ಡಿಬೆಂಚರ್

ಡಿಬೆಂಚರ್ ಎಂದರೆ ಸಾಲಪತ್ರ. ಅದು ಕಂಪೆನಿಯು ತೆಗೆದುಕೊಂಡ ಸಾಲವನ್ನು ಸೂಚಿಸುತ್ತದೆ. ಕಂಪೆನಿಯು ತಾನು ನಿರ್ದಿಷ್ಟ ಹಣವನ್ನು ಸಾಲ ಪಡೆದುಕೊಂಡಿರುವುದಾಗಿಯೂ, ಆ ಸಾಲವನ್ನು ಮರುಪಾವತಿ ಮಾಡುವವರೆಗೆ ನಿರ್ದಿಷ್ಟ ಪಡಿಸಿದ ದರದಂತೆ ಬಡ್ದಿಯನ್ನು ಪಾವತಿ ಮಾಡುವುದಾಗಿಯೂ ನಮೂದಿಸಿ, ತನ್ನ ಮುದ್ರೆಯೊಂದಿಗೆ ನೀಡಿರುವ ಬಂಡವಾಳ ಪತ್ರಗಳೇ ಡಿಬೆಂಚರ್‌ಗಳಾಗಿವೆ.

‌‌1. ಡಿಬೆಂಚರ್ ಒಂದು ಪ್ರಮಾಣಪತ್ರದಂತಿರುತ್ತದೆ. ಅದು ಕಂಪೆನಿಯು ತಾನು ಸಾಲಪಡೆದುಕೊಂಡ ಬಗ್ಗೆ ಬರಹದಲ್ಲಿ ಕೊಟ್ಟ ಪಾವತಿಯಾಗಿರುತ್ತದೆ.

2. ಡಿಬೆಂಚರ್‌ಗಳನ್ನು ಕಂಪೆನಿಯು ತನ್ನ ಮುದ್ರೆಯನ್ನೊತ್ತಿ ಕೊಡುತ್ತದೆ. ಆದರೆ ಕಂಪೆನಿಯ ಮುದ್ರೆಯನ್ನೊತ್ತುವುದು ಕಾನೂನಿನ ಪ್ರಕಾರ ಕಡ್ಡಾಯವಾಗಿರುವುದಿಲ್ಲ.

3. ಸಾಲವನ್ನು ನಿರ್ದಿಷ್ಟ ಅವದಿಯ ನಂತರ ಇಲ್ಲವೆ ನಿರ್ದಿಷ್ಟ ದಿನಾಂಕದಂದು ಮರುಪಾಲನೆ ಮಾಡಲಾಗುವುದೆಂದು ಮತ್ತು ಆ ಸಾಲದ ಮೇಲೆ ನಿರ್ದಿಷ್ಟ ದರ ಪ್ರಕಾರ ಬಡ್ಡಿಯನ್ನು ನಿಯಮಿತವಾಗಿ ಪಾವತಿ ಮಾಡಲಾಗುವುದೆಂದೂ ಕಂಪೆನಿಯು ಅದರಲ್ಲಿ ವಾಗ್ವದ ಮಾಡಿರುತ್ತದೆ. ಕಂಪೆನಿಗೆ ಲಾಭವಾಗಲಿ ಅಥವಾ ನಷ್ಟವಾಗಲಿ, ಕಂಪೆನಿಯು ಡಿಬೆಂಚರ್‌ಗಳ ಮೇಲೆ ಬಡ್ದಿಯನ್ನು ಪ್ರತಿವರ್ಷ ಪಾವತಿ ಮಾಡಲೇಬೇಕು.

4. ಡಿಬೆಂಚರ್‌ಗಳ ಮುಖಬೆಲೆಯು ಸಾಮಾನ್ಯವಾಗಿ ಅಧಿಕವಾಗಿರುತ್ತದೆ. ಇವುಗಳನ್ನು ಕ್ರಮಾಂಕದಲ್ಲಿ ಬಿಡುಗಡೆ ಮಾಡಲಾಗುತ್ತದೆ.

5. ಡಿಬೆಂಚರ್ ಧಾರಕರು ಕಂಪೆನಿಯ ಸಾಲಿಗರಾಗಿರುವುದರಿಂದ ಅವರಿಗೆ ಕಂಪೆನಿಯ ಸಭೆಗಳಿಗೆ ಹಾಜರಾಗಲು ಅನುಮತಿ ಇರುವುದಿಲ್ಲ.

6. ಡಿಬೆಂಚರ್‌ಗಳನ್ನು ಬೇರೆಯವರಿಗೆ ವರ್ಗಾಯಿಸಬಹುದು.

