ಸದಸ್ಯ:Kilar Vikram Hegde/ನನ್ನ ಪ್ರಯೋಗಪುಟ

ಅಡಿಕೆ ಮಲೆನಾಡಿಗರಿಗೆ ಅಚ್ಚುಮೆಚ್ಚು. ಸಾಮಾನ್ಯವಾಗಿ ಯಾವುದೇ ಶುಭ ಸಮಾರಂಭಗಳನ್ನು ಮಾಡುವುದಾದರೂ ಎಲೆಯ ಮೇಲೊಂದು ಅಡಿಕೆ ಇಟ್ಟರೆ ಅದು ಗೌರವದ ಸಂಕೇತ. ಇದನ್ನು ವೇದ ಆಗಮಗಳಲ್ಲೂ ಉಲ್ಲೇಖಿಸಲಾಗಿದೆ. ಒಂದು ಕಾಲದಲ್ಲಿ ಇದು ಮೂಲತಃ ಮಲೆನಾಡು ಹಾಗೂ ಕರಾವಳಿ ವಾಸಿಗರ ಆದಾಯದ ಕ್ಷೇತ್ರವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಇದನ್ನು ಬೆಳೆಯುತ್ತಿದ್ದಾರೆ.