ಸದಸ್ಯ:Kausar Banu A/ನನ್ನ ಪ್ರಯೋಗಪುಟ
ಸಿದ್ದಿಕಿ ಸಿದ್ದಿ ಸಿದ್ದಿಕಿ ಸಿದ್ದಿ ಎಂದಾಗ ಕಲೆ, ವ್ರತ್ತಿ ಮತ್ತು ಜಾತಿಯೊಂದರ ನೆನಪಾಗುತ್ತದೆ.ಈ ಜಾತಿಯ ಜನ ಸಿ೦ದ್ದಿಕಿ ಸಿದ್ದಿ ಅಥವಾ ಸಿದ್ದಿಕ ಸಿದ್ದಿ ಎಂಬ ಸೋಗು ಹಾಕುತ್ತಾರೆ. ಸಾಮಾನ್ಯವಾಗಿ ಅಲೆಮಾರಿಗಳೇ ಆಗಿರುವಾಗ ಇವರು ಉತ್ತರ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕಗಳಲ್ಲಿ ಕಂಡುಬರುತ್ತಾರೆ. ಜಾತಿಗಾರರು ಮುಸಲ್ಮಾನ ಧರ್ಮಕ್ಕೆ ಸೇರಿದವರು. ಅದರಲ್ಲಿಯೂ ಅವರು ಶೇಕ್ ಪಂಗಡ. ಜಾತಿಗಾರ ಹಿರಿಯರು ತಮ್ಮನ್ನು ತಾವು ಮುಸಲ್ಮಾನರೆಂದು ಕರೆದುಕೊಲ್ಲಳ್ಳುತ್ತಾರೆ. ಈ ಕುರಿತು ಪರಂಪರಾಗತವಾದ ಐತಿಹ್ಯವೊಂದು. ಬಿಜಾಪುರದ ಬಾದಶಹನ ಆಸ್ಥಾನದಲ್ಲಿ ಇವದರ ಪೂರ್ವಜರು ದಿನಕ್ಕೊಂದರಂತೆ ಸೋಗು ಹಾಕಿ ಅವನನ್ನು ಮೆಚ್ಛಿಸುತ್ತಿದ್ದರು. ಹೀಗಿರುವಾಗ ಎಲ್ಲಾ ಸೋಗುಗಳು ಮುಗಿದವು. ಬೇರೆ ಯಾವ ಸೋಗು ಹಾಕುವುದಕ್ಕೆ ಇರದಿರಲು ಸೋಗುಗಾರ ಬಾದಶಹನ ಗುರುವಿನ ಸೋಗನ್ನೇ ಹಾಕಿ, ಆತನ ಗುರು ಆಗಮಿಸುತ್ತಿರುವನೆಂಬ ಸುದ್ದಿಯನ್ನು ಹರಡಿಸಿದ. ಬಾದಶಹನ ಗುರುವಿನ ಸೋಗನ್ನೇ ಹಾಕಿ, ಆತನ ಗುರು ಆಗಮಿಸುತ್ತಿರುವನೆಂಬ ಸುದ್ದಿಯನ್ನು ಹರಡಿಸಿದ. ಬಾದಶಹನ ಭಕ್ತಿಪೂರ್ವಕವಾಗಿ ಅವರನ್ನು ಸ್ವಾಗತಿಸಿ ಇನ್ನೇನು ಪಾದಗಳ ಮೇಲೆ ತಲೆಯಿಡಬೇಕೆನ್ನುವಾಗ ರಾಜನಿಂದ ನಮಸ್ಕರಿಸಿಕೊಳ್ಳುವುದ ತಿಳಿದು-ನಿಜ ಸಂಗತಿ ತಿಳಿಸಿದನು. ಇದರಿಂದ ಸಿಟ್ಟಾದ ರಾಜ ಅವನ ತಲೆ ಕಡಿಯಲು ಹೇಳಿದರು.