7. ಡಿಬೆಂಚರ್ ಮೊತ್ತವನ್ನು ಇಡಿಯಾಗಿ ಇಲ್ಲವೆ ಕಂತುಗಳಲ್ಲಿ ಮರುಪಾವತಿ ಮಾಡಬಹುದು. ಆದರೆ ಅದರ ಮೊತ್ತವನ್ನು ಒಂದೇ ಕಂತಿನಲ್ಲಿ ಸಂಗ್ರಹಿಸಲಾಗುತ್ತದೆ.


ಡಿಬೆಂಚರ್‌ಗಳ ಲಕ್ಷಣಗಳು.

1. ಡಿಬೆಂಚರ್ ಒಂದು ಪ್ರಮಾಣ ಪತ್ರದಂತಿರುತ್ತದೆ. ಅದು ಕಂಪೆನಿಯು ತಾನು ಸಾಲ ಪಡೆದುಕೊಂಡ ಬಗ್ಗೆ ಬರಹದಲ್ಲಿ ಕೊಟ್ಟ ಪಾವತಿಯಾಗಿರುತ್ತದೆ.

2. ಡಿಬೆಂಚರ್‌ಗಳನ್ನು ಕಂಪನಿಯು ತನ್ನ ಮುದ್ರೆಯನ್ನೊತ್ತಿ ಕೊಡುತ್ತದೆ ಆದರೆ ಕಂಪೆನಿಯ ಮುದ್ರೆಯನ್ನೊತ್ತುವುದು ಕಾನೂನಿನ ಪ್ರಕಾರ ಕಡ್ಡಾಯವಾಗಿರುವುದಿಲ್ಲ.

3. ಡಿಬೆಂಚರ್‌ಗಳಿಗೆ ಕಂಪೆನಿಯು ತನ್ನ ಸ್ವತ್ತುಗಳ ಅಡಮಾನದ ಭದ್ರತೆಯನ್ನು ಒದಗಿಸಿರುತ್ತದೆ. ಆದರೆ ಇಂಥ ಭದ್ರತೆಯನ್ನು ಒದಗಿಸಲೇಬೇಕೆಂಬ ನಿಯಮವಿಲ್ಲ.

4. ಡಿಬೆಂಚರ್‌ಗಳ ಮುಖಬೆಲೆಯು ಸಾಮಾನ್ಯವಾಗಿ ಅಧಿಕವಾಗಿರುತ್ತದೆ. ಇವುಗಳನ್ನು ಕ್ರಮಾಂಕದಲ್ಲಿ ಬಿಡುಗಡೆ ಮಾಡಲಾಗುತ್ತದೆ.

5. ಡಿಬೆಂಚರ್ ಧಾರಕರು ಕಂಪೆನಿಯ ಸಾಲಿಗರಾಗಿರುವುದರಿಂದ ಅವರಿಗೆ ಮತಧಿಕಾರವಿರುವುದಿಲ್ಲ.

6. ಡಿಬೆಂಚರ್ ಧಾರಕರು ಸಾಲಿಗರಾಗಿರುವುದರಿಂದ ಅವರಿಗೆ ಕಂಪೆನಿಯ ಸಭೆಗಳಿಗೆ ಹಾಜರಾಗಲು ಅನುಮತಿ ಇರುವುದಿಲ್ಲ.

7. ಡಿಬೆಂಚರ್‌ಗಳನ್ನು ಬೇರೆಯವರಿಗೆ ವರ್ಗಾಯಿಸಬಹುದು.

8. ಡಿಬೆಂಚರ್ ಮೊತ್ತವನ್ನು ಇಡಿಯಾಗಿ ಇಲ್ಲವೆ ಕಂತುಗಳಲ್ಲಿ ಮರುಪಾವತಿ ಮಾಡಬಹುದು. ಆದರೆ ಅದರ ಮೊತ್ತವನ್ನು ಒಂದೇ ಕಂತಿನಲ್ಲಿ ಸಂಗ್ರಹಿಸಲಾಗುತ್ತದೆ.

9 .ಕಂಪೆನಿಯು ಡಿಬೆಂಚರುಗಳ ಹಣವನ್ನು ಹಿಂದಿರುಗಿಸಲು ವಿಫಲವಾದರೆ, ಡಿಬೆಂಚರ್ ಧಾರಕರು ಕಂಪೆನಿಯ ವಿರುದ್ಧ ಕಾನೂನಿನ ಕ್ರಮವನ್ನು ಕೈಗೊಳ್ಳಲು ಅಥವಾ ಆಹಾರವಾಗಿಟ್ಟ ಸ್ವತ್ತುಗಳನ್ನು ಮಾರಾಟ ಮಾಡಿ ತಮಗೆ ಬರಬೇಕಾದ ಹಣವನ್ನು ವಸೂಲಿ ಮಾಡಲು ಹಕ್ಕುಳ್ಳವರಾಗಿರುತ್ತಾರೆ.