ಆದಿವಾಸಿ ಸಾಮಾಜಿಕ ಸಂಘಟನೆ ಬದಲಾಯಿಸಿ

ಮಾನವನು ತನ್ನ ಐತಿಹಾಸಿಕವಾದ ಮಹಾನ್ ನಡಿಗೆಯಲ್ಲಿ ದಾಪುಗಾಲಿರಿಸುತ್ತಾ ಇದೀಗ ನಾಗರಿಕತೆಯ ಅತ್ಯುಚ್ಚ ಮಟ್ಟಕ್ಕೆ ಬಂದು ತಲುಪಿದ್ದಾನೆ. ಹಾಗೆಂದ ಮಾತ್ರಕ್ಕೆ ಇಡೀ ಜಗತ್ತಿನ ಎಲ್ಲೆಡೆಯಲ್ಲಿಯೂ ಕಾಣಬರುವ ಎಲ್ಲಾ ಮಾನವ ಸಮೂಹ ಸಮುದಾಯಗಳು ನಾಗರಿಕತೆಯ ಈ ಘಟ್ಟಕ್ಕೆ ಬಂದು ತಲುಪಿವೆ ಎನ್ನುವಂತಿಲ್ಲ. ನಾಗರಿಕತೆಯ ಅತ್ಯುಚ್ಛ ಶಿಕರದಲ್ಲಿರುವ ಜನ ಸಮೂಹದವರೆಗೆ ಮಾನವ ಜೀವನ ನಡಿಗೆಯ ಅನ್ಯಾನ್ಯ ಹಂತಗಳಲ್ಲಿರುವ ಜನ ಸಮೂಹಗಳು ಎಲ್ಲಾಕಡೆ ಪಸರಿಸಿವೆ.

ಆದಿವಾಸಿ ಎಬ ಪರಿಕಲ್ಪನೆ ಬದಲಾಯಿಸಿ

ಭಾರತಿಯ ಸಮಾಜದ ಅತ್ಯಂತ ಕೆಳಸ್ತರದಲ್ಲಿರುವ ಎರಡು ಪ್ರಮುಖ ಜನವರ್ಗಗಳಲ್ಲಿ "ಆದಿವಾಸಿ ಸಮುದಾಯ"ವು ಒಂದು.ಕ್ರಿ.ಶ.೧೯೯೧ರ ಜನಗಣತಿಯಂತೆ ಭಾರತದಾದ್ಯಂತ ಸುಮಾರು ೭.೪೨ ಕೋಟಿ ಮಂದಿ ಆದಿವಾಸಿಗಳು ವಾಸಿಸುತ್ತಿದ್ದು, ಈ ಸಂಖ್ಯಾಗಾತ್ರವು ಇಂಗ್ಲೆಂಡಿನ ಜನಸಂಖ‍್ಯಾ ಗಾತ್ರದಷ್ಟಿದೆ. ಮಾತ್ರವಲ್ಲ ಆಫ್ರಿಕಾವನ್ನು ಬಿಟ್ಟರೆ ಇಡೀ ಜಗತ್ತಿನಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಆದಿವಾಸಿಗಳು ವಾಸಿಸುವುದನ್ನು ಭಾರತದಲ್ಲಿ ಮಾತ್ರ ಕಾಣಬಹುದು.

