ಸದಸ್ಯ:Kulkarni.sourabh12
ಸೌರಭ ಕುಲಕರ್ಣಿ
ನಾನು ನನ್ನ ಕುಟುಂಬ
ಬದಲಾಯಿಸಿನಾನು ಸೌರಭ ಕುಲಕರ್ಣಿ.
ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ನನ್ನ ಪದವಿ ಪೂರ್ವ ಶಿಕ್ಷಣವನ್ನು ಮುಗಿಸಿ, ಪ್ರಸ್ತುತ ಬೆಂಗಳೂರಿನ ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ಪದವಿ ಶಿಕ್ಷಣದ ಮೊದಲ ವರ್ಷ ವ್ಯಾಸಂಗ ಮಾಡುತ್ತಿದ್ದೇನೆ. ಮಾಧ್ಯಮ ಮತ್ತು ಇನ್ನಿತರ ಕ್ರಿಯಾಶೀಲ ಮತ್ತು ಸೃಜನಶೀಲ ಚಟುವಟಿಕೆಗಳಲ್ಲಿ ನಾನು ಆಸಕ್ತಿಯುಳ್ಳವನ್ನಾದ್ದರಿಂದ, ಅದೇ ಕ್ಷೇತ್ರದಲ್ಲಿ ನನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದ್ದೇನೆ. ನನ್ನ ತಂದೆ ಶ್ರೀ ಸಂಜೀವ ಕುಲಕರ್ಣಿಯವರು ಸಹ ಕನ್ನಡ ನಿರೂಪಕರಾಗಿ ಕನ್ನಡದ ಬಹುತೇಕ ಕಾರ್ಯಕ್ರಮಗಳನ್ನು ನಿರ್ದೇಶಿಸಿದ್ದಾರೆ, ಕಾರ್ಯಕ್ರಮಗಳ ನಿರೂಪಣೆ ಮಾಡಿದ್ದಾರೆ. ನನ್ನ ತಾಯಿ ಶ್ರೀಮತಿ ಭಾಗ್ಯಾ ಕುಲಕರ್ಣಿಯವರು ಸಹ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಆಸಕ್ತಿಯನ್ನು ಹೊಂದಿದ್ದು, ಅನೇಕ ಪುಸ್ತಕಗಳನ್ನು ಓದಿಕೊಂಡಿದ್ದಾರಲ್ಲದೆ, "ಸಂಭ್ರಮ ಕಣಜ" ಎಂಬ ವಿಶಿಷ್ಟ ಪುಸ್ತಕ ಮಳಿಗೆಯನ್ನು ಸಹ ಮುನ್ನಡೆಸುತ್ತಿದ್ದಾರೆ. ಅಲ್ಲದೆ 'ಸಂಭ್ರಮ ಸೌರಭ' ಎಂಬ ಕನ್ನಡ ಸುಸಂಕೃತ ಸಂಸ್ಥೆಯನ್ನು ಸಹ ನಮ್ಮ ತಂದೆ-ತಾಯಿ ನಡೆಸುತ್ತಿದಾರೆ. ನಾನು ಅವರ ಏಕಮಾತ್ರ ಸುಪುತ್ರನಾಗಿದ್ದು, ಬಹಳ ಪ್ರೀತಿ-ಮಮತೆಯಿಂದ ನನ್ನನ್ನು ಬೆಳೆಸಿದ್ದಾರೆ.
ಪ್ರತಿಭೆ-ಪ್ರವೃತ್ತಿ
ಬದಲಾಯಿಸಿನನಗೆ ನಟನೆಯಲ್ಲಿ ಬಹಳ ಆಸಕ್ತಿಯಿದ್ದು, ಅನೇಕ ನಾಟಕಗಳಲ್ಲಿ, ಧಾರಾವಾಹಿಗಳಲ್ಲಿ, ಸಿನಿಮಾಗಳಲ್ಲಿ ನಾನು ನಟಿಸಿದ್ದೇನೆ. ಸುವರ್ಣ ವಾಹಿನಿಯಲ್ಲಿ ಪ್ರಸಾರವಾದಂತಹ "ಗುರು ರಾಘವೇಂದ್ರ ವೈಭವ" ಎಂಬ ಧಾರಾವಾಹಿಯಲ್ಲಿ ವೆಂಕಟನಾಥನ ಪಾತ್ರದಲ್ಲಿ ಸುಮಾರು ೫೦ ಕಂತುಗಳಲ್ಲಿ ನಟಿಸಿದ್ದೇನೆ. ಜೊತೆಗೆ, ಶ್ರೀ ಸುನೀಲ್ ಪುರಾಣಿಕ್ ನಿರ್ದೇಶನದ "ಗುರುಕುಲ" ಎಂಬ ಮಕ್ಕಳ ಸಿನಿಮಾದಲ್ಲಿ ಸಹ ನಟಿಸಿದ್ದೇನೆ. ಪ್ರಭಾತ ಕಲಾವಿದರು, ಬೆಂಗಳೂರು ಥಿಯೇಟರ್ ಆನ್ಸಂಬಲ್ ಮತ್ತಿತರ ರಂಗತಂಡಗಳಲ್ಲಿ ನಾನು ಕೆಲಸ ಮಾಡಿದ್ದೇನೆ. ಶಿವರಾಜಕುಮಾರ್, ರಮೇಶ ಅರವಿಂದ, ಸುಧಾರಾಣಿ, ತಾರಾ ವೇಣುಗೋಪಾಲ್, ಟಿ.ಎಸ್.ನಾಗಾಭರಣ ಮುಂತಾದ ಹಲವು ದಿಗ್ಗಜರ ಸಮ್ಮುಖದಲ್ಲಿ ಕಾರ್ಯಕ್ರಮಗಳ ನಿರೂಪಣೆ ಮಾಡಿದ್ದೇನೆ. ಅಲ್ಲದೆ, ಅನೇಕ ಅಂತರ್ಶಾಲಾ-ಕಾಲೇಜು ಸ್ಪರ್ಧೆಗಳಲ್ಲಿ ಭಾಗವಹಿಸಿ, ಬಹುಮಾನ ಗೆದ್ದಿದ್ದೇನೆ.
