ಸದಸ್ಯ:Keeru6/ನನ್ನ ಪ್ರಯೋಗಪುಟ/2

ಚಿತ್ರ:Https://commons.wikimedia.org/wiki/File:SADIR(THEN).jpg
ಭರತನಾಟ್ಯ
                                                               ಸದಿರ್
         ಭರತನಾಟ್ಯವನ್ನು ಹಿಂದೆ ಸದಿರ್ ಎಂದು ಕರೆಯುತ್ತಿದ್ದರು. ಇದು ಭಾರತೀಯ ಶಾಸ್ತ್ರೀಯ ನೃತ್ಯ ಪದ್ಧತಿಗಳಲ್ಲಿ ಒಂದು.ಇದು ತಮಿಳುನಾಡಿನಲ್ಲಿ ಜನಿಸಿತು.ಭರತ ಎಂಬ ಮುನಿ ನಾಟ್ಯಶಾಸ್ತ್ರ ಬರೆದದ್ದರಿಂದ ಈ ಪದ್ಧತಿಗೆ ಭರತನಾಟ್ಯ ಎಂಬ ಹೆಸರು ಬಂದಿತೆಂದು ನಂಬಿಕೆ.

ಪ್ರಾಚೀನವಾಗಿ ಈ ಪದ್ಧತಿಯನ್ನು ಸದಿರ್ ಎಂದು ಕರೆಯುತಿದ್ದರು.

ಹುಟ್ಟು ಮತ್ತು ಇತಿಹಾಸ: ಬದಲಾಯಿಸಿ

ಬ್ರಹ್ಮನಿಂದ ಸೃಷ್ಟಿಸಲ್ಪಟ್ಟ, ಪಂಚಮವೇದವೆಂದೇ ಹೇಳಲಾದ ನಾಟ್ಯವೇದವನ್ನು ಭರತಮುನಿ[೧]ಯು ಶಾಸ್ತ್ರರೂಪಕ್ಕೆ ತಂದು ತನ್ನ ನೂರು ಮಕ್ಕಳಿಗೆ ಭೋಧಿಸಿದನು.ಶಿವನಿಂದ ತಾಂಡವ ಮತ್ತು ಪಾರ್ವತಿಯಿಂದ ಲಾಸ್ಯದ ವಿವರಣೆ ಪಡೆದು,ಅನೇಕ ಅಪ್ಸರೆಯರಿಗೆ ಹೇಳಿಕೊಟ್ಟನು.ಕ್ರಮೇಣ ಈ ಕಲೆಯು,ಭೂಲೋಕದಲ್ಲಿ ಇಳಿದು,ಭಾರತದಲ್ಲಿ ನೆಲೆವೂರಿತು.ದೇಶದ ಬೇರೆ ಬೇರೆ ಪ್ರದೇಶಗಳಲ್ಲಿ ವಿವಿಧ ರೂಪಗಳನ್ನು ಪಡೆದು,ದಕ್ಷಿಣ ಭಾರತದಲ್ಲಿ ಭರತನಾಟ್ಯವೆಂದು ಖ್ಯಾತಿಗೊಂಡಿದೆ.

