ಸದಸ್ಯ:Keerthana VijayKumar/ನನ್ನ ಪ್ರಯೋಗಪುಟ

ಮನೋವಿಜ್ಞಾನ ಎಂದರೇನು?

ಮಾನವನ ಮನಸ್ಸು ಮತ್ತು ನಡವಳಿಕೆಗಳ ಕುರಿತು ವೈಜ್ಞಾನಿಕವಾಗಿ ಅಧ್ಯಯನ ನಡೆಸುವುದನ್ನು ಮನೋವಿಜ್ಞಾನ ಎನ್ನುತ್ತಾರೆ. ನಮ್ಮನ್ನು ಕಾರ್ಯೋನ್ಮುಖಗೊಳಿಸುವ ಎಲ್ಲಾ ತರಹದ ಯೋಚನೆಗಳು, ಮತ್ತು ಭಾವನೆಗಳನ್ನು ಹಲವು ರೀತಿಯ ಪ್ರಯೋಗ ಮತ್ತು ಪರೀಕ್ಷೆಗಳ ಮೂಲಕ ಅವಲೋಕಿಸಲಾಗುತ್ತದೆ. ಮಾನಸಿಕ ಸಮಸ್ಯೆಯೂ ಸೇರಿದಂತೆ, ನಡವಳಿಕೆಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಮನೋವಿಜ್ಞಾನದ ನೆರವಿನಿಂದ ಪರಿಹರಿಸಲಾಗುತ್ತದೆ.


ಮನೋವಿಜ್ಞಾನಿ ಯಾರು?

ಮನಃಶಾಸ್ತ್ರದಲ್ಲಿ ಪದವಿಯನ್ನು ಪಡೆದಿರುವ ಹಾಗೂ ನಡವಳಿಕೆಗಳ ಕುರಿತು ಪರಿಣಿತಿ ಪಡೆದಿರುವವರನ್ನು ಮನೋವಿಜ್ಞಾನಿ ಎನ್ನುತ್ತಾರೆ. ಅವರು ವೈಜ್ಞಾನಿಕ ವಿಧಾನಗಳ ಮೂಲಕ ಮಾನವರ ಭಾವನೆಗಳು, ಯೋಚನೆಗಳು ಮತ್ತು ಗ್ರಹಿಕೆಗಳ ಮೇಲೆ ಪರಿಣಾಮ ಬೀರುವ ಅಂಶಗಳನ್ನು ಪತ್ತೆ ಹಚ್ಚುತ್ತಾರೆ. ಆಧಾರಗಳನ್ನಾಧರಿಸಿದ ಚಿಕಿತ್ಸೆಗಳನ್ನು ಉಪಯೋಗಿಸಿ ಅವರು ಜನರ ಸಮಸ್ಯೆಗಳನ್ನು ಉಪಶಮನಗೊಳಿಸಲು ಸಹಾಯ ಮಾಡುತ್ತಾರೆ.

ಸಂಬಂಧಗಳಲ್ಲುಂಟಾದ ಸಮಸ್ಯೆಗಳು, ಮಕ್ಕಳ ಲಾಲನೆ-ಪಾಲನೆಯ ಸಮಸ್ಯೆಗಳು, ಯೌವ್ವನದ ಸವಾಲುಗಳು, ಜೀವನ ಶೈಲಿಯಿಂದಾಗುವ ತೊಂದರೆ, ಮುಂತಾದ ಸಮಸ್ಯೆಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತಾರೆ. ಆತಂಕ, ಖಿನ್ನತೆ, ತಿನ್ನುವ ಸಮಸ್ಯೆ, ತೀವ್ರ ಸ್ವರೂಪದ ಖಾಯಿಲೆ, ವ್ಯಸನ ಮುಂತಾದ ಸಮಸ್ಯೆಗಳನ್ನು ಗುಣಪಡಿಸಲು ಮನೋವಿಜ್ಞಾನಿ ತಮ್ಮ ವೈದ್ಯಕೀಯ ಕೌಶಲ್ಯಗಳನ್ನು ಬಳಸುತ್ತಾರೆ.


