ಸದಸ್ಯ:LAKSHMAN PRASAD.V,1510448,LAKSHMAN PRASAD V

Template info box

LAKSHMAN PRASAD.V,1510448,LAKSHMAN PRASAD V
Born08/01/1998
kolar district
NationalityINDIAN
EducationSecond PUC

ನನ್ನ ಹೆಸರು ಲಕ್ಷ್ಮಣ್ ಪ್ರಸಾದ್.ವಿ

ನಾನು ೦೮-೦೧-೧೯೯೮ರಂದು ಜನಿಸಿದೆ. ನಾನು ಚಿನ್ನದ ಗಣಿಗಾರಿಕೆಗೆ ಹೆಸರಾದ ಕೋಲಾರ ಜಿಲ್ಲೆಯ ಮುಳುಬಾಗಿಲುನ ಒಂದು ಖಾಸಗಿ ಆಸ್ಪತ್ರೆಯಲ್ಲಿ ಜನಿಸಿದೆ.

ನನ್ನ ಬಾಲ್ಯವು ಬಹಳ ಸೊಗಸಾಗಿತ್ತು. ನಾನು ನಿಸರ್ಗದ ಬೆಟ್ಟ ಬಯಲಿನಲ್ಲಿ ಸ್ನೇಹಿತರೊಡನೆ ಆಟವಾಡುತ್ತ ಕಾಲ ಕಳೆದೆನು. ನನ್ನ ಶಿಕ್ಷಣಕ್ಕಾಗಿ ಮತ್ತು ತಂದೆಯ ಹಣ ಸಂಪಾದನೆಗಾಗಿ ನಾನು ನನ್ನ ಸ್ನೇಹಿತರನ್ನು ಬಿಟ್ಟು ಬೆಂಗಳೂರು ನಗರಕ್ಕೆ ಕುಟುಂಬ ಸಮೇತ ಬಂದೆವು. ಹದಿಮೂರು ವರ್ಷಗಳ ಕಾಲ ನನ್ನ ಕುಟುಂಬವು ಬೆಂಗಳೂರಿನಲ್ಲಿ ವಾಸಿಸಿದ್ದೇವೆ.

ವಿದ್ಯಾಭ್ಯಾಸ

ಬದಲಾಯಿಸಿ
ನಾನು  ನನ್ನ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಕೈಕೊಂಡ್ರಹಳ್ಳಿಯಲ್ಲಿ ಮುಗಿಸಿದೆ. ನಂತರ ನನ್ನ ಪ್ರೌಢ ಶಿಕ್ಷಣವನ್ನು ಸರ್ಕಾರಿ ಪ್ರೌಢ ಶಾಲೆ ಅಗರದಲ್ಲಿ ಓದಿದೆನು. ನಾನು ಎಸ್.ಎಸ್.ಎಲ್.ಸಿ ಪರಿಕ್ಷೆಯಲ್ಲಿ ಶೇಕಡ ೮೧% ಅಂಕಗಳನ್ನು ಗಳಿಸಿ ಉತ್ತೀರ್ಣನಾದೆ. ನಂತರ ನಾನು ಕ್ರುಪಾನಿಧಿ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗವನ್ನು ಮಾಡಿ ದ್ವಿತೀಯ ಪಿ.ಯು. ಪರೀಕ್ಷೆಯಲ್ಲಿ ಶೇಕಡ ೮೩% ಅಂಕಗಳನ್ನು ಪಡೆದು ಉತ್ತೀರ್ಣನಾದೆ. ನನ್ನ ಮುಂದಿನ ಉನ್ನತ ವ್ಯಾಸಂಗಕ್ಕಾಗಿ ಮತ್ತು ಕೆಲಸ ಅತಿ ಬೇಗ ಸಿಗುವ ಕಾರಣಕ್ಕಾಗಿ ನಾನು ಹೆಸರಾಂತ ಕ್ರೈಸ್ಟ್ ಯೂನಿವರ್ಸಿಟಿಯನ್ನು ಆರಿಸಿಕೊಂಡೆನು. ನಾನು ಈಗ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿ.ಕಾಂ. ಎರಡನೇ ಸೆಮಿಸ್ಟರ್ ಓದುತ್ತಿದ್ದೇನೆ. ಈ ಕಾಲೇಜಿಗೆ ಸೇರಿದ ಮೇಲೆ ನನಗೆ ಗಣಕಯಂತ್ರದಲ್ಲಿ ಕನ್ನಡದಲ್ಲಿ ಟೈಪ್ ಮಾಡಲು ಕಲಿತೆನು. ನಿಮ್ಮ ಅಂತರ್ಜಾಲವು ಕನ್ನಡದಲ್ಲಿ ಟೈಪ್ ಮಾಡಲು ಹೆಚ್ಚು ಸಹಾಯಕವಾಗಿದೆ. ಈ ಕಾಲೇಜಿನಿಂದ ನನ್ನ ಸಾಮಾನ್ಯ ತಿಳುವಳಿಕೆ ಹೆಚ್ಚಾಗಿದೆ. ಇದರ ಜೊತೆಗೆ ಜೀವನದ ಜವಾಬ್ದಾರಿಯ ಪ್ರಾಮುಖ್ಯತೆಯು ನನಗೆ ತಿಳಿಯುವಂತಾಯಿತು. ಕ್ರೈಸ್ಟ್ ಯೂನಿವರ್ಸಿಟಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಂದಾಗಿ ಆಂಗ್ಲ ಭಾಷೆಯನ್ನು ಸ್ಪಷ್ಟವಾಗಿ ಮಾತನಾಡಲು ಕಲಿತೆನು.