ಅಂದಿನಿಂದ ಈ ನೃತ್ಯವನ್ನು ದೇವಸ್ಥಾನಗಳಲ್ಲಿ ನರ್ತಿಸುವ ಪರಂಪರೆ ಬೆಳೆಯಿತು.ಈ ಪರಿ ನರ್ತಿಸುವವರನ್ನು ದೇವದಾಸಿ[೨]ಯರೆಂದು ಕರೆಯಲಾಯಿತು.ಇವರು ಪ್ರತಿನಿತ್ಯ ದೇವಸ್ಥಾನದ ಕಾರ್ಯಗಳಲ್ಲಿ ಪಾಲ್ಗೊಂಡು, ಉತ್ಸವಗಳಲ್ಲಿ ನರ್ತಿಸುತ್ತಿದ್ದರು.ಇವರಿಗೆ ರಾಜಾಶ್ರಯ ದೊರೆತ ಕಾರಣ,ಈ ಕಲೆ ಬೆಳೆದುಬಂದಿದೆ.ಪ್ರಾಚೀನ ಶಾಸನಗಳಿಂದ ಭರತನಾಟ್ಯದ ಇತಿಹಾಸವನ್ನು ತಿಳಿಯಬಹುದು. ಕದಂಬ,ಗಂಗ ಪಲ್ಲವ,ಚಾಲುಕ್ಯ,ಹೊಯ್ಸಳ,ಪಾಂಡ್ಯ,ಚೋಳ,ವಿಜಯನಗರ,ಒಡೆಯರ್ ಮುಂತಾದ ಆಸ್ಥಾನಗಳು ಈ ಕಲೆಯನ್ನು ಪೋಷಿಸಿದರು. ರಾಜರಾಜಚೋಳ[೩]ನು ತಂಜಾವೂರಿನ ಬೃಹದೀಶ್ವರ ದೇವಾಲಯದಲ್ಲಿ ೪೦೦ ನರ್ತಕಿಯರನ್ನು ನೇಮಿಸಿದ್ದನು. ಎಂಟನೇ ಶತಮಾನದಲ್ಲಿ ಚಾಲುಕ್ಯರ ದೇವಾಲಯಗಳಿಂದ ಲಲತಕಲೆ ಹಾಗು ಸಂಸ್ಕೃತಿಯು ಉನ್ನತಸ್ಥಾನ ಗಳಿಸಿತು.ಅಲ್ಲದೆ ರಾಣಿಯರು ಸಹ ನೃತ್ಯ ಕಲಾವಿದೆಯರಾಗಿದ್ದರು.ಬ್ಚಾಲುಕ್ಯರ ಸೋವಿದೇವನ ರಾಣಿ ಸಾವಲಾದೇವಿ ನೃತ್ಯ ಪಾರಂತೆ.ಈ ಕಲೆಯ ಮಹತ್ವವನ್ನು ಸಾರುವ ಬೇಲೂರು, ಹಳೇಬೀಡು, ಸೋಮನಾಥಪುರ ದೇವಾಲಯಗಳ ನಿರ್ಮಾಣಕ್ಕೆ ಕಾರಣಕರ್ತೆಯಾದ ವಿಷ್ಣುವರ್ಧನನ ಪಟ್ಟದರಾಣಿ ಶಾಂತಲಾದೇವಿ ಹಿರಿಯ ನೃತ್ಯ ಕಲಾವಿದೆ.