ಕೆ.ವಿ. ಪುಟ್ಟಪ್ಪ. ಇವರ ಕಾವ್ಯನಾಮ ಕುವೆಂಪು, ಕಿಶೋರ ಚಂದ್ರವಾಣಿ. ಇವರ ಪೂರ್ಣನಾಮ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ. ಇವರು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಹಿರೇಕೊಡಿನವರು. ಜನನ ೧೯೦೪ ಡಿಸೆಂಬರ್ ೨೯ ಮತ್ತು ಮರಣ ೧೯೯೪ ನವೆಂಬರ್ ೧೦. ತಂದೆ ವೆಂಕಟಪ್ಪ, ತಾಯಿ ಸೀತಮ್ಮ. ೧೯೨೯ರಲ್ಲಿ ಕನ್ನಡದಲ್ಲಿ ಎಂ. ಎ. ಪದವಿ ಗಳಿಸಿದ್ದಾರೆ. ಇವರು ಬರೆದಿರುವ ಸಣ್ಣಕಥೆಗಳು ಬಿಗಿನರ್ ಮ್ಯೂಸ್(೧೯೨೨)-ಆಂಗ್ಲ ಭಾಷೆಯಲ್ಲಿ ಬರೆದ ಮೊದಲ ಕೃತಿ. ಅಮಲನಕಥೆ- ಜೇಮ್ಸ್ ಕಸಿನ್ ರವರ ಸಲಹೆಯಂತೆ ಕನ್ನಡದಲ್ಲಿ ಬರೆದ ಮೊದಲ ಕೃತಿ. ನನ್ನ ದೇವರು, ಸನ್ಯಾಸಿ ಮತ್ತು ಇತರ ಕಥೆಗಳು. ಕಾವ್ಯ: ಶ್ರೀರಾಮಾಯಣ ದರ್ಶನಂ-ಮಹಾಕಾವ್ಯ. ಕಾದಂಬರಿ: ಮಲೆಗಳಲ್ಲಿ ಮದುಮಗಳು, ಕಾನೂರು ಸುಬ್ಬಮ್ಮ ಹೆಗ್ಗಡಿತಿ. ಕವನ ಸಂಕಲನಗಳು: ಕೊಳಲು, ಪಾಂಚಜನ್ಯ, ನವಿಲು, ಅನಿಕೇತನ, ಸೋವಿಯಟ್ ರಶಿಯಾ, ಕಲಾಸುಂದರಿ, ಪಕ್ಷಿಕಾಶಿ, ಚಂದ್ರಮಂಚಕೆ ಬಾ ಚಕೋರಿ, ಪ್ರೇಮ ಕಾಶ್ಮೀರ, ಕೃತಿಕೆ, ಕಿಂಕಿಣಿ, ಷೋಡಸಿ, ಚಿತ್ರಾಂಗದಾ-ಖಂಡಕಾವ್ಯ. ನಾಟಕಗಳು: ಶೂದ್ರ ತಪಸ್ವಿ, ಸ್ಮಶಾನ ಕುರುಕ್ಷೇತ್ರ, ಯಮನಸೋಲು, ರಕ್ತಾಕ್ಷಿ, ಬೆರಳ್‌ಗೆ ಕೊರಳ್, ಮಹಾರಾತ್ರಿ, ಜಲಗಾರ. ವಿಮರ್ಶಾ ಗ್ರಂಥಗಳು: ರಸೋ ವೈ ಸಃ:, ವಿಭೂತಿ ಪೂಜೆ, ತಪೋನಂದನ, ಸಾಹಿತ್ಯ ಪ್ರಚಾರ. ಜೀವನ ಚರಿತ್ರೆ: ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ. ಆತ್ಮ ಚರಿತ್ರೆ: ನೆನಪಿನ ದೋಣಿಯಲ್ಲಿ. ಇವರು ಪಡೆದ ಪ್ರಶಸ್ತಿಗಳು: ೧೯೬೮ ರಲ್ಲಿ ರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಭಾರತೀಯ ಜ್ಞಾನಪೀಠ ಪ್ರಶಸ್ತಿ. ೧೯೫೫ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ. ಮೂರು ವಿಶ್ವವಿದ್ಯಾನಿಲಯದ ಗೌರವ ಡಿ.ಲಿಟ್ ಪ್ರಶಸ್ತಿ. ೧೯೮೭ ರಲ್ಲಿ ಪಂಪ ಪ್ರಶಸ್ತಿ. ಕರ್ನಾಟಕ ಸರ್ಕಾರದಿಂದ ರಾಷ್ಟ್ರಕವಿ, ಕರ್ನಾಟಕ ರತ್ನ ಪ್ರಶಸ್ತಿ. ಭಾರತದ ಪದ್ಮವಿಭೂಷಣ ಪ್ರಶಸ್ತಿ. ೧೯೫೮ ರಲ್ಲಿ ಧಾರವಾಡದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ರಸಋಷಿ, ಕನ್ನಡದ ವರ್ಡ್ಸ್‌ವರ್ತ್ ಎಂಬ ಬಿರುದುಗಳನ್ನು ಜನರಿಂದ ಪಡೆದಿದ್ದರು. ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂದು ಘೋಷಿಸಿದರು. ವಿಶ್ವಮಾನವ ಸಂದೇಶದಂತಹ ಅಮೂಲ್ಯ ಕಾಣಿಕೆಯನ್ನು ಜಗತ್ತಿಗೆ ನೀಡಿದರು.