ಸದಸ್ಯ:MADHUSUDANA K/ನನ್ನ ಪ್ರಯೋಗಪುಟ2

ಚಾರಣಿಗರನ್ನು ಕೈಬೀಸಿ ಕರೆಯುವ ಸೋಗಿ ಬೆಟ್ಟದ ಮಲೇಶ್ವರ ಗುಡ್ಡ

ಬದಲಾಯಿಸಿ

ಪ್ರಕೃತಿ ಸೌದರ್ಯದ ಗಣಿ, ಚಾರಣಿಗರ ಸ್ವರ್ಗ.

ಬದಲಾಯಿಸಿ

ಹೂವಿನಹಡಗಲಿ:

ಬದಲಾಯಿಸಿ

ಮಲ್ಲಿಗೆ ನಾಡು ಎಂದು ಪ್ರಸಿದ್ದಿ ಹೊಂದಿದ ಹೂವಿನಹಡಗಲಿ ತಾಲೂಕು ಅನೇಕ ಪುಣ್ಯ ಕ್ಷೇತ್ರಗಳನ್ನು ಒಳಗೊಳ್ಳುವ ಮೂಲಕ ರಾಜ್ಯ ಹಾಗೂ ಅನ್ಯರಾಜ್ಯಗಳ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದ್ದು. ತಾಲೂಕಿನ ಸೋಗಿ ಗ್ರಾಮ ವ್ಯಪ್ತಿಗೆ ಬರುವ ಬೆಟ್ಟದ ಮಲೇಶ್ವರ ಪರ್ವತ ಶ್ರೇಣಿಯು ವಿಶೇಷಾವಿದೆ. ತಾಲೂಕು ಕೇಂದ್ರದಿAದ ಸೋಗಿ ಗ್ರಾಮದ ಮಾರ್ಗವಾಗಿ ಸುಮಾರು ೧೩ ಕಿ.ಮೀ, ಹಾಗೂ ಹೂವಿನಹಡಗಲಿ-ಮಂಡ್ಯ ರಾಜ್ಯ ಹೆದ್ದಾರಿಯ ಕೊಮಾರನಹಳ್ಳಿತಾಂಡ ಮಾರ್ಗವಾಗಿ ಸುಮಾರು ೧೮ ಕಿ.ಮೀ, ದೂರದಲ್ಲಿರುವ ಬೆಟ್ಟದ ಮಲ್ಲೇಶ್ವರ ದೇವಸ್ಥಾನ ಹಾಗೂ ಬೆಟ್ಟಗಳ ಸಾಲುಗಳನ್ನು ವೀಕ್ಷಿಸಲು ರಾಜ್ಯದ ಮೂಲೆ, ಮೂಲೆಗಳಿಂದಲೂ ವರ್ಷದ ಮಳೆಗಾಲದ ಸಂದರ್ಭದಲ್ಲಿ ನೂರಾರು ಜನ ಪ್ರವಾಸಿಗರು ಆಗಮಿಸುತ್ತಾರೆ. ವರ್ಷಕ್ಕೊಂದು ಬಾರಿ ನಡೆಯುವ ಮಲ್ಲೆಶ್ವರನ ರಥೋತ್ಸವಕ್ಕೆ ಸಾವಿರಾರು ಭಕ್ತರು ಆಗಮಿಸಿ ವಿಶೇಷ ಪೂಜೆಗಳನ್ನು ಸಲ್ಲಿಸುವುರು. ಮಳೆಗಾಲದ ಸಂದರ್ಭದಲ್ಲಿ ಬೆಟ್ಟಗಳ ಸಾಳುಗಳಿಗೆ ಮೋಡಗ್ಳು ಮುತ್ತಿಕ್ಕಿ ಮುಂದೆ ಸಾಗುವ ದೃಶ ಪ್ರವಾಸಿಗರಿಗೆ ಸ್ವರ್ಗದ ಅನುಭವ ನೀಡುತ್ತದೆ. ಬೆಟ್ಟದ ಸಾಲುಗಳು ದೇವಸ್ಥಾನದ ಸುತ್ತಲೂ ಇರುವುದುರಿಂದ ಹಚ್ಚ ಹಸಿರಿನ ಪೃಕೃತಿ ಮಡಿಲಲ್ಲಿ ಸೀಳು ದಾರಿಯಲ್ಲಿ ದೇವರ ದರ್ಶನ ಪಡೆದ ನಂತರ ಬೆಟ್ಟದ ಮೇಲಿ ಸುಮಾರು ೧ ಕಿ.ಮೀ, ಯಷ್ಟು ದೂರದ ವರೆಗೂ ಇಎರುವ ಬೆಟ್ಟದ ಸೀಳುದಾರಿಯಲ್ಲಿ ಪ್ರವಾಸಿಗರು ಚಾರಣಕ್ಕೆ ಹೊರಡುತ್ತಾರೆ. ಗಿಡಮೂಲೆಕೆಗಳು: ಬೆಟ್ಟದ ತಪ್ಪಲ್ಲಿನಲ್ಲಿ ಹೆಚ್ಚು ಮಳೆಯಾಗುವುದರಿಂದ ಅನೇಕ ಬಗೆಯ ಔಷಧಿಯ ಗಿಡ ಮೂಲಿಕೆಗಳು ಹೆಚ್ಚಾಗಿ ಬೆಳೆಯುತ್ತವೆ. ಜೀವಿಗಳಿಗೆ ಆಸರೆ: ಬೆಟ್ಟದ ತಪ್ಪಲಿನಲ್ಲಿ ಜನ ವಸತಿ ಕಡಿಮೆಯಾದ ಕಾರಣ ಹಾಗೂ ಪ್ರಶಾಂತ ವಾತಾವರಣ ಇರುವುದರಿಂದಾಗಿ ಅನೇಕ ಬಗೆಯ ಪ್ರಾಣಿಗಳಾದ ಚಿರತೆ, ಕಾಡುಹಂದಿ, ನವಿಲು, ನರಿ, ತೋಳ, ಕಾಡು ಬೆಕ್ಕು ಸೇರಿದಂತೆ ವಿವಿಧ ಬಗೆಯ ಪಕ್ಷಿಗಳ ವಾಸ್ತಸ್ಥಾನವಾಗಿದೆ. ಪವನ ವಿದ್ಯುತ್ ಉತ್ಪಾದನೆಯಿಂದ ಪ್ರಕೃತಿ ನಾಶ: ಬೆಟ್ಟದ ತುದಿಯಲ್ಲಿ ವಿದ್ಯುತ್ ಸ್ಥಾವರದ ಸುಮಾರು ೫೦ ಕ್ಕಿಂತ ಹೆಚ್ಚು ಪಂಕಗಳನ್ನು ನಿರ್ಮಾಣ ಮಾಡಿರುವುದರಿಂದ ಇವುಗಳ ಶಬ್ದಕ್ಕೆ ಕಾಡು ಪ್ರಾಣಿಗಳ ಸಂತತಿ ಕ್ಷೀಣಿಸುತ್ತಾ ಬರುತ್ತಿದೆ. ವಿವಿಧ ಸೌಲಭ್ಯಗಳ ಕೊರತೆ: ಅಮವಾಸ್ಯೆ ಮತ್ತು ಸೋಮವಾರದ ದಿನದಂತೆ ನೂರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಾರೆ. ದೂರದ ಊರುಗಳಿಂದ ಆಗಮಿಸುವ ಜನರಿಗೆ ಸಾರಿಗೆ ವ್ಯವಸ್ಥೆ, ಕುಡಿಯುವ ನೀರು, ವಸತಿ ಸೌಲಭ್ಯ ಸೇರಿದಂತೆ ಇತರೆ ಸೌಲಭ್ಯಗಳು ದೊರಕುತ್ತಿಲ್ಲ. ವಾಗಲಿ ಇಲ್ಲಿಯವರೆಗೂ ದೊರಕುತ್ತಿಲ್ಲ. ರಸ್ತೆ ಸಮಸ್ಯೆ: ತಾಲೂಕು ಕೇಂದ್ರದಿAದ ಕೊಮಾರನಹಳ್ಳಿ ತಾಂಡಾ ಮಾರ್ಗವಾಗಿ ಇರುವ ರಸ್ತೆಯು ತಾಂಡಾದಿAದ ಅನೇಕ ತಗ್ಗು ಗುಂಡಿಗಳನ್ನು ಹೊಂದಿದ್ದರೂ ಇಲ್ಲಿಯ ತನಕ ರಸ್ತೆ ಅಭಿವೃದ್ಧಿಯಾಗಿರುವುದಿಲ್ಲ.

