ಧೂಮಕೇತು

ಬದಲಾಯಿಸಿ

ಸೂರ್ಯ ನನ್ನು ಪರಿಭ್ರಮಿಸಿ, ಕಡೇ ಪಕ್ಷ ಒಮ್ಮೊಮ್ಮೆ ಒಂದು ವಾಯುಮಂಡಲ ಮತ್ತು ಒಂದು ಬಾಲವನ್ನು ಹೊಂದಿರುವ ಸಣ್ಣ ಕಾಯ. ಧೂಮಕೇತುವನ್ನು ಆಂಗ್ಲಭಾಷೆಯಲ್ಲಿ ಎನ್ನುತಾರೆ. ಧೂಮಕೇತು ಎನ್ನುವ ಪದ ಸಂಸ್ಕೃತದ್ದು. ಧೂಮಕೇತು ಸೂರ್ಯನ ಸುತ್ತ ಪರಿಭ್ರಮಿಸುವಾಗ, ದೂರದಲ್ಲಿ ಇದ್ದ ಸಮಯದಲ್ಲಿ ಅತಿಶೀತಲ ವಾಗಿ, ಇದರಲ್ಲಿ ಇರುವ ಪದಾರ್ಥಗಳು, ಆವಿಗಳು ಘನೀಭವಿಸಿ, ಘನಸ್ಥಿತಿಯಲ್ಲಿರುತ್ತವೆ. ಹತ್ತಿರದಲ್ಲಿ ಪರಿಭ್ರಮಿಸುವ ಸಮಯದಲ್ಲಿ, ಸೂರ್ಯನ ಬೇಗೆಯಿಂದ ಕರಗಿ ಹೋಗುತ್ತವೆ. ಒಂದು ಭಾಗದಲ್ಲಿ ತಲೆ, ಕೊನೆಯ ಭಾಗದಲ್ಲಿ ಬಾಲವನ್ನು ಹೊಂದಿರುತ್ತದೆ. ಧೂಮಕೇತು ತಲೆಭಾಗದಲ್ಲಿ ಮಿಥೇನ್, ಅಮ್ಮೋನಿಯಾ ಆವಿಗಳು ಮತ್ತು ನೀರು ಘನಸ್ಥಿತಿಯಲ್ಲಿ ಇರುತ್ತವೆ. ಇನ್ನು ಗಡ್ಡೆಯಲ್ಲಿ ಕಬ್ಬಿನ, ನಿಕೆಲ್ ಕ್ಯಾ ಲ್ಷಿಯಂ, ಮೆಗ್ನೀಷಿಯಂ, ಸಿಲಿಕಾನ್, ಸೋಡಿಯಂ ಮುಂತಾದ ಧಾತು ಗಳು ಇರುತ್ತವೆ.

ಹ್ಯಾಲಿ ಧೂಮಕೇತು

ಬದಲಾಯಿಸಿ

ಒಬ್ಬ ವ್ಯಕ್ತಿ ಜೀವಿತಾವಧಿಯಲ್ಲಿ ಒಮ್ಮೆ ಅಥವಾ ಎರಡು ಬಾರಿ ಮಾತ್ರ ನೋಡಬಹುದಾದುದೆಂದರೆ ಹ್ಯಾಲಿ ಧೂಮಕೇತು. ಕ್ರಿಸ್ತಪೂರ್ವ ೨೩೯, ಕ್ರಿ.ಪೂ ೧೬೪, ಕ್ರಿ.ಪೂ ೮೭ ನಂತರ ಕ್ರಿಸ್ತಶಕ ೧೫೩೧, ಕ್ರಿ.ಶ ೧೬೦೭, ಕ್ರಿಶ ೧೬೮೨, ಕ್ರಿಶ ೧೭೫೮ ಹೀಗೆ ೭೫-೭೬ ವರ್ಷಗಳ ಅಂತರದಲ್ಲಿ ಇದನ್ನು ಕಂಡ ಚೀನೀಯರು ಮತ್ತು ಬ್ಯಾಬಿಲೋನಿಯನ್ನರು ದಾಖಲಿಸಿದ್ದಾರೆ.


ನಿರ್ದಿಷ್ಟ ಅವಧಿಯ ಧೂಮಕೇತು ಆಗಮನ ಲೆಕ್ಕ ಹಾಕಿದ ಇಂಗ್ಲೆಂಡಿನ ಖಗೋಳ ವಿಜ್ಞಾನಿ ಎಡ್ಮಂಡ್ ಹ್ಯಾಲಿ ಮುಂದಿನ ಅದರ ಭೇಟಿ ಬಗ್ಗೆ ಮುಂಚಿತವಾಗಿಯೇ ತಿಳಿಸಿದ್ದ. ೧೭೪೨ರಲ್ಲಿ ನಿಧನನಾದ ಎಡ್ಮಂಡ್ ಹ್ಯಾಲಿ ತನ್ನ ಜೀವಿತಾವಧಿಯಲ್ಲಿ ಒಮ್ಮೆಯೂ ಆ ಧೂಮಕೇತುವನ್ನು ನೋಡಲೇ ಇಲ್ಲ. ೧೭೫೮ರಲ್ಲಿ ಪುನಃ ಕಾಣಿಸಿದ ಧೂಮಕೇತು ಹ್ಯಾಲಿ ಎಂದು ನಾಮಕರಣ ಗೊಂಡು ಜಗದ್ವಿಖ್ಯಾತವಾಯಿತು.