ಬುಡಕಟ್ಟುಗಳ ವಿವರ ಪಟ್ಟಿ ಬದಲಾಯಿಸಿ

ಭಾರತದ ಸಂವಿದಾನ,ಕಲಮು ೩೬೬(೨೫)ವಿವರ ಪಟ್ಟಿ ಅರ್ಥೈಸುತ್ತದೆ. ಬುಡಕಟ್ಟು ಅಥವ ಬುಡಕಟ್ಟು ಸಮುದಾಯ,ಗುಂಪು ಒಳಗೊಂಡಿರುವ ಬುಡಕಟ್ಟುಗಳು ಪರಿಗಣಿಸುತ್ತವೆ. ಕಲಮು ೩೪೨ ರ ಕೆಳಗೆ ಬುಡಕಟ್ಟುವಿವರ ಪಟ್ಟಿಯು ಸಂವಿದಾನದ ಉದ್ದೇಶವಾಗಿದೆ. ಕಲಮು ೩೪೨ರಲ್ಲಿ ಬುಡಕಟ್ಟುಗಳು ನಿರ್ಧಿಷ್ವ ಕಾರ್ಯಕ್ರಮಗಳನ್ನು ಹೊಂದಿರಬೇಕೆಂದು ಈ ವಿವರ ಪಟ್ಟಿ ಸೂಚಿಸುತ್ತದೆ ಆದಾಗ್ಯೂ ಯಾವುದೆ ಸಮುದಾಯ ನಿರ್ಧಿಷ್ವವಾದ ಅಳತೆಗೋಲುಗಳನ್ನು ಹೊಂದಿರುವುದಿಲ್ಲ ಆದಾಗ್ಯೂ ಕೆಲವು ಅಳತೆಗೋಲುಗಳ ಮೂಲಕ ಲಕ್ಷಣಗಳನ್ನು ರೂಪಿಸಬಹುದಾಗಿದೆ. ೧ಭೌಗೋಳಿಕವಾಗಿ ಬೇರ್ಪಡಿಸುವಿಕೆ:-ಅವರು ಕಾಡುಗಳಲ್ಲಿ ಮತ್ತು ಬೆಟ್ಟಗಳಲ್ಲಿ,ವಿಹಾರ,ಪ್ರತ್ಯೇಕ ಬಹುದೂರದ ಮತ್ತು ಸತ್ಕರಿಸದ ಪ್ರದೇಶಗಳಲ್ಲಿ ವಾಸಿಸುತ್ತಾರೆ. ೨ಹಿಂದುಳಿದಿರುವಿಕೆ:-ಅವರು ಜೀವನೋಪಾಯಕ್ಕಾಗಿ ಕೃಷಿಯನ್ನ ಅವಲಂಬಿಸಿದ್ದಾರೆ ಕೆಳಮಟ್ಟದ ಆರ್ಥಿಕತೆಯ ಜೋತೆಗೆ ಕೆಳಮಟ್ಟದ ತಂತ್ರಜ್ನಾನ ಅವರ ಬಡತನವನ್ನು ಸೂಚಿಸುತ್ತದೆ ಅವರು ಕೆಳಮಟ್ಟದ ಸಾಕ್ಷಾರತೆ ಮತ್ತು ಆರೋಗ್ಯವನ್ನು ಹೋಂದಿದ್ದಾರೆ. ೩ವಿಭಿನ್ನ ಸಂಸ್ಕೃತಿ ಭಾಷೆ ಮತ್ತು ಧರ್ಮ:- ಅವರು ತಮ್ಮದೆಯಾದ ವ್ಯಶಿಷ್ವ್ಯವಾದ ಸಂಸ್ಕೃತಿ ಭಾಷೆ ಧರ್ಮವನ್ನು ಹೊಂದಿದ್ದಾರೆ.

ನಿರ್ಧಿಷ್ವವಾಗಿ ಖಂಡನೆಗೊಳಗಾದ ಬುಡಕಟ್ಟು ಗುಂಪುಗಳು ಬದಲಾಯಿಸಿ

ಬುಡಕಟ್ಟು ಗುಂಪುಗಳ ವಿವರದಿಂದ ಯಾರು ಗುರ್ತಿಸಲ್ಪಡುತ್ತಾರೆ, ವ್ಯಾಪಕವಾಗಿ ಹಬ್ಬಿದ ಸಮುದಾಯದಿಂದ ಬೇರ್ಪಟ್ಟ ಮತ್ತು ಯಾರು ಸಾಂಸ್ಕೃತಿಕವಾಗಿ ಗುರ್ತಿಸುವಿಕೆಯನ್ನು ಸ್ಪಷ್ವವಾಗಿ ಬೇರ್ಪಡಿಸಲ್ಪಡುತ್ತಾರೊ ಅವರೆ ನಿರ್ಧಿಷ್ವವಾಗಿ ಖಂಡನೆಗೊಳಗಾದ ಬುಡಕಟ್ಟು ಗುಂಪುಗಳೆಂದು ಕೇಂದ್ರ ಸರ್ಕಾರ ಹೇಳಿದೆ ಹಾಗಾಗಿ ೭೫ ಬುಡಕಟ್ಟು ಸಮುದಾಯಗಳು ಖಂಡನೆಗೊಳಗಾದ ಬುಡಕಟ್ಟು ಗುಂಪುಗಳೆಂದು ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಗುರ್ತಿಸಲ್ಪಟ್ಟಿದೆ. ಇವುಗಳು ಬೇಟೆ, ಆಹಾರ ಹುಡುಕುವಿಕೆ ಮತ್ತು ಕೆಲವು ಕೃಷಿ ಸಮುದಾಯಗಳು ಅಸಂಸ್ಕೃತಿ ಗುಂಪುಗಳೆಂದು ಗುರ್ತಿಸಿ ಕೊಂಡಿದ್ದು ಮತ್ತು ಅವರ ಅಭಿವೃಧಿಯನ್ನು ಸಾಧಿಸಲು ವಿಶೇಷ ಕಾರ್ಯಕ್ರಮಗಳ ಅವಶ್ಯಕತೆ ಇದೆ. ಇಂದು ಬುಡಕಟ್ಟು ಜನರು ತಮ್ಮ ಹಕ್ಕುಗಳು ಮತ್ತು ವಿಶೇಷ ಮೀಸಲಾತಿ ಪಾಲುಬೇಕೆಂದು ಆಗ್ರಹಿಸುತ್ತಾರೆ.