ವಿವಿಧ ಭಾಗಗಳಿಂದ ಬರುವ ಪ್ರವಾಸಿಗರು: ದೂರದ ಬಳ್ಳಾರಿ, ಹೊಸಪೇಟೆ, ಕೊಟ್ಟೂರು, ಹರಪನಹಳ್ಳಿ ಹರಿಹರ, ಡಾವಣಗೇರೆಗಳಲ್ಲಿನ ಜನರು ಮಳೆಗಾಲದ ಸಂದರ್ಭದಲ್ಲಿ ಹೆಚ್ಚು ಈ ಪ್ರದೇಶಕ್ಕೆ ಆಗಮಿಸುತ್ತಾರೆ. ಇನ್ನು ವೈದ್ಯಕೀಯ ಹಾಗೂ ಇಂಜಿನಿಯರಿAಗದ ವಿದ್ಯಾರ್ಥಿಗಳು ತಂಡೋಪ ತಂಡಗಳಾಗಿ ಆಗಮಿಸಿ ಚಾರಣಕ್ಕೆ ತೆರಳುತ್ತಾರೆ. ಸೋಗಿ ಗ್ರಾಮದಿಂದ ಸೋಗಿತಾಂಡಾ ಮಾರ್ಗವಾಗಿ ಇರುವ ಬೆಟ್ಟದ ಕಿರು ರಸ್ತೆಯಲ್ಲಿಯೇ ಸಾಹಸ ಮಾಡಿಕೊಂಡು ಕಾರು, ಜೀಪು, ಬೈಕ್ ಗಳಲ್ಲಿ ಬೆಟ್ಟದ ತುತ್ತ ತುದಿಯನ್ನು ತಲುಪುತ್ತಾರೆ.

ಬತ್ತದ ಪಾತಾಳಗಂಗೆ: ದೇವಸ್ಥಾನದ ಹಿಂಭಾಗದಲ್ಲಿರುವ ಪಾತಾಳಗಂಗೆಯು ಬೆಟ್ಟದ ತಳಭಾಗದಲ್ಲಿದ್ದರೂ ಅನೇಕ ವರ್ಷಗಳ ಕಾಲ ಮಳೆ ಬಾರದಿದ್ದರೂ ನೀರು ಬತ್ತದೆ ಇರುವುದು ಇಲ್ಲಿಯ ವಿಶೇಷವಾಗಿದೆ.