ಸದಸ್ಯ:Kishanshettygar/ನನ್ನ ಪ್ರಯೋಗಪುಟ

                                   ಹಣದ ಅಪಮೌಲಿಕರಣ

ಕರೆನ್ಸಿ ಅಪಮೌಲ್ಯವಾದಾಗ ಡಾಲರು ಅಥವಾ ಇತರ ಮೀಸಲು ಕರೆನ್ಸಿಗಳ ಮೌಲ್ಯ ಅದರ ವಿರುದ್ಧ ಜಾಸ್ತಿಯಾಗುತ್ತದೆ. ಅಂದರೆ, ಮೀಸಲು ಕರೆನ್ಸಿ ದೇಶಗಳು ಅವರ ಹಣಕ್ಕೆ ಆ ದೇಶದಿಂದ ಹೆಚ್ಚು ಸರಕು ಯಾ ಸೇವೆಗಳನ್ನು ಪಡೆಯಬಹುದು. ಅವರು ಜಾಸ್ತಿ ಖರೀದಿಸಿದಾಗ ಆ ದೇಶದ ರಫ್ತು ಅಧಿಕವಾಗುತ್ತದೆ. ಆಮದು ತುಟ್ಟಿಯಾಗುವುದರಿಂದ, ಗಾತ್ರ ಕಮ್ಮಿಯಾಗಿ ವಿದೇಶಿ ವಿನಿಮಯದ ಹೊರ ಹರಿವು ಕಡಿಮೆಯಾಗುತ್ತದೆ.ಅವರ ರಫ್ತು ಅಗ್ಗವಾಗುವುದರಿಂದ, ಇತರ ದೇಶಗಳ ರಫ್ತು ತುಟ್ಟಿಯಾಗಿ, ಆ ದೇಶದ ಸರಕುಗಳು ಸ್ಪರ್ಧಾತ್ಮಕವಾಗುತ್ತವೆ.ರಫ್ತು ಅಗ್ಗವಾಗಿ ಇತರ ದೇಶಗಳಿಗೆ ವಿಸ್ತರಿಸಿದಾಗ, ಆ ದೇಶದೊಂದಿಗೆ ರಾಜಕೀಯ ಮತ್ತು ಆರ್ಥಿಕ ಸಂಬಂಧಗಳನ್ನು ಉತ್ತಮಗೊಳಿಸಲು ಅನುಕೂಲವಾಗುತ್ತದೆ.ಇತರ ಸ್ಪರ್ಧಿ ದೇಶಗಳ ರಫ್ತು ಯೋಜನೆ ಅಡಿ ಮೇಲಾಗಿ, ಅಲ್ಲಿ ಆರ್ಥಿಕ ಅಸ್ಥಿರತೆ ಉಂಟಾಗಿ, ಅದರ ಲಾಭ ಎತ್ತಲು ಅನುಕೂಲವಾಗುತ್ತದೆ.