ಶ್ರೀ ಕೃಷ್ನದೇವರಾಯನ ಕಾಲದಲ್ಲಿ ಕಲೆಗೆ ಅತ್ಯುನ್ನತ ಸ್ಥಾನವಿತ್ತು. ನೃತ್ಯ ಕ್ಷೇತ್ರಕ್ಕೆ "ತಂಜಾವೂರು ಸಹೋದರರು" ಅಪಾರ ಕೊಡುಗೆ ನೀಡಿದ್ದಾರೆ.ಇವರು ಭರತನಾಟ್ಯದ ಬೆಳವಣಿಗೆಗೆ ತುಲಜಾಜಿ ಮತ್ತು ಸರಭೋಜಿ ಅವರ ಆಸ್ಥಾನವನ್ನು ಅಲಂಕರಿಸಿ, ಬೃಹದೀಶ್ವರ ದೇವಾಲಯದಲ್ಲಿ ನೃತ್ಯ ಸೇವೆ ಸಲ್ಲಿಸುತ್ತಿದ್ದರು. ಹಿರಿಯರಾದ ಚಿನ್ನಯ್ಯನವರು ಮೈಸೂರಿನ ರಾಜ ಕೃಷ್ನರಾಜ ಒಡೆಯರ ಆಸ್ಥಾನದಲ್ಲಿದ್ದು ಅನೇಕರಿಗೆ ನೃತ್ಯ ಶಿಕ್ಷಣ ನೀಡಿದರು. ಕೊನೆಯವರಾದ ವಡಿವೇಲು ಸ್ವಾತಿ ತಿರುನಾಳರ ಆಸ್ಥಾನದಲ್ಲಿದ್ದರು.ಸ್ವಾತಿ ತಿರುನಾಳರು ಸ್ವತಃ ಸಾಹಿತಿಗಳು ಮತ್ತು ಕಲಾ ಪೋಷಕರು. ಹಾಗೆಯೇ, ಮೈಸೂರಿನ ಮುಮ್ಮಡಿಕೃಷ್ಣರಾಜ ಒಡೆಯರು, ಚಾಮರಾಜ ಒಡೆಯರು, ಜಯಚಾಮರಾಜ ಒಡೆಯರು, ಮಹಾನ್ ಕಲಾಪೋಷಕರಾಗಿದ್ದರು. ೨೦ನೇ ಶತಮಾನದಲ್ಲಿ ಪರಕೀಯರ ದಾಳಿಯಿಂದ, ಈ ಕಲೆ ಹಲವು ಕಾಲ ನಿರ್ಲಕ್ಷ್ಯಕ್ಕೊಳಗಾಯ್ತು. ಕೃಷ್ಣ ಅಯ್ಯರ್, ರುಕ್ಮಿಣಿದೇವಿ ಅರುಂಡೇಲ್ ಮುಂತಾದವರ ಪ್ರಯತ್ನದಿಂದ ಈ ಕಲೆ ಪ್ರಸಿದ್ಧಿಯಾಯಿತು.[೧]