ಭೌಗೋಳಿಕ ದೃಷ್ವಿಕೋನ ಬದಲಾಯಿಸಿ

   ಭಾರತದ ಸಂವಿಧಾನದಲ್ಲಿ ಬುಡಕಟ್ಟುಗಳ ಪಟ್ಟಿಯು ಗಣನೀಯವಾಗಿ ಗುರ್ತಿಸಲ್ಪಡುತ್ತವೆ. ೨೦೧೧ ರ ಜನಗಣತಿಯ ಪ್ರಕಾರ ೧೦೪ ಮಿಲಿಯನ್ ಜನಸಂಖ್ಯೆಯಲ್ಲಿ ೮.೬% ರಷ್ಟು ಬುಡಕಟ್ಟು ಜನರನ್ನೊಳಗೊಂಡಿದೆ. ಅವರು ಹಿಮಾಲಯದ ವಿಸ್ತಾರ ಪ್ರದೇಶಗಳುದ್ದಕ್ಕೂ ಕಂಡು ಬರುತ್ತಾರೆ. ಅಸ್ಸಾಂ, ಮೇಘಾಲಯ, ತ್ರಿಪುರ, ಅರುಣಾಚಲ ಪ್ರದೇಶ, ಮಣಿಪುರ, ಮಿಜೋರಾಂ, ನಾಗಲ್ಯಾಂಡ್ ರಾಜ್ಯಗಳಲ್ಲಿ ವಾಸಿಸುತ್ತಿದ್ದಾರೆ. ಈಶಾನ್ಯ ರಾಜ್ಯಗಳಾದ ಅರುಣಾಚಲ್ ಪ್ರದೇಶ, ಮೇಘಾಲಯ, ಮತ್ತು ನಾಗಲ್ಯಾಂಡ್ ಗಳಲ್ಲಿ ೯೦% ಕ್ಕಿಂತ ಹೆಚ್ಚು ಜನರಿದ್ದಾರೆ.
   ಮತ್ತೊಂದು ಭಾಗದಲ್ಲಿ ಅಂದರೆ ಭಾರತದ ಮಧ್ಯಭಾಗದ ಗುಡ್ದಗಾಡು ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಉತ್ತರದಲ್ಲಿ ನರ್ಮದಾ ನದಿಯಿಂದ ಆಗ್ನೇಯದಲ್ಲಿ ಗೋದಾವರಿ ನದಿಯವರೆಗೆ ಬುಡಕಟ್ಟು ಜನರು ಇಳಿಜಾರು ಪ್ರದೇಶಗಳನ್ನು ವಶಪಡಿಸಿಕೊಂಡಿದ್ದಾರೆ.
   ಮತ್ತೊಂದು ಬುಡಕಟ್ಟು ಜನಾಂಗವೆಂದರೆ ಸಂತಾಲ್ಸ್ ಅವರು ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ವಾಸಿಸುತ್ತಾರೆ. ಭಾರತದ ಮದ್ಯಭಾಗದ ರಾಜ್ಯಗಳಲ್ಲಿ ಬುಡಕಟ್ಟು ಸಮುದಾಯಗಳು ವ್ಯಾಪಿಸಿವೆ. ೭೫% ಕ್ಕಿಂತಲೂ ಹೆಚ್ಚಿನ ಜನರು ಇಲ್ಲಿ ವಾಸಿಸುತ್ತಿದ್ದಾರೆ. ಆದಾಗ್ಯೂ, ಒಟ್ಟು ಜನಸಂಖ್ಯೆಯಲ್ಲಿ ೧೦% ರಷ್ಟು ಜನರನ್ನು ಮಾತ್ರ ಬುಡಕಟ್ಟು ಜನರೆಂದು ಪರಿಗಣಿಸಲಾಗಿದೆ.
   ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಮತ್ತು ಕೇರಳಗಳಲ್ಲಿ ಅನೇಕ ಚಿಕ್ಕ ಚಿಕ್ಕ ಬುಡಕಟ್ಟು ಜನರನ್ನು ಕಾಣಬಹುದಾಗಿದೆ. ಭಾರತದ ಪಶ್ಚಿಮ ರಾಜ್ಯಗಳಾದ ಗುಜರಾತ್ ಮತ್ತು ರಾಜಸ್ತಾನಗಳಲ್ಲಿ ಮತ್ತು ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ತಮ್ಮ ಸಂಸ್ತಾನಗಳನ್ನು ರೂಪಿಸಿಕೊಂಡಿದ್ದಾರೆ. ಕೇರಳ ಮತ್ತು ತಮಿಳುನಾಡುಗಳಲ್ಲಿ ೧% ರಷ್ಟು ಬಡಕಟ್ಟು ಜನರಿದ್ದಾರೆ.ಅಲ್ಲದೆ ಕರ್ನಾಟಕ ಮತ್ತು ಆಂದ್ರ ಪ್ರದೇಶಗಳಲ್ಲಿ ೬% ರಷ್ಟು ಜನರಿದ್ದಾರೆ.