ವಿಷಯದ ಮೂಲ ವಿಜ್ಞಾನ ಮತ್ತು ವಿನ್ಯಾಸ ಒಂದೇ ಆಗಿದ್ದಾಗ್ಯೂ ಕೂಡ, ಮನೋವಿಜ್ಞಾನಿಗಳು ಬೇರೆ ಬೇರೆ ಕ್ಷೇತ್ರಗಳಲ್ಲಿ ಜನರಿಗೆ ಚಿಕಿತ್ಸೆ ಒದಗಿಸುತ್ತಾರೆ.


  1. ಕ್ಲಿನಿಕಲ್ ಸೈಕಾಲಜಿಸ್ಟ್: ಇವರು ಮಾನಸಿಕ ಯಾತನೆಯನ್ನು ಕಡಿಮೆ ಮಾಡಲು ಮತ್ತು ಮಾನಸಿಕ ಆರೋಗ್ಯ ವರ್ಧನೆಗೆ ಪ್ರಯತ್ನಿಸುತ್ತಾರೆ. ಅಬ್ನಾರ್ಮಲ್ ಸೈಕಾಲಜಿಯನ್ನು ಅಧ್ಯಯನ ಮಾಡಿದ ಮನಃಶಾಸ್ತ್ರಜ್ಞರು ಆತಂಕ, ಖಿನ್ನತೆ, ಅಥವಾ ವ್ಯಸನಗಳಂತಹ ಮಾನಸಿಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತಾರೆ.
  2. ಆಪ್ತಸಮಾಲೋಚಕರು: ವ್ಯಕ್ತಿಗೆ ಮಾನಸಿಕ ಖಾಯಿಲೆಯಿಲ್ಲದಿದ್ದರೂ ಯಾವುದೋ ಭಾವನಾತ್ಮಕ ಸಮಸ್ಯೆಯಿದ್ದಲ್ಲಿ ಆಪಾತಸಮಾಲೋಚಕರನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ವ್ಯಕ್ತಿಯ ಅಸಮತೋಲನಕ್ಕೆ ಕಾರಣವಾದ ಆತಂರಿಕ ಸಮಸ್ಯೆಗಳನ್ನು ಇವರು ಪರಿಹರಿಸುತ್ತಾರೆ. ಉದ್ದಾಹರಣೆ: ಪೂರ್ವ ಮತ್ತು ಸದ್ಯದ ಸಂಬಂಧಗಳಲ್ಲಿ ಉಂಟಾಗುವ ಸಮಸ್ಯೆ, ನಡವಳಿಕೆಯ ಸಮಸ್ಯೆ, ಎಂಬಂತೆ ಹಲವು ರೀತಿಯ ಸಮಸ್ಯೆಗಳನ್ನು ಬಗೆಹರಿಸಲು ನೆರವು ನೀಡುತ್ತಾರೆ. ಅಲ್ಲದೇ ಆಪ್ತಸಮಾಲೋಚಕರು ವ್ಯಕ್ತಿ ತಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಲು ಮತ್ತು ಅರ್ಥಪೂರ್ಣ ಜೀವನವನ್ನು ನಡೆಸಲು ನೆರವಾಗುತ್ತಾರೆ.
  3. ಸ್ಕೂಲ್ ಸೈಕಾಲಜಿಸ್ಟ್: ಇವರು ಮಕ್ಕಳ ಮತ್ತು ಹದಿಹರೆಯದವರ ಕಲಿಕೆ ಮತ್ತು ಬೆಳವಣಿಗೆಗೆ ಸಹಾಯ ಮಾಡುತ್ತಾರೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ಅಥವಾ ಶಿಕ್ಷಣ ನೀತಿಯನ್ನು ರೂಪಿಸುವ ಆಡಳಿತಾತ್ಮಕ ಸಂಸ್ಥೆಗಳಲ್ಲಿ ಇವರು ಕಾರ್ಯ ನಿರ್ವಹಿಸುತ್ತಾರೆ.
