ಸದಸ್ಯ:Larren joy/ನನ್ನ ಪ್ರಯೋಗಪುಟ

ಮಂಗಳೂರು ದಸರಾ : 'ಮಂಗಳೂರು ದಸರಾ'ವನ್ನು ಮಂಗಳೂರಿನ ಕುದ್ರೋಳಿ ಶ್ರೀ ಗೋಖರ್ಣತೇಶ್ವರ ದೇವಸ್ಥಾನದವರು ಆಯೋಜಿಸುತ್ತಾರೆ.ಇದನ್ನು 'ಮಾರ್ನೇಮಿ', 'ವಿಜಯದಶಮಿ', 'ನವರಾತ್ರಿ ಹಬ್ಬ' ಎಂಬ ವಿವಿಧ ಹೆಸರುಗಳಿಂದ ಕರೆಯುತ್ತಾರೆ. 'ಹುಲಿವೇಶ','ಕರಡಿ ವೇಶ'ಗಳಂತಹ ಸಂಸ್ಕೃತಿಕ ಕುಣಿತಗಳು ಈ ಹಬ್ಬದ ಪ್ರಮುಖ ಆಕರ್ಷಣೆಯಾಗಿದೆ.ಈ ಹಬ್ಬದ ವೇಳೆಯಲ್ಲಿ ಊರಿನ ರಸ್ತೆಗಳು ೧೦ ದಿನಗಳ ಕಾಲ ದೀಪಗಳಿಂದ ಅಲಂಕರಿಸ್ಪಡುತ್ತದೆ.


ಜನರು ತಮ್ಮ-ತಮ್ಮ ಮನೆಗಳನ್ನು ಮತ್ತು ಅಂಗಡಿಗಳನ್ನು ಅಲಂಕರಿಸುತ್ತಾರೆ.ಮಂಗಳೂರಿನ ಪ್ರಮುಖ ರಸ್ತೆಗಳಗಿರುವ ಎಂ.ಜಿ. ರಸ್ತೆ, ಕೆ.ಯಸ್.ರಾವ್ ರಸ್ತೆಗಳು ಮೆರವಣಿಗೆಗೆ ಅಲಂಕರಿಸ್ಪಡುತ್ತವೆ.ಮಂಗಳೂರು ದಸರಾವನ್ನು ಬಿ.ರ್. ಕರ್ಕೇರರವರು ಪ್ರಾರಂಭಿಸಿದರು.

ಹುಲಿವೇಶ ಬದಲಾಯಿಸಿ

ಹುಲಿವೇಶ ಎಂಬ ಜನಪದ ಕುಣಿತವು 'ದಸರಾ'ದ ಸಮಯದಲ್ಲಿ ನಡೆಯುತ್ತದೆ. ಈ ಕುಣಿತವು ಯುವಕರು ಕುಣಿಯುತ್ತಾರೆ.ಅವರು ಹುಲಿಗಳಂತೆ ವೇಶ ಧರಿಸುತ್ತಾರೆ.ಈ ಕುಣಿತಕ್ಕೆ ಡೋಲುಗಳನ್ನು ಉಪಯೇಗಿಸುತ್ತಾರೆ.ಈ ವೇಶ ಧರಿಸಿ ಅವರು ಮನೆ-ಮನೆಗಳಿಗೆ ಹೋಗುತ್ತಾರೆ. ಹುಲಿಯೂ ಶಾರದ ದೇವಿಯ ಒಲವಿನ ಪ್ರಾಣಿಯಾದರಿಂದ, ಈ ಕುಣಿತವನ್ನು ಶಾರದ ದೇವಿಯನ್ನು ಗೌರವಿಸುವುದಕ್ಕೆ ಏರ್ಪಡಿಸಲಾಗುತ್ತದೆ.

