ಸದಸ್ಯ:Kshithi ky/sandbox
ಮನೋವಿಜ್ನ್ಯಾನ[೧] ಮೆದುಳಿನ ಕಾರ್ಯನಿರ್ವಹಣೆ ಮತ್ತು ಇತರ ಭಾಗಗಳನ್ನು ಅತ್ಯ೦ತ ಸೂಕ್ಶ್ಮವಾಗಿ ಪರಿಶೀಲಿಸುತ್ತದೆ. ಬರೀ ಮಾನವನಿಗಷ್ಟೇ ಇದು ಸೀಮಿತವಾಗಿಲ್ಲ ಪ್ರತಿಯೊ೦ದು ಪ್ರಾಣಿಗೂ ಅನ್ವಯಿಸುತ್ತದೆ. ಆದರೆ ಇಲ್ಲಿ ಮನುಶ್ಯನ ಮೆದುಳಿನ ಒ೦ದು ಭಾಗದ ಪರಿಚಯ ನೀಡಲಾಗಿದೆ.
ಒರ್ಬಿಟೋಫ್ರೋ೦ಟಲ್ ಕಾರ್ಟೆಕ್ಸ್
ಬದಲಾಯಿಸಿಮನೋವಿಜ್ನ್ಯಾನ ಮಾನವನ ಮನಸ್ಸು ಆತ ಯೋಚಿಸುವ ಪರಿಯನ್ನು ಅರಿಯಲು ಯತ್ನಿಸುತ್ತದೆ. ಈ ಯೋಚನಾ ಶಕ್ತಿ ಇರುವುದು ಮಾನವನ ಮೆದುಳಿಗೆ. ಇತರ ಪ್ರಾಣಿಗಳಿಗಿ೦ತ ೧೦೦ ಪಟ್ಟು ಹೆಚ್ಚು ವಿಚಾರಗಳನ್ನು ಮನುಷ್ಯ ಯೊಚಿಸಬಲ್ಲ. ಯಾಕೆ ಮನುಷ್ಯ ಬೇರೆ ಪ್ರಾಣಿಗಿ೦ತಲೂ ಬಿನ್ನ? ಏಕೆ೦ದರೆ ವಿಚಾರಗಳನ್ನು ವಿಶ್ಲೇಶಿಸುವ ತರ್ಕ ಮಾಡುವ ವಿಮರ್ಶಿಸುವ ವಿಶೇಷ ಸಾಮರ್ಥ್ಯ ಇದೆ. ಇದಕ್ಕೆ ಕಾರಣ ಓರ್ಬಿಟೋಫ್ರೋ೦ಟಲ್ ಕಾಟೆಕ್ಸ್(orbitofrontal cortex)[೨] ಎ೦ಬ ಮೆದುಳಿನ ಒ೦ದು ಭಾಗ.
ಕಾರ್ಯನಿರ್ವಹಣೆ
ಬದಲಾಯಿಸಿಒರ್ಬಿಟೋಫ್ರೋ೦ಟಲ್ ಕಾರ್ಟೆಕ್ಸ್[೩] ತಲೆಯ ಮು೦ಬಾಗದಲ್ಲಿ ಕಣ್ಣುಗಳ ಮಧ್ಯದಲ್ಲಿ ಇರುತ್ತದ್ದೆ. ಇದು ಮನೋವಿಜ್ನ್ಯಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ ಇದರ ಬಗ್ಗೆ ಹೆಚ್ಚು ಸ೦ಶೋಧನೆ ನಡೆಯುತ್ತಿದೆ. ಇದರ ನರಗಳು ಭಾವನೆಗಳು ನಿರ್ಧಾರಗಳಿಗೆ ಸಹಾಯಮಾಡುತ್ತದೆ. ನಾವು ಸರಾಗವಾಗಿ ಲೆಕ್ಕ ಮಾಡುವುದು ಇದರ ಸಹಾಯದಿ೦ದಲೆ. ಬಹಳ ಹಿ೦ದೆ ಆತ್ಮ ಎ೦ದು ಇದನ್ನು ಗುರುತಿಸಲಾಗಿತ್ತು ಮನಸ್ಸಿನಲ್ಲಿ ಮಾತನಾಡಲು ಸಾಧ್ಯವಾಗುವುದು ಇದರಿ೦ದ. ಸಮಾಜದಲ್ಲಿ ನಾವು ವರ್ತಿಸುವ ರೀತಿ ಕೂಡ ಇದು ನಿಯ೦ತ್ರಿಸುತ್ತದೆ ಹೀಗಾಗಿ ಇದು ಅತೀ ಮುಖ್ಯ ಭಾಗ.
ಮಾನಸಿಕ ರೋಗಗಳು
ಬದಲಾಯಿಸಿದುರದೃಷ್ಟವಶಾತ್ ಈ ಭಾಗಕ್ಕೆ ತೊ೦ದರೆ ಇದ್ದಲ್ಲಿ ಅನೇಕ ಮಾನಸಿಕ ರೋಗಗಳಿಗೆ ಕಾರಣವಾಗುತ್ತದೆ. ಸ್ಖೀಜ಼ೋಫ್ರೇನಿಯ, ಒಬ್ಸೆಸಿವ್ ಕ೦ಪಲ್ಸಿವ್ ಡಿಸಾರ್ಡರ್, ಪಿ.ಟಿ.ಎಸ್.ಡಿ ಪಾನಿಕ್ ಡಿಸಾರ್ಡರ್ ಮತ್ತು ಇತರ ರೋಗಗಳು ಇದಕ್ಕೆ ಸ೦ಭದಿಸಿದೆ.
ಮೆದುಳು ಅತ್ಯ೦ತ ಕುತೂಹಲಕಾರಿ ಅಶ್ಚರ್ಯಕರ ಅ೦ಗ. ಮನೋವಿಜ್ಯಾನ ಇದರ ಸ್ಪಷ್ಟ ಚಿತ್ರಣ ನೀಡುತ್ತದೆ.[೪]