ಆಸಕ್ತಿ
ಬದಲಾಯಿಸಿನನಗೆ ಕನ್ನಡ ಪುಸ್ತಕಗಳನ್ನು ಓದುವ ಆಸಕ್ತಿಯೂ ಉಂಟು. ಎಸ್.ಎಲ್.ಭೈರಪ್ಪನವರ 'ಆವರಣ', 'ಕವಲು', 'ಯಾನ', ಮುಂತಾದ ಕಾದಂಬರಿಗಳನ್ನು ಓದಿದ್ದೇನೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕರಾದ ಕುವೆಂಪು, ದ ರಾ ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ ಕೃ ಗೋಕಾಕ್, ಯು ಆರ್ ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರರ ಸಾಹಿತ್ಯವನ್ನೂ ಓದಬೇಕೆನ್ನುವ ಹಂಬಲವಿದೆ. ಅಲ್ಲದೆ ಸದಭಿರುಚಿ ಚಲನಚಿತ್ರಗಳನ್ನು ವೀಕ್ಷಿಸುವ ಹವ್ಯಾಸವೂ ನನಗಿದೆ. ಡಾ.ರಾಜಕುಮಾರ್ ನನ್ನ ಅಚ್ಚುಮೆಚ್ಚಿನ ನಟ. ಅವರು ನಟಿಸಿದ 'ಕಸ್ತೂರಿ ನಿವಾಸ', 'ಗಂಧದ ಗುಡಿ', 'ಕೆರಳಿದ ಸಿಂಹ', 'ಶಂಕರ್ ಗುರು', 'ಧೃವತಾರೆ', 'ಆಕಸ್ಮಿಕ', ಮುಂತಾದ ಅನೇಕ ಚಲನಚಿತ್ರಗಳನ್ನು ನೋಡಿದ್ದೇನೆ. ಜೊತೆಗೆ ಸಂಗೀತವನ್ನು ಆಲಿಸುವ ಅಭ್ಯಾಸವೂ ಇದೆ. ಸಿ.ಅಶ್ವಥ್, ರಘು ದೀಕ್ಷಿತ್ ರಂತಹ ಕ್ರಿಯಾಶೀಲ ಸಂಗೀತಗಾರರು ನನಗೆ ಬಹಳ ಇಷ್ಟ.
ಗುರಿ
ಬದಲಾಯಿಸಿಬಿಡುವಿನ ಸಮಯದಲ್ಲಿ ನನಗೆ ಪ್ರವಾಸ ಹೋಗುವುದು ಮನೋರಂಜನೆಯ ಮೂಲ. ಜೋಗ ಜಲಪಾತ, ಗೋಲ ಗುಮ್ಮಟ, ಸಾಗರ, ಸಕಲೇಶಪುರ, ಮಡಿಕೇರಿ, ಊಟಿ, ಕೊಚ್ಚಿ ಮುಂತಾದ ನಗರಗಳನ್ನು ಸುತ್ತಿದ್ದೇನೆ. ಅಲ್ಲದೆ, ಸಿಂಗಪೂರ್, ಮಲೇಷಿಯಾ ಮತ್ತು ಕತಾರ್ ದೇಶಗಳನ್ನೂ ನೋಡಿರುವ ಅನುಭವ ಹೊಂದಿದ್ದೇನೆ. ಗೆಳಯರೊಂದಿಗೆ ಹಾಸ್ಯಭರಿತ ಮಾತುಗಳನ್ನಾಡುತ್ತಾ, ನಗುತ್ತಾ, ನಲಿಯುತ್ತಾ ಕಾಲ ಕಳೆಯುವುದು ನನಗೆ ಬಹಳ ಇಷ್ಟ. ಸಿನಿಮಾ ರಂಗದಲ್ಲಿ ಬಹಳ ಆಸಕ್ತಿ ಹೊಂದಿರುವ ನಾನು ಮುಂದೆ ಕನ್ನಡ ಚಲನಚಿತ್ರರಂಗದಲ್ಲಿ ದೊಡ್ಡ ಕಲಾವಿದನಾಗಿ, ನಿರ್ದೇಶಕನಾಗಿ ಹೆಸರು ಮಾಡಬೇಕೆನ್ನುವ ಅಭಿಲಾಷೆ ಹೊಂದಿದ್ದೇನೆ. ಸಾಧಿಸುವ ಛಲವಿದೆ. ಅದಕ್ಕಾಗಿ ಶ್ರಮಿಸುತ್ತೇನೆ.
This user is a member of WikiProject Education in India |