ಮಾಡುವ ಮತ್ತು ಕಲಿಯುವ ಕ್ರಮ: ಬದಲಾಯಿಸಿ

    ಅರಮಂಡಿ, ಅಂದರೆ ಕಾಲುಗಳನ್ನು ತಿರಿಗಿಸಿ,ಮಂಡಿ ಬಗ್ಗಿಸುವ ಭಂಗಿ. ಇದು ಭರತನಾಟ್ಯದಲ್ಲಿ ಅತಿ ಮುಖ್ಯವಾದ ಭಂಗಿ.ಅಡವು ಎಂದರೆ ತಾಳಲಯಗಳಿಂದ ಕೂಡಿದ ಅಂಗಾಂಗಗಳ ಮನೋಹರ ಕ್ರಮಬದ್ಧ ಚಲನೆ.ಆಯಾ ಅಡವುಗಳಿಗೆ ಹಸ್ತಗಳ ಜೋಡಣೆ,ಅವುಗಳಿಗೆ ಅನುಗುಣವಾದ ತಲೆ,ಕುತ್ತಿಗೆ ಮತ್ತು ಕಣ್ಣಿನ ಚಲನೆಗಳೊಂದಿಗೆ ನರ್ತಿಸಲಾಗುತ್ತದೆ.
     ಮೊದಲಿಗೆ ನಮಸ್ಕಾರ ಮಾಡುವ ವಿಧಾನದ ಪಾಠ ಮತ್ತು ಆದರ ಮಹತ್ವದ ತಿಳುವಳಿಕೆ.ನಂತರ,ವಿವಿಧ ಅಡವುಗಳು ಮತ್ತು ಅವುಗಳಿಗೆ ಅನುಗುಣವಾದ ದೇಹದ ಬಾಗುವಿಕೆಯ ಪಾಠ.ಅದಾದ ನಂತರ ಕೋರ್ವೆ.ಅಡವುಗಳ ಸರಣಿಯೇ ಕೋರ್ವೆ. ಈ ಹಂತದವರೆಗು ಸಾಮರ್ಥ್ಯ ಗಳಿಸಿದ ನಂತರ ಕ್ರಮವಾಗಿ, ಅಲರಿಪು, ಜತಿಸ್ವರ,ಶಬ್ದ,ವರ್ಣ,ಪದ,ಜಾವಳಿ,ತಿಲ್ಲಾನಗಳನ್ನು ಹೇಳಿಕೊಡಲಾಗುತ್ತದೆ. ಈ ಸರಣಿಗೆ ಮಾರ್ಗ ಎನ್ನಲಾಗುತ್ತದೆ.
      ಸಾಮಾನ್ಯವಾಗಿ ಭರತನಾಟ್ಯ ಕಾರ್ಯಕ್ರಮವನ್ನು ಗಣಪತಿ ಸ್ತುತಿಯಿಂದ ಪ್ರಾರಂಭಿಸಿ ಮಂಗಳದೊಂದಿಗೆ ಮುಗಿಸುವುದು ಸಂಪ್ರದಾಯ. ಇತ್ತೀಚೆಗೆ ಕೀರ್ತನೆಗಳು,ಪುಷ್ಪಾಂಜಲಿ,ದೇವರನಾಮ ಮುಂತಾದ ಕೃತಿಗಳ ಸೇರ್ಪಡೆಯಾಗಿದೆ. ಆದಿಯಲ್ಲಿ ಶ್ಲೋಕದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳುತಿತ್ತು. ಈಗ ಚುರುಕಾದ ತಿಲ್ಲಾನದೊಂದಿಗೆ ಮುಗಿಯುತ್ತದೆ.[೨]
      ಭರತನಾಟ್ಯದಲ್ಲಿ ನೃತ್ತ, ನೃತ್ಯ ಮತ್ತು ಅಭಿನಯ ಎಂಬ ಮೂರು ಭಾಗ.ನೃತ್ತ ಎಂದರೆ ತಾಳಲಯಬದ್ಧವಾದ ಕೈಕಾಲುಗಳ ಚಲನೆ. ಇಲ್ಲಿ ಅರ್ಥಕ್ಕೆ ಅವಕಾಶವಿಲ್ಲ.ಅಲರಿಪು, ಜತಿಸ್ವರ,ಪುಶ್ಪಾಂಜಲಿ ಮತ್ತು ತಿಲ್ಲಾನ ಇದಕ್ಕೆ ಸೇರುತ್ತದೆ. ನೃತ್ಯ ಎಂದರೆ ಹಾಗೂ ಅಭಿನಯಗಳ ಸಮ್ಮಿಲನ. ವರ್ಣ,ಕೀರ್ತನೆಗಳು ಹಾಗೂ ಶಬ್ದ ಈ ಭಾಗಕ್ಕೆ ಸೇರುತ್ತದೆ. ಅಭಿನಯ ಎಂದರೆ ಅಂಗಾಂಗಳ ಪ್ರಯೋಗದಿಂದ ಭಾವ ಪ್ರದರ್ಶನ. ಪದ, ಜಾವಳಿ,ವಚನ ಹಾಗೂ ದೇವರನಾಮಗಳು ಈ ಭಾಗಕ್ಕೆ ಸೇರುತ್ತದೆ.[೩]
    
      ಭರತನಾಟ್ಯದಲ್ಲಿ ವಳವೂರು, ಮೈಸೂರು,ಪಂದನಲ್ಲೂರು,ಕಲಾಕ್ಶೇತ್ರ,ತಂಜಾವೂರು ಎಂಬ ಶೈಲಿಗಳಿವೆ.

