಹುದು.ನಾನು ಎಲ್ಲಾ ಶಿಕ್ಷಕರ ಅಚ್ಚು-ಮೆಚ್ಚಿನ ವಿದ್ಯಾರ್ಥಿಯಾಗಿದ್ದೆ.ಜೊತೆಗೆ ಅಮೂಲ್ಯವಾದ ಗೆಳೆತನ ದೊರಕಿತು.ಕಾಲೇಜಿನ ಎಲ್ಲಾ ಪರೀಕ್ಷೆಯಲ್ಲಿ ನಾನು ಮೊದಲನೆಯ ಸ್ಥಾನ ಪಡೆದೆ.ಎಲ್ಲದಕ್ಕೂ ಮೇಲೆ ೨೦೧೫ರಲ್ಲಿ ನನ್ನ ಪಿಯು ಅಂತಿಮ ಪರೀಕ್ಷೆಯಲ್ಲಿ ೯೫%ಗಳಿಸಿ ಈಗ ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ವಾಣಿಜ್ಯ ವಿಷಯದಲ್ಲಿ ೨ನೇ ಸೆಮಿಸ್ಟರ್ ಮುಂದುವರಿಸುತ್ತಿದ್ದೇನೆ.
ಆಸಕ್ತಿ ಮತ್ತು ಹವ್ಯಾಸಗಳು
ಬದಲಾಯಿಸಿನನಗೆ ಓದುವುದರಲ್ಲಿ ಬಹಳ ಆಸಕ್ತಿ.ನನ್ನ ಇತರ ಆಸಕ್ತಿಗಳು ಪ್ರಯಾಣಿಸುವುದು,ಭಾಷೆಗಳನ್ನು ಕಲಿಯುವುದು,ಉತ್ತಮ ಪುಸ್ತಕಗಳನ್ನು ಓದುವುದು ಮತ್ತು ಹೊಸ ವಿಷಯಗಳನ್ನು ಅನ್ವೇಷಿಸುವುದು.ನನ್ನ ಹವ್ಯಾಸಗಳ ಬಗ್ಗೆ ತಿಳಿಸಬೇಕಾದರೆ ಚಿತ್ರಕಲೆ,ನೃತ್ಯ,ಸಂಗೀತ ಕೇಳುವುದು,ಪುಸ್ತಕ ಓದುವುದು ಮತ್ತು ದೂರದರ್ಶನ ನೋಡುವುದು.
ಕನ್ನಡ ವಿಕಿಪೀಡಿಯ ಮತ್ತು ನಾನು
ಬದಲಾಯಿಸಿಕನ್ನಡ ವಿಕಿಪೀಡಿಯದ ಬಗ್ಗೆ ಹೇಳಬೇಕಾದರೆ ಇದು ಒಂದು ಜ್ಞಾನದ ಸಾಗರ ಮಾತ್ರವಲ್ಲ ನಮ್ಮಂತಹ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ತಿಳಿಸುವ ಮತ್ತು ಕನ್ನಡದಲ್ಲಿ ಟೈಪಿಂಗ್ ಮಾಡುವ ಅವಕಾಶವನ್ನು ನೀಡುವ ಒಂದು ಉತ್ತಮ ವೇದಿಕೆಯಾಗಿದೆ.ನಮ್ಮ ಯೂನಿವರ್ಸಿಟಿಯ ಇತರೆ ಸಿಐಎಗಳಿಗಿಂತ ಈ ಕನ್ನಡ ವಿಕಿಪೀಡಿಯದ ಸಿಐಎ ಅತ್ಯಂತ ಉಪಯುಕ್ತ ಮತ್ತು ಕುತೂಹಲಕಾರಿಯಾಗಿದೆ.ಇಂತಹ ಒಂದು ಅಮುಲ್ಯವಾದ ಅವಕಾಶವನ್ನು ನೀಡಿದ ವಿಕಿಪೀಡಿಯದವರಿಗೆ ಹಾಗು ನನ್ನ ಯೂನಿವರ್ಸಿಟಿಯವರಿಗೆ ನನ್ನ ಧನ್ಯವಾದಗಳನ್ನು ಸಲ್ಲಿಸುತ್ತೇನೆ.ನನಗೆ ಕನ್ನಡದಲ್ಲಿ ಟೈಪಿಂಗ್ ಮಾಡಲು ಬಹಳ ಆಸಕ್ತಿ ಇರುವುದರಿಂದ ನಾನು ವಿಕಿಪೀಡಿಯದಲ್ಲಿ ಹಲವಾರು ಲೇಖಕರು ಮತ್ತು ಕವಿಗಳ ಬಗ್ಗೆ ಪರಿಚಯವನ್ನು ಟೈಪ್ ಮಾಡಲು ಬಯಸುತ್ತೇನೆ. ನನಗೆ ಒಂದು ಆಸೆ ಇದೆ ಅದು ಏನೆಂದರೆ ವಿಕಿಪೀಡಿಯದವರು ಒಂದು ಆನ್ಲೈನ್ ಕನ್ನಡ ಅನುವಾದಕವನ್ನು ಸೃಷ್ಟಿಸಬೇಕೆಂಬುದು.ಇದರಿಂದ ಕನ್ನಡವನ್ನು ಕಲಿಯುವ ಆಸಕ್ತಿ ಇರುವವರಿಗೆ ಬಹಳ ಉಪಯೋಗವಾಗುತ್ತದೆ.