ಹವ್ಯಾಸಗಳು

ಬದಲಾಯಿಸಿ

ಕಥೆ ಪುಸ್ತಕಗಳನ್ನು ಓದುವುದು, ದಿನಪತ್ರಿಕೆಯನ್ನು ಓದುವುದು ಮತ್ತು ಯೋಗ ಮಾಡುವುದು ಮುಂತಾದವುಗಳು ನನ್ನ ದಿನನಿತ್ಯದ ಹವ್ಯಾಸಗಳಾಗಿವೆ.

ಆಸಕ್ತಿ ಕ್ಷೇತ್ರಗಳು

ಬದಲಾಯಿಸಿ

ನನಗೆ ಚಿಕ್ಕ ವಯಸ್ಸಿನಿಂದಲು ಕ್ರೀಡೆ ಎಂದರೆ ಬಹಳ ಇಷ್ಟ. ಗಣಿತಶಾಸ್ತ್ರದಲ್ಲಿ ಮತ್ತು ನಾಟಕದಲ್ಲಿ ಹೆಚ್ಚು ಆಸಕ್ತಿ ಇದೆ. ಇದರಿಂದಾಗಿ ನಾನು ಪ್ರಾಥಮಿಕ ಶಾಲೆಯಲ್ಲಿ ಒದುತ್ತಿದ್ದಾಗಲೇ ಕಬಡ್ಡಿ ಪಂದ್ಯದಲ್ಲಿ ಭಾಗವಹಿಸಿ ತಾಲ್ಲೂಕು ಹಂತವನ್ನು ಗೆದ್ದೆವು. ಆದರೆ ನಾನು ಓದಿದಂತಹ ಪದವಿ ಪೂರ್ವ ಕಾಲೇಜಿನಲ್ಲಿ ಕ್ರೀಡೆಗೆ ಯಾವ ರೀತಿಯ ಪ್ರೋತ್ಸಾಹ ಸಿಗಲಿಲ್ಲ.

ಗಣಿತಶಾಸ್ತ್ರದಲ್ಲಿ ವಿಶೇಷತಜ್ಞನಾಗುವುದು ನನ್ನ ಗುರಿಯಾಗಿದೆ. ಇದರ ಜೊತೆಗೆ ನಾನು ವಿವೇಕಾನಂದರವರ ಭಾಷಣದಿಂದ ಪ್ರೋತ್ಸಾಹಗೊಂಡಿದ್ದು ಅವರಂತೆಯೇ ನಾನು ಸಮಾಜಕ್ಕೆ ಒಂದು ಒಳ್ಳೆಯ ಕೊಡುಗೆಯನ್ನು ನೀಡಬೇಕೆಂಬ ಮಹದಾಸೆಯನ್ನು ಹೊಂದಿದ್ದೇನೆ.