ಭರತನಾಟ್ಯದಲ್ಲಿನ ಸಂಗೀತ: ಬದಲಾಯಿಸಿ

                 ಸಂಪ್ರದಾಯವಾಗಿ ಹಾಗೂ ಹೆಚ್ಚಾಗಿ ಬಳಸುವುದು ಕರ್ನಾಟಕ ಸಂಗೀತವನ್ನು. ನಟ್ಟುವಾಂಗ, ಕಂಚಿನತಾಳ, ಮೃದಂಗ, ವೀಣೆ, ತಂಬೂರ, ಪಿಟೀಲು, ಕೊಳಲು, ಘಟಂ ಮುಂತಾದ ವಾದ್ಯಗಳನ್ನು ಉಪಯೋಗಿಸಲಾಗುತ್ತದೆ. ಈಗ ಕೆಲವೊಮ್ಮೆ ಕರ್ನಾಟಕ ಹಾಗೂ ಬೇರೆ ಶೈಲಿಯ ಸಂಗೀತ, ಅಂದರೆ ಪಾಶ್ಚಾತ್ಯ ಇಲ್ಲವೆ ಆಧಿನಿಕ ಸಂಗೀತವನ್ನು ಮಿಶ್ರಿಸುವ ಸಂಗೀತವನ್ನು ಬಳಸುತ್ತಾರೆ.

ವೇಶಭೂಷಣ: ಬದಲಾಯಿಸಿ

       ಹೆಂಗಸರಿಗೆ: ಪೈಜಾಮ ಅಥವಾ ಲಂಗದ ಕಾಸ್ಟ್ಯೂಮ್ ಧರಿಸುತ್ತಾರೆ.ಕುಪ್ಪಸದ ಮೇಲೆ ಸೆರಗು, ಪೈಜಾಮ ಅಥವಾ ಲಂಗದ ಮೇಲೆ ನೆರಿಗೆ ಮತ್ತು ಸೊಂಟದ ಪಟ್ಟಿಯ ಮೇಲೆ ನೆರಿಗೆಯನ್ನು ಧರಿಸಲಾಗುತ್ತದೆ.ಉದ್ದದ ಜಡೆ ಹೆಣೆದು ಹೂವು ಮುಡಿಯುತ್ತರೆ.ಹಾಗು ತಲೆಯ ಮುಂಭಾಗಕ್ಕೆ ಬೈತಲೆ ಬೊಟ್ಟು ಮತ್ತು ಸೂರ್ಯ,ಚಂದ್ರರನ್ನು ಸಂಕೇತಿಸುವ ಆಭರಣವನ್ನು ಧರಿಸುತ್ತರೆ.ಮಾಟಿ, ಝುಮುಕಿ, ಚಿಕ್ಕ ಹಾಗೂ ದೊಡ್ದ ಸರಗಳು, ಡಾಬು, ಬಳೆಗಳು ಮುಂತಾದ ಆಭರಣಗಳನ್ನು ಧರಿಸುತ್ತಾರೆ.
        ಗಂಡಸರಿಗೆ:ಪಂಚೆಯಂತೆ ಹೊಲಿದ ಪೈಜಾಮ ಹಾಗೂ ಎದೆಯ ಮೇಲೆ ಶಲ್ಯವನ್ನು ಧರಿಸುತ್ತಾರೆ.ಒಂದು ಸಣ್ಣ ಹಾರ ಹಾಗು ಕಂಕಣ, ವಂಕಿಗಳನ್ನು ಧರಿಸುತ್ತಾರೆ.
        ಮುಖಕ್ಕೆ ಬಣ್ನ ಹಚ್ಚಿ ಕಣ್ಣುಗಳು ಅಗಲವಾಗಿ ಕಾಣುವಹಾಗೆ ಕಾಡಿಗೆಯಿಂದ ತಿದ್ದುತಾರೆ.
        

ಭರತನಾಟ್ಯದಲ್ಲಿ ಗೆಜ್ಜೆಗೆ ಬಹಳ ಪ್ರಾಶಸ್ತ್ಯವಿದೆ.ಅದಕ್ಕೆ ಪೂಜೆ ಮಾಡಿ ಗುರುಗಳಿಂದ ಆಶೀರ್ವಾದ ಪಡೆದು ಧರಿಸುತ್ತಾರೆ.

  1. http://www.culturalindia.net/indian-dance/classical/bharatnatyam.html
  2. http://ccrtindia.gov.in/bharatnatyam.php
  3. http://www.indianmirror.com/dance/bharatanatyam.html