ಸದಸ್ಯ:MADESHWARA K/ನನ್ನ ಪ್ರಯೋಗಪುಟ

ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ,ಮಾಗಳ ಬದಲಾಯಿಸಿ

ಹೂವಿನಹಡಗಲಿಯ ಪಶ್ಚಿಮ ಭಾಗದ ತುಂಗಭದ್ರಾ ನದಿ ದಡದ ಮೇಲಿರುವ ಮಾಗಳ ಎಂಬ ಗ್ರಾಮ ಐತಿಹಾಸಿಕವಾದದ್ದು ಇಲ್ಲಿಯ ಇನ್ನೊಂದು ವಿಶೇಷತೆಎಂದರೆ 1904 ರಲ್ಲಿ ಪ್ರಾರಂಭವಾದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಇದೆ. ಈಗಲೂ,ಇಲ್ಲಿ 1 ರಿಂದ 7 ನೇ ತರಗತಿವರೆಗೆ 650 ಕ್ಕೂ ಹೆಚ್ಹು ವಿದ್ಯಾರ್ಥಿಗಳು ಅಭ್ಯಾಸ ಮಾಡುತಿದ್ದಾರೆ. ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ,ಮಾಗಳ. ಇಲ್ಲಿ ಸಾವಿರಾರು ವಿದ್ಯಾರ್ಥಿಗಳು ಅಧ್ಯಯನ ಮಾಡಿ ಉನ್ನತ ಹುದ್ದೆಗಳನ್ನು ಹೊಂದಿದ್ದಾರೆ.ಅವರುಗಳಲ್ಲಿ ಕನ್ನಡದ ಪ್ರಖ್ಯಾತರಾದ ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರೀ [೧]ಗಳು ಇಲ್ಲಿನ ವಿದ್ಯಾರ್ಥಿಯಾಗಿದ್ದರು ಎಂಬುದು ಹೆಮ್ಮೆಯ ವಿಷಯ.

ವಿಶೇಷತೆಗಳು ಬದಲಾಯಿಸಿ

  • ಇಲ್ಲಿ ಇದುವರೆಗೂ ಯಾವುದೊಂದು ಖಾಸಗಿ ಶಾಲೆಗಳು ತೆರೆದಿಲ್ಲ.
  • ಬಹುಪಾಲು ಪಾಲಕರು, ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಇಚ್ಛಿಸುತ್ತಾರೆ.
  • ಗ್ರಾಮಸ್ಥರಿಗೆ ತಮ್ಮೂರಿನ ಸರಕಾರಿ ಶಾಲೆಯ ಬಗ್ಗೆ ಭಕ್ತಿ, ಗೌರವ ,ಪ್ರೀತಿ ಮತ್ತು ಕಾಳಜಿ ಇದೆ.
  • ಶಾಲೆಯಲ್ಲಿ ಯಾವುದೇ ಕಾರ್ಯಕ್ರಮವಿರಲಿ ಗ್ರಾಮದ ಹಿರಿಯರು, ಗ್ರಾಮಸ್ಥರು ತನು, ಮನ ಧನದಿಂದ ಸೇವೆ ಮಾಡುತ್ತಾರೆ.
  • ಫೆಬ್ರವರಿ 2020 ರಲ್ಲಿ ಶಾಲೆಯು ಶತಮಾನೋತ್ಸವ ಸಂಭ್ರಮವನ್ನು ಯಶಸ್ವಿಯಾಗಿ ಆಚರಿಸಿಕೊಂಡಿತು.
  • ಸೆಪ್ಟಂಬರ್ 2022ರಲ್ಲಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಲಾಯಿತು

.==ಉಲ್ಲೇಖಗಳು==

{{ಉಲ್ಲೇಖಗಳು}}

  1. https://www.prajavani.net/art-culture/short-story/sammelana-adyaksharu-604876.html