  4. ಫೋರೆನ್ಸಿಕ್ ಮನಃಶಾಸ್ತ್ರಜ್ಞರು: ಇವರು ಕಾನೂನಿಗೆ ಸಂಬಂಧಿಸಿದ ಅಪರಾಧ ಪತ್ತೆಯಲ್ಲಿ ಮನಃಶಾಸ್ತ್ರದ ಸಿದ್ದಾಂತಗಳನ್ನು ಮನಃಶಾಸ್ತ್ರೀಯ ಅಂಶಗಳನ್ನು ಅಂದರೆ ಬಳಸಿ ಅಪರಾಧಿಯ ನಡವಳಿಕಗೆ ಸಂಬಂಧಿಸಿದ ಮಾನಸಿಕ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಮತ್ತು ಅಪರಾಧಿಗೆ ಚಿಕಿತ್ಸೆ ನೀಡುವ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಇವರನ್ನು ಕ್ರಿಮಿನಲ್ ಸೈಕಾಲಜಿಸ್ಟ್, ಲೀಗಲ್ ಸೈಕಾಲಜಿಸ್ಟ್ ಅಥವಾ ಕ್ರಿಮಿನಾಲಜಿಸ್ಟ್ ಎಂದು ಕರೆಯುತ್ತಾರೆ.
  5. ನ್ಯೂರೋ-ಸೈಕಾಲಜಿಸ್ಟ್: ಇವರು ಮೆದುಳು ಮತ್ತು ಅದರ ನರ-ಮನಃಶ್ಶಾಸ್ತ್ರೀಯ ಕಾರ್ಯಗಳ ನಡುವಿನ ಸಂಬಂಧವನ್ನು, ಉದಾಹರಣೆಗೆ, ಕಲ್ಪನೆ, ನೆನಪುಮುಂತಾದ ಸಂಗತಿಗಳನ್ನು ಅಧ್ಯಯನ ಮಾಡುತ್ತಾರೆ. ಅವರು ಮೆದುಳಿಗೆ ಸಂಬಂಧಿಸಿದ ಪೆಟ್ಟು ಅಥವಾ ಉಳಿದ ನರಸಂಬಂಧಿ ಖಾಯಿಲೆಗಳಾದ ಲಕ್ವ, ಚಿತ್ತವೈಕಲ್ಯ, ಟ್ಯೂಮರ್ ಮತ್ತು ವಯೋಸಹಜ ಮೆದುಳಿನ ಖಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳ ಪುನಃಶ್ಚೇತನಕ್ಕೆ ಸಹಾಯ ಮಾಡುತ್ತಾರೆ.
  6. ವೃತ್ತಿ ಸೈಕಾಲಜಿಸ್ಟ್: ಇವರು ಸಂಸ್ಥೆಗಳು ತಮ್ಮ ಉದ್ಯೋಗಿಗಳಿಂದ ಉತ್ತಮವಾದ ಉತ್ಪಾದಕತೆ ಪಡೆಯಲು ಮತ್ತು ಉದ್ಯೋಗಿಗಳ ವೃತ್ತಿ ಸಂತೃಪ್ತಿಯನ್ನು ಹೆಚ್ಚಿಸಲು ನೆರವಾಗುತ್ತಾರೆ. ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಮನಃಶಾಸ್ತ್ರಜ್ಞರು ಉದ್ಯೋಗಿಗಳಿಗೆ ಸೂಕ್ತವಾದ ಕೌಶಲ್ಯಗಳನ್ನು ಕಲಿಸುತ್ತಾರೆ. ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಮತ್ತು ವೃತ್ತಿ ಅನಿಶ್ಚತೆಯನ್ನು ಎದುರಿಸಲು ಸಹಾಯ ಮಾಡುತ್ತಾರೆ.