ಗೋಕರ್ಣನಾಥೇಶ್ವರ ದೇವಸ್ಥಾನದ ದಾಸರ ವಿಗ್ರಹಗಳು ಬದಲಾಯಿಸಿ

ನವರಾತ್ರಿ ಸಮಯದಲ್ಲಿ, ಪುರೋಹಿತರು ವೈದಿಕ ಆಚರಣೆಗಳು ಮಾಡಿ, ಮಂತ್ರಗಳನ್ನು ಪಟಿಸಿ, ಶಾರದಾ ದೇವಿಯೊಂದಿಗೆ ಹಲವಾರು ವಿಗ್ರಹಗಳು ಸ್ವರ್ಣ ಕಲಾಮಂತಪದಲ್ಲಿ ಸ್ಥಾಪಿಸುತ್ತಾರೆ. ಈ ೯ ದಿನಗಳ ಆಚರಣೆಯಲ್ಲಿ ಅಲಂಕರಿಸಲ್ಪಟ್ಟ ಶಾರಧ ದೇವಿಯ ವಿಗ್ರಹ, ಮಹಾಗಣಪತಿ ಮತ್ತು ನವದುರ್ಗಗಳನ್ನು (ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂತ,ಕುಶ್ಮಾಂದಿನಿ, ಸ್ಕಂದಮಾಟಾ, ಕಟ್ಯಾಯಿನಿ, ಕಾಲ್ರಾತ್ರಿ, ಮಹಾಗೌರಿ, ಸಿದ್ಧಿದಾತ್ರಿ) ಪೂಜಿಸಅಲಾಗುತ್ತದೆ. ನವರಾತ್ರಿಯ ಸಲುವಾಗಿ ಕುದ್ರೋಳಿ ದೇವಸ್ಥಾನದ ಟ್ರಸ್ಟಿನವರು ೯ ದಿನಗಳ ಕಾಲ 'ಗಂಗಾವತರಣ'ವನ್ನು ಆಯೋಜಿಸುತ್ತಾರೆ.ಈ ಚಿತ್ರಣದಲ್ಲಿ 13 ಅಡಿ ಎತ್ತರದ ಶಿವನ 4 ವರ್ಣರಂಜಿತ ವಿಗ್ರಹಗಳು ಇರುತ್ತದೆ.

ಸಂಭ್ರಮದ ಮೆರವಣಿಗೆ ಬದಲಾಯಿಸಿ

ಈ ಮೆರವಣಿಗೆಯು ವಿಜಯದಶಮಿ ಹಬ್ಬದಂದು 'ಶ್ರೀ ಗೋಖರ್ಣತೇಶ್ವರ ದೇವಸ್ಥಾನ'ದೆದುರು ಪ್ರರಂಭವಾಗಿ, ಮರುದಿನ ಇದೆ ಸ್ಥಳದಲ್ಲಿ 'ಪುಷ್ಕರಿಣಿ'ಕೊಳದಲ್ಲಿ ವಿಗ್ರಹಗಳ ವಿಸ್ರಜನೆಯ ಮೂಲಕ ಅಂತ್ಯಗೊಳ್ಳುತ್ತದೆ. 'ನವದುರ್ಗ' , ಮಹಾಗಣಪತಿ ಮತ್ತು ಶಾರದಾ ದೇವಿಯ ವಿಗ್ರಹಗಳನ್ನು ಮೆರವಣಿಗೆಯಲ್ಲಿ ಕೊಂಡ್ಯೊತ್ತಾರೆ. ಈ ವಿಗ್ರಹಗಳನ್ನು ಹೂವುಗಳು, ಛತ್ರಿಗಳಿಂದ ಅಲಂಕಾರಿಸಲ್ಪಡಿಸುತ್ತವೆ. ಜೊತೆಯಲ್ಲಿ ಡೋಲು, ಚೆಂಡೆ, ಜಾನಪದ ನೃತ್ಯಗಳು, ಯಕ್ಷಗಾನ ಪಾತ್ರಗಳು, ಹುಲಿವೇಶ, ಡೊಲ್ಲು ಕುಣಿತ ಮತ್ತು ಸಾಂಪ್ರದಾಯಿಕ ನೃತ್ಯಗಳು ಈ ಮೆರವಣಿಗೆಯ ವಿಶೇಷತೆ. ಮೆರವಣಿಗೆಯು ಕುದ್ರೋಳಿ, ಮನ್ನಗುಡ್ಡ, ಲೇಡಿಹಿಲ್, ಲಾಲ್ಬಾಗ್, ಕೆ ಎಸ್ ರಾವ್ ರಸ್ತೆ, ಹಂಪನಕಟ್ಟಾ, ಕಾರ್ ಸ್ಟ್ರೀಟ್ ಮತ್ತು ಅಲೇಕ್ ಸೇರಿದಂತೆ ನಗರದ ಪ್ರಮುಖ ರಸ್ತೆಗಳ ಮೂಲಕ ಹಾದುಹೋಗುತ್ತದೆ.

ಇತರೆ ಸ್ಥಳಗಳು ಬದಲಾಯಿಸಿ

ಮಂಗಳೂರು ದಸರಾದ ಪ್ರಾಥಮಿಕ ಸ್ಥಳ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನವಾದರು ಮಂಗಲಾದೇವಿ, ಶ್ರೀ ವೆಂಕಟರಮಣ ದೇವಾಲಯ ಮುಂತಾದ ದೇವಾಲಯಗಳಲ್ಲಿ ಈ ದಸರಾವನ್ನು ಆಯೋಜಿಸಲ್ಪಟ್ಟಿರುತ್ತದೆ.

ಉಲ್ಲೇಖ ಬದಲಾಯಿಸಿ